ಡಾ|| ಮೀರಾ ಉದಯ ಎಂ.ಬಿ.ಎ. ವಿಭಾಗದ ಮುಖ್ಯಸ್ಥರು (ಮಾನವ ಸಂಪನ್ಮೂಲ), ಡಾನ್ ಬಾಸ್ಕೋ ತಾಂತ್ರಿಕ ಮಹಾ ಶಿಕ್ಷಣ ಸಂಸ್ಥೆ ಎಲ್ಲೋ ಹುಟ್ಟಿ ಎಲ್ಲೋ ಹರಿದು ಯಾವುದೋ ಸಮುದ್ರ ಸೇರುವ ನದಿಯ ಹಾಗೆ ಮನುಷ್ಯನ ಜೀನವ ನಿರಂತರ. ಮನುಷ್ಯನ ಪ್ರತೀ ಹಂತದ ಬೆಳವಣಿಗೆ ಅತ್ಯದ್ಭುತ. ಮನುಷ್ಯನ ಈ ರೀತಿಯ ಬೆಳವಣಿಗೆ, ಇತರರಿಗೆ ಪೂರಕವಾಗಿ, ಸಹಕಾರಿಯಾಗಿ ಮತ್ತು ಮಾರ್ಗದರ್ಶಿಯಾದರೆ ಜೀವನ ಪರಿಪೂರ್ಣ. ಪ್ರತಿಯೋರ್ವರ ಜೀವನದ ವಿವಿಧ ಮಜಲುಗಳಲ್ಲಿ ಹಲವರಿಗೆ ನೆರವಾಗುವ ಘಟನೆಗಳು ಸಂಭವಿಸಿರುತ್ತವೆ ಅಂತಹ ಒಂದು ಘಟನೆಯನ್ನು ಲೇಖಕರು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ.
2 Comments
ವಾಸುಕಿ ರಂಗನಾಥ್ ಗ್ಲೋಬಲ್ ಹೆಚ್ಆರ್ ಡೆವಲಪ್ಮೆಂಟ್ ಲೀಡರ್-ವೋಲ್ವೊ ಕಾರ್ ಗ್ರೂಪ್, ಗೊಥೇನ್ಬರ್ಗ್, ಸ್ವೀಡನ್ ನಿಜ, ನಾವಿಂದು ನಿರಂತರವಾಗಿ ಬದಲಾಗುತ್ತಿರುವ ಮತ್ತು ಸಂಪರ್ಕಗೊಳ್ಳುತ್ತಿರುವ ಜಗತ್ತಿನಲ್ಲಿದ್ದೇವೆ. ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ನಮ್ಮ ಜಗತ್ತು ಬದಲಾಗುತ್ತಿರುವುದು ಸತ್ಯ. ಆದರೆ ಆ ಬದಲಾವಣೆಗಳು ಹೇಗೆ ಗೋಚರಿಸುತ್ತದೆ ಎನ್ನುವುದು ಅಸ್ಪಷ್ಟ. ಈ ಸಂದರ್ಭದಲ್ಲಿ ಪರಿಶೀಲಿಸಬೇಕಾದ ಅಂಶ-ಮಾನವ ಸಂಪನ್ಮೂಲಗಳ ಪುನರ್ ಪರಿಕಲ್ಪನೆ ಅಗತ್ಯವಿದೆಯೇ?
ಸೌಂದರ್ಯ ರಮೇಶ ಕಂಠೆಪ್ಪನವರ ಕೇಶ್ವಾಪುರ, ಹುಬ್ಬಳ್ಳಿ ಮಾನವ ಸಂಪನ್ಮೂಲ ಎಂದರೆ ವ್ಯಕ್ತಿಗಳ ಮೌಲ್ಯಗಳು, ನಂಬಿಕೆಗಳು, ಕೌಶಲ್ಯ, ದಕ್ಷತೆ, ಸ್ಪೂರ್ತಿ, ತೀರ್ಮಾನಗಳನ್ನು ಧೈರ್ಯ ಇವೆಲ್ಲವುಗಳ ಸುಮಧುರ ಯೋಗ್ಯ ಮಿಶ್ರಣ ಎಂದು ಹೇಳಬಹುದು ಅಥವಾ ಮಾನವ ಸಂಪನ್ಮೂಲ ಎಂದರೆ ಜನರಲ್ಲಿನ ಜ್ಞಾನ, ಸೃಜನಾತ್ಮಕ ಶಕ್ತಿಯಲ್ಲಿನ ಚತುರತೆಗಳು ಎಂದು ಹೇಳಬಹುದು.
ಮಾನವ ಸಂಪನ್ಮೂಲ ಎಂದರೆ:- ಮಾ- ಮಾದರಿಗೊಳಿಸುವುದು ನ- ನವೀನತೆಯನ್ನು ತರುವುದು ವ- ವ್ಯವಸ್ಥೆಗೊಳಿಸುವುದು ಸಂವಿಧಾನದ ಆಶೋತ್ತರಗಳಿಗನುಗುಣವಾಗಿ ಜನರ ಆಶಯಗಳನ್ನು ಈಡೇರಿಸಲು ನಿರ್ದಿಷ್ಟ ಗುರಿ, ಕಾಲಮಿತಿ ಹಾಗೂ ಆರ್ಥಿಕ ಬೆಂಬಲದೊಂದಿಗೆ ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಎಲ್ಲಾ ಸರ್ಕಾರಗಳ ಆದ್ಯ ಕರ್ತವ್ಯ. ಅಧಿಕಾರಕ್ಕೇರಿದ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಆದ ವಿಶಿಷ್ಟ ಶೈಲಿಯ ಯೋಜನೆಗಳ ಮೂಲಕ ಇಂತಹ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸಿ ಶ್ರೀಸಾಮಾನ್ಯ ಆಶಯಗಳಿಗೆ ಸ್ಪಂದಿಸುವುದು ಸರ್ವೇಸಾಮಾನ್ಯ ಅಥವಾ ವಾಡಿಕೆ. ಇದು ಪ್ರಜಾಸತ್ತಾತ್ಮಕ ಆಡಳಿತದ ಲಕ್ಷಣವೂ ಹೌದು. ಸರ್ಕಾರಗಳು ರೂಪಿಸುವ ಕಲ್ಯಾಣ ಕಾರ್ಯಗಳು ಆಡಳಿತಗಾರರ ವಿಚಾರಧಾರೆಗೊಳಪಟ್ಟರೂ ಕೂಡ ಅವುಗಳ ಒಟ್ಟು ಆಶಯ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಪೂರಕವಾಗಿರಬೇಕಾಗಿರುತ್ತದೆ. ಯಾವುದೇ ಕಲ್ಯಾಣಕಾರ್ಯದ ಯಶಸ್ಸು ಅದರಲ್ಲಿ ಜನರ ನೇರಪಾಲ್ಗೊಳ್ಳುವಿಕೆ, ಸಮುದಾಯದ ಸಹಭಾಗಿತ್ವ ಮತ್ತು ಸಹಕಾರ ತತ್ವವನ್ನೇ ಅವಲಂಬಿಸಿರುವುದರಿಂದ ಕಲ್ಯಾಣಕಾರ್ಯಗಳ ಬಗ್ಗೆ ಜನತೆ ಉಪೇಕ್ಷೆ ತೋರಿದಲ್ಲಿ ಮುಂದೇನು ಮಾಡಬೇಕೆಂಬ ಪ್ರಶ್ನೆಯ ಉದ್ಭವ ಸಹಜವಾದರೂ ತಳ್ಳಿಹಾಕುವಂಥದ್ದಲ್ಲದ್ದರ ಜೊತೆಗೆ ಕಲ್ಯಾಣ ಕಾರ್ಯಗಳಲ್ಲಿನ ಲೋಪ ದೋಷಗಳು ಮತ್ತು ಕಾರ್ಯನೀತಿಗಳ ಅವಲೋಕನಕ್ಕೆ ಎಡೆಮಾಡಿಕೊಡುತ್ತವೆ. ಅಂತಹ ಒಂದು ಸನ್ನಿವೇಶಕ್ಕೆ ಇಂದು ನಮ್ಮ ಸರ್ಕಾರಿ ಶಾಲೆಗಳು ಮೂಕ ಸಾಕ್ಷಿಗಳಾಗುತ್ತಿರುವುದು ಪ್ರಸಕ್ತ ಕಾಲಘಟ್ಟದಲ್ಲಿನ ವಿಪರ್ಯಾಸಗಳಲ್ಲೊಂದು.
ವೈವಿಧ್ಯಮಯ ಉದ್ಯಮಗಳಲ್ಲಿ ಮಾನವ ಸಂಪನ್ಮೂಲ ವೃತ್ತಿನಿರತರು ಧೀಮಂತ ನಾಯಕರಾಗಿ ಯಶಸ್ಸು ಸಾಧಿಸಲು 36 ಸೂತ್ರಗಳು11/30/2019 ಡಾ|| ನಂದೀಶ ವಿ. ಹಿರೇಮಠ ಪ್ರಾಧ್ಯಾಪಕರು (HR), ಇಂಡಸ್ ಬಿಸಿನೆಸ್ ಅಕಾಡೆಮಿ ಮತ್ತು ಕಾರ್ಪೋರೇಟ್ ಟ್ರೈನರ್, ಬೆಂಗಳೂರು-560082 ಪೀಠಿಕೆ:
ಯಾವುದೇ ಸಂಸ್ಥೆ ಅಥವಾ ಉದ್ಯಮ ಯಶಸ್ಸನ್ನು ಪಡೆಯಬೇಕಾದರೆ ಧೀಮಂತ ನಾಯಕನ ಆವಶ್ಯಕತೆ ಬಹುಮುಖ್ಯ. ಮಾನವ ಸಂಪನ್ಮೂಲ ವೃತ್ತಿನಿರತರ (HR Professionals) ಮತ್ತು ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರ (HR Manages) ಪಾತ್ರ ಉದ್ಯಮಗಳನ್ನು ಯಶಸ್ಸಿನ ದಾರಿಯಲ್ಲಿ ಸಾಗಲು ಮಹತ್ವದ ಪಾತ್ರ ವಹಿಸುತ್ತಾರೆ. ಅರ್ಥಾತ್ ಇವರು ಉದ್ಯಮಗಳ ಪಾಲುದಾರರಲ್ಲ (Business Partners) ಬದಲಾಗಿ ಉದ್ಯಮಗಳ ನಾಯಕರು (Business Leaders) ಏಕೆಂದರೆ ಮಾನವ ಸಂಪನ್ಮೂಲಗಳು ಅತ್ಯುತ್ತಮ ಉಪಯೋಗವಾದಾಗ ಉದ್ಯಮಗಳು ತಮ್ಮ ಧ್ಯೇಯೋದ್ದೇಶ ಪೂರೈಸಲು, ಹಾಗೂ ಲಾಭಗಳಿಸಲು ಸಾಧ್ಯವಾಗುತ್ತದೆ. ಮೂಲ: ಪಾಂಡುನಾಯಕ್ (ಆಂಗ್ಲಭಾಷೆ) ಅನುವಾದ: ಡಾ. ನಾಗರಾಜ್ ನಾಯಕ್ ಮತ್ತು ಅನಿತಾ ಎಸ್. ಹಿನ್ನೆಲೆ:
ಲೈಂಗಿಕ ಕಿರುಕುಳದ ಪರಿಕಲ್ಪನೆಯು ಮನುಕುಲದ ಇತಿಹಾಸದಷ್ಟು ಹಳೆಯದಾಗಿದ್ದರೂ, ಉದ್ಯೋಗ ಸ್ಥಳದಲ್ಲಿ ಇದರ ಬಗೆಗಿನ ಅರಿವು ಇತ್ತೀಚಿನ ದಿನಗಳಲ್ಲಿ ಗಮನ ಸೆಳೆದಿದೆ. ವಾಸ್ತವವಾಗಿ ವಿಶಾಖ v/s ರಾಜಸ್ಥಾನ ರಾಜ್ಯದ (1997) ಪ್ರಕರಣದಲ್ಲಿ, ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪು ಬರುವವರೆಗೂ (1997) ಈ ವಿಷಯದ ಬಗ್ಗೆ ವ್ಯವಹರಿಸಲು ಯಾವುದೇ ಅಧಿಕೃತ ಮಾರ್ಗಸೂಚಿಗಳಿರಲಿಲ್ಲ. ಈ ಪ್ರಕರಣವು ರಾಜಸ್ಥಾನದ ಗ್ರಾಮದಲ್ಲಿನ ಸಾಮಾಜಿಕ ಕಾರ್ಯಕರ್ತೆಯ ಮೇಲಿನ ಸಾಮೂಹಿಕ ಆತ್ಯಾಚಾರಕ್ಕೆ ಸಂಬಂಧಿಸಿದೆ. ಸರ್ವೋಚ್ಛ ನ್ಯಾಲಯವು ಲೈಂಗಿಕ ಕಿರುಕುಳವನ್ನು ವ್ಯಕ್ತಿಯ ಹಕ್ಕುಗಳ ಉಲ್ಲಂಘನೆಯೆಂದು ಅಭಿಪ್ರಾಯಪಟ್ಟು ಸಂವಿಧಾನದ ವಿಧಿ 14 (ಕಾನೂನಿನ ಮುಂದೆ ಸಮಾನತೆ), ವಿಧಿ 15 (-ಲೈಂಗಿಕ ನೆಲೆಯಲ್ಲಿ ತಾರತಮ್ಯವನ್ನು ನಿಷೇಧಿಸುವುದು), ವಿಧಿ 19 (ಸ್ವತಂತ್ರವಾಗಿ ವ್ಯಕ್ತಿಯು ಯಾವುದೇ ವೃತ್ತಿ ವ್ಯಾಪಾರ ಅಥವ ಉದ್ಯೋಗವನ್ನು ಮಾಡುವುದು). ವಿಧಿ 42- (ಕೆಲಸದ ಸ್ಥಳದಲ್ಲಿ ಮಾನವೀಯ ಪರಿಸ್ಥಿತಿಯನ್ನು ಒದಗಿಸುವುದು). ಮತ್ತು ನಾಗರೀಕ ಕರ್ತವ್ಯಗಳ ಅಡಿಯಲ್ಲಿ ವಿಧಿ 51-ಎ, (ಮಹಿಳಾ ಘನತೆಗೆ ಚ್ಯುತಿ ತರದಿರುವುದು), ಇವುಗಳ ಸ್ಪಷ್ಟ ಉಲ್ಲಂಘನೆಯೆಂದು ತಿಳಿಸಿದೆ. ಜಿ.ಹೆಚ್. ನಂದೀಶ್ ಮೈಕ್ರೋ ಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್ ಪೀಠಿಕೆ:
ಕೈಗಾರಿಕಾ ಸಂಬಂಧಗಳ ನಿರ್ದಿಷ್ಟ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ಉದ್ಯೋಗದಾತರು, ಉದ್ಯೋಗಿಗಳು, ಟ್ರೇಡ್ ಯೂನಿಯನ್ ಮತ್ತು ರಾಜ್ಯದಂತಹ ಪ್ರಮುಖ ಆಟಗಾರರ ನಡುವಿನ ಸಂಕೀರ್ಣ ವಹಿವಾಟಿನ ಫಲಿತಾಂಶವಾಗಿ ಹೊರ ಹೊಮ್ಮಿದೆ. ಒಂದು ರೀತಿಯಲ್ಲಿ ಹೇಳುವುದಾದರೆ, ಕೈಗಾರಿಕಾ ಸಂಬಂಧಗಳ ಸ್ವರೂಪದಲ್ಲಿನ ಬದಲಾವಣೆಯು ಒಂದು ದೇಶದ ಸಾಮಾಜಿಕ-ಆರ್ಥಿಕ ಸನ್ನಿವೇಶವನ್ನು ಬದಲಿಸಿದೆ, ಇದನ್ನು ವಾಸ್ತವವಾಗಿ ದೃಷ್ಟಿಯಲ್ಲಿಟ್ಟುಕೊಂಡು ಭಾರತದಲ್ಲಿನ ಕೈಗಾರಿಕಾ ಸಂಬಂಧಗಳನ್ನು ಈ ಕೆಳಗಿನ ಎರಡು ವಿಭಾಗಗಳ ಅಡಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವ ಪರಿಣಾಮಗಳು, ಅದನ್ನು ತಡೆಯುವಲ್ಲಿ ಮಾನವ ಸಂಪನ್ಮೂಲ11/29/2019 ಶಿವಕುಮಾರ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ರಾಮನಗರ ಸ್ನಾತಕೋತ್ತರ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ಸಾರಲೇಖ:
ಮಾನವ ಸಂಪನ್ಮೂಲ ವಿಭಾಗವು ಪ್ರಸ್ತುತ ಜಗತ್ತಿನಲ್ಲಿ ತನ್ನದೆ ಆದತಂಹ ಮಹತ್ವವನ್ನು ಪಡೆದಿದೆ ಹಾಗೂ ಉದ್ಯಮಗಳ ಏಳಿಗೆಗೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ. ಅದರ ಬಹುಮುಖ್ಯ ಕಾರ್ಯಗಳಲ್ಲಿ ಕಾರ್ಮಿಕರ ನಿರ್ವಹಣೆಯು ಪ್ರಮುಖವಾದದ್ದು, ಅದರಲ್ಲಿ ಕಾರ್ಮಿಕರು ತನ್ನ ಉದ್ಯೋಗವನ್ನು ತೊರೆಯದಂತೆ (labour turnover) ನೋಡಿಕೊಳ್ಳುವುದು ಒಂದಾಗಿದೆ. ಉದ್ಯೋಗ ತೊರೆಯುವುದು (labour turnover) ಅದರ ಅರ್ಥ, ವ್ಯಾಖ್ಯಾನ, ನೌಕರರು ಉದ್ಯೋಗ ತೊರೆಯಲು ಕಾರಣಗಳು, ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವಂತಹ ಪರಿಣಾಮಗಳು, ಇದರಿಂದ ಕಂಪನಿಯ ಅಭಿವೃದ್ಧಿಯ ಮೇಲಾಗುವ ಗಂಭೀರ ಪರಿಣಾಮಗಳು ಹಾಗೂ ಮಾನವ ಸಂಪನ್ಮೂಲ ವಿಭಾಗವು ನೌಕರರು ಉದ್ಯೋಗ ತೊರೆಯದ ಹಾಗೆ ಕಾರ್ಮಿಕರ ನಿರ್ವಹಣೆ ಹಾಗೂ ಅದರ ಮಾರ್ಗೋಪಾಯಗಳ ಬಗ್ಗೆ ವಿವರಿಸಲಾಗಿದೆ. ಡಾ. ಶಿವರಾಜ ಬಿ.ಇ. ಸಹ ಪ್ರಾಧ್ಯಾಪಕರು, ಆಕ್ಸ್ಫರ್ಡ್ ಕಾಲೇಜು, ಎಚ್.ಎಸ್.ಆರ್.ಬಡಾವಣೆ, ಬೆಂಗಳೂರು - 560102 ಮನುಷ್ಯ ಸಂಘ ಜೀವಿ. ಏಕಾಂಗಿಯಾಗಿ ಬದುಕಲಾರ, ಬದುಕಿದರೂ ಅವನು ಶೂನ್ಯದಿಂದ ಏನನ್ನೂ ಸೃಷ್ಟಿಸಲಾರ. ಮನುಷ್ಯ ಏಕಾಂಗಿಯಾಗಿ ಬದುಕಬಹುದು ಇಲ್ಲವೇ ಆಲೋಚಿಸಬಹುದೇ ಹೊರತು ಸ್ವತಂತ್ರವಾಗಿ ಯಾವುದನ್ನೂ ಉತ್ಪಾದಿಸಲು ಮತ್ತು ಸೃಷ್ಠಿಸಲು ಸಾಧ್ಯವಾಗುವುದಿಲ್ಲ. ಮಾನವ ಹುಟ್ಟಿನಿಂದ, ತನ್ನ ಬುದ್ಧಿಶಕ್ತಿ ಹಾಗೂ ಆಲೋಚನಾಶಕ್ತಿಯಿಂದಾಗಿಯೇ ಪ್ರಾಣಿಗಳಿಗಿಂತ ಭಿನ್ನ ನೆನೆಸಿಕೊಂಡಿದ್ದಾನೆ. ಮಾನವ ಆಲೋಚಿಸಿದಂತೆಲ್ಲಾ ತನ್ನ ದೈಹಿಕ ಸಾಮರ್ಥ್ಯ ಮತ್ತು ವಿವೇಚನಾ ಶಕ್ತಿಯಿಂದಾಗಿ ಇತರೆ ಜೀವರಾಶಿಗಳಿಗಿಂತ ಭಿನ್ನವಾಗಿ ಬದುಕನ್ನು ಕಟ್ಟಿಕೊಂಡಿದ್ದಾನೆ. ಇದನ್ನೇ ನಾವು ತೊಡಗಿಸಿಕೊಳ್ಳುವುದು ಅಥವಾ ಕ್ರಿಯಾಶಕ್ತಿ ಎಂದು ಕರೆಯಬಹುದು. ಮಾನವ ಕೈಗೊಳ್ಳುವ ಪ್ರತಿಯೊಂದು ಕೆಲಸ ಆತನ ಸಾಮಥ್ರ್ಯದ ಮೇಲೆ ನಿರ್ಧಾರವಾಗುವುದರಿಂದ ಅದನ್ನು ಸಂಪನ್ಮೂಲ ಎಂದು ಪರಿಗಣಿಸಬಹುದು.
ಪೀಠಿಕೆ:
ಪ್ರತಿಯೊಬ್ಬ ವ್ಯಕ್ತಿಯ ಮಹತ್ತರವಾದ ಕನಸು ಕಾಣಲು ಹಾಗೂ ಆ ಕನಸುಗಳನ್ನು ಸಾಕಾರಗೊಳಿಸಿಕೊಂಡು ಎತ್ತರದ ಸ್ಥಾನಕ್ಕೇರಲು ಮತ್ತು ಜೀವನದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಮರ್ಥನಾಗುವಂತೆ ಮಾಡಲು ಭಾಷೆ ಎಂಬ ಸಾಧನೆ ಅತ್ಯಗತ್ಯ. ಈ ಹಿನ್ನಲೆಯಲ್ಲಿ ಅಭಿವೃದ್ದಿಯ ಪಯಣವು ಸುಗಮವಾಗಿ ಸಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ಹೊರಹೊಮ್ಮಿ ಸಮಾಜದ ಏಳಿಗೆಗಾಗಿ ಕಾಣಿಕೆಯನ್ನು ಹಿಂತಿರುಗಿಸುವ ಸ್ಥಾನದಲ್ಲಿ ಭಾಷೆಯ ಮಹತ್ವ ಅಧಿಕ. ಯಾವುದಾದರು ಒಂದು ವಿಷಯವನ್ನು ಬೇರೆಯವರಿಗೆ ತಲುಪಿಸುವಲ್ಲಿ ಭಾಷೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾಷೆ ಒಂದೇ ಆಗಿದ್ದರೆ ಸಂವಹನವು ಅತ್ಯುತ್ತಮವಾಗಿಯೂ ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿಯೂ ಮತ್ತು ಪರಿಣಾಮಕಾರಿಯಾಗಿಯೂ ನಡೆಯುತ್ತದೆ. ರವಾನಿಸಬೇಕಾದ ಅಥವಾ ತಿಳಿಸಬೇಕಾದ ಮಾಹಿತಿ ಅಥವಾ ವಿಷಯ ಸರಿಯಾಗಿ ತಿಳಿಸಲು ಮಾತೃ ಭಾಷೆಯ ಸಂಹವನ ಬಹಳ ಪರಿಣಾಮಕಾರಿ ಎಂದರೆ ಅತಿಶಯೋಕ್ತಿಯಾಗಲಾರದು. ಪ್ರಸ್ತುತ ಸನ್ನಿವೇಶದಲ್ಲಿ ಕೈಗಾರಿಕೆಗಳಲ್ಲಿ ಆಂಗ್ಲ ಭಾಷೆಯನ್ನು ಹೆಚ್ಚು ಬಳಸುತ್ತಿರುವುದರಿಂದ ಅಲ್ಪ-ಸ್ವಲ್ಪ ಓದಿರುವ ಕಾರ್ಮಿಕರಿಗೆ ವಿಷಯಗಳನ್ನು ಸಲೀಸಾಗಿ ಗ್ರಹಿಸಲು ಕಷ್ಟವಾಗುತ್ತಿದೆ. ಭಾಷೆಯ ಸಮಸ್ಯೆಯು ಕಾರ್ಮಿಕರು ಮತ್ತು ಅಧಿಕಾರಿಗಳ ಮಧ್ಯೆ ದೊಡ್ಡ ಗೋಡೆಯಾಗಿ ಪರಿಣಮಿಸಿ ಕಂದಕವನ್ನು ಸೃಷ್ಟಿಸುತ್ತಿದೆ. |
Categories
All
Archives
May 2024
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |