ಸಾಧನೆ ಸಾಧಕರ ಸಾಧಾರಣ ಕಾಯಕ. ಸಾಧನೆಗಾಗಿ ಸಾಧಿಸುವುದು ಸಾಧಕರ ಗುರಿಯಲ್ಲ. ಆದರೆ, ಆ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆ ಮತ್ತು ದಿಕ್ಸೂಚಿ. ಸಾಧಕರನ್ನು ನೋಡಿ, ವೃತ್ತಿ ಮತ್ತು ಜೀವನ ರೂಪಿಸಿಕೊಳ್ಳುವರು ಅನೇಕರು. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಧಕರನ್ನು ಅವರ ಸೇವೆ ಮತ್ತು ಕೊಡುಗೆಗಳ ಆಧಾರದ ಮೇಲೆ ಗುರುತಿಸಿ ಸನ್ಮಾನಿಸುವ ಪುರಸ್ಕಾರವೇ “ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ”. ಈ ಪುರಸ್ಕಾರವನ್ನು `ಎಂಟನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2024' ಅಂಗವಾಗಿ ನೀಡಲು ತೀರ್ಮಾನಿಸಿ, ಈ ಪ್ರಶಸ್ತಿ ಮತ್ತು ಸನ್ಮಾನಕ್ಕೆ, ಮಾನವ ಸಂಪನ್ಮೂಲ ವೃತ್ತಿನಿರತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಗಳ ವಿಭಾಗಗಳು
ಅರ್ಹತೆಗಳು
- ಹಿರಿಯ ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ
- ಕಿರಿಯ ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ
ಅರ್ಹತೆಗಳು
- ಹಿರಿಯ ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು ಕನಿಷ್ಠ 15 ವರುಷಗಳ ಮತ್ತು ಕಿರಿಯ ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು 10 ವರುಷ ಅನುಭವವನ್ನು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಹೊಂದಿರಬೇಕು.
- ಹೊರನಾಡು ಕನ್ನಡಿಗರ ವಿಭಾಗದಲ್ಲಿ ಅರ್ಜಿ ಸಲ್ಲಿಸುವವರು, ಕರ್ನಾಟಕದವರಾಗಿದ್ದು ಬೇರೆ ರಾಜ್ಯಗಳಲ್ಲಿ / ದೇಶಗಳಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರಬೇಕು.
- ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಬರಬೇಕು.
- ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಗುರುತಿಸುವಂತಹ ಸೇವೆ ಮತ್ತು ಸಾಧನೆಗಳನ್ನು ಮಾಡಿರಬೇಕು.