ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ 2019
ಸಾಧನೆ ಸಾಧಕರ ಸಾಧಾರಣ ಕಾಯಕ. ಸಾಧನೆಗಾಗಿ ಸಾಧಿಸುವುದು ಸಾಧಕರ ಗುರಿಯಲ್ಲ. ಆದರೆ, ಆ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆ ಮತ್ತು ದಿಕ್ಸೂಚಿ. ಸಾಧಕರನ್ನು ನೋಡಿ, ವೃತ್ತಿ ಮತ್ತು ಜೀವನ ರೂಪಿಸಿಕೊಳ್ಳುವರು ಅನೇಕರು. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಧಕರನ್ನು ಅವರ ಸೇವೆ ಮತ್ತು ಕೊಡುಗೆಗಳ ಆಧಾರದ ಮೇಲೆ ಗುರುತಿಸಿ ಸನ್ಮಾನಿಸುವ ಪುರಸ್ಕಾರವೇ ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ 2019'.
ಈ ಪುರಸ್ಕಾರವನ್ನು `ತೃತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2019' ಅಂಗವಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿ ಮತ್ತು ಸನ್ಮಾನಕ್ಕೆ, ಮಾನವ ಸಂಪನ್ಮೂಲ ವೃತ್ತಿನಿರತರು ತಮ್ಮ ಅರ್ಜಿಗಳನ್ನು ದಿನಾಂಕ: 30-10-2019 ರೊಳಗೆ ಈ ಕೆಳಗಿನ ವಿಮಂಚೆಗೆ ಕಳುಹಿಸಬೇಕಾಗಿ ಕೋರಿದೆ:
ವಿಮಂಚೆ: [email protected]
2. ಅರ್ಹತೆಗಳು:
3. ಆಯ್ಕೆಯ ವಿಧಾನ:
4. ಪುರಸ್ಕಾರ ಪ್ರಧಾನ:
5. ಪುರಸ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದ ವಿಧಾನ:
ಸ್ವಯಂ ಸಲ್ಲಿಕೆ/ನಾಮ ನಿರ್ದೇಶನದ ಮೂಲಕ ಸೂಕ್ತ ಮಾನವ ಸಂಪನ್ಮೂಲ ವೃತ್ತಿನಿರತರು ತಮ್ಮ ಅರ್ಜಿಯನ್ನು ಕೆಳಗೆ ನೀಡಿರುವ ಅರ್ಜಿಯ 'PDF' ಅನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪೂರ್ಣ ಮಾಹಿತಿಗಳೊಂದಿಗೆ [email protected] ಗೆ ಕಳುಹಿಸಬಹುದು. ಇತರರು ಸಹ ಈ ಪುರಸ್ಕಾರಕ್ಕೆ ತಮಗೆ ಸೂಕ್ತವೆನಿಸಿದ ವೃತ್ತಿನಿರತರನ್ನು ಶಿಫಾರಸ್ಸು ಮಾಡಬಹುದು.
ಸೂಚನೆಗಳು:

- ಹಿರಿಯ ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು ಕನಿಷ್ಠ 15 ವರುಷಗಳ ಮತ್ತು ಕಿರಿಯ ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು 10 ವರುಷ ಅನುಭವವನ್ನು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಹೊಂದಿರಬೇಕು.
- ಹೊರನಾಡು ಕನ್ನಡಿಗರ ವಿಭಾಗದಲ್ಲಿ ಅರ್ಜಿ ಸಲ್ಲಿಸುವವರು, ಕರ್ನಾಟಕದವರಾಗಿದ್ದು ಬೇರೆ ರಾಜ್ಯಗಳಲ್ಲಿ / ದೇಶಗಳಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರಬೇಕು.
- ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಬರಬೇಕು.
- ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಗುರುತಿಸುವಂತಹ ಸೇವೆ ಮತ್ತು ಸಾಧನೆಗಳನ್ನು ಮಾಡಿರಬೇಕು.
3. ಆಯ್ಕೆಯ ವಿಧಾನ:
- ಬಂದಂತಹ ಎಲ್ಲಾ ಅರ್ಜಿಗಳನ್ನು ಪರಿಶೀಲನೆಗಾಗಿ ನೇಮಿಸಿರುವಂತಹ ಆಯ್ಕೆ ಸಮಿತಿಗೆ ನೀಡಲಾಗುತ್ತದೆ.
- ಆಯ್ಕೆ ಸಮಿತಿಯ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ.
- ಆಯ್ಕೆ ಸಮಿತಿಯ ಸದಸ್ಯರ ಸರಾಸರಿ ಅಂಕಗಳ ಮೇಲೆ, ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ.
- ಆಯ್ಕೆ ಸಮಿತಿಯ ನಿರ್ಧಾರ ಅಂತಿಮವಾಗಿರುತ್ತದೆ.
4. ಪುರಸ್ಕಾರ ಪ್ರಧಾನ:
- ಪ್ರಶಸ್ತಿಯನ್ನು ಸಮ್ಮೇಳನದಲ್ಲಿ ಸನ್ಮಾನಿಸುವುದರ ಮೂಲಕ ವಿತರಿಸಲಾಗುವುದು.
- ಸನ್ಮಾನಿಸಲಾದ ಸಾಧಕರ ವಿವರವನ್ನು `ಸಮ್ಮೇಳನದ ಕೈಪಿಡಿ'ಯಲ್ಲಿ ಮುದ್ರಿಸಲಾಗುವುದು.
5. ಪುರಸ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದ ವಿಧಾನ:
ಸ್ವಯಂ ಸಲ್ಲಿಕೆ/ನಾಮ ನಿರ್ದೇಶನದ ಮೂಲಕ ಸೂಕ್ತ ಮಾನವ ಸಂಪನ್ಮೂಲ ವೃತ್ತಿನಿರತರು ತಮ್ಮ ಅರ್ಜಿಯನ್ನು ಕೆಳಗೆ ನೀಡಿರುವ ಅರ್ಜಿಯ 'PDF' ಅನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪೂರ್ಣ ಮಾಹಿತಿಗಳೊಂದಿಗೆ [email protected] ಗೆ ಕಳುಹಿಸಬಹುದು. ಇತರರು ಸಹ ಈ ಪುರಸ್ಕಾರಕ್ಕೆ ತಮಗೆ ಸೂಕ್ತವೆನಿಸಿದ ವೃತ್ತಿನಿರತರನ್ನು ಶಿಫಾರಸ್ಸು ಮಾಡಬಹುದು.
ಸೂಚನೆಗಳು:
- ಅರ್ಜಿಯ ಮೂಲಕ, ಅರ್ಜಿದಾರರು ತಮ್ಮ/ಶಿಫಾರಸ್ಸು ಮಾಡುತ್ತಿರುವ ವೃತ್ತಿನಿರತರ ಸವಿಸ್ತಾರವಾದ ಪರಿಚಯ ಪತ್ರವನ್ನು ಭಾವಚಿತ್ರಗಳ ಮೂಲಕ ಕಳುಹಿಸಬೇಕಾಗಿ ಕೋರಲಾಗಿದೆ.
- ವಿವರಗಳು ಸಂಪೂರ್ಣ ಇಲ್ಲದ ಅರ್ಜಿಗಳನ್ನು ಪರಿಶೀಲನೆಯ ಹಂತದಲ್ಲಿ ಕೈ ಬಿಡಲಾಗುತ್ತದೆ.
- ಬಂದಂತಹ ಅರ್ಜಿಗಳ ಬಗ್ಗೆ ಸಂಪೂರ್ಣವಾದ ಗೌಪ್ಯತೆಯನ್ನು ಕಾಪಾಡಲಾಗುತ್ತದೆ.
Prathibha Puraskara Application Form | |
File Size: | 1618 kb |
File Type: |
ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರ ಪ್ರಶಸ್ತಿ ಪುರಸ್ಕೃತರು
ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018 ರ ಪ್ರಶಸ್ತಿ ಪುರಸ್ಕೃತರು
ಕಿರಿಯ ಮಾನವ ಸಂಪನ್ಮೂಲ ಅಧಿಕಾರಿ ಪ್ರಶಸ್ತಿ ಪುರಸ್ಕೃತರು
ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2019
ತೃತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2019ರ ಅಂಗವಾಗಿ ``ನಮ್ಮ ನಾಡು, ನಮ್ಮ ಸಂಸ್ಥೆ ಪ್ರಶಸ್ತಿ 2019' ಪ್ರಶಸ್ತಿಯನ್ನು ಈ ಕೆಳಗಿನ ಮೂರು ಭಾಗಗಳಲ್ಲಿ ನೀಡಲಾಗುತ್ತದೆ:
1. ಅರ್ಹತೆಗಳು:
1. ಸಂಸ್ಥೆಯು ಯಾವುದೇ ರೀತಿಯ ಉದ್ದಿಮೆಗೆ ಸಂಬಂಧಪಟ್ಟಿರಬಹುದು.
2. ಸಂಸ್ಥೆಯು ಕರ್ನಾಟಕದಲ್ಲಿ ಉಪಸ್ಥಿತಿಯಿದ್ದು ಮತ್ತು ಉದ್ಯೋಗಿಗಳನ್ನು ಹೊಂದಿರಬೇಕು.
2. ಆಯ್ಕೆಯ ಮಾನದಂಡ:
ಈ ಕೆಳಗಿನ ಮಾನದಂಡದ ಮೇಲೆ ಬಂದಂತಹ ಅರ್ಜಿಗಳಿಂದ ಸೂಕ್ತವಾದ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
3. ಆಯ್ಕೆಯ ವಿಧಾನ:
4. ಪ್ರಶಸ್ತಿ ಪ್ರಧಾನ:
5. ಅರ್ಜಿಯನ್ನು ಸಲ್ಲಿಸಬೇಕಾದ ವಿಧಾನ:
ತಮ್ಮ ಅರ್ಜಿಯನ್ನು ಕೆಳಗೆ ನೀಡಿರುವ ಅರ್ಜಿಯ 'PDF' ಅನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪೂರ್ಣ ಮಾಹಿತಿಗಳೊಂದಿಗೆ [email protected] ಗೆ ಕಳುಹಿಸಬಹುದು ಹಾಗೂ ಛಾಯಾಚಿತ್ರಗಳೊಂದಿಗೆ ಪ್ರಸ್ತುತಿಯನ್ನು ಮಾಡಿ ಕಳುಹಿಸಬಹುದು.

- ಸಂಸ್ಥೆಯಲ್ಲಿ ಕನ್ನಡದ ಬಳಕೆ ಮತ್ತು ಕಲಿಕೆಗಾಗಿ ಹಮ್ಮಿಕೊಂಡಿರುವ ಕಾರ್ಯಗಳು.
- ಕನ್ನಡದಲ್ಲಿ ಪ್ರಕಟಿಸಲಾಗುತ್ತಿರುವ ಸಂವಹನಗಳು ಮತ್ತು ಇತರೆ ವಿಷಯಗಳು.
- ಕನ್ನಡದ ಉಳಿವಿಗಾಗಿ ಮಾಡುತ್ತಿರುವ ಇತರೆ ಕಾರ್ಯಗಳು.
3. ಆಯ್ಕೆಯ ವಿಧಾನ:
- ಬಂದಂತಹ ಎಲ್ಲಾ ಅರ್ಜಿಗಳನ್ನು ಪರಿಶೀಲನೆಗಾಗಿ ನೇಮಿಸಿರುವ ಆಯ್ಕೆ ಸಮಿತಿಗೆ ನೀಡಲಾಗುತ್ತದೆ.
- ಎಲ್ಲಾ ಆಯ್ಕೆಗಾರರ ಸರಾಸರಿ ಅಂಕಗಳ ಮೇಲೆ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.
- ಆಯ್ಕೆ ಸಮಿತಿಯ ನಿರ್ಧಾರ ಅಂತಿಮವಾಗಿರುತ್ತದೆ.
- ಆಯ್ಕೆ ಸಮಿತಿಯವರು ಆಯ್ಕೆಯಾದ ಸಂಸ್ಥೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಬಹುದು.
4. ಪ್ರಶಸ್ತಿ ಪ್ರಧಾನ:
- ಆಯ್ಕೆಯಾದ ಸಂಸ್ಥೆಗೆ, ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನವನ್ನು ಮಾಡಲಾಗುತ್ತದೆ.
- ಆಯ್ಕೆಯ ಕುರಿತು ಮಾಹಿತಿಯನ್ನು ಸಮ್ಮೇಳನದ ಕೈಪಿಡಿಯಲ್ಲಿ ಪ್ರಕಟಿಸಲಾಗುತ್ತದೆ.
5. ಅರ್ಜಿಯನ್ನು ಸಲ್ಲಿಸಬೇಕಾದ ವಿಧಾನ:
ತಮ್ಮ ಅರ್ಜಿಯನ್ನು ಕೆಳಗೆ ನೀಡಿರುವ ಅರ್ಜಿಯ 'PDF' ಅನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪೂರ್ಣ ಮಾಹಿತಿಗಳೊಂದಿಗೆ [email protected] ಗೆ ಕಳುಹಿಸಬಹುದು ಹಾಗೂ ಛಾಯಾಚಿತ್ರಗಳೊಂದಿಗೆ ಪ್ರಸ್ತುತಿಯನ್ನು ಮಾಡಿ ಕಳುಹಿಸಬಹುದು.
Namma Nadu Namma Samsthe Application Form | |
File Size: | 1626 kb |
File Type: |