ಡಾ|| ಮೀರಾ ಉದಯ ಎಂ.ಬಿ.ಎ. ವಿಭಾಗದ ಮುಖ್ಯಸ್ಥರು (ಮಾನವ ಸಂಪನ್ಮೂಲ), ಡಾನ್ ಬಾಸ್ಕೋ ತಾಂತ್ರಿಕ ಮಹಾ ಶಿಕ್ಷಣ ಸಂಸ್ಥೆ ಎಲ್ಲೋ ಹುಟ್ಟಿ ಎಲ್ಲೋ ಹರಿದು ಯಾವುದೋ ಸಮುದ್ರ ಸೇರುವ ನದಿಯ ಹಾಗೆ ಮನುಷ್ಯನ ಜೀನವ ನಿರಂತರ. ಮನುಷ್ಯನ ಪ್ರತೀ ಹಂತದ ಬೆಳವಣಿಗೆ ಅತ್ಯದ್ಭುತ. ಮನುಷ್ಯನ ಈ ರೀತಿಯ ಬೆಳವಣಿಗೆ, ಇತರರಿಗೆ ಪೂರಕವಾಗಿ, ಸಹಕಾರಿಯಾಗಿ ಮತ್ತು ಮಾರ್ಗದರ್ಶಿಯಾದರೆ ಜೀವನ ಪರಿಪೂರ್ಣ. ಪ್ರತಿಯೋರ್ವರ ಜೀವನದ ವಿವಿಧ ಮಜಲುಗಳಲ್ಲಿ ಹಲವರಿಗೆ ನೆರವಾಗುವ ಘಟನೆಗಳು ಸಂಭವಿಸಿರುತ್ತವೆ ಅಂತಹ ಒಂದು ಘಟನೆಯನ್ನು ಲೇಖಕರು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ. ಒಬ್ಬ ಅಧ್ಯಾಪಕಿಯಾಗಿ, ವಿಭಾಗದ ಮುಖ್ಯಸ್ಥೆಯಾಗಿರುವ ಲೇಖಕರ ಸುಮಾರು ಎರಡು ದಶಕದ ವೃತ್ತಿ ಜೀವನದಲ್ಲಿ ಸಾವಿರಾರು ಜನರನ್ನು ದಿನಂಪ್ರತಿ ಭೇಟಿಯಾಗುತ್ತಾರೆ ಆದರೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಜೀವನ ಪರ್ಯಂತ ನೆನಪಿನಲ್ಲಿ ಉಳಿದುಬಿಡುತ್ತಾರೆ. ಹಾಗೇ ಉಳಿಯುವವರು ಸಹೋದ್ಯೋಗಿಯಾಗಿರಬಹುದು ಇಲ್ಲವೇ ವಿದ್ಯಾರ್ಥಿಯಾಗಿರಬಹುದು ಅಥವಾ ಯಾವುದೋ ಅಪರಿಚಿತ ವ್ಯಕ್ತಿಯೂ ಆಗಿರಬಹುದು. ಅಂತಹ ಒಬ್ಬ ವಿದ್ಯಾರ್ಥಿನಿಯ ಬಗ್ಗೆ ಇಂದು ಬರೆಯಲು ಹೆಮ್ಮೆ ಪಡುತ್ತೇನೆ. ಆ ಹುಡುಗಿ ಒಂದು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ಲೇಖಕರು ಕೆಲಸಮಾಡುವ ಸಂಸ್ಥೆಗೆ ವಿದ್ಯಾರ್ಥಿಯಾಗಿ ದಾಖಲಾಗುತ್ತಾಳೆ. ತನ್ನ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವ ಹಂಬಲ ಒಂದೆಡೆಯಾದರೆ ಕೀಳರಿಮೆ, ಭಯ, ಮಾನಸಿಕ ತುಮುಲ ಮತ್ತೊಂದೆಡೆ. ಇಂತಹ ದ್ವಂದ್ವ ಪರಿಸ್ಥಿತಿಯಲ್ಲಿ ಸಂಸ್ಥೆಗೆ ದಾಖಲಾದ ವಿದ್ಯಾರ್ಥಿನಿ ತಾನು ಎಂ.ಬಿ.ಎ. ಅಧ್ಯಯನ ಮಾಡಿ ಸ್ವಸಾಮಥ್ರ್ಯದಿಂದ ಜೀವನ ಕಟ್ಟಿಕೊಳ್ಳಬೇಕೆಂಬ ಕನಸು ಕಂಡವಳಾಗಿರುವಳು. ಅಂತಹ ಒಬ್ಬ ವಿದ್ಯಾರ್ಥಿನಿಗೆ ಮಾರ್ಗದರ್ಶಕರಾಗಿ ಸತತವಾಗಿ ಉತ್ತೇಜನ ನೀಡಿ ಪ್ರೋತ್ಸಾಹಿಸಿದ ಪರಿಣಾಮ ಆಕೆ ಇಂದು ಐ.ಸಿ.ಐ.ಸಿ.ಐ ಬ್ಯಾಂಕ್‍ನಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ವಿದ್ಯಾರ್ಥಿನಿಯ ಯಶಸ್ಸಿನಲ್ಲಿ ಲೇಖಕರು
2 Comments
M J SUBRAMANYAM
2/14/2024 03:39:57 am
Extraordinary! Super! Dr. M J SUBRAMANYAM
Reply
Leave a Reply. |
Categories
All
Archives
January 2025
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |