0 Comments
ಮಾನ್ಯರೇ
ನಿರಾತಂಕ ಸಂಸ್ಥೆಯ ವತಿಯಿಂದ ದಿನಾಂಕ 13.11.2021 ರಂದು ನಡೆದ ರಾಜ್ಯಮಟ್ಟದ ಐದನೇ ಕನ್ನಡ ಸಮ್ಮೇಳನ ಅತ್ಯಂತ ವ್ಯವಸ್ಥಿತವಾಗಿ ಹಾಗೂ ವೃತ್ತಿಪರತೆಯಿಂದ ನಡೆದಿದೆ. ನಿರಾತಂಕ ಸಂಸ್ಥೆಯ ಈ ಹಿಂದಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದವರಿಗೆ ಈ ಸಮ್ಮೇಳನದ ಅಚ್ಚುಕಟ್ಟುತನ, ವೃತ್ತಿಪರತೆ, ಅತಿಥಿಗಳ ಹಿರಿಮೆ, ಸ್ವಯಂ ಸೇವಕರ ಸಹೃದಯತೆ ವಿಶೇಷವೆನಿಸುವುದಿಲ್ಲ. ಯಾಕೆಂದರೆ ನಿರಾತಂಕ ಸಂಸ್ಥೆಯು ತನ್ನೆಲ್ಲಾ ಕಾರ್ಯಕ್ರಮಗಳನ್ನು ಇದೇ ಘನತೆ ಹಾಗೂ ಮಟ್ಟದಲ್ಲಿ ನಡೆಸಿಕೊಂಡು ಬಂದಿದೆ. ಹೀಗಾಗಿಯೇ ಇಂದು ನಿರಾತಂಕ ಕರ್ನಾಟಕದ ಮಾನವ ಸಂಪನ್ಮೂಲ ವೃತ್ತಿನಿರತರ ಬಹು ದೊಡ್ದ ಸಂಸ್ಥೆಯಾಗಿ ಬೆಳೆದು ನಿಂತಿದೆ. ನಿರಾತಂಕದ ಶ್ರೀ ರಮೇಶ್, ಶ್ರೀ ಕೆಂಪೇಗೌಡ, ಶ್ರೀ ಶೇಖರ್ ಗಣಗಲೂರು, ಶ್ರೀ ಗೋವಿಂದರಾಜು, ಶ್ರೀ ಮಹದೇವ್ ಮುಂತಾದವರಿಗೆ ನಮ್ಮ ವಿಶೇಷ ಧನ್ಯವಾದಗಳು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಸಮ್ಮೇಳನಕ್ಕೆ ಆರಿಸಿದ ವಿಷಯ ಸಮಂಜಸವಾಗಿತ್ತು. ಡಾ. ಸಿ.ಆರ್. ಚಂದ್ರಶೇಖರ್, ಡಾ. ಶುಭ ಮಧುಸೂಧನ್, ಕಾರ್ಖಾನೆಗಳ ನಿರ್ದೇಶಕರಾದ ಶ್ರೀ ಶ್ರೀನಿವಾಸ್, ಮುಂತಾದವರ ವಿಚಾರಗೋಷ್ಟಿಗಳು ಉಪಯೋಗಕಾರಿಯಾಗಿದ್ದವು. ಆದರೆ ಗೌರಿಶಂಕರದೆತ್ತರದ ಸಾಧನೆ, ನಿರೂಪಣೆ ಶ್ರೀ ಸದಾನಂದ ಮಯ್ಯರದು. ಎಂ.ಆರ್. ನಟರಾಜ್
ಡಾ. ಸಿ.ಆರ್. ಗೋಪಾಲ್
ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್, ಸಂಡೂರು
ಅಭ್ಯುದಯ ಅನೇಕ ಪ್ರಕ್ರಿಯೆಗಳನ್ನು ಅಪೇಕ್ಷಿಸುತ್ತದೆ. ಯಾವುದೇ ಸಮಾಜ ಪ್ರಗತಿಯನ್ನು ಕಾಣಬೇಕಾದರೆ ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ತಂತ್ರಜ್ಞಾನ, ಸೇವೆಗಳು ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಅನಿವಾರ್ಯ ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ಈ ಪ್ರತಿಯೊಂದು ಕ್ಷೇತ್ರಗಳಲ್ಲಿನ ವಿವಿಧ ಆಯಾಮಗಳಲ್ಲಿ ಉನ್ನತಿಯನ್ನು ಸಾಧಿಸಬೇಕಾಗುತ್ತದೆ. ಕೈಗಾರಿಕಾ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಕೈಗಾರಿಕೆಗಳು ಅಸ್ತಿತ್ವಕ್ಕೆ ಭೂಮಿ, ಬಂಡವಾಳ, ಬೆಂಬಲ, ವ್ಯವಸ್ಥೆ ಮುಂತಾದವುಗಳು ಬೇಕಾದಂತೆ ಮಾನವ ಸಂಪನ್ಮೂಲವೂ ಅಷ್ಟೇ ಮುಖ್ಯ. ಕೈಗಾರಿಕೆಗಳಲ್ಲಿ ಉತ್ಪಾದನೆ, ಮಾರಾಟ, ಲಾಭ ಮುಂತಾದ ಅನೇಕ ಪರಿಕಲ್ಪನೆ ಮತ್ತು ಪ್ರಕ್ರಿಯೆಗಳಿಗೆ ವಿದ್ಯಾವಂತ, ತಾಂತ್ರಿಕ ಜ್ಞಾನವುಳ್ಳ ಮಾನವ ಸಂಪನ್ಮೂಲ ಅತೀ ಅವಶ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲಕ್ಕೆ ಮತ್ತು ಆ ಕ್ಷೇತ್ರದಲ್ಲಿ ಕನ್ನಡದ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿರುವುದು ಸಂತಸದ ಮಾತೆ. ಹಾಗಾಗಿ ಈ ಕ್ಷೇತ್ರದ ಆಗುಹೋಗುಗಳನ್ನು ಪರಿಶೀಲಿಸಲು, ಚರ್ಚಿಸಲು ಹಾಗೂ ಪುನಶ್ಚೇತನಗೊಳಿಸಲು, ನಿರಾತಂಕ, ಮಾನವ ಸಂಪನ್ಮೂಲ ರಾಷ್ಟ್ರೀಯ ಸಂಸ್ಥೆ, ವೃತ್ತಿಗತ ಸಮಾಜಕಾರ್ಯದ ರಾಷ್ಟ್ರೀಯ ಸಂಸ್ಥೆ, ಕರ್ನಾಟಕ ಉದ್ಯೋಗಿಗಳ ಸಂಸ್ಥೆ ಮುಂತಾದ ಹಲವು ಹತ್ತು ಸಂಘಸಂಸ್ಥೆಗಳು ಸೇರಿ, ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು, ಈಗ ನಾಲ್ಕೂ ವರ್ಷಗಳಿಂದ ಮಾಡುತ್ತಿರುವುದು ನೋಡಿ, ಭಾಗವಹಿಸಿ ನನಗೆ ತುಂಬಾ ಸಂತೋಷವಾಗಿದೆ.
ಪ್ರಥಮ ಪೂರ್ವಭಾವಿ ಸಭೆಯ ನಡಾವಳಿಗಳು
ದಿನಾಂಕ: 25-07-2020 ಸಭೆಯಲ್ಲಿ ಹಾಜರಿದ್ದ ಸದಸ್ಯರು:-
ಡಾ|| ಮೀರಾ ಉದಯ ಎಂ.ಬಿ.ಎ. ವಿಭಾಗದ ಮುಖ್ಯಸ್ಥರು (ಮಾನವ ಸಂಪನ್ಮೂಲ), ಡಾನ್ ಬಾಸ್ಕೋ ತಾಂತ್ರಿಕ ಮಹಾ ಶಿಕ್ಷಣ ಸಂಸ್ಥೆ ಎಲ್ಲೋ ಹುಟ್ಟಿ ಎಲ್ಲೋ ಹರಿದು ಯಾವುದೋ ಸಮುದ್ರ ಸೇರುವ ನದಿಯ ಹಾಗೆ ಮನುಷ್ಯನ ಜೀನವ ನಿರಂತರ. ಮನುಷ್ಯನ ಪ್ರತೀ ಹಂತದ ಬೆಳವಣಿಗೆ ಅತ್ಯದ್ಭುತ. ಮನುಷ್ಯನ ಈ ರೀತಿಯ ಬೆಳವಣಿಗೆ, ಇತರರಿಗೆ ಪೂರಕವಾಗಿ, ಸಹಕಾರಿಯಾಗಿ ಮತ್ತು ಮಾರ್ಗದರ್ಶಿಯಾದರೆ ಜೀವನ ಪರಿಪೂರ್ಣ. ಪ್ರತಿಯೋರ್ವರ ಜೀವನದ ವಿವಿಧ ಮಜಲುಗಳಲ್ಲಿ ಹಲವರಿಗೆ ನೆರವಾಗುವ ಘಟನೆಗಳು ಸಂಭವಿಸಿರುತ್ತವೆ ಅಂತಹ ಒಂದು ಘಟನೆಯನ್ನು ಲೇಖಕರು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ.
ವಾಸುಕಿ ರಂಗನಾಥ್ ಗ್ಲೋಬಲ್ ಹೆಚ್ಆರ್ ಡೆವಲಪ್‍ಮೆಂಟ್ ಲೀಡರ್-ವೋಲ್ವೊ ಕಾರ್ ಗ್ರೂಪ್, ಗೊಥೇನ್‍ಬರ್ಗ್, ಸ್ವೀಡನ್ ನಿಜ, ನಾವಿಂದು ನಿರಂತರವಾಗಿ ಬದಲಾಗುತ್ತಿರುವ ಮತ್ತು ಸಂಪರ್ಕಗೊಳ್ಳುತ್ತಿರುವ ಜಗತ್ತಿನಲ್ಲಿದ್ದೇವೆ. ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ನಮ್ಮ ಜಗತ್ತು ಬದಲಾಗುತ್ತಿರುವುದು ಸತ್ಯ. ಆದರೆ ಆ ಬದಲಾವಣೆಗಳು ಹೇಗೆ ಗೋಚರಿಸುತ್ತದೆ ಎನ್ನುವುದು ಅಸ್ಪಷ್ಟ. ಈ ಸಂದರ್ಭದಲ್ಲಿ ಪರಿಶೀಲಿಸಬೇಕಾದ ಅಂಶ-ಮಾನವ ಸಂಪನ್ಮೂಲಗಳ ಪುನರ್ ಪರಿಕಲ್ಪನೆ ಅಗತ್ಯವಿದೆಯೇ?
ಸೌಂದರ್ಯ ರಮೇಶ ಕಂಠೆಪ್ಪನವರ ಕೇಶ್ವಾಪುರ, ಹುಬ್ಬಳ್ಳಿ ಮಾನವ ಸಂಪನ್ಮೂಲ ಎಂದರೆ ವ್ಯಕ್ತಿಗಳ ಮೌಲ್ಯಗಳು, ನಂಬಿಕೆಗಳು, ಕೌಶಲ್ಯ, ದಕ್ಷತೆ, ಸ್ಪೂರ್ತಿ, ತೀರ್ಮಾನಗಳನ್ನು ಧೈರ್ಯ ಇವೆಲ್ಲವುಗಳ ಸುಮಧುರ ಯೋಗ್ಯ ಮಿಶ್ರಣ ಎಂದು ಹೇಳಬಹುದು ಅಥವಾ ಮಾನವ ಸಂಪನ್ಮೂಲ ಎಂದರೆ ಜನರಲ್ಲಿನ ಜ್ಞಾನ, ಸೃಜನಾತ್ಮಕ ಶಕ್ತಿಯಲ್ಲಿನ ಚತುರತೆಗಳು ಎಂದು ಹೇಳಬಹುದು.
ಮಾನವ ಸಂಪನ್ಮೂಲ ಎಂದರೆ:- ಮಾ- ಮಾದರಿಗೊಳಿಸುವುದು ನ- ನವೀನತೆಯನ್ನು ತರುವುದು ವ- ವ್ಯವಸ್ಥೆಗೊಳಿಸುವುದು ಸಂವಿಧಾನದ ಆಶೋತ್ತರಗಳಿಗನುಗುಣವಾಗಿ ಜನರ ಆಶಯಗಳನ್ನು ಈಡೇರಿಸಲು ನಿರ್ದಿಷ್ಟ ಗುರಿ, ಕಾಲಮಿತಿ ಹಾಗೂ ಆರ್ಥಿಕ ಬೆಂಬಲದೊಂದಿಗೆ ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಎಲ್ಲಾ ಸರ್ಕಾರಗಳ ಆದ್ಯ ಕರ್ತವ್ಯ. ಅಧಿಕಾರಕ್ಕೇರಿದ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಆದ ವಿಶಿಷ್ಟ ಶೈಲಿಯ ಯೋಜನೆಗಳ ಮೂಲಕ ಇಂತಹ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸಿ ಶ್ರೀಸಾಮಾನ್ಯ ಆಶಯಗಳಿಗೆ ಸ್ಪಂದಿಸುವುದು ಸರ್ವೇಸಾಮಾನ್ಯ ಅಥವಾ ವಾಡಿಕೆ. ಇದು ಪ್ರಜಾಸತ್ತಾತ್ಮಕ ಆಡಳಿತದ ಲಕ್ಷಣವೂ ಹೌದು. ಸರ್ಕಾರಗಳು ರೂಪಿಸುವ ಕಲ್ಯಾಣ ಕಾರ್ಯಗಳು ಆಡಳಿತಗಾರರ ವಿಚಾರಧಾರೆಗೊಳಪಟ್ಟರೂ ಕೂಡ ಅವುಗಳ ಒಟ್ಟು ಆಶಯ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಪೂರಕವಾಗಿರಬೇಕಾಗಿರುತ್ತದೆ. ಯಾವುದೇ ಕಲ್ಯಾಣಕಾರ್ಯದ ಯಶಸ್ಸು ಅದರಲ್ಲಿ ಜನರ ನೇರಪಾಲ್ಗೊಳ್ಳುವಿಕೆ, ಸಮುದಾಯದ ಸಹಭಾಗಿತ್ವ ಮತ್ತು ಸಹಕಾರ ತತ್ವವನ್ನೇ ಅವಲಂಬಿಸಿರುವುದರಿಂದ ಕಲ್ಯಾಣಕಾರ್ಯಗಳ ಬಗ್ಗೆ ಜನತೆ ಉಪೇಕ್ಷೆ ತೋರಿದಲ್ಲಿ ಮುಂದೇನು ಮಾಡಬೇಕೆಂಬ ಪ್ರಶ್ನೆಯ ಉದ್ಭವ ಸಹಜವಾದರೂ ತಳ್ಳಿಹಾಕುವಂಥದ್ದಲ್ಲದ್ದರ ಜೊತೆಗೆ ಕಲ್ಯಾಣ ಕಾರ್ಯಗಳಲ್ಲಿನ ಲೋಪ ದೋಷಗಳು ಮತ್ತು ಕಾರ್ಯನೀತಿಗಳ ಅವಲೋಕನಕ್ಕೆ ಎಡೆಮಾಡಿಕೊಡುತ್ತವೆ. ಅಂತಹ ಒಂದು ಸನ್ನಿವೇಶಕ್ಕೆ ಇಂದು ನಮ್ಮ ಸರ್ಕಾರಿ ಶಾಲೆಗಳು ಮೂಕ ಸಾಕ್ಷಿಗಳಾಗುತ್ತಿರುವುದು ಪ್ರಸಕ್ತ ಕಾಲಘಟ್ಟದಲ್ಲಿನ ವಿಪರ್ಯಾಸಗಳಲ್ಲೊಂದು.
|