ಗೋವಿಂದರಾಜು ಎನ್.ಎಸ್ ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕರು ಕರ್ನ್ ಲಿಬರ್ಸ್ ಇಂಡಿಯಾ ಪ್ರೈ. ಲಿ, ತುಮಕೂರು ಮಾನವ ಸಂಘಜೀವಿ ಮತ್ತು ಸಮಾಜಜೀವಿ. ತನ್ನ ಅಕ್ಕಪಕ್ಕ ಇತರರು ಇಲ್ಲದಿದ್ದರೆ ಆತನ ಜೀವನವೇ ಇಲ್ಲ. ತನ್ನ ಜೀವನದುದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ರೀತಿಯ ಸಂಬಂಧಗಳ ನಡುವೆ ಬದುಕುತ್ತಾನೆ. ಹಾಗಾದರೆ, ಸಂಬಂಧಗಳು ಎಂದರೇನು? ಅಪ್ಪ ಅಮ್ಮ ಇವರ ನಡುವೆ ಮಕ್ಕಳಿಗಿರುವ ಪ್ರೀತಿ ಪ್ರೇಮ ಒಡನಾಟ ಇವು ಸಂಬಂಧಗಳೇ? ಅಣ್ಣ ತಮ್ಮ, ಅಕ್ಕ ತಂಗಿ, ಗಂಡ ಹೆಂಡತಿ ಇವರ ನಡುವೆ ಇರುವ ಸಂಬಂಧಗಳು ಸಂಬಂಧಗಳೇ? ಇವೆಲ್ಲವೂ ಸಂಬಂಧಗಳೇ. ನಾವು ಅಂದುಕೊಂಡ ಹಾಗೆಲ್ಲ ಸಂಬಂಧಗಳು ಮತ್ತು ನಾವು ಬೆಳೆಸಿಕೊಂಡ ಹಾಗೆ ಸಂಬಂಧಗಳು. ಒಳ್ಳೆಯ ಸಂಬಂಧಗಳು ಮತ್ತು ಕೆಲವೊಮ್ಮೆ ಒಳ್ಳೆಯವಲ್ಲದ ಸಂಬಂಧಗಳು ನಮ್ಮ ಅನುಭವಕ್ಕೆ ಬರಬಹುದು. ನನ್ನ ಪ್ರಕಾರ, ‘ನಾವು ಹೇಗೆ ಮತ್ತೊಬ್ಬರನ್ನು ಭಾವಿಸುತ್ತೇವೆ, ನಾವು ತೋರುವ ವರ್ತನೆಯ ಸಕಾರಾತ್ಮಕ ತೀವ್ರತೆ, ಅವರೊಡನೆ ಸಹಕರಿಸುವ ರೀತಿ, ಅವರ ಭಾವನೆಗಳಿಗೆ, ಕಷ್ಟಗಳಿಗೆ ಸ್ಪಂಧಿಸುವ ರೀತಿ, ಅವರೊಡನೆ ನಡೆದುಕೊಳ್ಳುವ ರೀತಿ, ತೋರುವ ಪ್ರೀತಿ ವಾತ್ಯಲ್ಯ ಇವೆಲ್ಲವನ್ನೂ ಒಟ್ಟಾರೆಯಾಗಿ ಸಂಬಂಧಗಳು ಎನ್ನಬಹುದು.’
1 Comment
ನಾಗರಾಜ ಡಿ ಬಿ ಮುಖ್ಯಸ್ಥರು - ಮಾನವ ಸಂಪನ್ಮೂಲ, ವೆಯರ್ ಮಿನರಲ್ಸ್ ಇಂಡಿಯಾ, ಬೆಂಗಳೂರು ಸಿಇಓ ಗೆ ಒಳ್ಳೆಯ ಹೆಚ್ಚಾರ್ ಬೇಕು
ಹೆಚ್ಚಾರ್ಗೆ ಒಳ್ಳೆಯ ಕ್ಯಾಂಡಿಡೇಟ್ ಬೇಕು ಕ್ಯಾಂಡಿಡೇಟ್ಗೆ ಒಳ್ಳೆಯ ಕಂಪೆನಿ ಬೇಕು ಕಂಪನಿಗೆ ಒಳ್ಳೆಯ ಬಿಸಿನೆಸ್ ಬೇಕು. ಹೆಚ್ಚಾರ್ನಿಂದ ಕಾಲ್ ಬಂತು ಕ್ಯಾಂಡಿಡೇಟ್ಗೆ ಖುಷಿ ಆಯಿತು ಸಿಇಓ ಗೆ ಕ್ಯಾಂಡಿಡೇಟ್ ಹಿಡಿಸಿದ ಕ್ಯಾಂಡಿಡೇಟ್ ಎಂಪ್ಲೊಯೀ ಆದ. ಸಿಇಓ ಗೆ ಪ್ರಾಜೆಕ್ಟ್ ಸಿಕ್ತು ಹೆಚ್ಚಾರ್ಗೆ ಇಂಸೆಂಟಿವ್ ಸಿಕ್ತು ಕ್ಯಾಂಡಿಡೇಟ್ಗೆ ಸ್ಯಾಲರಿ ಸಿಕ್ತು ಎಲ್ಲರಿಗೂ ಖುಷಿ ಆಯ್ತು. ಟಾರ್ಗೆಟ್ ಸೆಟ್ ಆಯಿತು ಇಂಸೆಂಟಿವ್ ಫಿಕ್ಸ್ ಆಯಿತು ಟ್ರೈನಿಂಗೂ ಕೊಟ್ಟಾಯ್ತು ಕೆಲವು ತಿಂಗಳು ಕಳೆಯಿತು. ಮತ್ತೆ ಅಪ್ಪ್ರೈಸಲ್ ಬಂತು ಕ್ಯಾಂಡಿಡೇಟ್ಗೆ ಪ್ರಮೋಷನ್ ಆಸೆ ಬಂತು ಸಿಇಓ ಹೇಳಿದರು, ಬಿಸಿನೆಸ್ ಡಲ್ಲು (ಡಲ್) ಅದ್ರಿಂದ ಇನ್ಕ್ರಿಮೆಂಟ್ ನಿಲ್ಲು(ನಿಲ್). ಎಂಪ್ಲೊಯಿಗೆ ನಿರಾಶೆ ಆಯ್ತು ಹೆಚ್ಚಾರ್ಗೆ ಬೇಜಾರಾಯ್ತು ಎಂಪ್ಲೊಯೀ ಮತ್ತೆ ಕ್ಯಾಂಡಿಡೇಟ್ ಆದ ಹೆಚ್ಚ್ಚಾರ್ ಮತ್ತೆ ಟೆಲಿ ಕಾಲರ್ ಆದ. ಸಿಇಓ ಗೆ ಹೇಳೋಕಾಗಲ್ಲ ಎಂಪ್ಲೊಯಿಗೆ ತಾಳ್ಮೆ ಇಲ್ಲ ನಮ್ಮ ಕಷ್ಟ ಕೇಳೋರಿಲ್ಲ. ಲಿಂಕ್ಡ್ ಇನ್ ನಲ್ಲಿ ಕಂಡ ಹಿಂದಿ ಕವನದ ಪ್ರೇರಣೆ. ರಚಿಸಿದವರು ನಾಗರಾಜ ಡಿ ಬಿ ಮುಖ್ಯಸ್ಥರು - ಮಾನವ ಸಂಪನ್ಮೂಲ, ವೆಯರ್ ಮಿನರಲ್ಸ್ ಇಂಡಿಯಾ, ಬೆಂಗಳೂರು |
Categories
All
Archives
January 2024
Human Resource Kannada Conference30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |