ನಿರಾತಂಕ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಬೆಂಗಳೂರಿನಲ್ಲಿ ನೋಂದಾಯಿತ ಕಛೇರಿಯನ್ನು ಹೊಂದಿದೆ. 2007 ರಲ್ಲಿ ರೂಪುಗೊಂಡ ನಿರಾತಂಕ ಸಂಸ್ಥೆಯು ತನ್ನ ಸೇವಾ ಕ್ಷೇತ್ರಗಳನ್ನು ಶಿಕ್ಷಣ, ಆರೋಗ್ಯ ರಕ್ಷಣೆ, ಆಹಾರ ಭದ್ರತೆ ಮತ್ತು ಜೀವನೋಪಾಯ ತರಬೇತಿಯಂತಹ ವಿವಿಧ ಸಾಮಾಜಿಕ ವಲಯಗಳಿಗೂ ವಿಸ್ತರಿಸಿಕೊಂಡಿದೆ. ಸಮಾಜಕಾರ್ಯದ ಹೆಜ್ಜೆಗಳು ಎಂಬ ಪತ್ರಿಕೆಯನ್ನು ಕಳೆದ 10 ವರ್ಷಗಳಿಂದ ಹೊರತಂದಿದೆ ಹಾಗೂ ಸಮಾಜಕಾರ್ಯ ಕ್ಷೇತ್ರಕ್ಕೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿ ಕೊಡುಗೆಯಾಗಿ ನೀಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಕ್ರಮಗಳನ್ನು ನೀಡಿ ಹಲವಾರು ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದರ ಮೂಲಕ ಸಹಕರಿಸುತ್ತಿದೆ. ನಿರಾತಂಕ ಸ್ವಯಂ ಸೇವಾ ಸಂಸ್ಥೆಯು ಕಳೆದ 10 ವರ್ಷಗಳಿಂದ, ಭಾರತದಾದ್ಯಂತ 50 ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳಿಗೆ PoSH ಕಾನೂನಿನ ಅಡಿಯಲ್ಲಿ ಕಂಪನಿಯ ಆಂತರಿಕ ಸಮಿತಿಗಳಿಗೆ ಪರಿಣಿತ ಬಾಹ್ಯ ಸದಸ್ಯರನ್ನು ನಿಯೋಜಿಸುತ್ತಿದೆ ಮತ್ತು ನುರಿತ PoSH ತರಬೇತುದಾರರಿಂದ ಕಂಪನಿಯ ಉದ್ಯೋಗಿಗಳಿಗೆ ತರಬೇತಿಯನ್ನು ಒದಗಿಸುತ್ತಿದೆ.