HR KANNADA CONFERENCE
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
    • ಸಮ್ಮೇಳನದ ವಿಡಿಯೋಗಳು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಸಂಗ್ರಹಗಳು
    • 2021 >
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020 >
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ಸಮ್ಮೇಳನದ ಕೈಪಿಡಿ
    • 2019 >
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
      • ಭಾಗವಹಿಸುವವರ ವಿವರ
    • 2018 >
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017 >
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಪತ್ರಿಕಾ ವರದಿಗಳು
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಸಂಪರ್ಕಿಸಿ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು

ನಾಲ್ಕನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನಕ್ಕೆ ಶುಭ ಹಾರೈಕೆಗಳು

11/17/2020

0 Comments

 
Picture
ಡಾ. ಸಿ.ಆರ್. ಗೋಪಾಲ್‍
ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್, ಸಂಡೂರು
ಅಭ್ಯುದಯ ಅನೇಕ ಪ್ರಕ್ರಿಯೆಗಳನ್ನು ಅಪೇಕ್ಷಿಸುತ್ತದೆ. ಯಾವುದೇ ಸಮಾಜ ಪ್ರಗತಿಯನ್ನು ಕಾಣಬೇಕಾದರೆ ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ತಂತ್ರಜ್ಞಾನ, ಸೇವೆಗಳು ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಅನಿವಾರ್ಯ ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ಈ ಪ್ರತಿಯೊಂದು ಕ್ಷೇತ್ರಗಳಲ್ಲಿನ ವಿವಿಧ ಆಯಾಮಗಳಲ್ಲಿ ಉನ್ನತಿಯನ್ನು ಸಾಧಿಸಬೇಕಾಗುತ್ತದೆ. ಕೈಗಾರಿಕಾ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಕೈಗಾರಿಕೆಗಳು ಅಸ್ತಿತ್ವಕ್ಕೆ ಭೂಮಿ, ಬಂಡವಾಳ, ಬೆಂಬಲ, ವ್ಯವಸ್ಥೆ ಮುಂತಾದವುಗಳು ಬೇಕಾದಂತೆ ಮಾನವ ಸಂಪನ್ಮೂಲವೂ ಅಷ್ಟೇ ಮುಖ್ಯ. ಕೈಗಾರಿಕೆಗಳಲ್ಲಿ ಉತ್ಪಾದನೆ, ಮಾರಾಟ, ಲಾಭ ಮುಂತಾದ ಅನೇಕ ಪರಿಕಲ್ಪನೆ ಮತ್ತು ಪ್ರಕ್ರಿಯೆಗಳಿಗೆ ವಿದ್ಯಾವಂತ, ತಾಂತ್ರಿಕ ಜ್ಞಾನವುಳ್ಳ ಮಾನವ ಸಂಪನ್ಮೂಲ ಅತೀ ಅವಶ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲಕ್ಕೆ ಮತ್ತು ಆ ಕ್ಷೇತ್ರದಲ್ಲಿ ಕನ್ನಡದ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿರುವುದು ಸಂತಸದ ಮಾತೆ. ಹಾಗಾಗಿ ಈ ಕ್ಷೇತ್ರದ ಆಗುಹೋಗುಗಳನ್ನು ಪರಿಶೀಲಿಸಲು, ಚರ್ಚಿಸಲು ಹಾಗೂ ಪುನಶ್ಚೇತನಗೊಳಿಸಲು, ನಿರಾತಂಕ, ಮಾನವ ಸಂಪನ್ಮೂಲ ರಾಷ್ಟ್ರೀಯ ಸಂಸ್ಥೆ, ವೃತ್ತಿಗತ ಸಮಾಜಕಾರ್ಯದ ರಾಷ್ಟ್ರೀಯ ಸಂಸ್ಥೆ, ಕರ್ನಾಟಕ ಉದ್ಯೋಗಿಗಳ ಸಂಸ್ಥೆ ಮುಂತಾದ ಹಲವು ಹತ್ತು ಸಂಘಸಂಸ್ಥೆಗಳು ಸೇರಿ, ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು, ಈಗ ನಾಲ್ಕೂ ವರ್ಷಗಳಿಂದ ಮಾಡುತ್ತಿರುವುದು ನೋಡಿ, ಭಾಗವಹಿಸಿ ನನಗೆ ತುಂಬಾ ಸಂತೋಷವಾಗಿದೆ.

Read More
0 Comments

ಹೀಗೊಂದು ದಂತಕಥೆ...

11/30/2019

0 Comments

 
Picture
ಡಾ|| ಮೀರಾ ಉದಯ
ಎಂ.ಬಿ.ಎ. ವಿಭಾಗದ ಮುಖ್ಯಸ್ಥರು (ಮಾನವ ಸಂಪನ್ಮೂಲ),
​ಡಾನ್ ಬಾಸ್ಕೋ ತಾಂತ್ರಿಕ ಮಹಾ ಶಿಕ್ಷಣ ಸಂಸ್ಥೆ

ಎಲ್ಲೋ ಹುಟ್ಟಿ ಎಲ್ಲೋ ಹರಿದು ಯಾವುದೋ ಸಮುದ್ರ ಸೇರುವ ನದಿಯ ಹಾಗೆ ಮನುಷ್ಯನ ಜೀನವ ನಿರಂತರ. ಮನುಷ್ಯನ ಪ್ರತೀ ಹಂತದ ಬೆಳವಣಿಗೆ ಅತ್ಯದ್ಭುತ. ಮನುಷ್ಯನ ಈ ರೀತಿಯ ಬೆಳವಣಿಗೆ, ಇತರರಿಗೆ ಪೂರಕವಾಗಿ, ಸಹಕಾರಿಯಾಗಿ ಮತ್ತು ಮಾರ್ಗದರ್ಶಿಯಾದರೆ ಜೀವನ ಪರಿಪೂರ್ಣ. ಪ್ರತಿಯೋರ್ವರ ಜೀವನದ ವಿವಿಧ ಮಜಲುಗಳಲ್ಲಿ ಹಲವರಿಗೆ ನೆರವಾಗುವ ಘಟನೆಗಳು ಸಂಭವಿಸಿರುತ್ತವೆ ಅಂತಹ ಒಂದು ಘಟನೆಯನ್ನು ಲೇಖಕರು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ. 

Read More
0 Comments

ಬದಲಾಗುತ್ತಿರುವ ಜಗತ್ತಿನಲ್ಲಿ ಮಾನವ ಸಂಪನ್ಮೂಲ ವೃತ್ತಿಯ ಪುನರ್ ಪರಿಕಲ್ಪನೆ

11/30/2019

0 Comments

 
Picture
ವಾಸುಕಿ ರಂಗನಾಥ್
ಗ್ಲೋಬಲ್ ಹೆಚ್ಆರ್ ಡೆವಲಪ್‍ಮೆಂಟ್ ಲೀಡರ್-ವೋಲ್ವೊ ಕಾರ್ ಗ್ರೂಪ್, ಗೊಥೇನ್‍ಬರ್ಗ್‍, ಸ್ವೀಡನ್

ನಿಜ, ನಾವಿಂದು ನಿರಂತರವಾಗಿ ಬದಲಾಗುತ್ತಿರುವ ಮತ್ತು ಸಂಪರ್ಕಗೊಳ್ಳುತ್ತಿರುವ ಜಗತ್ತಿನಲ್ಲಿದ್ದೇವೆ. ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ನಮ್ಮ ಜಗತ್ತು ಬದಲಾಗುತ್ತಿರುವುದು ಸತ್ಯ. ಆದರೆ ಆ ಬದಲಾವಣೆಗಳು ಹೇಗೆ ಗೋಚರಿಸುತ್ತದೆ ಎನ್ನುವುದು ಅಸ್ಪಷ್ಟ. ಈ ಸಂದರ್ಭದಲ್ಲಿ ಪರಿಶೀಲಿಸಬೇಕಾದ ಅಂಶ-ಮಾನವ ಸಂಪನ್ಮೂಲಗಳ ಪುನರ್ ಪರಿಕಲ್ಪನೆ ಅಗತ್ಯವಿದೆಯೇ?        

Read More
0 Comments

ಎಲ್ಲಾ ಸಂಪನ್ಮೂಲಗಳ ಯಜಮಾನನಾದ ಮಾನವ ಸಂಪನ್ಮೂಲ

11/30/2019

0 Comments

 
Picture
ಸೌಂದರ್ಯ ರಮೇಶ ಕಂಠೆಪ್ಪನವರ
ಕೇಶ್ವಾಪುರ, ಹುಬ್ಬಳ್ಳಿ

ಮಾನವ ಸಂಪನ್ಮೂಲ ಎಂದರೆ ವ್ಯಕ್ತಿಗಳ ಮೌಲ್ಯಗಳು, ನಂಬಿಕೆಗಳು, ಕೌಶಲ್ಯ, ದಕ್ಷತೆ, ಸ್ಪೂರ್ತಿ, ತೀರ್ಮಾನಗಳನ್ನು ಧೈರ್ಯ ಇವೆಲ್ಲವುಗಳ ಸುಮಧುರ ಯೋಗ್ಯ ಮಿಶ್ರಣ ಎಂದು ಹೇಳಬಹುದು ಅಥವಾ ಮಾನವ ಸಂಪನ್ಮೂಲ ಎಂದರೆ ಜನರಲ್ಲಿನ ಜ್ಞಾನ, ಸೃಜನಾತ್ಮಕ ಶಕ್ತಿಯಲ್ಲಿನ ಚತುರತೆಗಳು ಎಂದು ಹೇಳಬಹುದು.
​
ಮಾನವ ಸಂಪನ್ಮೂಲ ಎಂದರೆ:-
ಮಾ- ಮಾದರಿಗೊಳಿಸುವುದು
ನ- ನವೀನತೆಯನ್ನು ತರುವುದು
ವ- ವ್ಯವಸ್ಥೆಗೊಳಿಸುವುದು


Read More
0 Comments

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಾನೂನುಗಳೊಂದಿಗೆ ಸಮುದಾಯದ ಸಹಭಾಗಿತ್ವ ಅನಿವಾರ್ಯ

11/30/2019

0 Comments

 
Picture
ಶಿವಮೂರ್ತಿ ಎಂ.ಎಸ್. ಮೇಲನಹಳ್ಳಿ
ಮೇಲನಹಳ್ಳಿ, ಕಸಬಾ ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು
Picture
ಡಾ. ರಾಜಣ್ಣ ಜಿ.
ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ
ಸಂವಿಧಾನದ ಆಶೋತ್ತರಗಳಿಗನುಗುಣವಾಗಿ ಜನರ ಆಶಯಗಳನ್ನು ಈಡೇರಿಸಲು ನಿರ್ದಿಷ್ಟ ಗುರಿ, ಕಾಲಮಿತಿ ಹಾಗೂ ಆರ್ಥಿಕ ಬೆಂಬಲದೊಂದಿಗೆ ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಎಲ್ಲಾ ಸರ್ಕಾರಗಳ ಆದ್ಯ ಕರ್ತವ್ಯ. ಅಧಿಕಾರಕ್ಕೇರಿದ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಆದ ವಿಶಿಷ್ಟ ಶೈಲಿಯ ಯೋಜನೆಗಳ ಮೂಲಕ ಇಂತಹ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸಿ ಶ್ರೀಸಾಮಾನ್ಯ ಆಶಯಗಳಿಗೆ ಸ್ಪಂದಿಸುವುದು ಸರ್ವೇಸಾಮಾನ್ಯ ಅಥವಾ ವಾಡಿಕೆ. ಇದು ಪ್ರಜಾಸತ್ತಾತ್ಮಕ ಆಡಳಿತದ ಲಕ್ಷಣವೂ ಹೌದು. ಸರ್ಕಾರಗಳು ರೂಪಿಸುವ ಕಲ್ಯಾಣ ಕಾರ್ಯಗಳು ಆಡಳಿತಗಾರರ ವಿಚಾರಧಾರೆಗೊಳಪಟ್ಟರೂ ಕೂಡ ಅವುಗಳ ಒಟ್ಟು ಆಶಯ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಪೂರಕವಾಗಿರಬೇಕಾಗಿರುತ್ತದೆ. ಯಾವುದೇ ಕಲ್ಯಾಣಕಾರ್ಯದ ಯಶಸ್ಸು ಅದರಲ್ಲಿ ಜನರ ನೇರಪಾಲ್ಗೊಳ್ಳುವಿಕೆ, ಸಮುದಾಯದ ಸಹಭಾಗಿತ್ವ ಮತ್ತು ಸಹಕಾರ ತತ್ವವನ್ನೇ ಅವಲಂಬಿಸಿರುವುದರಿಂದ ಕಲ್ಯಾಣಕಾರ್ಯಗಳ ಬಗ್ಗೆ ಜನತೆ ಉಪೇಕ್ಷೆ ತೋರಿದಲ್ಲಿ ಮುಂದೇನು ಮಾಡಬೇಕೆಂಬ ಪ್ರಶ್ನೆಯ ಉದ್ಭವ ಸಹಜವಾದರೂ ತಳ್ಳಿಹಾಕುವಂಥದ್ದಲ್ಲದ್ದರ ಜೊತೆಗೆ ಕಲ್ಯಾಣ ಕಾರ್ಯಗಳಲ್ಲಿನ ಲೋಪ ದೋಷಗಳು ಮತ್ತು ಕಾರ್ಯನೀತಿಗಳ ಅವಲೋಕನಕ್ಕೆ ಎಡೆಮಾಡಿಕೊಡುತ್ತವೆ. ಅಂತಹ ಒಂದು ಸನ್ನಿವೇಶಕ್ಕೆ ಇಂದು ನಮ್ಮ ಸರ್ಕಾರಿ ಶಾಲೆಗಳು ಮೂಕ ಸಾಕ್ಷಿಗಳಾಗುತ್ತಿರುವುದು ಪ್ರಸಕ್ತ ಕಾಲಘಟ್ಟದಲ್ಲಿನ ವಿಪರ್ಯಾಸಗಳಲ್ಲೊಂದು. 

Read More
0 Comments

ವೈವಿಧ್ಯಮಯ ಉದ್ಯಮಗಳಲ್ಲಿ ಮಾನವ ಸಂಪನ್ಮೂಲ ವೃತ್ತಿನಿರತರು ಧೀಮಂತ ನಾಯಕರಾಗಿ ಯಶಸ್ಸು ಸಾಧಿಸಲು 36 ಸೂತ್ರಗಳು

11/30/2019

0 Comments

 
Picture
ಡಾ|| ನಂದೀಶ ವಿ. ಹಿರೇಮಠ
ಪ್ರಾಧ್ಯಾಪಕರು (HR), ಇಂಡಸ್ ಬಿಸಿನೆಸ್ ಅಕಾಡೆಮಿ ಮತ್ತು ಕಾರ್ಪೋರೇಟ್ ಟ್ರೈನರ್, ಬೆಂಗಳೂರು-560082

ಪೀಠಿಕೆ:
ಯಾವುದೇ ಸಂಸ್ಥೆ ಅಥವಾ ಉದ್ಯಮ ಯಶಸ್ಸನ್ನು ಪಡೆಯಬೇಕಾದರೆ ಧೀಮಂತ ನಾಯಕನ ಆವಶ್ಯಕತೆ ಬಹುಮುಖ್ಯ. ಮಾನವ ಸಂಪನ್ಮೂಲ ವೃತ್ತಿನಿರತರ (HR Professionals) ಮತ್ತು ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರ (HR Manages) ಪಾತ್ರ ಉದ್ಯಮಗಳನ್ನು ಯಶಸ್ಸಿನ ದಾರಿಯಲ್ಲಿ ಸಾಗಲು ಮಹತ್ವದ ಪಾತ್ರ ವಹಿಸುತ್ತಾರೆ. ಅರ್ಥಾತ್ ಇವರು ಉದ್ಯಮಗಳ ಪಾಲುದಾರರಲ್ಲ (Business Partners) ಬದಲಾಗಿ ಉದ್ಯಮಗಳ ನಾಯಕರು (Business Leaders) ಏಕೆಂದರೆ ಮಾನವ ಸಂಪನ್ಮೂಲಗಳು ಅತ್ಯುತ್ತಮ ಉಪಯೋಗವಾದಾಗ ಉದ್ಯಮಗಳು ತಮ್ಮ ಧ್ಯೇಯೋದ್ದೇಶ ಪೂರೈಸಲು, ಹಾಗೂ ಲಾಭಗಳಿಸಲು ಸಾಧ್ಯವಾಗುತ್ತದೆ.


Read More
0 Comments

ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯಿದೆ 2013

11/30/2019

0 Comments

 
ಮೂಲ: ಪಾಂಡುನಾಯಕ್ (ಆಂಗ್ಲಭಾಷೆ)
ಅನುವಾದ: ಡಾ. ನಾಗರಾಜ್ ನಾಯಕ್ ಮತ್ತು ಅನಿತಾ ಎಸ್.

Picture
ಡಾ. ನಾಗರಾಜ್ ನಾಯಕ್
ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
Picture
ಅನಿತಾ ಎಸ್.
ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ರಾಮನಗರ ಸ್ನಾತಕೋತ್ತರ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ
ಹಿನ್ನೆಲೆ:
ಲೈಂಗಿಕ ಕಿರುಕುಳದ ಪರಿಕಲ್ಪನೆಯು ಮನುಕುಲದ ಇತಿಹಾಸದಷ್ಟು ಹಳೆಯದಾಗಿದ್ದರೂ, ಉದ್ಯೋಗ ಸ್ಥಳದಲ್ಲಿ ಇದರ ಬಗೆಗಿನ ಅರಿವು ಇತ್ತೀಚಿನ ದಿನಗಳಲ್ಲಿ ಗಮನ ಸೆಳೆದಿದೆ.  ವಾಸ್ತವವಾಗಿ ವಿಶಾಖ v/s ರಾಜಸ್ಥಾನ ರಾಜ್ಯದ (1997) ಪ್ರಕರಣದಲ್ಲಿ, ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪು ಬರುವವರೆಗೂ (1997) ಈ ವಿಷಯದ ಬಗ್ಗೆ ವ್ಯವಹರಿಸಲು ಯಾವುದೇ ಅಧಿಕೃತ ಮಾರ್ಗಸೂಚಿಗಳಿರಲಿಲ್ಲ. ಈ ಪ್ರಕರಣವು ರಾಜಸ್ಥಾನದ ಗ್ರಾಮದಲ್ಲಿನ ಸಾಮಾಜಿಕ ಕಾರ್ಯಕರ್ತೆಯ ಮೇಲಿನ ಸಾಮೂಹಿಕ ಆತ್ಯಾಚಾರಕ್ಕೆ ಸಂಬಂಧಿಸಿದೆ. ಸರ್ವೋಚ್ಛ ನ್ಯಾಲಯವು ಲೈಂಗಿಕ ಕಿರುಕುಳವನ್ನು ವ್ಯಕ್ತಿಯ ಹಕ್ಕುಗಳ ಉಲ್ಲಂಘನೆಯೆಂದು ಅಭಿಪ್ರಾಯಪಟ್ಟು ಸಂವಿಧಾನದ ವಿಧಿ 14 (ಕಾನೂನಿನ ಮುಂದೆ ಸಮಾನತೆ), ವಿಧಿ 15 (-ಲೈಂಗಿಕ ನೆಲೆಯಲ್ಲಿ ತಾರತಮ್ಯವನ್ನು ನಿಷೇಧಿಸುವುದು), ವಿಧಿ 19 (ಸ್ವತಂತ್ರವಾಗಿ ವ್ಯಕ್ತಿಯು ಯಾವುದೇ ವೃತ್ತಿ ವ್ಯಾಪಾರ ಅಥವ ಉದ್ಯೋಗವನ್ನು ಮಾಡುವುದು). ವಿಧಿ 42- (ಕೆಲಸದ ಸ್ಥಳದಲ್ಲಿ ಮಾನವೀಯ ಪರಿಸ್ಥಿತಿಯನ್ನು ಒದಗಿಸುವುದು). ಮತ್ತು ನಾಗರೀಕ ಕರ್ತವ್ಯಗಳ ಅಡಿಯಲ್ಲಿ ವಿಧಿ 51-ಎ, (ಮಹಿಳಾ ಘನತೆಗೆ ಚ್ಯುತಿ ತರದಿರುವುದು), ಇವುಗಳ ಸ್ಪಷ್ಟ ಉಲ್ಲಂಘನೆಯೆಂದು ತಿಳಿಸಿದೆ.


Read More
0 Comments

ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಕೈಗಾರಿಕಾ ಸಂಬಂಧಗಳ ಅವಲೋಕನ

11/30/2019

0 Comments

 
Picture
ಜಿ.ಹೆಚ್. ನಂದೀಶ್
ಮೈಕ್ರೋ ಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್

ಪೀಠಿಕೆ:
ಕೈಗಾರಿಕಾ ಸಂಬಂಧಗಳ ನಿರ್ದಿಷ್ಟ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ಉದ್ಯೋಗದಾತರು, ಉದ್ಯೋಗಿಗಳು, ಟ್ರೇಡ್ ಯೂನಿಯನ್ ಮತ್ತು ರಾಜ್ಯದಂತಹ ಪ್ರಮುಖ ಆಟಗಾರರ ನಡುವಿನ ಸಂಕೀರ್ಣ ವಹಿವಾಟಿನ ಫಲಿತಾಂಶವಾಗಿ ಹೊರ ಹೊಮ್ಮಿದೆ. ಒಂದು ರೀತಿಯಲ್ಲಿ ಹೇಳುವುದಾದರೆ, ಕೈಗಾರಿಕಾ ಸಂಬಂಧಗಳ ಸ್ವರೂಪದಲ್ಲಿನ ಬದಲಾವಣೆಯು ಒಂದು ದೇಶದ ಸಾಮಾಜಿಕ-ಆರ್ಥಿಕ ಸನ್ನಿವೇಶವನ್ನು ಬದಲಿಸಿದೆ, ಇದನ್ನು ವಾಸ್ತವವಾಗಿ ದೃಷ್ಟಿಯಲ್ಲಿಟ್ಟುಕೊಂಡು ಭಾರತದಲ್ಲಿನ ಕೈಗಾರಿಕಾ ಸಂಬಂಧಗಳನ್ನು ಈ ಕೆಳಗಿನ ಎರಡು ವಿಭಾಗಗಳ ಅಡಿಯಲ್ಲಿ ಪ್ರಸ್ತುತಪಡಿಸಲಾಗಿದೆ.

Read More
0 Comments

ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವ ಪರಿಣಾಮಗಳು, ಅದನ್ನು ತಡೆಯುವಲ್ಲಿ ಮಾನವ ಸಂಪನ್ಮೂಲ

11/29/2019

0 Comments

 
Picture
ಶಿವಕುಮಾರ
ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ರಾಮನಗರ ಸ್ನಾತಕೋತ್ತರ ಕೇಂದ್ರ,
​ಬೆಂಗಳೂರು ವಿಶ್ವವಿದ್ಯಾಲಯ
ಸಾರಲೇಖ:
ಮಾನವ ಸಂಪನ್ಮೂಲ ವಿಭಾಗವು ಪ್ರಸ್ತುತ ಜಗತ್ತಿನಲ್ಲಿ ತನ್ನದೆ ಆದತಂಹ ಮಹತ್ವವನ್ನು ಪಡೆದಿದೆ ಹಾಗೂ ಉದ್ಯಮಗಳ ಏಳಿಗೆಗೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ. ಅದರ ಬಹುಮುಖ್ಯ ಕಾರ್ಯಗಳಲ್ಲಿ ಕಾರ್ಮಿಕರ ನಿರ್ವಹಣೆಯು ಪ್ರಮುಖವಾದದ್ದು, ಅದರಲ್ಲಿ ಕಾರ್ಮಿಕರು ತನ್ನ ಉದ್ಯೋಗವನ್ನು ತೊರೆಯದಂತೆ (labour turnover) ನೋಡಿಕೊಳ್ಳುವುದು ಒಂದಾಗಿದೆ. ಉದ್ಯೋಗ ತೊರೆಯುವುದು (labour turnover) ಅದರ ಅರ್ಥ, ವ್ಯಾಖ್ಯಾನ, ನೌಕರರು ಉದ್ಯೋಗ ತೊರೆಯಲು ಕಾರಣಗಳು, ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವಂತಹ  ಪರಿಣಾಮಗಳು, ಇದರಿಂದ ಕಂಪನಿಯ ಅಭಿವೃದ್ಧಿಯ ಮೇಲಾಗುವ ಗಂಭೀರ ಪರಿಣಾಮಗಳು ಹಾಗೂ ಮಾನವ ಸಂಪನ್ಮೂಲ ವಿಭಾಗವು ನೌಕರರು ಉದ್ಯೋಗ ತೊರೆಯದ ಹಾಗೆ ಕಾರ್ಮಿಕರ ನಿರ್ವಹಣೆ ಹಾಗೂ ಅದರ ಮಾರ್ಗೋಪಾಯಗಳ ಬಗ್ಗೆ ವಿವರಿಸಲಾಗಿದೆ.


Read More
0 Comments

ಮಾನವ ಸಂಪನ್ಮೂಲ ಮತ್ತು ಸಾಹಿತ್ಯ ಸಂಬಂಧ

11/29/2019

0 Comments

 
Picture
ಡಾ. ಶಿವರಾಜ ಬಿ.ಇ.
ಸಹ ಪ್ರಾಧ್ಯಾಪಕರು, ಆಕ್ಸ್ಫರ್ಡ್ ಕಾಲೇಜು, ಎಚ್.ಎಸ್.ಆರ್.ಬಡಾವಣೆ, ಬೆಂಗಳೂರು - 560102
ಮನುಷ್ಯ ಸಂಘ ಜೀವಿ. ಏಕಾಂಗಿಯಾಗಿ ಬದುಕಲಾರ, ಬದುಕಿದರೂ ಅವನು ಶೂನ್ಯದಿಂದ ಏನನ್ನೂ ಸೃಷ್ಟಿಸಲಾರ. ಮನುಷ್ಯ ಏಕಾಂಗಿಯಾಗಿ ಬದುಕಬಹುದು ಇಲ್ಲವೇ ಆಲೋಚಿಸಬಹುದೇ ಹೊರತು ಸ್ವತಂತ್ರವಾಗಿ ಯಾವುದನ್ನೂ ಉತ್ಪಾದಿಸಲು ಮತ್ತು ಸೃಷ್ಠಿಸಲು ಸಾಧ್ಯವಾಗುವುದಿಲ್ಲ. ಮಾನವ ಹುಟ್ಟಿನಿಂದ, ತನ್ನ ಬುದ್ಧಿಶಕ್ತಿ ಹಾಗೂ ಆಲೋಚನಾಶಕ್ತಿಯಿಂದಾಗಿಯೇ ಪ್ರಾಣಿಗಳಿಗಿಂತ ಭಿನ್ನ ನೆನೆಸಿಕೊಂಡಿದ್ದಾನೆ. ಮಾನವ ಆಲೋಚಿಸಿದಂತೆಲ್ಲಾ ತನ್ನ ದೈಹಿಕ ಸಾಮರ್ಥ್ಯ ಮತ್ತು ವಿವೇಚನಾ ಶಕ್ತಿಯಿಂದಾಗಿ ಇತರೆ ಜೀವರಾಶಿಗಳಿಗಿಂತ ಭಿನ್ನವಾಗಿ ಬದುಕನ್ನು ಕಟ್ಟಿಕೊಂಡಿದ್ದಾನೆ. ಇದನ್ನೇ ನಾವು ತೊಡಗಿಸಿಕೊಳ್ಳುವುದು ಅಥವಾ ಕ್ರಿಯಾಶಕ್ತಿ ಎಂದು ಕರೆಯಬಹುದು. ಮಾನವ ಕೈಗೊಳ್ಳುವ ಪ್ರತಿಯೊಂದು ಕೆಲಸ ಆತನ ಸಾಮಥ್ರ್ಯದ ಮೇಲೆ ನಿರ್ಧಾರವಾಗುವುದರಿಂದ ಅದನ್ನು ಸಂಪನ್ಮೂಲ ಎಂದು ಪರಿಗಣಿಸಬಹುದು. 

Read More
0 Comments
<<Previous
    Picture
    Nirathanka

    Categories

    All
    Awards 2017
    Awards 2018
    Awards 2019
    Awards 2020
    Awards 2021
    Awards 2022
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಸಮ್ಮೇಳನದ ಕುರಿತು ಅಭಿಪ್ರಾಯಗಳು
    ಹನಿಗವನ

    Archives

    December 2022
    November 2022
    November 2021
    March 2021
    November 2020
    July 2020
    November 2019
    October 2019



    RSS Feed

SITE MAP

SITE

  • ಸ್ವಾಗತ
  • ಸಮಿತಿಯ ಸದಸ್ಯರು
  • ​ಪತ್ರಿಕಾ ವರದಿಗಳು
  • ​ಆನ್‍ಲೈನ್‍ ಗ್ರೂಪ್ಸ್
  • ಬ್ಲಾಗ್
  • ಸಮ್ಮೇಳನದ ವಿಡಿಯೋಗಳು​​

OUR OTHER WEBSITES

  • ​WWW.NIRATANKA.ORG
  • WWW.NIRUTAPUBLICATIONS.ORG

PUBLICATIONS

  • LEADER'S TALK
  • NIRUTA'S READ & WRITE INITIATIVE​​

NGO & CSR

  • POSH
  • CSR

SUBSCRIBE

Subscribe to Newsletter


JOIN OUR ONLINE GROUPS


JOIN WHATSAPP BROADCAST

Copyright : Nirathanka 2021
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
    • ಸಮ್ಮೇಳನದ ವಿಡಿಯೋಗಳು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಸಂಗ್ರಹಗಳು
    • 2021 >
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020 >
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ಸಮ್ಮೇಳನದ ಕೈಪಿಡಿ
    • 2019 >
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
      • ಭಾಗವಹಿಸುವವರ ವಿವರ
    • 2018 >
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017 >
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಪತ್ರಿಕಾ ವರದಿಗಳು
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಸಂಪರ್ಕಿಸಿ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು