ನಾಗರಾಜ ಡಿ ಬಿ ಮುಖ್ಯಸ್ಥರು - ಮಾನವ ಸಂಪನ್ಮೂಲ, ವೆಯರ್ ಮಿನರಲ್ಸ್ ಇಂಡಿಯಾ, ಬೆಂಗಳೂರು ಸಿಇಓ ಗೆ ಒಳ್ಳೆಯ ಹೆಚ್ಚಾರ್ ಬೇಕು
ಹೆಚ್ಚಾರ್ಗೆ ಒಳ್ಳೆಯ ಕ್ಯಾಂಡಿಡೇಟ್ ಬೇಕು ಕ್ಯಾಂಡಿಡೇಟ್ಗೆ ಒಳ್ಳೆಯ ಕಂಪೆನಿ ಬೇಕು ಕಂಪನಿಗೆ ಒಳ್ಳೆಯ ಬಿಸಿನೆಸ್ ಬೇಕು. ಹೆಚ್ಚಾರ್ನಿಂದ ಕಾಲ್ ಬಂತು ಕ್ಯಾಂಡಿಡೇಟ್ಗೆ ಖುಷಿ ಆಯಿತು ಸಿಇಓ ಗೆ ಕ್ಯಾಂಡಿಡೇಟ್ ಹಿಡಿಸಿದ ಕ್ಯಾಂಡಿಡೇಟ್ ಎಂಪ್ಲೊಯೀ ಆದ. ಸಿಇಓ ಗೆ ಪ್ರಾಜೆಕ್ಟ್ ಸಿಕ್ತು ಹೆಚ್ಚಾರ್ಗೆ ಇಂಸೆಂಟಿವ್ ಸಿಕ್ತು ಕ್ಯಾಂಡಿಡೇಟ್ಗೆ ಸ್ಯಾಲರಿ ಸಿಕ್ತು ಎಲ್ಲರಿಗೂ ಖುಷಿ ಆಯ್ತು. ಟಾರ್ಗೆಟ್ ಸೆಟ್ ಆಯಿತು ಇಂಸೆಂಟಿವ್ ಫಿಕ್ಸ್ ಆಯಿತು ಟ್ರೈನಿಂಗೂ ಕೊಟ್ಟಾಯ್ತು ಕೆಲವು ತಿಂಗಳು ಕಳೆಯಿತು. ಮತ್ತೆ ಅಪ್ಪ್ರೈಸಲ್ ಬಂತು ಕ್ಯಾಂಡಿಡೇಟ್ಗೆ ಪ್ರಮೋಷನ್ ಆಸೆ ಬಂತು ಸಿಇಓ ಹೇಳಿದರು, ಬಿಸಿನೆಸ್ ಡಲ್ಲು (ಡಲ್) ಅದ್ರಿಂದ ಇನ್ಕ್ರಿಮೆಂಟ್ ನಿಲ್ಲು(ನಿಲ್). ಎಂಪ್ಲೊಯಿಗೆ ನಿರಾಶೆ ಆಯ್ತು ಹೆಚ್ಚಾರ್ಗೆ ಬೇಜಾರಾಯ್ತು ಎಂಪ್ಲೊಯೀ ಮತ್ತೆ ಕ್ಯಾಂಡಿಡೇಟ್ ಆದ ಹೆಚ್ಚ್ಚಾರ್ ಮತ್ತೆ ಟೆಲಿ ಕಾಲರ್ ಆದ. ಸಿಇಓ ಗೆ ಹೇಳೋಕಾಗಲ್ಲ ಎಂಪ್ಲೊಯಿಗೆ ತಾಳ್ಮೆ ಇಲ್ಲ ನಮ್ಮ ಕಷ್ಟ ಕೇಳೋರಿಲ್ಲ. ಲಿಂಕ್ಡ್ ಇನ್ ನಲ್ಲಿ ಕಂಡ ಹಿಂದಿ ಕವನದ ಪ್ರೇರಣೆ. ರಚಿಸಿದವರು ನಾಗರಾಜ ಡಿ ಬಿ ಮುಖ್ಯಸ್ಥರು - ಮಾನವ ಸಂಪನ್ಮೂಲ, ವೆಯರ್ ಮಿನರಲ್ಸ್ ಇಂಡಿಯಾ, ಬೆಂಗಳೂರು
0 Comments
|
|