HR KANNADA CONFERENCE
  • ಸ್ವಾಗತ
  • ಸಮಿತಿಯ ಸದಸ್ಯರು
  • ಕನ್ನಡ ಸಮ್ಮೇಳನ
    • ಪ್ರಥಮ ಕನ್ನಡ ಸಮ್ಮೇಳನ-2017 >
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
    • ದ್ವಿತೀಯ ಕನ್ನಡ ಸಮ್ಮೇಳನ-2018 >
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2018
    • ತೃತೀಯ ಕನ್ನಡ ಸಮ್ಮೇಳನ (2019) >
      • ಸ್ವಾಗತ
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
      • ಭಾಷಣಕಾರರು
      • ಭಾಗವಹಿಸುವವರ ವಿವರ
    • ನಾಲ್ಕನೇ ಕನ್ನಡ ಸಮ್ಮೇಳನ (2020) >
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ಪ್ರಶಸ್ತಿ ಪುರಸ್ಕಾರ - 2020
      • ಸಮ್ಮೇಳನದ ಕೈಪಿಡಿ
  • ಪ್ರಾಯೋಜಕತ್ವ
  • ಆನ್ ಲೈನ್ ಗ್ರೂಪ್ಸ್
  • ವಿಡಿಯೋ
  • ಬ್ಲಾಗ್
  • ಸಂಪರ್ಕಿಸಿ

ವೇತನ ಕಾಯಿದೆ / ಸಂಹಿತೆ 2019 ರ ಪ್ರಮುಖ ಅಂಶಗಳು

11/19/2019

0 Comments

 
Picture
ನಾಗರಾಜ ಡಿ.ಬಿ.
ಮುಖ್ಯಸ್ಥರು - ಮಾನವ ಸಂಪನ್ಮೂಲ ವಿಭಾಗ
ವೆಯರ್ ಮಿನರಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು

ಭಾರತದ ಕಾರ್ಮಿಕ ಕಾನೂನುಗಳು ಅತ್ಯಂತ ಹಳೆಯ ಹಾಗೂ ಸಂಕೀರ್ಣವಾಗಿದ್ದು ಅವುಗಳನ್ನು ಸರಳೀಕರಿಸುವ ನಿಟ್ಟಿನಲ್ಲಿ ಮಹತ್ತರವಾದ ಪ್ರಯತ್ನಗಳಾಗುತ್ತಿವೆ.  ಈ ದಿಸೆಯಲ್ಲಿ ಆಗಸ್ಟ್ 8, 2019 ರಂದು ಅಂಕಿತ ಪಡೆದುಕೊಂಡ ವೇತನ ಕಾಯಿದೆ 2019 ಪ್ರಥಮ ಹೆಜ್ಜೆಯಾಗಿದೆ. ಈ ನೂತನ ವೇತನ ಕಾಯಿದೆಯು ಸುಮಾರು 50 ಕೋಟಿ ಕಾರ್ಮಿಕರಿಗೆ ಅನುಕೂಲಕರವಾಗಲಿದೆಯೆಂದು ಅಂದಾಜಿಸಲಾಗಿದೆ. ಭಾರತದಲ್ಲಿ ಶೇಕಡಾ 60 ರಷ್ಟು ಕಾರ್ಮಿಕರು ಕನಿಷ್ಠ ವೇತನದಿಂದ ವಂಚಿತರಾಗಿದ್ದು ಅವರಿಗೆ ಈ ಕಾಯಿದೆಯು ವರದಾನವಾಗಲಿದೆ ಎಂದು ಹೇಳಲಾಗುತ್ತಿದೆ.  
ವೇತನ ಸಂಹಿತೆಯಲ್ಲಿ ಸದ್ಯ ಪ್ರಚಲಿತದಲ್ಲಿರುವ ನಾಲ್ಕು ಕಾಯಿದೆಗಳಾದ ವೇತನ ಪಾವತಿ ಕಾಯಿದೆ, ಕನಿಷ್ಠ ವೇತನ ಕಾಯಿದೆ, ಬೋನಸ್ ಪಾವತಿ ಕಾಯಿದೆ ಹಾಗೂ, ಸಮಾನ ವೇತನ ಕಾಯಿದೆಗಳನ್ನು ಒಗ್ಗೂಡಿಸಿ ಒಂದೇ ಕಾನೂನಿನಡಿ ತರಲಾಗಿದೆ. ಹೊಸ ವೇತನ ಕಾಯಿದೆ 2019 ಒಟ್ಟು 9 ಅಧ್ಯಾಯಗಳನ್ನು 66 ಸೆಕ್ಷನಗಳನ್ನು ಒಳಗೊಂಡಿದೆ.

ಎರಡನೇ ರಾಷ್ಟ್ರೀಯ ಕಾರ್ಮಿಕ ಆಯೋಗವು 2002 ಏಪ್ರಿಲ್ ಮಾಹೆಯಲ್ಲಿ ಪ್ರಚಲಿತದಲ್ಲಿರುವ ಕಾನೂನುಗಳನ್ನು ಸಮಗ್ರವಾಗಿ ಐದು ಗುಂಪುಗಳನ್ನಾಗಿ ಪರಿಷ್ಕರಿಸಬೇಂಕೆಂದು ಶಿಫಾರಸ್ಸು ಮಾಡಿತ್ತು. ಆ ನಿಟ್ಟಿನಲ್ಲಿ ಭಾರತ ಸರ್ಕಾರವು ಸಕಾರಾತ್ಮಕ ನಿಲುವು ತಾಳಿ ಸಾಕಷ್ಟು ಚರ್ಚೆಯ ಬಳಿಕ ಕೊನೆಗೆ 44 ಕಾರ್ಮಿಕ ಕಾಯಿದೆಗಳನ್ನು ಕೈಗಾರಿಕಾ ಸಂಬಂಧಗಳು, ವೇತನಗಳು, ಸಾಮಾಜಿಕ ಭದ್ರತೆ ಹಾಗೂ ಔದ್ಯೋಗಿಕ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗಳು ಎಂಬ ನಾಲ್ಕು ಸಂಹಿತೆಗಳನ್ನಾಗಿ ರೂಪಿಸಲು ಸಜ್ಜಾಗಿದೆ.
 
1. ವೇತನ ಕಾಯಿದೆ 2019 ರ ಅನ್ವಯಿಸುವಿಕೆ:
ಈ ಕಾಯಿದೆಯು ಸಮಗ್ರ ಭಾರತಕ್ಕೆ ಅನ್ವಯಿಸುತ್ತದೆ ಹಾಗೂ ಕೇಂದ್ರ ಸರ್ಕಾರ ನಿಗದಿಪಡಿಸಿ ಆದೇಶ ಹೊರಡಿಸಿದ ದಿನಾಂಕದಿಂದ  ಜಾರಿಗೊಳ್ಳುತ್ತದೆ. ಕೆಲವು ವಿನಾಯತಿಗಳನ್ನು ಹೊರತುಪಡಿಸಿದರೆ ಈ ಕಾಯಿದೆಯು ಎಲ್ಲ ಕಾರ್ಖಾನೆಗಳು, ಸಂಸ್ಥೆಗಳು, ಉದ್ಯೋಗಿಗಳು ಹಾಗು ಮಾಲೀಕರಿಗೂ ಅನ್ವಯಿಸುತ್ತದೆ. ಅಂದರೆ ಈ ಕಾಯಿದೆಯು ಸಂಘಟಿತ ಹಾಗು ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೂ ಅನ್ವಯಿಸುತ್ತದೆ.  ಇಲ್ಲಿಯವರೆಗಿನ ಉದಾಹರಣೆಗಳನ್ನು ವಿಶ್ಲೇಷಿಸುವುದಾದರೆ ವೇತನ ಪಾವತಿ ಕಾಯಿದೆಯು ಮಾಸಿಕ 24000 ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಹಾಗೆಯೇ ಕನಿಷ್ಠ ವೇತನ ಕಾಯಿದೆಯು ಅನುಸೂಚಿತ ಉದ್ಯೋಗಗಳಿಗೆ ಮಾತ್ರ ಅನ್ವಯವಾಗುತಿತ್ತು. ಈ ಹೊಸ ವೇತನ ಸಂಹಿತೆಯ ಜಾರಿಯಿಂದ ಈ ಎಲ್ಲ ಮಿತಿಗಳು ಮಾಯವಾಗಿವೆ. ಈಗ ಎಲ್ಲ ಉದ್ಯೋಗಿಗಳು ಮೇಲ್ವಿಚಾರಕರು ಹಾಗು ವ್ಯವಸ್ಥಾಪಕರನ್ನು ಒಳಗೊಂಡಂತೆ ನಿಧಾನ ವೇತನ ಪಾವತಿ, ಕಾನೂನೇತರ ವೇತನ ಕಡಿತಗಳು ಮುಂತಾದ ಉಲ್ಲಂಘನಗಳಿಗೆ ಈ ಕಾಯಿದೆಯಡಿ ರಕ್ಷಣೆ ಕೋರಬಹುದಾಗಿದೆ.
 
2. ಕಾರ್ಮಿಕ ಮತ್ತು ನೌಕರ:
ವೇತನ ಕಾಯಿದೆಯು ನೌಕರ ಮತ್ತು ಕಾರ್ಮಿಕ ಎಂಬ ಪದಗಳಿಗೆ ಬೇರೆ ಬೇರೆ ಅರ್ಥಗಳನ್ನು ನೀಡಿದೆ. ನೌಕರ ಎಂಬ ಪದವು ವ್ಯವಸ್ಥಾಪಕ, ಮೇಲ್ವಿಚಾರಕ ಹಾಗು ಆಡಳಿತಾತ್ಮಕ ಕೆಲಸಗಳನ್ನು ಮಾಡುವವರನ್ನು ಒಳಗೊಂಡರೆ ಕಾರ್ಮಿಕ ಎಂಬ ಪದವು ವ್ಯವಸ್ಥಾಪಕ ಹಾಗು ಆಡಳಿತಾತ್ಮಕ ಕೆಲಸಗಳನ್ನು ಮಾಡುವವರನ್ನು ಒಳಗೊಳ್ಳುವುದಿಲ್ಲ. ಮತ್ತು ಮೇಲ್ವಿಚಾರಕರರ ಸಂಬಳವು ಮಾಸಿಕ ಹದಿನೈದು ಸಾವಿರ ರೂಪಾಯಿಗಳಿಗಿಂತ ಹೆಚ್ಚಿದ್ದರೆ ಅವರನ್ನು ಕಾರ್ಮಿಕ ಎಂದು ಪರಿಗಣಿಸಲಾಗುವುದಿಲ್ಲ. ಅಪ್ಪ್ರೆಂಟಿಸ್ ಕಾಯಿದೆಯಡಿ ಬರುವ ಆಪ್ರೆಂಟಿಸ್ಗಳನ್ನು ಈ ವ್ಯಾಖ್ಯಾನದಿಂದ ಹೊರಗಿಟ್ಟರೂ ಸಹ ಪ್ರಶಿಕ್ಷಣಾರ್ಥಿಗಳು / ವಿದ್ಯಾರ್ಥಿಗಳು ಹಾಗು ಸಂಸ್ಥೆಯ ಶಿಕ್ಷಾರ್ಥಿಗಳ ಬಗ್ಗೆ ಕಾಯಿದೆಯು ಮೌನ ವಹಿಸುತ್ತದೆ. ಅದೇ ರೀತಿ ಪ್ರಧಾನ ಮಾಲೀಕ ಎಂದರೆ ಯಾರು ಅನ್ನುವುದನ್ನು ನೇರವಾಗಿ ವ್ಯಾಖ್ಯಾನಿಸಿಲ್ಲ.
 
3. ವೇತನ ಅಥವಾ ಸಂಬಳ:
ವೇತನ ಅಥವಾ ಸಂಬಳದ ಬಗ್ಗೆ ಸೂಚಿಸಿದ ನಾಲ್ಕೂ ಕಾನೂನುಗಳಲ್ಲಿ ಒಂದೇ ವ್ಯಾಖ್ಯಾನವನ್ನು ನೀಡಿರುವುದು ಅತ್ಯಂತ ಗಮನಾರ್ಹ. ವೇತನ ವ್ಯಾಖ್ಯಾನವು ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ ಹಾಗು ಇನ್ನೂ ಇತರ ಕೆಲವು ಭತ್ಯೆಗಳನ್ನು ಒಳಗೊಳ್ಳುವುದಿಲ್ಲ. ಹೀಗೆ ಕಾಯ್ದೆಯಡಿಯಲ್ಲಿ ಹೊರತುಪಡಿಸಿದ ಕೆಲವು ಪ್ರಮುಖ ಭತ್ಯೆಗಳು ಒಟ್ಟು ವೇತನದ ಶೇಖಡಾ 50 ಕ್ಕಿಂತ ಹೆಚ್ಚು ಇದ್ದರೆ ಆ ಹೆಚ್ಚಿನ ಮೊತ್ತವನ್ನು ವೇತನಕ್ಕೆ ಸೇರಿಸಬೇಕೆಂದು ಹೇಳುತ್ತದೆ. ವೇತನವನ್ನು ಪ್ರತಿ ತಿಂಗಳ ಏಳನೇ ತಾರೀಕಿನ ಒಳಗೆ ನೀಡಬೇಕಾಗುತ್ತದೆ. ನೌಕರರು ಮತ್ತು ಕಾರ್ಮಿಕರಿಗೆ ಕೊಡಬೇಕಾದ ವೇತನವನ್ನು ಯಾವುದೇ ಕಾರಣಗಳಿಂದ ಪಾವತಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ, ಅಂತಹ ಪಾವತಿಸಲಾಗದ ವೇತನವನ್ನು ಅಧಿಸೂಚಿಸಿದ ಸೂಕ್ತ ಪ್ರಾಧಿಕಾರಕ್ಕೆ ಜಮೆ ಮಾಡಬೇಕಾಗುತ್ತದೆ ಹಾಗು ಯಾವುದೇ ವಿಧವಾದ ಕಾರ್ಮಿಕ ಇಲ್ಲವೆ ನೌಕರನನ್ನು ಕೆಲಸದಿಂದ ತೆಗೆದು ಹಾಕಿದಲ್ಲಿ  ಅಥವಾ ಉದ್ಯೋಗಿಯೇ ರಾಜೀನಾಮೆ ನೀಡಿದಲ್ಲಿ ಬಾಕಿ ಇರುವ ವೇತನ ಹಾಗು ಇತರೆ ಬೇ-ಬಾಕಿಗಳನ್ನು ಎರಡು ಕೆಲಸದ ದಿನಗಳೊಳಗಾಗಿ ಪಾವತಿಸಬೇಕೆಂದು ಹೊಸ ಕಾನೂನು/ಸಂಹಿತೆ ಹೇಳುತ್ತದೆ.
 
4. ವೇತನ ಕಡಿತಗಳು:
ಯಾವ ಯಾವ ಕಡಿತಗಳು ಅಧಿಕೃತ ಕಡಿತಗಳು ಎಂಬುದನ್ನು ಈ ಕಾಯಿದೆಯು ಸ್ಪಷ್ಟಪಡಿಸಿದೆ ಹಾಗು ಅಂತಹ ಒಟ್ಟು ಕಡಿತಗಳು ಒಟ್ಟು ವೇತನದ ಶೇಕಡಾ 50 ಕ್ಕಿಂತ ಹೆಚ್ಚು ಇರಬಾರದೆಂದೂ, ಒಂದು ವೇಳೆ ಹೆಚ್ಚಿದ್ದರೆ ಅಂತಹ ಕಡಿತಗಳನ್ನು ಪ್ರಾಧಿಕಾರ ಸೂಚಿಸಿದ ರೀತಿಯಲ್ಲಿಯೇ ಕಡಿತಗೊಳಿಸಬೇಕೆಂದು ಹೇಳುತ್ತದೆ.  ಹಾಗು ಯಾವುದೇ ರೀತಿಯ ದಂಡವನ್ನು ವಿಧಿಸಬೇಕಾದಲ್ಲಿ ಮೊದಲು ನೌಕರನಿಗೆ ಕಾರಣವನ್ನು ಸ್ಪಷ್ಟಪಡಿಸಲು ಅವಕಾಶ ನೀಡಬೇಕಾಗುತ್ತದೆ ಮತ್ತು ಅಂತಹ ದಂಡಗಳು ನಿರ್ದಿಷ್ಟ ವೇತನ ಅವಧಿಯ ನೌಕರನ ಒಟ್ಟು ವೇತನದ ಶೇಕಡಾ 3 ಪಟ್ಟು ಅಥವಾ ಅದಕ್ಕಿಂತ ಹೆಚ್ಚಿಗೆ ಇರುವಂತಿಲ್ಲ.
 
5. ಗುತ್ತಿಗೆ ಕಾರ್ಮಿಕ:
ವೇತನ ಕಾಯಿದೆಯು ಗುತ್ತಿಗೆ ಕಾರ್ಮಿಕ ಪದವನ್ನು ವಸ್ತುನಿಷ್ಠವಾಗಿ ವ್ಯಾಖ್ಯಾನಿಸಿದೆ. ಇಲ್ಲಿ ಗಮನಿಸಬೇಕಾದ  ಪ್ರಮುಖ ಅಂಶವೆಂದರೆ ಈ ವ್ಯಾಖ್ಯಾನವು ಅಂತರರಾಜ್ಯ ಕಾರ್ಮಿಕರನ್ನು ಒಳಗೊಂಡಿದೆ. ಈವರೆಗೆ ಅಂತರರಾಜ್ಯ ಕಾರ್ಮಿಕರು ಅನ್ಯರಾಜ್ಯ ವಲಸೆ ಕಾರ್ಮಿಕರ ಕಾಯಿದೆ 1979 ರ ಪರಿಮಿತಿಗೆ  ಒಳಪಡುತಿದ್ದರು. ಯಾವುದೇ ಕಾರ್ಮಿಕನು ನಿಯಮಿತವಾಗಿ ನೇಮಕಗೊಂಡು, ಪರಸ್ಪರ ಒಪ್ಪಿಕೊಂಡ ಶರತ್ತುಗಳಿಗನುಗುಣವಾಗಿ ಕೆಲಸ ಅನ್ಯರಾಜ್ಯ ನಿರ್ವಹಿಸುತ್ತಿದ್ದು, ಸಾಮಾಜಿಕ ಭದ್ರತೆ ಹಾಗು ಕಲ್ಯಾಣ ಸವಲತ್ತುಗಳನ್ನು ಪಡೆಯುತ್ತಿದ್ದರೆ ಅಂತಹ ಕಾರ್ಮಿಕನನ್ನು ಗುತ್ತಿಗೆ ಕಾರ್ಮಿಕ ಎಂದು ಪರಿಗಣಿಸಲಾಗುವುದಿಲ್ಲ.
 
6. ಮಾಲೀಕ:
ಕಾಯಿದೆಯು ಮಾಲೀಕ ಪದವನ್ನು ವ್ಯಾಖ್ಯಾನಿಸಿದ್ದು, ಗತಿಸಿದ ಮಾಲೀಕನ ಕಾನೂನುಬದ್ಧ ವಾರಸುದಾರನನ್ನೂ ಒಳಗೊಂಡಿದೆ. ಸೋಜಿಗದ ಸಂಗತಿಯೆಂದರೆ, ಗುತ್ತಿಗೆದಾರನನ್ನು ಮಾಲೀಕನೆಂದು ಪರಿಗಣಿಸಿರುವುದು. ಹಾಗಾದರೆ ಗುತ್ತಿಗೆ ಕಾರ್ಮಿಕರಿಗೆ ಬೋನಸ್ ಕೊಡುವ ಜವಾಬ್ದಾರಿ ಯಾರದ್ದು? ಎಂಬ ಪ್ರಶ್ನೆ ಮೂಡುತ್ತದೆ. ಮಾಲೀಕರಿಗೆ ಈ ಕಾಯಿದೆಯು ಕೆಲವೊಂದು ವಿನಾಯತಿಗಳನ್ನೂ ನೀಡಿದೆ. ಉದಾಹರಣೆಗೆ, ಒಂದು ವೇಳೆ ಮಾಲಿಕನು ಈ ಕಾಯಿದೆಯ ಉಲ್ಲಂಘನೆಗಾಗಿ ಕಾನೂನು ಕ್ರಮಕ್ಕೆ ಒಳಗಾಗಿದ್ದು, ಅಂತಹ ಉಲ್ಲಂಘನೆಯು ಮಾಲೀಕನ ಅರಿವಿಲ್ಲದೆ ಬೇರೊಬ್ಬ ವ್ಯಕ್ತಿಯಿಂದಾಗಿದ್ದರೆ ಆ ವ್ಯಕ್ತಿಯನ್ನು ಶಿಕ್ಷೆಗೆ ಒಳಪಡಿಸಿ ಮಾಲೀಕನನ್ನು ಖುಲಾಸೆಗೊಳಿಸಬಹುದಾಗಿದೆ.
 
7. ಕೈಗಾರಿಕಾ ವಿವಾದಗಳು:
ನೂತನ ವೇತನ ಕಾಯಿದೆಯು ಕೈಗಾರಿಕಾ ವಿವಾದಗಳನ್ನು ಈ ಕೆಳಕಂಡಂತೆ ವ್ಯಾಖಾನಿಸುತ್ತದೆ: ಕಾರ್ಮಿಕರ ಹಾಗೂ ಮಾಲೀಕರ ನಡುವಿನ ವ್ಯಾಜ್ಯಗಳು, ಕಾರ್ಮಿಕರು ಹಾಗು ಕಾರ್ಮಿಕರ ನಡುವಿನ ವ್ಯಾಜ್ಯಗಳು  ಹಾಗು ಮಾಲೀಕರ ಹಾಗು ಮಾಲೀಕರ ನಡುವಿನ ವ್ಯಾಜ್ಯಗಳು. ಆದರೆ ಮಾಲೀಕರ ಹಾಗು ನೌಕರರ ನಡುವಿನ ವ್ಯಾಜ್ಯಗಳು ಕೈಗಾರಿಕಾ ವ್ಯಾಜ್ಯಗಳೇ? ಎಂಬ ಪ್ರಶ್ನೆಗೆ ಕಾಯಿದೆಯು ಮೌನ ವಹಿಸಿದೆ. ಹಾಗೂ ಈ ಕಾಯಿದೆಯಡಿ ಸ್ಥಾಪಿಸಲ್ಪಡುವ ಪ್ರಾಧಿಕಾರವು ವ್ಯಾಜ್ಯಗಳನ್ನು ಪರಿಹರಿಸುಬಹುದೇ? ಅಥವಾ ಕೇವಲ ಕಾರ್ಮಿಕ ಹಕ್ಕುಗಳನ್ನು ಸಂರಕ್ಷಿಸುವುದಕ್ಕೆ ಮಾತ್ರ ಸೀಮಿತವಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ.
 
8.  ಕನಿಷ್ಠ ವೇತನ:
ವೇತನ ಕಾಯಿದೆಯ ಪ್ರಕಾರ ಕನಿಷ್ಠ ವೇತನವನ್ನು ಸಂಬಂಧಿತ ಸರ್ಕಾರವು ನಿಗದಿಪಡಿಸುತ್ತದೆ. ನಮಗೆಲ್ಲ ತಿಳಿದಿರುವ ಹಾಗೆ ಅನುಸೂಚಿತ ಉದ್ಯೋಗಗಳಿಗೆ ಕನಿಷ್ಠ ವೇತನವನ್ನು ಕನಿಷ್ಠ ವೇತನ ಕಾಯಿದೆಯು ನಿರ್ಧರಿಸುತಿತ್ತು. ಆದರೆ ಇನ್ನು ಮುಂದೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಕನಿಷ್ಠ ವೇತನವನ್ನು ನಿರ್ಧರಿಸುತ್ತದೆ ಹಾಗು ರಾಜ್ಯ ಸರ್ಕಾರಗಳು ಕನಿಷ್ಠ ವೇತನವನ್ನು ಅದಕ್ಕಿಂತ ಕಡಿಮೆ ನಿಗದಿಪಡಿಸುವಂತಿಲ್ಲ. ಕೇಂದ್ರ ಸರ್ಕಾರವು ರಾಷ್ಟ್ರೀಯ ಕನಿಷ್ಠ ವೇತನವನ್ನು ನಿರ್ಧರಿಸುವ ಸಂದರ್ಭದಲ್ಲಿ ಕುಶಲತೆ, ಅರೆಕುಶಲತೆ, ಅಕುಶಲತೆ ಹಾಗು ಭೌಗೋಳಿಕ ಸ್ಥಾನ ಮತ್ತು ಕನಿಷ್ಠ ಜೀವನ ಮಟ್ಟವನ್ನು ಪರಿಗಣಿಸುತ್ತದೆ.
 
9. ಸಮಾನ ವೇತನ:
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದನ್ನು ಲಿಂಗ ಭೇದಕ್ಕಿಂತ ಹೆಚ್ಚು ವಿಸ್ತೃತವಾಗಿ ಪರಿಗಣಿಸಲಾಗಿದೆ. ಲಿಂಗಾಧಾರಿತ ವೇತನ ತಾರತಮ್ಯವನ್ನು ಈ ಕಾಯಿದೆಯು ನಿಷೇಧಿಸುತ್ತದೆ. ಎಲ್ಲ ನೌಕರರಿಗೂ ಸಮಾನ ಕೆಲಸಕ್ಕೆ ಸಮಾನ ಸಂಬಳವನ್ನು ಪಾಲಿಸಬೇಂದು ಸೂಚಿಸುತ್ತದೆ. ಒಂದು ವೇಳೆ ವ್ಯತ್ಯಾಸವಿದ್ದರೆ ಅಂತಹ ವೇತನ ವ್ಯತ್ಯಾಸಕ್ಕೆ ತಕ್ಕ ಪುರಾವೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.  ನೇಮಕಾತಿಯ ಸಂಧರ್ಭದಲ್ಲಿ ಕೂಡ ಲಿಂಗ ತಾರತಮ್ಯವನ್ನು ಕಾಯಿದೆಯು ನಿಷೇಧಿಸಿದೆ. ಕೇಂದ್ರ  ಸಕರ್ಾರವು ಆದೇಶದ ಮೂಲಕ ಸೂಚಿಸಿದ ಪ್ರಾಧಿಕಾರವು  ವೇತನ ತಾರತಮ್ಯಕ್ಕೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುತ್ತದೆ.
 
10. ನಿರೀಕ್ಷಕರು ಅಥವಾ ಮಾರ್ಗದರ್ಶಕರು: (ಇನ್ಸ್ಪೆಕ್ಟರ್ ಕಮ್ ಫೆಸಿಲಿಟೇಟರ್):
ಸದ್ಯದಲ್ಲಿ ಪ್ರಚಲಿತದಲ್ಲಿರುವ ನಿರೀಕ್ಷಕರು ಎಂಬ ಪದವನ್ನು ನಿರೀಕ್ಷಕರು ಮತ್ತು ಮಾರ್ಗದರ್ಶಕರು ಎಂದು ಮರುಪರಿಚಯಿಸಲಾಗಿದೆ. ಇವರ ಜವಾಬ್ದಾರಿಗಳನ್ನು ಕೇವಲ ನಿರೀಕ್ಷಣೆಗಷ್ಟೇ ಸೀಮಿತವಾಗಿಸದೆ ಲಘುವಾಗಿ ವಿಸ್ತರಿಸಿದೆ. ಸಂಬಂಧಿತ ಸರ್ಕಾರವು ಇವರನ್ನು ನೇಮಕ ಮಾಡಿ ಆದೇಶ ಹೊರಡಿಸುತ್ತದೆ ಅವರ ಅಧಿಕಾರ ವ್ಯಾಪ್ತಿಯನ್ನು ನಿಗದಿಪಡಿಸುತ್ತದೆ. ವೇತನ ಕಾಯಿದೆಯ ಅನ್ವಯಿಕೆಗೆ ಮತ್ತು ಅದರ ಉದ್ದೇಶ ಪಾಲನೆಗೆ ಮಾಲೀಕರಿಗೆ ಸಹಾಯ ಮಾಡುವುದು ಇವರ ಪ್ರಮುಖ ಜವಾಬ್ದಾರಿಯಾಗಿರುತ್ತದೆ,
 
11. ಬೋನಸ್ ಪಾವತಿ ಮತ್ತು ಗಣನೆಯ ವಿಧಾನ:
ಬೋನಸ್ ಪಾವತಿ ಕಾಯಿದೆಯ ಹಲವಾರು ಅಂಶಗಳನ್ನು ವೇತನ ಕಾಯಿದೆ ಕಾಪಾಡಿಕೊಂಡಿದೆ. ಅಂದರೆ ವೇತನ ಕಾಯಿದೆಯು ಶೇಕಡಾವಾರು ಕನಿಷ್ಠ ಹಾಗು ಗರಿಷ್ಠ ಬೋನಸ್ ಮಿತಿ ಹಾಗು ಗಣನೆಯ ವಿಧಾನದಲ್ಲಿ ಏನೂ ಬದಲಾವಣೆಗಳನ್ನು ತಂದಿಲ್ಲ.  ಆದರೆ ಯಾವುದೇ ಒಬ್ಬ ನೌಕರನು  ಲೈಂಗಿಕ ಕಿರುಕಳದ ಅಪರಾಧಕ್ಕೆ ಗುರಿಯಾಗಿದ್ದರೆ ಅಂತಹ ನೌಕರನು ಬೋನಸ್ ಪಾವತಿಗೆ ಅನರ್ಹನಾಗುತ್ತಾನೆ ಎನ್ನುವ ಅಂಶವನ್ನು ಹೊಸದಾಗಿ ಸೇರಿಸಲಾಗಿದೆ.
 
12. ಉಲ್ಲಂಘನೆಗಳು ಹಾಗು ದಂಡಗಳು:
ಕಾಯಿದೆಯು ವಿವಿಧ ಉಲ್ಲಂಘನೆಗಳಿಗೆ ವಿವಿಧ ದಂಡಗಳನ್ನು ಪ್ರಸ್ತಾಪಿಸಿದೆ. ಗಮನಿಸಬೇಕಾದ ಅಂಶವೇನೆಂದರೆ ನಿರೀಕ್ಷಕರು ಹಾಗು ಮಾರ್ಗದರ್ಶಕರು ಕೆಲವೊಂದು ರೀತಿಯ ಉಲ್ಲಂಘನೆಗಳಿಗೆ ಕಾನೂನು ಕ್ರಮ ಜರುಗಿಸುವುದಕ್ಕೆ ಮುನ್ನ ಮಾಲೀಕರಿಗೆ ಉಲ್ಲಂಘನೆಗಳನ್ನು ಸರಿಪಡಿಸಿಕೊಳ್ಳುವಂತೆ ಲಿಖಿತವಾಗಿ ನಿರ್ದೇಶನ ನೀಡಿ ಅದಕ್ಕೆ ಸಮಯವನ್ನು ಕೊಡಬೇಕೆಂದು ಹೇಳುತ್ತದೆ. ಒಂದು ವೇಳೆ ಆ ಉಲ್ಲಂಘನೆಗಳನ್ನು ಸರಿಪಡಿಸಿಕೊಂಡಲ್ಲಿ ಕಾನೂನು ಕ್ರಮವನ್ನು ಕೈಬಿಡಬೇಕೆಂದು ಹೇಳುತ್ತದೆ.  ದಂಡಗಳ ಹಾಗು ಶಿಕ್ಷೆಯ ಮಿತಿಯನ್ನು ಹೆಚ್ಚಿಸಲಾಗಿದೆ. ಉದಾಹರಣೆಗೆ ಯಾವುದೇ ಮಾಲಿಕ ನೌಕರರಿಗೆ ನಿಗದಿ ಪಡಿಸಿದ ವೇತನಕ್ಕಿತ ಕಡಿಮೆ ವೇತನ ಪಾವತಿ ಮಾಡಿದರೆ ಈ ಕಾಯಿದೆಯಡಿ 50000 ರುಪಾಯಿ ದಂಡವನ್ನು ವಿಧಿಸಬಹುದಾಗಿದೆ. ಈ ಉಲ್ಲಂಘನೆಯನ್ನು ಪುನರಾವರ್ತಿಸಿದರೆ ಮೂರು ತಿಂಗಳ ಜೈಲು ಹಾಗು ಒಂದು ಲಕ್ಷ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಬಹುದಾಗಿದೆ.

ಹೀಗೆ ಇನ್ನು ಹತ್ತು ಹಲವು ವಿಷಯಗಳನ್ನು ವೇತನ ಕಾಯಿದೆಯು ವಿಸ್ತೃತವಾಗಿ ಮಂಡಿಸಿದ್ದು ಕೇಂದ್ರ ಸರ್ಕಾರವು ಮಾದರಿ ನಿಯಮಗಳನ್ನು ರೂಪಿಸಿ, ಈ ಕಾಯ್ದೆಯ ಅನ್ವಯ ದಿನವನ್ನು ನಿಗದಿಪಡಿಸಿದ ನಂತರ ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸಿ ಇಲ್ಲವೆ ಮಾದರಿ ನಿಯಮಗಳನ್ನು ಅಳವಡಿಸಿಕೊಂಡು ರಾಜ್ಯದಲ್ಲಿ ಈ ಹೊಸ ಕಾನೂನನ್ನು ಜಾರಿಗೆ ತರಬಹುದಾಗಿದೆ. 
​
ಒಟ್ಟಿನಲ್ಲಿ, ಕೇಂದ್ರ ಸರ್ಕಾರದ ಈ ಕೈಗಾರಿಕಾ ಅಥವಾ ಕಾರ್ಮಿಕ  ಕಾನೂನುಗಳ ಸುಧಾರಣಾ ಕ್ರಮ ಅತ್ಯಂತ ಸ್ವಾಗತಾರ್ಹವಾಗಿದ್ದು ಎಲ್ಲ ಮಾಲೀಕರಿಗೂ ಹಾಗು ಉದ್ಯೋಗಿಗಳಿಗೂ ಅನುಕೂಲವಾಗಲಿದೆಯೆಂದು ಹೇಳಬಹುದಾಗಿದೆ.
0 Comments



Leave a Reply.

    Picture
    Nirathanka

    Categories

    All
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಹನಿಗವನ

    Archives

    November 2020
    July 2020
    November 2019
    October 2019



    RSS Feed

SITEMAP
FOLLOW US
OFFICE ADDRESS
  • ಸ್ವಾಗತ
  • ಸಮಿತಿಯ ಸದಸ್ಯರು
  • ನಾಲ್ಕನೇ ಕನ್ನಡ ಸಮ್ಮೇಳನ-2020
  • ಲೇಖನಗಳಿಗಾಗಿ ಆಹ್ವಾನ-2020
  • ಪ್ರಶಸ್ತಿ ಪುರಸ್ಕಾರ-2020
  • ಪ್ರಾಯೋಜಕತ್ವ
  • ದೇಣಿಗೆ ಸಂಗ್ರಹಣ-2020
  • ಸಂಪರ್ಕಿಸಿ
Conference Google Group
Conference Telegram Group
Conference Facebook Group
​Conference Facebook Page
Linked in Group
Picture
ನಿರಾತಂಕ
ನಂ. 326, 2ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056.
ಇಮೇಲ್ : hrnirathanka@mhrspl.com
ದೂ: 080-23213710, 8073067542, 9980066890
​
ವೆಬ್‍ಸೈಟ್‍: www.niratanka.org

JOIN OUR ONLINE HR GROUPS

WE ARE HAPPY TO ANNOUNCE THAT 20000 HR PROFESSIONALS ARE CONNECTED THROUGH OUR NIRATHANKA HR GOOGLE GROUP, THE MEMBERS OF THE GROUP ARE PERMITTED TO SHARE HR ARTICLES, HR JOB POSTINGS AND ANNOUNCEMENTS ON SEMINARS / WORKSHOPS / TRAINING PROGRAMMES. ​
Join our Google Group

    ನಾಲ್ಕನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2020
    ಈ ಸಮ್ಮೇಳನಕ್ಕಾಗಿಯೇ ವಿಶೇಷವಾಗಿ GOOGLE GROUP ಅನ್ನು ರಚಿಸಲಾಗಿದೆ. ಆಸಕ್ತರು GOOGLE GROUP ನ ಸದಸ್ಯರಾಗಬಹುದು. ಕನ್ನಡ ಸಮ್ಮೇಳನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಈ ಗ್ರೂಪ್ ನ ಮೂಲಕ ಕಳುಹಿಸಿಕೊಡಲಾಗುವುದು.

Subscribe to Newsletter
Picture
Join Our Conference Google Group
Human Resources Kannada Conference
Copyright : Nirathanka 2020
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
  • ಸಮಿತಿಯ ಸದಸ್ಯರು
  • ಕನ್ನಡ ಸಮ್ಮೇಳನ
    • ಪ್ರಥಮ ಕನ್ನಡ ಸಮ್ಮೇಳನ-2017 >
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
    • ದ್ವಿತೀಯ ಕನ್ನಡ ಸಮ್ಮೇಳನ-2018 >
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2018
    • ತೃತೀಯ ಕನ್ನಡ ಸಮ್ಮೇಳನ (2019) >
      • ಸ್ವಾಗತ
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
      • ಭಾಷಣಕಾರರು
      • ಭಾಗವಹಿಸುವವರ ವಿವರ
    • ನಾಲ್ಕನೇ ಕನ್ನಡ ಸಮ್ಮೇಳನ (2020) >
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ಪ್ರಶಸ್ತಿ ಪುರಸ್ಕಾರ - 2020
      • ಸಮ್ಮೇಳನದ ಕೈಪಿಡಿ
  • ಪ್ರಾಯೋಜಕತ್ವ
  • ಆನ್ ಲೈನ್ ಗ್ರೂಪ್ಸ್
  • ವಿಡಿಯೋ
  • ಬ್ಲಾಗ್
  • ಸಂಪರ್ಕಿಸಿ