HR KANNADA CONFERENCE
  • ಸ್ವಾಗತ
  • ಸಮಿತಿಯ ಸದಸ್ಯರು
  • ಕನ್ನಡ ಸಮ್ಮೇಳನ
    • ಪ್ರಥಮ ಕನ್ನಡ ಸಮ್ಮೇಳನ-2017 >
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
    • ದ್ವಿತೀಯ ಕನ್ನಡ ಸಮ್ಮೇಳನ-2018 >
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2018
    • ತೃತೀಯ ಕನ್ನಡ ಸಮ್ಮೇಳನ (2019) >
      • ಸ್ವಾಗತ
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
      • ಭಾಷಣಕಾರರು
      • ಭಾಗವಹಿಸುವವರ ವಿವರ
    • ನಾಲ್ಕನೇ ಕನ್ನಡ ಸಮ್ಮೇಳನ (2020) >
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ಪ್ರಶಸ್ತಿ ಪುರಸ್ಕಾರ - 2020
      • ಸಮ್ಮೇಳನದ ಕೈಪಿಡಿ
  • ಪ್ರಾಯೋಜಕತ್ವ
  • ಆನ್ ಲೈನ್ ಗ್ರೂಪ್ಸ್
  • ವಿಡಿಯೋ
  • ಬ್ಲಾಗ್
  • ಸಂಪರ್ಕಿಸಿ

ಸಂಸ್ಥೆಗಳನ್ನು ರೂಪಾಂತರಗೊಳಿಸಿದ POSH ನ ಅತ್ಯುತ್ತಮ ಆಚರಣೆಗಳು

11/29/2019

0 Comments

 
Picture
ನಾಗರಾಜ್ ರಾವುತ್
ವ್ಯವಸ್ಥಾಪಕ-ಸಿಬ್ಬಂದಿ ಕಲ್ಯಾಣಾಧಿಕಾರಿಗಳು, ಏರ್ ಇಂಡಿಯಾ - SATS ಏರ್‍ಪೋರ್ಟ್
ಸರ್ವೀಸಸ್ ಪ್ರೈ. ಲಿ.
Picture
ಮಧುಕುಮಾರ್ ಎಸ್.
ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ರಾಮನಗರ ಸ್ನಾತಕೋತ್ತರ ಕೇಂದ್ರ,
ಬೆಂಗಳೂರು ವಿಶ್ವವಿದ್ಯಾಲಯ
ಪೀಠಿಕೆ:
ಲೈಂಗಿಕ ಕಿರುಕುಳವಿಲ್ಲದ ಸುರಕ್ಷಿತ ಔದ್ಯೋಗಿಕ ಪರಿಸರವನ್ನು ಮಳೆಯರಿಗೆ ಒದಗಿಸುವುದು ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ. ಆದ ಕಾರಣ ಎಲ್ಲಾ ಕಾರ್ಯ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಮುಕ್ತ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಲೈಂಗಿಕ ಕಿರುಕುಳ ಭಾರತ ಸಂವಿಧಾನದ ಪರಿಚ್ಛೇದ 14 ಮತ್ತು 15ರ ಸಮಾನತೆ ಹಕ್ಕಿನ ಉಲ್ಲಂಘನೆಯಾದರೆ ಸಂವಿಧಾನದ 21ನೇ ಅಧಿನಿಯಮದಡಿ ಖಾತರಿಪಡಿಸಿದ ಘನತೆಯೊಂದಿಗೆ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಭಾರತ ಸರ್ಕಾರವು ಕಾರ್ಯಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ನಿವಾರಣೆ) ಕಾಯಿದೆ, 2013 ಅನ್ನು ಜಾರಿಗೊಳಿಸಿತು. ಈ ಕಾಯಿದೆಯು 1997 ರಲ್ಲಿ ಸರ್ವೋಚ್ಛ ನ್ಯಾಯಾಲಯದಿಂದ ಬಿಡುಗಡೆಯಾದ ವಿಶಾಖಾ ಮಾರ್ಗದರ್ಶಿ ಸೂತ್ರಗಳ ಒಂದು ವಿಸ್ತೃತ ರೂಪವಾಗಿದೆ. ಸದರಿ ಕಾಯ್ದೆ ಉದ್ಯೋಗನಿರತ ಮಹಿಳೆಯರಿಗೆ ಸುರಕ್ಷಿತ ಕಾರ್ಯಸ್ಥಳವನ್ನು ಖಾತರಿಗೊಳಿಸುವುದರ ಜೊತೆಗೆ ಉದ್ಯೋಗದಾತ ಹಾಗೂ ನೌಕರರ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ಸಾಧನವಾಗಿದೆ.

ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಬಹಳ ಗಂಭೀರ ಹಾಗೂ ಕಿರಿಕಿರಿಯನ್ನುಂಟು ಮಾಡುವ ಸಂಗತಿಯಾಗಿದ್ದು, ಉದ್ಯೋಗ ನಿರತ ಮಹಿಳೆಯರ ಪರಿಪೂರ್ಣ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗುವುದರ ಜೊತೆಗೆ ಮಹಿಳೆಯ ಘನತೆಯ ಹಕ್ಕಿನ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ಇದು ಮಹಿಳೆಯರ ಮೇಲೆ ತೀವ್ರವಾದ ಅಥವಾ ವ್ಯಾಪಕವಾದ ಲೈಂಗಿಕ ಪ್ರಕ್ರಿಯೆಯ ಅನೌಪಚಾರಿಕ, ಮೌಖಿಕ, ದೃಷ್ಟಿ ಅಥವಾ ದೈಹಿಕ ನಡುವಳಿಕೆ ಹಾಗೂ ಕಾರ್ಯಸ್ಥಳದ ಪರಿಸರದ ಮೇಲೆ ಗಂಭೀರ ಅಥವಾ ಪ್ರತಿಕೂಲ ಪರಿಣಾಮ ಬೀರುತ್ತದೆ. ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದ ನಡುವಳಿಕೆಯೇ ಆಗಿರುವ ಲೈಂಗಿಕ ಕಿರುಕುಳಕ್ಕೆ ತುತ್ತಾದವರು ತಮ್ಮ ಕೆಲಸವನ್ನು ಅಪಾಯಕ್ಕೆ ಒಡ್ಡಿಕೊಳ್ಳಬಹುದು ಇಲ್ಲವೇ ಕೆಲಸದ ಬಗ್ಗೆ ಋಣಾತ್ಮಕ ಭಾವನೆಯನ್ನು ಹೊಂದಬಹುದು ಅಥವಾ ಕೆಲಸದಲ್ಲಿ ನಿರಾಸಕ್ತಿ ಹೊಂದಬಹುದು ಇಲ್ಲವೇ ಕೆಲಸವನ್ನೇ ತೊರೆಯಹುದು. ಲೈಂಗಿಕ ಕಿರುಕುಳವು ವ್ಯಕ್ತಿಯ ಘನತೆಯನ್ನು ಹಾಳುಮಾಡುವುದ ಜೊತೆಗೆ ಮಾನಸಿಕ ಹಾಗೂ ದೈಹಿಕವಾಗಿ ಕೃಶರನ್ನಾಗಿಸುತ್ತದೆ. ಇದು ವ್ಯಕ್ತಿಯ ಔದ್ಯೋಗಿಕ ಜೀವನದ ಜೊತೆಗೆ ಕೌಟುಂಬಿಕ ಜೀವನದ ಮೇಲೂ ಗಂಬೀರ ಪರಿಣಾಮ ಬೀರುತ್ತದೆ.

ಕಾಯ್ದೆಯ ಪ್ರಕಾರ ಲೈಂಗಿಕ ಕಿರುಕುಳ ಎಂದರೆ ಒಬ್ಬ ವ್ಯಕ್ತಿಯ ನಡುವಳಿಕೆ ಮತ್ತೊಬ್ಬ ವ್ಯಕ್ತಿಗೆ (ಬಹುಶಃ ನೊಂದ ವ್ಯಕ್ತಿಯೂ ಆಗಿರಬಹುದು) ಇಷ್ಟವಿಲ್ಲದಿದ್ದರೆ ಅಥವಾ ಬಲವಂತವಾಗಿ ಇಲ್ಲವೇ ತೊಂದರೆಯನ್ನುಂಟು ಮಾಡಿದ ಪಕ್ಷದಲ್ಲಿ ಅಂತಹ ವರ್ತನೆಯನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಬಹುದು. ವ್ಯಕ್ತಿಯ ಆ ನಡುವಳಿಗೆ ಸ್ವೀಕರಿಸಲ್ಪಡುವ ವ್ಯಕ್ತಿಗೆ ಇಷ್ಟವಿದ್ದ ಪಕ್ಷದಲ್ಲಿ ಅಂತಹ ನಡುವಳಿಕೆಯು ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ನಡುವಳಿಕೆಯು ಸ್ವಾಗತಾರ್ಹ ಅಥವಾ ಸ್ವಾಗತಾರ್ಹವಲ್ಲವೆಂದು ನಿರ್ಧರಿಸಲು, ನ್ಯಾಯಾಲಯವು ಸ್ವಾಭಾವಿಕವಾಗಿ ಘಟನೆ ನಡೆದ ಸಮಯದಲ್ಲಿ ದೂರುದಾರಳು ಯಾವ ರೀತಿ ನಡುವಳಿಕೆಗೆ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದಳು ಎನ್ನುವುದರ ಮೇಲೆ ನಿರ್ಧರಿಸುತ್ತದೆ. ದೂರುದಾರರು ಕಿರುಕುಳ ನೀಡುವ ವ್ಯಕ್ತಿಗೆ ಅವರ ನಡುವಳಿಕೆಯು ತಮಗೆ ಅನಾನುಕೂಲವಾಗುತ್ತದೆ ಹಾಗು ಅದನ್ನು ನಿಲ್ಲಿಸಬೇಕೆಂದು (ಮಾತಿನ ಮೂಲಕ, ಬರಹದ ರೂಪದಲ್ಲಿ ಅಥವಾ ತಮ್ಮ ಪ್ರತಿಕ್ರಿಯೆಯ ಮೂಲಕ) ತಿಳಿಸುವುದು ಅತ್ಯಗತ್ಯ.

1997 ಕ್ಕೆ ಮುಂಚಿತವಾಗಿ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಅನುಭವಿಸುತ್ತಿರುವ ಮಹಿಳೆಯರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ರ ಅಡಿಯಲ್ಲಿ ದೂರು ದಾಖಲಿಸಬೇಕಾಗಿತ್ತು. ಇದು ಮಹಿಳೆಯರ ಮೇಲಾಗುವ ದೌರ್ಜನ್ಯ ಹಾಗೂ ಅಪರಾಧಗಳಿಗೆ ಸಂಬಂಧಿಸಿದಂತಹ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ಬಗೆಯ ಪ್ರಕರಣಗಳು ಜರುಗಿದಾಗ ಪ್ರಕರಣವನ್ನು ದಾಖಲಿಸಿಕೊಳ್ಳುವುದು, ಪ್ರಥಮ ಮಾಹಿತಿ ವರದಿಯನ್ನು ಸಿದ್ಧಗೊಳಿಸುವುದು, ತನಿಖೆ ನಡೆಸುವುದು, ಸಾಕ್ಷ್ಯಾಧಾರಗಳನ್ನು ಸಂಗ್ರಸುವುದು ಮತ್ತು ಪರಿಶೀಲಿಸಿ ನ್ಯಾಯಾಲಯಕ್ಕೆ ಒಪ್ಪಿಸುವುದು ಇವೇ ಮೊದಲಾದ ಕಾರ್ಯಗಳನ್ನು ಕೈಗೊಳ್ಳುವ ಜವಾಬ್ದಾರಿ ಆರಕ್ಷಕರ ವಿವೇಚನೆಗೆ ಬಿಟ್ಟುಕೊಡಲಾಗಿತ್ತು. ಆದರೆ 1997 ರಲ್ಲಿ ವಿಶಾಖಾ ಮಾರ್ಗದರ್ಶನದ ಪರಿಚಯದೊಂದಿಗೆ ಸಂಪೂರ್ಣ ಸನ್ನಿವೇಶವನ್ನು ಬದಲಾಯಿಸಲಾಯಿತು.

09 ನೇ ಡಿಸೆಂಬರ್ 2018 ರಂದು POSH (ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ) ಕಾಯಿದೆಯು ತನ್ನ ಐದನೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ ಹಾಗು ಕಳೆದ 5 ವರ್ಷಗಳಲ್ಲಿ, ಕಂಪನಿಗಳು ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಪ್ರಭಾವ ಬೀರಿದೆ. ಇದರ ನಿರಂತರತೆಯ ಪರಿಣಾಮವಾಗಿ ಲೈಂಗಿಕ ಕಿರುಕುಳವನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಉತ್ತಮ ಆಚರಣೆಗಳನ್ನು ಅಳವಡಿಸಿಕೊಂಡ ಹಲವಾರು ಕಂಪನಿಗಳಿಗೆ ಕಾರಣವಾಗಿದೆ. ಕಳೆದ 5 ವರ್ಷಗಳಲ್ಲಿ ಈ ಕಾಯಿದೆಯು ಹಲವಾರು ಬಾಹ್ಯ ಅಂಶಗಳೊಂದಿಗೆ ಕಂಪನಿಗಳು ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ಅತ್ಯಂತ ಗಂಭೀರತೆಯಿಂದ ಪರಿಗಣಿಸಲು ಪ್ರಭಾವ ಬೀರಿದೆ. ಕೆಲವು ಕಂಪನಿಗಳು ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಕಾಯಿದೆಯ ಪ್ರಕಾರ ಕಡ್ಡಾಯವಾದ ಅಂಶಗಳಿಗಿಂತ ಮಿಗಿಲಾಗಿ, ತಮ್ಮದೇ ಆದ ಕೆಲವು ಕೌಶಲ್ಯದ ಮಾರ್ಗಗಳನ್ನು ಹಾಗು ಪರಿಣಾಮಕಾರಿಯಾದ ಆಚರಣೆಗಳನ್ನು ಅಳವಡಿಸಿಕೊಳ್ಳುತ್ತಿವೆ. ಇದೇ ಮೊದಲಾದ ಪೂರಕ ಮತ್ತು ಆರೋಗ್ಯಕರ ಬೆಳವಣಿಗೆಗಳ ಮಧ್ಯೆ ಕೆಲವು ಕಂಪನಿಗಳು ನಿಯಮಗಳನ್ನು ಉಲ್ಲಂಘಿಸಿ, ಪ್ರಕರಣಗಳ ಸರಿಯಾದ ಸಂಖ್ಯೆಯ ಮಾಹಿತಿಯನ್ನು ವರದಿ ಮಾಡುವಲ್ಲಿ ಹಿಂದೇಟು ಹಾಕುತ್ತಿವೆ. ಆದರೆ ಒಟ್ಟಾರೆಯಾಗಿ, ಈ ಕಾಯಿದೆಯು ಕಂಪನಿಗಳು ಅದರ ಆಜ್ಞೆಯನ್ನು ಅನುಸರಿಸಲು ಮುಂದಾಗುವಂತೆ ಮತ್ತು ಕಂಪನಿಗಳು ಕೆಲಸದ ಸ್ಥಳಗಳಲ್ಲಿ ತಮ್ಮ ಮಹಿಳಾ ಉದ್ಯೋಗಿಗಳಿಗೆ ಸುರಕ್ಷಿತೆಯನ್ನು ಒದಗಿಸುವಲ್ಲಿ ಪರಿಣಾಮಕಾರಿಯಾಗಿದೆಯಂದೇ ಹೇಳಬಹುದು.

ಈ POSH ಕಾಯಿದೆಯು ಅಸ್ತಿತ್ವಕ್ಕೆ ಬಂದಾಗಿನಿಂದ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಒಂದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ. ಈ ಅಗತ್ಯವಾದ ನ್ಯಾಯಸಮ್ಮತೆಯನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯವು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ನಿವಾರಣೆ) ಕಾಯಿದೆ, 2013 ರ ಮೂಲಕ ಒದಗಿಸಲಾಗಿದೆ. ಕೆಲಸದ ಸ್ಥಳಗಳಲ್ಲಿ ಬೆಳೆಯುತ್ತಿರುವ ಮಹಿಳಾ ಉದ್ಯೋಗಿಗಳ ಸಂಖ್ಯೆ, ವೈವಿದ್ಯತೆಯ ಹೆಚ್ಚಳ, ಕಡಿಮೆ ಔಪಚಾರಿಕ ಕೆಲಸದ ವಾತಾವರಣ ಮತ್ತು ಸರ್ವತ್ರ ತಂತ್ರಜ್ಞಾನದ ಕಡೆಗೆ ಅಗತ್ಯವಾದ ಬದಲಾವಣೆಯನ್ನು ಬಲಪಡಿಸಿದೆ. ಆದ್ದರಿಂದ ಕೆಲವು ಕಂಪನಿಗಳು ಉತ್ತಮ ಆಚರಣೆಗಳನ್ನು ಅನುಕರಿಸುವ ಮೌಲ್ಯವನ್ನು ಕಂಡುಕೊಂಡಿವೆ.
 
POSH ನ ಅರಿವು ಮತ್ತು ತರಬೇತಿ:
HR ದೃಷ್ಟಿಕೋನದಿಂದ, ಕಂಪನಿಯು ತನ್ನ ಉದ್ಯೋಗಿಗಳಿಗೆ ಸರಿಯಾದ ಪೂರ್ವನಿದರ್ಶನವನ್ನು ಹೊಂದಿಸಲು ಇದು ಮಹತ್ವದ್ದಾಗಿದೆ. ಇದರಿಂದಾಗಿ ಕೆಲಸದ ಸ್ಥಳದಲ್ಲಿ ನೈತಿಕತೆ ಮತ್ತು ಕೆಲಸದ ನೀತಿಗಳು ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಲೈಂಗಿಕ ಕಿರುಕುಳವನ್ನು ತಡೆಯುವ ಸಮಗ್ರ ಮತ್ತು ಪರಿಣಾಮಕಾರಿ ಯಾಂತ್ರಿಕ ರಚನೆಯು ಪ್ರತಿ CEO ಗೆ / ಸಂಸ್ಥೆಯ ಮುಖ್ಯಸ್ಥರಿಗೆ ಆದ್ಯತೆಯ ವಿಚಾರವಾಗಿರಬೇಕು. ಸಂಸ್ಥೆಗಳಿಗೆ ಮತ್ತು ಉನ್ನತ ನಿರ್ವಹಣೆಯು ತನ್ನ ಉದ್ಯೋಗಿಗಳಿಗೆ ನಿಯಮಿತ ಹಾಗೂ ಮಧ್ಯಂತರ ಅವಧಿಯಲ್ಲಿ ಲೈಂಗಿಕ ಕಿರುಕುಳದ ಸೂಕ್ಷ್ಮತೆಗಳ ಅರಿವು ಮೂಡಿಸಲು ಮತ್ತು ಅದರ ನೌಕರರನ್ನು ಕಾಯಿದೆಯ ನಿಬಂಧನೆಗಳ ಮೂಲಕ ಪರಿಚಯಿಸುವ ಕಡೆಗೆ ಲಿಂಗ ಸಂವೇದನೆ ಕಾರ್ಯಾಗಾರಗಳನ್ನು ನಡೆಸಲು ಸಮಯದ ಅವಶ್ಯಕತೆ ಇದೆ.
Picture
Join Our Conference Google Group
1. ಆಂತರಿಕ ಸಮಿತಿ (ICC) ಸದಸ್ಯರ ತರಬೇತಿ ಆಂತರಿಕ ಸಮಿತಿ:
ಸಾಂಸ್ಥಿಕ ಮಟ್ಟದಲ್ಲಿ ದಕ್ಷ ಮತ್ತು ಪರಿಣಾಮಕಾರಿ ದೂರು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ICC ಸದಸ್ಯರ ತರಬೇತಿ ಪರಿಣಾಮಕಾರಿಯಾಗಿ ಪರಿಣಮಿಸುತ್ತದೆ.
 
2. ಪ್ರಾದೇಶಿಕ ಭಾಷೆಯ ಬಳಕೆ:
  • ಕಡಿಮೆ ಶಿಕ್ಷಣ ಪಡೆದಂತಹ ಕಾರ್ಮಿಕರಿಗೆ ಅರ್ಥವಾಗುವ ರೀತಿಯಲ್ಲಿ, ಅಂದರೆ ಪ್ರಾದೇಶಿಕ ಭಾಷೆಯಲ್ಲಿ POSH ಕಾಯಿದೆಯ ಮಹತ್ವವನ್ನು ಅರಿತುಕೊಳ್ಳಲು ತರಬೇತಿ ನೀಡುವುದು.
  • ಪ್ರಾದೇಶಿಕ ಭಾಷೆಯಲ್ಲಿ POSH ಕುರಿತಾದ ಪೋಸ್ಟರ್ಗಳನ್ನು ಕೆಲಸದ ಸ್ಥಳಗಳಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸುವುದು.
 
3. ಲೈಂಗಿಕ ಕಿರುಕುಳ ಕುರಿತಾದ ಸಾಕ್ಷ್ಯಚಿತ್ರಗಳನ್ನು ತರಬೇತಿಯಲ್ಲಿ ಬಳಸುವುದು:
ಕಾಯಿದೆಯ ಮುಖ್ಯಾಂಶಗಳನ್ನು ಬಿಂಬಿಸುವ ಮಾಹಿತಿಯನ್ನೊಳಗೊಂಡ ಸಾಕ್ಷ್ಯಚಿತ್ರಗಳನ್ನು ತರಬೇತಿ ಸಮಯದಲ್ಲಿ ಬಳಸಿದರೆ ಬಹಳ ಸೂಕ್ತ. ಈ ಮೂಲಕ ಎಲ್ಲಾ ಭಾಗಾರ್ಥಿಗಳಿಗೆ ಅರ್ಥವಾಗುವಂತೆ ವಿವರಿಸಬಹುದಾಗಿದೆ.
 
4. ರಂಗಭೂಮಿ ಆಧಾರಿತ ಪಾತ್ರ ನಿರ್ವಹಣೆ:
POSH ನ ಕಾಯಿದೆಯ ನಿರ್ದೇಶಿತ ಮತ್ತು ನಿರ್ಬಂಧಿತ ನಿಯಮಗಳನ್ನು ಪ್ರೇಕ್ಷಕರು ಗುರುತಿಸಲು ಸಂಸ್ಥೆಯ ಉದ್ಯೋಗಿಗಳು ಲಿಖಿತವಾದ ಪಾತ್ರಗಳನ್ನು ನಿರ್ವಹಿಸುವುದು.
 
5. ರೋಡ್ ಶೋ:
POSH ಕುರಿತಾದ ರೋಡ್ ಷೋಗಳನ್ನು ನಡೆಸುವುದು. ಇವು ನಾಟಕ, ಆಟಗಳು, ರಸಪ್ರಶ್ನೆಗಳು ಮತ್ತು ವಿಷಯ ತಜ್ಞರ ಸಮಿತಿಯ ಚರ್ಚೆಗಳನ್ನು ಒಳಗೊಂಡಿರುತ್ತದೆ.
 
6. ಸ್ಪರ್ಧೆಗಳು:
POSH ನ ಕುರಿತಾದ ಅತ್ಯುತ್ತಮ ಆಂಪಿಯರ್-ವಿಡಿಯೋ ನಮೂನೆಗಾಗಿ ಕಂಪನಿ-ವ್ಯಾಪಕ ಸ್ಪರ್ಧೆಗಳನ್ನು ಏರ್ಪಡಿಸುವುದು. ಸ್ಪರ್ಧೆಯಲ್ಲಿ ವಿಜೇತ ಆಂಪಿಯರ್-ವಿಡಿಯೋ ಪ್ರಶಸ್ತಿಯನ್ನು ಪಡೆಯುತ್ತದೆ ಮತ್ತು ಕಂಪನಿಯ ತರಬೇತಿ ಭಂಡಾರದಲ್ಲಿ ಸೇರ್ಪಡೆಯಾಗುತ್ತದೆ.
 
7. ಪುಸ್ತಕಗಳು ಮತ್ತು ಪತ್ರಿಕೆಗಳು:
ಸಮಿತಿಯ ಸದಸ್ಯರಿಗೆ ಅವಶ್ಯಕವಾದ ಮಾಹಿತಿಯನ್ನು ಹಾಗು ನಿಯಮದಲ್ಲಾಗಬಹುದಾದ ಬದಲಾವಣೆಗಳನ್ನು ತಿಳಿದುಕೊಳ್ಳಲು ಪುಸ್ತಕಗಳನ್ನು ಮತ್ತು ಪತ್ರಿಕೆಗಳನ್ನು ಒದಗಿಸುವುದು.
 
8. ಕಲಿತ ಪಾಠಗಳ ಬಗ್ಗೆ ವಿಷಯ ವಿನಿಮಯ (ಉದಾಹರಣಾ ಪರಿಶೀಲನೆ):
ಸಮಿತಿಯ ನಿಯತಕಾಲಿಕ ಸಭೆಗಳಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳಿಂದ ಕಲಿತ ಪಾಠಗಳ ಸಾರಾಂಶವನ್ನು ಸದಸ್ಯರೊಂದಿಗೆ ಚರ್ಚಿಸುವುದು.
 
9. ಉದ್ಯೋಗಿಗಳ ಪಲ್ಸ್ ತಿಳುವಳಿಕೆ:
ಸ್ತ್ರೀ ನೌಕರರು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದರೆ ಅದನ್ನು ಅರ್ಥಮಾಡಿಕೊಳ್ಳಲು ಅನಾಮಧೇಯ ಆನ್ಲೈನ್ ಸಮೀಕ್ಷೆಗಳನ್ನು ನಡೆಸಲಾಗುತ್ತದೆ.
 
ಬಾಹ್ಯ ಪ್ರಭಾವಗಳು:
ಲೈಂಗಿಕ ಕಿರುಕುಳವನ್ನು ಗಂಭೀರವಾಗಿ ತೆಗೆದುಕೊಳ್ಳುವುದಕ್ಕೆ ಅಗತ್ಯವಾದ ಪ್ರಚೋದನೆಯನ್ನು ನೀಡುವಲ್ಲಿ ಹಲವಾರು ಬಾಹ್ಯ ಅಂಶಗಳು ತಮ್ಮದೇ ಆದ ಪ್ರಭಾವವನ್ನು ಬೀರಿವೆ.
 
1. IPC ಸೆಕ್ಷನ್ 354 A:
ಅಂತಿಮವಾಗಿ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯಿದೆ, 2013 ರ ಕಾನೂನಿನೊಂದಿಗೆ ಮಹಿಳೆಯರಿಗೆ ವಿರುದ್ಧದ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿಗಳ ಸರಣಿಯಲ್ಲಿ ಜಾರಿಗೊಳಿಸಲಾಗಿದೆ. ಈ ತಿದ್ದುಪಡಿಗಳು ಅತ್ಯಾಚಾರದ ವ್ಯಾಖ್ಯಾನವನ್ನು ವಿಸ್ತರಿಸಿದೆ; ಹಲವಾರು ಲೈಂಗಿಕ ಸಂಬಂಧಿ ಅಪರಾಧಗಳಿಗೆ ಶಿಕ್ಷೆಯನ್ನು ಹೆಚ್ಚಿಸಿದೆ ಮತ್ತು IPC ಸೆಕ್ಷನ್ 354A ಅಡಿಯಲ್ಲಿ ಲೈಂಗಿಕ ಕಿರುಕುಳ ದ ಅಪರಾಧದಂತಹ ಹೊಸ ಅಪರಾಧಗಳನ್ನು ಗುರುತಿಸಲಾಗಿದೆ. ಪ್ರಮುಖ ತಿದ್ದುಪಡಿಗಳು ಕ್ರಿಮಿನಲ್ ಕಾರ್ಯವಿಧಾನಗಳನ್ನು ಸಹ ಸುಗಮಗೊಳಿಸುತ್ತವೆ ಹಾಗೂ ಸಾಕ್ಷ್ಯದ ಕಾನೂನುಗಳನ್ನು ಬಲಪಡಿಸುತ್ತವೆ.
 
2. SHe-ಬಾಕ್ಸ್:
ನವೆಂಬರ್ 2017 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವೆಬ್ಸೈಟ್ನಲ್ಲಿ ಆನ್ಲೈನ್ ಕಿರುಕುಳ ನಿರ್ವಹಣಾ ವ್ಯವಸ್ಥೆ ಷೆ-ಬಾಕ್ಸ್ (ಲೈಂಗಿಕ ಕಿರುಕುಳ ಇಲೆಕ್ಟ್ರಾನಿಕ್ ಬಾಕ್ಸ್) ಅನ್ನು ಆಯೋಜಿಸಲಾಗುತ್ತದೆ. ಇದು ಸರ್ಕಾರ ಮತ್ತು ಖಾಸಗಿ ವಲಯದಲ್ಲಿ ಸ್ತ್ರೀ ನೌಕರರಿಗೆ ಲೈಂಗಿಕ ಕಿರುಕುಳದ ಬಗ್ಗೆ ದೂರುಗಳನ್ನು ದಾಖಲಿಸುವ ಮತ್ತು ಸರಿಪಡಿಸಲು ಆನ್ಲೈನ್ ದೂರಿನ ನಿರ್ವಹಣಾ ವ್ಯವಸ್ಥೆಯಾಗಿದೆ.
 
3. # METOO ಚಳವಳಿ:
ಭಾರತದಲ್ಲಿ # METOO ಚಳವಳಿಯ ಪರಿಣಾಮದಿಂದಾಗಿ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ದೂರುಗಳ ಸಂಖ್ಯೆ ಹೆಚ್ಚಾಗುತ್ತದೆ. ಕೆಲಸದ ಸ್ಥಳಗಳನ್ನು ರಕ್ಷಿಸಲು ಉದ್ಯೋಗದಾತರಲ್ಲಿ ಒತ್ತಡವು, ಲೈಂಗಿಕ ಕಿರುಕುಳದ ದೂರುಗಳ ಪರಿಣಾಮಕಾರಿ ಮತ್ತು ಶೀಘ್ರ ವಿಲೇವಾರಿ ಸೇರಿದಂತೆ ಒತ್ತಡವು ಹೆಚ್ಚಿರುತ್ತದೆ. ಇದರಿಂದಾಗಿ ಮಹಿಳೆಯರು ನಿಧಾನವಾಗಿ ಲೈಂಗಿಕ ಕಿರುಕುಳದ ತಮ್ಮ ನೋವಿನ ಅನುಭವಗಳ ಬಗ್ಗೆ ವ್ಯಕಪಡಿಸುತ್ತಿದ್ದಾರೆ.
 
4.  ಹೊಸ ಕಂಪೆನಿಗಳ ಕಾಯಿದೆ 2013:
ಹೊಸ ಕಂಪೆನಿಗಳ ಕಾಯಿದೆ 2013 ಯು ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿ ಮಾಡಲಾದ ಕಂಪೆನಿಗಳಿಗೆ ಮಂಡಳಿಯಲ್ಲಿ ಕನಿಷ್ಠ ಮಹಿಳಾ ನಿರ್ದೇಶಕರನ್ನು ನೇಮಕ ಮಾಡಲು ಕಡ್ಡಾಯಗೊಳಿಸುತ್ತದೆ. ಮಂಡಳಿಯ ಮಟ್ಟದಲ್ಲಿ ನ್ಯಾಯೋಚಿತ ಪರಿಹಾರಕ್ಕಾಗಿ ಇದು ಹೆಚ್ಚಿನ ಅವಕಾಶ ನೀಡುತ್ತದೆ.

ಕೆಲವು ಕಂಪನಿಗಳು 360-ಡಿಗ್ರಿ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಮೂಲಕ ಲೈಂಗಿಕ ಕಿರುಕುಳದ ಸಮಸ್ಯೆಯ ಮೂಲವನ್ನು ಪರೀಕ್ಷಿಸುತ್ತಿವೆ. ಕಾಯಿದೆಯ ಪ್ರಕಾರ ಕಡ್ಡಾಯವಾದ ಅಂಶಗಳಿಗಿಂತ ಮಿಗಿಲಾಗಿ ಮಹಿಳಾ ಉದ್ಯೋಗಿಗಳಿಗೆ ತಮ್ಮ ಕೆಲಸದ ಸಂಸ್ಕೃತಿಯನ್ನು ಹೆಚ್ಚು ಅಂತರ್ಗತ ಮತ್ತು ಸುರಕ್ಷಿತವಾಗಿ ಪರಿವರ್ತಿಸುವಂತೆ ಅವರು ಮಾಡುತ್ತಾರೆ. ಆದರೆ ಇನ್ನೊಂದು ತುದಿಯಲ್ಲಿ, ಇನ್ನು ಹಲವಾರು ಕಂಪನಿಗಳು ನಿಯಮಗಳನ್ನು ಉಲ್ಲಂಘಿಸಿ, ಪ್ರಕರಣಗಳ ಸರಿಯಾದ ಸಂಖ್ಯೆಯ ಮಾಹಿತಿಯನ್ನು ವರದಿ ಮಾಡುವಲ್ಲಿ ಹಿಂದೇಟು ಹಾಕುತ್ತಲೇ ಇವೆ.

ಇಷ್ಟೆಲ್ಲಾ ಕಾನೂನಿನ ಹೊರತಾಗಿಯೂ, ಇಂಡಿಯನ್ ಬಾರ್ ಅಸೋಸಿಯೇಷನ್ ನಡೆಸಿದ ಸಮೀಕ್ಷೆಯ ಪ್ರಕಾರ, 2017 ರಲ್ಲಿ 6,047 ಮಹಿಳೆಯರು ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ್ದು. 70% ಮಹಿಳೆಯರು ತಾವು ಲೈಂಗಿಕ ಹಿಂಸಾಚಾರವನ್ನು ತಮ್ಮ ಮೇಲ್ವಿಚಾರಕಗೆ ವರದಿ ಮಾಡಲಿಲ್ಲ ಎಂದು ತಿಳಿದುಬಂದಿದೆ.

​ಸುರಕ್ಷಿತ ಕೆಲಸದ ಸ್ಥಳವು ಪ್ರತಿ ಮಹಿಳೆಯ ಹಕ್ಕು
 
ಉಲ್ಲೇಖ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ನಿವಾರಣೆ) ಕಾಯಿದೆ, 2013 ಕುರಿತ ಕೈಪಿಡಿ - ನವೆಂಬರ್ 2015.
0 Comments



Leave a Reply.

    Picture
    Nirathanka

    Categories

    All
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಹನಿಗವನ

    Archives

    November 2020
    July 2020
    November 2019
    October 2019



    RSS Feed

SITEMAP
FOLLOW US
OFFICE ADDRESS
  • ಸ್ವಾಗತ
  • ಸಮಿತಿಯ ಸದಸ್ಯರು
  • ನಾಲ್ಕನೇ ಕನ್ನಡ ಸಮ್ಮೇಳನ-2020
  • ಲೇಖನಗಳಿಗಾಗಿ ಆಹ್ವಾನ-2020
  • ಪ್ರಶಸ್ತಿ ಪುರಸ್ಕಾರ-2020
  • ಪ್ರಾಯೋಜಕತ್ವ
  • ದೇಣಿಗೆ ಸಂಗ್ರಹಣ-2020
  • ಸಂಪರ್ಕಿಸಿ
Conference Google Group
Conference Telegram Group
Conference Facebook Group
​Conference Facebook Page
Linked in Group
Picture
ನಿರಾತಂಕ
ನಂ. 326, 2ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056.
ಇಮೇಲ್ : hrnirathanka@mhrspl.com
ದೂ: 080-23213710, 8073067542, 9980066890
​
ವೆಬ್‍ಸೈಟ್‍: www.niratanka.org

JOIN OUR ONLINE HR GROUPS

WE ARE HAPPY TO ANNOUNCE THAT 20000 HR PROFESSIONALS ARE CONNECTED THROUGH OUR NIRATHANKA HR GOOGLE GROUP, THE MEMBERS OF THE GROUP ARE PERMITTED TO SHARE HR ARTICLES, HR JOB POSTINGS AND ANNOUNCEMENTS ON SEMINARS / WORKSHOPS / TRAINING PROGRAMMES. ​
Join our Google Group

    ನಾಲ್ಕನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2020
    ಈ ಸಮ್ಮೇಳನಕ್ಕಾಗಿಯೇ ವಿಶೇಷವಾಗಿ GOOGLE GROUP ಅನ್ನು ರಚಿಸಲಾಗಿದೆ. ಆಸಕ್ತರು GOOGLE GROUP ನ ಸದಸ್ಯರಾಗಬಹುದು. ಕನ್ನಡ ಸಮ್ಮೇಳನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಈ ಗ್ರೂಪ್ ನ ಮೂಲಕ ಕಳುಹಿಸಿಕೊಡಲಾಗುವುದು.

Subscribe to Newsletter
Picture
Join Our Conference Google Group
Human Resources Kannada Conference
Copyright : Nirathanka 2020
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
  • ಸಮಿತಿಯ ಸದಸ್ಯರು
  • ಕನ್ನಡ ಸಮ್ಮೇಳನ
    • ಪ್ರಥಮ ಕನ್ನಡ ಸಮ್ಮೇಳನ-2017 >
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
    • ದ್ವಿತೀಯ ಕನ್ನಡ ಸಮ್ಮೇಳನ-2018 >
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2018
    • ತೃತೀಯ ಕನ್ನಡ ಸಮ್ಮೇಳನ (2019) >
      • ಸ್ವಾಗತ
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
      • ಭಾಷಣಕಾರರು
      • ಭಾಗವಹಿಸುವವರ ವಿವರ
    • ನಾಲ್ಕನೇ ಕನ್ನಡ ಸಮ್ಮೇಳನ (2020) >
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ಪ್ರಶಸ್ತಿ ಪುರಸ್ಕಾರ - 2020
      • ಸಮ್ಮೇಳನದ ಕೈಪಿಡಿ
  • ಪ್ರಾಯೋಜಕತ್ವ
  • ಆನ್ ಲೈನ್ ಗ್ರೂಪ್ಸ್
  • ವಿಡಿಯೋ
  • ಬ್ಲಾಗ್
  • ಸಂಪರ್ಕಿಸಿ