HR KANNADA CONFERENCE
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2024
      • ಮಹಿಳಾ ಸಬಲೀಕರಣ ಪ್ರಶಸ್ತಿ-2024
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2024
      • ಲೇಖನಗಳಿಗಾಗಿ ಆಹ್ವಾನ-2024
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
    • 2023
      • ಮಹಿಳಾ ಸಬಲೀಕರಣ ಪ್ರಶಸ್ತಿ-2023
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2024
      • ಮಹಿಳಾ ಸಬಲೀಕರಣ ಪ್ರಶಸ್ತಿ-2024
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2024
      • ಲೇಖನಗಳಿಗಾಗಿ ಆಹ್ವಾನ-2024
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
    • 2023
      • ಮಹಿಳಾ ಸಬಲೀಕರಣ ಪ್ರಶಸ್ತಿ-2023
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
www.niratanka.org

ಎಲ್ಲಾ ಸಂಪನ್ಮೂಲಗಳ ಯಜಮಾನನಾದ ಮಾನವ ಸಂಪನ್ಮೂಲ

11/30/2019

1 Comment

 
Picture
ಸೌಂದರ್ಯ ರಮೇಶ ಕಂಠೆಪ್ಪನವರ
ಕೇಶ್ವಾಪುರ, ಹುಬ್ಬಳ್ಳಿ

ಮಾನವ ಸಂಪನ್ಮೂಲ ಎಂದರೆ ವ್ಯಕ್ತಿಗಳ ಮೌಲ್ಯಗಳು, ನಂಬಿಕೆಗಳು, ಕೌಶಲ್ಯ, ದಕ್ಷತೆ, ಸ್ಪೂರ್ತಿ, ತೀರ್ಮಾನಗಳನ್ನು ಧೈರ್ಯ ಇವೆಲ್ಲವುಗಳ ಸುಮಧುರ ಯೋಗ್ಯ ಮಿಶ್ರಣ ಎಂದು ಹೇಳಬಹುದು ಅಥವಾ ಮಾನವ ಸಂಪನ್ಮೂಲ ಎಂದರೆ ಜನರಲ್ಲಿನ ಜ್ಞಾನ, ಸೃಜನಾತ್ಮಕ ಶಕ್ತಿಯಲ್ಲಿನ ಚತುರತೆಗಳು ಎಂದು ಹೇಳಬಹುದು.
​
ಮಾನವ ಸಂಪನ್ಮೂಲ ಎಂದರೆ:-
ಮಾ- ಮಾದರಿಗೊಳಿಸುವುದು
ನ- ನವೀನತೆಯನ್ನು ತರುವುದು
ವ- ವ್ಯವಸ್ಥೆಗೊಳಿಸುವುದು

ಒಂದು ಸಮಾಜದಲ್ಲಿರುವ ಒಟ್ಟಾರೆ ಯೋಗ್ಯ ಗುಣಾತ್ಮಕ ಮತ್ತು ಯೋಗ್ಯ ಪ್ರಮಾಣಾತ್ಮಕ ಮಾನವ ಸ್ವತ್ತು ಅಥವಾ ಮಾನವರೆಂಬ ಆಸ್ತಿಗೆ ಮಾನವ ಸಂಪನ್ಮೂಲವೆಂದು ಕರೆಯುತ್ತಾರೆ. ಮಾನವ ಸಂಪನ್ಮೂಲವು ದೇಶವು ನಂಬಿಕೆ ಇಡಬಹುದಾದ ದೇಶದ ಅಮೋಘ ಆಸ್ತಿ. ಇದು ಕೆಲಸದಲ್ಲಿ ನಿರತರಾಗಿರುವ ವ್ಯಕ್ತಿಗಳನ್ನು ಎತ್ತಿ ತೋರಿಸುತ್ತದೆ. ಮಾನವ ಸಂಪನ್ಮೂಲವು ಅತ್ಯಂತ ವಿಶೇಷವಾದ ಮತ್ತು ಅರ್ಥಪೂರ್ಣವಾದುದ್ದಲ್ಲದೇ ಉತ್ಪಾದನಾ ಕಾರ್ಯದಲ್ಲಿ ಸಕ್ರೀಯವಾಗಿ ಪಾತ್ರ ವಹಿಸುವ ಅಂಶ. ಸ್ವಾಭಾವಿಕ ಸಂಪನ್ಮೂಲವೇ ಇರಲಿ ಅಥವಾ ಕೃತಕ ಸಂಪನ್ಮೂಲವೇ ಇರಲಿ. ಮಾನವನೇ ಈ ಎಲ್ಲ ಸಂಪನ್ಮೂಲಗಳ ಯಜಮಾನ. ಉತ್ಪಾದನೆ ಮತ್ತು ಗುಣಾತ್ಮಕತೆಗಳೆರಡರಲ್ಲೂ ಮಾನವನೇ ಪ್ರಮುಖ ಪಾತ್ರವಹಿಸಬಲ್ಲ. ಮಹತ್ವದ ವೈಚಾರಿಕ ಶಕ್ತಿಯುಳ್ಳ ಹಾಗೂ ನಿರಂತರ ಕಾರ್ಯಸಾಧನೆಯುಳ್ಳ ಅದ್ಭುತ ಶಕ್ತಿಯೇ ಮಾನವನ ಈ ಧೀಶಕ್ತಿ.

ಮಾನವ ಸಂಪನ್ಮೂಲವು ಸಾಮರ್ಥ್ಯ ಮತ್ತು ಹೆಚ್ಚಿನ ಉತ್ಪಾದನಾ ಶಕ್ತಿ ಅವಲಂಬಿಸಿರುವುದು. ನೌಕರರ ಚಾತುರ್ಯವನ್ನು ಆರ್ಥಿಕ ಅಭಿವೃದ್ಧಿಯ ಎಲ್ಲ ವಿಧಾನಗಳ ಕೇಂದ್ರ ಶಕ್ತಿಯೇ ಮಾನವ ಸಂಪನ್ಮೂಲ ಶಕ್ತಿ. ಕ್ಷೀಣ ದಿಕ್ಕಿನತ್ತ ಸಾಗುತ್ತಿರುವ ಸಾಮಾಜಿಕ ಪರಿಸ್ಥಿತಿ, ಎಲ್ಲ ರಂಗಗಳಲ್ಲಿಯೂ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಮನೋಭಾವನೆ ಮತ್ತು ತಾಂತ್ರಿಕ ಜಗತ್ತಿನಲ್ಲಾಗುತ್ತಿರುವ ತ್ವರಿತ ಅಭಿವೃದ್ಧಿಗಳು ದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಮಾನವ ಸಂಪನ್ಮೂಲ ಒಂದು ಮುಖ್ಯಾಂಶವಾಗಲು ಕಾರಣೀಭೂತವಾದವು. ಒಂದಿಲ್ಲೊಂದು ಕಾರಣದಿಂದ ಬೇರೆ ಸಂಪನ್ಮೂಲಗಳು ಬರಿದಾಗಬಹುದು. ಆದರೆ ಎಂದೆಂದಿಗೂ ಬರಿದಾಗದ ಸಂಪನ್ಮೂಲವೆಂದರೆ ಅದು ಮಾನವ ಸಂಪನ್ಮೂಲ ಮಾತ್ರ. ಮಾನವ ಸಂಪನ್ಮೂಲವೇ ನಮ್ಮೆಲ್ಲ ಸಾಮಾಜಿಕ, ಸಾಂಪತ್ತಿಕ ಮತ್ತು ಇತರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ.

ಒಂದು ಸಂಘ-ಸಂಸ್ಥೆ ಅಥವಾ ಕಂಪನಿಗೆ ಸೇರಿದ ಎಲ್ಲ ಸ್ವತ್ತು ಅಥವಾ ಚರಾಚರ ಆಸ್ತಿಗಳಲ್ಲಿ ಮಾನವ ಸಂಪನ್ಮೂಲವೆಂಬ ಆಸ್ತಿಯ ವ್ಯವಸ್ಥಾಪನೆ ಮತ್ತು ಆಡಳಿತ ಮಾಡುವುದು ಹೆಚ್ಚು ಕಠಿಣವಾದುದ್ದು. ಏಕೆಂದರೆ ಮಾನವನ ವರ್ತನೆ, ನಡವಳಿಕೆ ಎಲ್ಲರ ಊಹೆಗೂ ಮಿರಿದ್ದು. ಅದು ನಿರಂತರ ಚಲನಶೀಲವಾದದ್ದು. ವ್ಯಕ್ತಿಯಿಂದ ವ್ಯಕ್ತಿಗೆ ಕಾಲದಿಂದ ಕಾಲಕ್ಕೆ ಬೇರೆ ಬೇರೆಯಾಗಿರುತ್ತದೆ. ಮಾನವನ ಜೈವಿಕ ಮತ್ತು ಸಾಂಸ್ಕೃತಿಕ ಲಕ್ಷಣ ಒಂದೇ ತೆರನಾಗಿದ್ದರೂ ಕೂಡ, ಮಾನವ ಜೀವಿಗಳ ಬಾಹ್ಯಾಚಹರೆಗಳೂ ಭಿನ್ನವಾಗಿರುವುದಲ್ಲದೇ ಆ ಜೀವಿಗಳ ಶಕ್ತಿ ಸಾಮರ್ಥ್ಯಗಳು ಭಿನ್ನವಾಗಿರುತ್ತದೆ. ಆದುದರಿಂದ ಯಾವುದೇ ಒಂದು ಸಂಘ-ಸಂಸ್ಥೆ ದೀರ್ಘಾವಧಿಯವರೆಗೆ ಯಶಸ್ವಿಯಾಗಿ ಮುಂದುವರೆಯಬೇಕಾದರೆ ಆ ಸಂಘ ಸಂಸ್ಥೆಯ ಮಾನವ ಸಂಪನ್ಮೂಲವೇ ಅಂಥ ಯಶಸ್ವಿಗೆ ಕಾರಣ. ಇಂತಹದೇ ಒಂದು ಸಂದರ್ಭದಲ್ಲಿ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ಎಂದಿದ್ದಾರೆ. ದೇಶದ ನಿಜವಾದ ಶಕ್ತಿ ಎಂದರೆ ದೇಶದ ಪ್ರಜೆಯ ಮನಸ್ಸು ಮತ್ತು ದೇಹವನ್ನು ಅಭಿವೃದ್ಧಿಪಡಿಸುವುದು ಎಂದಿದ್ದಾರೆ.

ಮಾನವ ಸಂಪನ್ಮೂಲದ ಉದ್ದೇಶವೆಂದರೆ ಮಾನವ ಸಂಪನ್ಮೂಲಗಳು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕು. ನೌಕರರ ಚತುರತೆ ಮತ್ತು ಜ್ಞಾನವನ್ನು ಸಂಸ್ಥೆಯ ಗುರಿಗಳನ್ನು ಮುಟ್ಟುವ ಸಲುವಾಗಿ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕು. ಸಂಸ್ಥೆಯಲ್ಲಿ ಒಳ್ಳೆಯ ನೈತಿಕ ಮಟ್ಟ ಮತ್ತು ನೌಕರರಲ್ಲಿ ಮತ್ತು ಮಧುರ ಸಂಬಂಧಗಳಿರುವಂತೆ ನೋಡಿಕೊಳ್ಳಬೇಕು. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲಾ ಜನರು, ಆತ್ಮ ಗೌರವವನ್ನು ಹೊಂದಿ ಕೆಲಸಗಳನ್ನು ಚೆನ್ನಾಗಿ ಮಾಡುವಂಥ ಒಂದು ಒಳ್ಳೆಯ ವಾತಾವರಣವನ್ನು ನಿರ್ಮಿಸುವುದು. ಪ್ರತಿಯೊಬ್ಬ ವ್ಯಕ್ತಿಯು ಒಂದು ದೊಡ್ಡ ಆಸ್ತಿ ಎಂದು ತಿಳಿದುಕೊಂಡು, ಒಬ್ಬರನ್ನೊಬ್ಬರು ಗೌರವಿಸುವಂತೆ ಮಾಡುವುದು. ಜನರನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸುವುದರಲ್ಲಿ ಒಂದು ಬಗೆಯ ನಾಯಕತ್ವವನ್ನು ಹೊಂದಿದಂತೆ ಮಾಡುವುದು. ಸಂಸ್ಥೆಯ ಒಳಗೆ ಮತ್ತು ಹೊರಗೆ ನೀತಿಯುತ ಧೋರಣೆ ಮತ್ತು ವರ್ತನೆಯನ್ನು ಕೆಲಸಗಾರರೂ ಹೊಂದಿರುವಂತೆ ನೋಡಿಕೊಳ್ಳುವುದು.
 
ಮಾನವ ಸಂಪನ್ಮೂಲದ ಕಾರ್ಯಗಳು:
ಮಾನವ ಸಂಪನ್ಮೂಲದ ಕೆಲಸಗಳನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು.
  1. ಆಡಳಿತಾತ್ಮಕ ಕೆಲಸಗಳು
  2. ಕಾರ್ಯರೂಪದ ಕೆಲಸಗಳು.
ಮಾನವ ಸಂಪನ್ಮೂಲದ ಕಾರ್ಯವನ್ನು ತೋರಿಸುತ್ತವೆ.
​
ಆಡಳಿತಾತ್ಮಕ ಕೆಲಸಗಳು:- ಯೋಜನೆ, ಸಂಘಟಿಸುವುದು, ನಿರ್ದೇಶಿಸುವುದು, ನಿಯಂತ್ರಿಸುವುದು.
ಕಾರ್ಯರೂಪದ ಕೆಲಸಗಳು:- ನೇಮಕಾತಿ ಕೆಲಸ, ಮಾನವ ಸಂಪನ್ಮೂಲ ಅಭಿವೃದ್ಧಿ, ಪರಿಹಾರೋಪಾಯಗಳು, ಒಗ್ಗೂಡಿಸುವಿಕೆ, ನಡೆಸಿಕೊಂಡು ಹೋಗುವುದು.
 
ಮಾನವ ಸಂಪನ್ಮೂಲದ ಪ್ರಾಮುಖ್ಯತೆ:
ಮಾನವ ಸಂಪನ್ಮೂಲದ ನಿರ್ವಹಣೆಯ ಪ್ರಾಮುಖ್ಯತೆಯನ್ನು ನಾಲ್ಕು ಮಜಲುಗಳಲ್ಲಿ ವಿವೇಚಿಸಬಹುದು:- ಕಂಪನಿಗಳು, ಉದ್ಯೋಗದ ದೃಷ್ಟಿ, ಸಾಮಾಜಿಕ ಮತ್ತು ರಾಷ್ಟ್ರೀಯ ಸಂಘಟಿತ ಉದ್ದಿಮೆಗಳು. 

Picture
Join Our Conference Google Group
ಮಾನವ ಸಂಪನ್ಮೂಲದ ಮಹತ್ವಕ್ಕೆ ಕಾರಣಗಳು (Reasons for Importance of HRM):
ಇಂದಿನ ಸುಧಾರಿತ ಕಾಲದಲ್ಲಿ ಅತ್ಯದ್ಭುತವಾದ ಯಂತ್ರಗಳ, ಕಂಪ್ಯೂಟರ್ಗಳ ಮುಂತಾದ ಅನೇಕ ನಮೂನೆಯ ಅತ್ಯುತ್ತಮ ಸಾಧನೆ ಸಲಕರಣೆಗಳು ಬಂದಿವೆ. ಅದರೆ ಅವುಗಳನ್ನು ನಡೆಸುವವರು ಮನುಷ್ಯರೆ ತಾನೇ. ಉತ್ತಮ ಮತ್ತು ಎಲ್ಲಾ ದೃಷ್ಟಿಯಿಂದಲೂ ಯೋಗ್ಯ ವ್ಯಕ್ತಿಗಳು ಇಲ್ಲದಿದ್ದರೆ ಅವುಗಳೆಲ್ಲವೂ ನಿರರ್ಥಕ. ಆದ್ದರಿಂದಲೇ ಮಾನವ ಶಕ್ತಿ ಸಾಮರ್ಥ್ಯಗಳು ಎಲ್ಲಕ್ಕಿಂತ ಮುಖ್ಯವಾದದ್ದು. ತಾಂತ್ರಿಕತೆಯಲ್ಲಿ ತೀವ್ರ ಸುಧಾರಣೆ, ಕಂಪ್ಯೂಟರ್ಗಳ ಸ್ವಯಂ ಚಾಲಕ ಮತ್ತು ಸ್ವಯಂ ನಿಯಂತ್ರಿತ ಯಂತ್ರಗಳು ಎಲ್ಲೆಡೆಯಲ್ಲೂ ಚಾಲ್ತಿಗೆ ಬಂದಿವೆ. ಹಾಗಿದ್ದರೂ ಅಂತರರಾಷ್ಟ್ರೀಯ ಖ್ಯಾತಿಯ ಬಹುರಾಷ್ಟ್ರೀಯ ಕಂಪೆನಿಗಳೂ ಒಳಗೊಂಡಂತೆ ದೇಶೀಯ ಕಂಪನಿಗಳೂ ಸಹ ನುರಿತ ಮತ್ತು ತರಬೇತಿ ಹೊಂದಿದ ನೌಕರರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ.
 
ಮಾನವ ಸಂಪನ್ಮೂಲದ ಕ್ರಮಗಳು (Components of Human Resource):
ಮಾನವ ಸಂಪನ್ಮೂಲದ ಯೋಜನೆ, ಮಾನವ ಸಂಪನ್ಮೂಲದ ಪದ್ಧತಿ, ಮಾನವ ಸಂಪನ್ಮೂಲದ ವ್ಯವಸ್ಥಾಪನೆ, ಮಾನವ ಸಂಪನ್ಮೂಲದ ಅಭಿವೃದ್ಧಿ, ಮಾನವ ಸಂಪನ್ಮೂಲದ ಸಂಬಂಧಗಳು, ಮಾನವ ಸಂಪನ್ಮೂಲದ ಬಳಕೆ, ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಲೆಕ್ಕಗಳು, ಮಾನವ ಸಂಪನ್ಮೂಲದ ಲೆಕ್ಕ ತಪಾಸಣೆ.
 
ಮಾನವ ಸಂಪನ್ಮೂಲದ ಅವಶ್ಯಕತೆಗಳು:
ಪುನಃಸ್ಥಳೀಕರಣ, ನೌಕರರ ಬಂದು ಹೋಗುವಿಕೆ, ವಿಸ್ತರಣೆ ಮತ್ತು ವೈವಿಧ್ಯತೆ, ಹೊಸ ಬೇಡಿಕೆಗಳನ್ನು ಪೂರೈಸುವುದು, ಮಾನವ ಶಕ್ತಿಯ ಮೌಲ್ಯೀಕರಣ.
 
ಮಾನವ ಸಂಪನ್ಮೂಲದ ಗುಣಲಕ್ಷಣಗಳು:
ವೈಯಕ್ತಿಕ ಅವಶ್ಯಕತೆಗಳ ಅಂದಾಜು, ಸದ್ಯದ ನೌಕರರ ಪಟ್ಟಿ, ಬಾಹ್ಯ ಮೂಲಗಳನ್ನು ತಟ್ಟುವುದು. ಹೆಚ್ಚು ಉತ್ತಮವಾದ ಕಾರ್ಯಪರಿಸ್ಥಿತಿಗಳು.
 
ಮಾನವ ಸಂಪನ್ಮೂಲ ಯೋಜನೆಯ ಉದ್ದೇಶಗಳು (Objectives of Human Resource Planning):
ಮಾನವ ಸಂಪನ್ಮೂಲದ ಗರಿಷ್ಠ ಉಪಯೋಗವಾಗುವಂತೆ ನಿಶ್ಚಿತ ಪಡಿಸುವುದು. ಭವಿಷ್ಯತ್ತಿನ ಭರ್ತಿಯ ಮಟ್ಟವನ್ನು ನಿರ್ಧರಿಸುವುದು ಕಾಲಕಾಲಕ್ಕೆ ಅವಶ್ಯಬೀಳುವ ಮಾನವ ಸಂಪನ್ಮೂಲ ದೊರಕುವುದೆಂಬುವರ ಬಗ್ಗೆ ನಿಯಂತ್ರಣದ ಕ್ರಮಗಳನ್ನು ನಿಶ್ಚಿತ ಪಡಿಸುವುದು ತರಬೇತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಧಾರವಾಗುವಂತಹ ಭವಿಷ್ಯತ್ತಿನಲ್ಲಿ ಕಂಪನಿಗೆ ಅರ್ಹ ಚಾತುರ್ಯವಿರುವ ಜನರನ್ನು ಪೂರೈಸುವ ಬಗ್ಗೆ ಮುಂಚಿತವಾಗಿ ಹೇಳುವ ಸಾಮರ್ಥ್ಯ ಪಡೆಯುವುದು. ಹೊಸ ಯೋಜನೆಗಳಿಗೆ ಬೇಕಾಗುವ ಮಾನವ ಸಂಪನ್ಮೂಲದ ಖರ್ಚು-ವೆಚ್ಚಗಳನ್ನು ಕುರಿತು ನಿಖರವಾಗಿ ಹೇಳುವುದು. ವಿಸ್ತರಣೆ ಮಾಡುವ ಮತ್ತು ಭಿನ್ನತೆಯನ್ನು ತರುವ ಕಾರ್ಯಕ್ರಮಗಳ ಅವಶ್ಯಕತೆಗಳನ್ನು ಪೂರೈಸುವುದು. ನೌಕರರ ಬರು-ಹೋಗುವಿಕ ಅವರ ಬರಹೋಗುವಿಕೆಯನ್ನು ಕಡಿಮೆಗೊಳಿಸುವಿಕೆ ಮತ್ತು ಇದರಿಂದ ಸೃಷ್ಠಿಯಾಗುವ ಖಾಲಿಸ್ಥಾನಗಳ ಭರ್ತಿಮಾಡುವಿಕೆಯ ಸಾಧ್ಯತೆಗಳನ್ನು ಮುಂಚಿತವಾಗಿ ಗ್ರಂತಿಕೆ ಮಾಡುವುದು. ಅರ್ಹರಾದ ನೌಕರರು ಸರಿಯಾದ ಸಂಖ್ಯೆಯಲ್ಲಿ ಸರಿಯಾದ ವೇಳೆ ಮತ್ತು ಸ್ಥಳದಲ್ಲಿ ದೊರಕದೇ ಉಂಟಾಗುವ ಅಸಮತೋಲನವನ್ನು ಸರಿಯಾಗಿಸುವುದು ಎಲ್ಲಿ ಮಾನವ ಬಲಕಮ್ಮಿಯಾಗುತ್ತದೆ ಮತ್ತು ಎಲ್ಲಿ ಹೆಚ್ಚು ಬೇಕಾಗುತ್ತದೆ ಎಂಬುದನ್ನು ಅಂದಾಜು ಮಾಡುವುದು.

ಮಾನವ ಸಂಪನ್ಮೂಲವು ತಂತ್ರದ ಮೂಲಕ, ಸಿಬ್ಬಂದಿಯ ಕ್ಷೇತ್ರದಲ್ಲಿ ಸಂಸ್ಥೆಯ ಉದ್ಯೋಗಗಳ ಮನೋಭಾವನೆ, ಹೊರ ನೋಟ, ದೃಷ್ಠಿಕೋನ, ಜಿಜ್ಞಾಸೆ, ಆಚರಣೆ ಇವೇ ಮೊದಲಾದ ಮೂಲಭೂತ ಬದಲಾವಣೆಗಳಾಗಿದ್ದರಿಂದ ಮುಂದೆ ಉದ್ಭವಿಸಬಹುದಾದ ಆಹ್ವಾನಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು ಅವಶ್ಯಕವಾಯಿತು ಇದಕ್ಕಾಗಿ ಪ್ರತಿಯೊಂದು ಸಂಸ್ಥೆಗೆ ತನ್ನ ಉದ್ಯೋಗಿಗಳ ಜಾಣ್ಮೆ, ನೈಪುಣ್ಯತೆ, ಶಕ್ತಿ-ಸಾಮರ್ಥ್ಯ ಮತ್ತು ಮನೋಭಾವನೆಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಉಂಟಾಯಿತು. ಇದಕ್ಕಾಗಿ ಅನೇಕ ಸಂಸ್ಥೆಗಳು ಮಾನವ ಸಂಪನ್ಮೂಲ ಅಭಿವೃದ್ಧಿಯ ಧೋರಣೆಗಳನ್ನು ಅನುಸರಿಸತೊಡಗಿದವು. ಇತ್ತೀಚಿನ ವರ್ಷ ಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಂಸ್ಥೆಗಳು ಮಾನವ ಸಂಪನ್ಮೂಲ ಅಭಿವೃದ್ಧಿಯ ಧೋರಣೆಗಳನ್ನು ಅನುಸರಿಸತೊಡಗಿವೆ.

ವ್ಯವಹಾರದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯ, ಜಾಣ್ಮೆ, ಮತ್ತು ಪ್ರವೃತ್ತಿಗಳನ್ನು ಸಂಸ್ಥೆಯ ಉದ್ಯೋಗಿಗಳಲ್ಲಿ ಅಭಿವೃದ್ಧಿಪಡಿಸುವುದು ಮಾನವ ಸಂಪನ್ಮೂಲ ಅಭಿವೃದ್ಧಿ ತಂತ್ರಗಳ ಮುಖ್ಯ ಗುರಿಯಾಗಿದೆ. ಆದ್ದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿಯ ಮಾನವ ಸಂಪನ್ಮೂಲ ನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ. ಹೊಸ ಮಾನವ ಸಂಪನ್ಮೂಲ ವಿಕಸನದ ಮಾರ್ಗವು ಅತ್ಯಾಧುನಿಕ ತಾಂತ್ರಿಕತೆ, ಅತ್ಯಧುನಿಕ ಸ್ಥಾವರ ಮತ್ತು ಯಂತ್ರೋಪಕರಣಗಳು ಮತ್ತು ಮಾನವನ ಬದಲಾಗುತ್ತಿರುವ ಪ್ರವೃತ್ತಿಗಳು ಮತ್ತು ಮನೋಭಾವನೆಗಳಿಗೆ ಹೊಂದಾಣಿಕೆಯಾಗುವಂತ ಸಂಸ್ಥೆಯ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯನ್ನು ಎತ್ತಿ ಹಿಡಿಯುತ್ತದೆ.

ತರಬೇತಿ ಮತ್ತು ಅಭಿವೃದ್ಧಿಯ ಕಾರ್ಯಕ್ರಮಗಳು ಸಂಸ್ಥೆಯ ಅಭಿವೃದ್ಧಿಯ ಅಂಗಗಳಾಗಿದ್ದರೆ, ಅವು ಮಾನವ ಸಂಪನ್ಮೂಲ ಅಭಿವೃದ್ಧಿಯ ಅತ್ಯಂತ ನಿರ್ಣಾಯಕ ಅಂಗಗಳೂ ಆಗಿರುತ್ತದೆ. ಏಕೆಂದರೆ ತರಬೇತಿ ಮತ್ತು ಅಭಿವೃದ್ಧಿಯ ಕಾರ್ಯಕ್ರಮಗಳು ಸಂಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ. ಸಂಸ್ಥೆಯು ಎಲ್ಲ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುತ್ತವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಯತ್ನಗಳನ್ನು ತರಬೇತಿ ಮತ್ತು ಶಿಕ್ಷಣ ಕೊಡುವ ಕಾರ್ಯಕ್ರಮಗಳ ರೂಪದಲ್ಲಿ ಮತ್ತು ಈ ಕಾರ್ಯಕ್ರಮಗಳಿಗೆ ಒಳಪಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ, ರೂಪದಲ್ಲಿ ವ್ಯಕ್ತಪಡಿಸಲಾಗುತ್ತದೆ. ಏಕೆಂದರೆ ಇವೆರಡರ ಉದ್ದೇಶ ಒಂದೇ ಆಗಿದೆ. ಎಲ್ಲಾ ವಿಧದಲ್ಲೂ ಮಾನವನನ್ನು ಹೆಚ್ಚು ಶಕ್ತಿಯುತವಾಗಿಯೂ ಮತ್ತು ಹೆಚ್ಚು ಯೋಗ್ಯ ವ್ಯಕ್ತಿಯಾಗುವಂತೆ ಮಾಡುವುದೇ ಮಾನವ ಸಂಪನ್ಮೂಲದ ನಿರ್ವಹಣೆಗಳು ಆದ್ಯಕರ್ತವ್ಯ. ಪ್ರತಿಯೊಂದು ಸಂಸ್ಥೆಯು ತನ್ನಲಿರುವ ಸಿಬ್ಬಂದಿಯ ಶಕ್ತಿ ಸಾಮಥ್ರ್ಯಗಳನ್ನೂ ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಯಾವುದೇ ಒಂದು ಔದ್ಯೋಗಿಕ ಸಂಸ್ಥೆಯು ತನ್ನ ಕಾಲು ಮೇಲೆ ತಾನು ನಿಲ್ಲಬಲ್ಲದು ಮತ್ತು ತನ್ನಂಥದೇ ಇತರ ಸಂಸ್ಥೆಯ ಸ್ಫರ್ಧೆಯನ್ನು ಎದುರಿಸಲು ಸಾಧ್ಯವಾಗುತ್ತದೆ.

ಸಿಬ್ಬಂದಿಯ ಶಕ್ತಿ ಸಾಮರ್ಥ್ಯಗಳನ್ನು ವೈಜ್ಞಾನಿಕವಾಗಿ ಬೆಳೆಸುವುದು ಸಂಸ್ಥೆಯ ಪ್ರಥಮ ಕರ್ತವ್ಯ. ಮಾನವ ಶಕ್ತಿಸಾಮರ್ಥ್ಯದ ಮೇಲೆ ಅಳಿವು-ಉಳಿವು ನಿಂತಿದೆ. ಸಂಪನ್ಮೂಲಗಳು ಬೆಳೆಸುವ ಕಾರ್ಯಕ್ರಮಗಳು ಪ್ರತಿ ಸಂಸ್ಥೆಯಲ್ಲಿ ಆಗಾಗ್ಗೇ ನಡದೇ ಇರುತ್ತದೆ. ಕೆಲಸಗಾರರು ಅಸಾಧಾರಣ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳೆಂದು ತಿಳಿಯಲಾಗುತ್ತದೆ. ಹೊಸ ವಿಧಾನವನ್ನು ಉಪಯೋಗಿಸಿ ನೌಕರರನ್ನು ಪ್ರೋತ್ಸಾಹಿಸುತ್ತದೆ. ಸಂಸ್ಥೆಯನ್ನು ಚೆನ್ನಾಗಿ ನಡೆಸಬೇಕೆಂಬ ಅಭಿಪ್ರಾಯ ಆಡಳಿತ ವರ್ಗದಲ್ಲಿ ಮೂಡುತ್ತಿದೆ. ಹೀಗಾಗಿ ನೌಕರರ ಅಭಿವೃದ್ಧಿಯು ಬಹಳ ಮುಖ್ಯವಾದದ್ದು. ಬಂದೂ ತಿಳಿದು ಆ ದೆಸೆಯಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ.

ಮಾನವ ಸಂಪನ್ಮೂಲವನ್ನು ಮತ್ತು ಆತನನ್ನು ಉತ್ತಮ ಪಡಿಸುವಲ್ಲಿ ಅನೇಕ ಹಾದಿಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ನೌಕರರ ತರಬೇತಿ, ಆಡಳಿತಾಧಿಕಾರಿಗಳೂ ಸೂಕ್ತ ತರಬೇತಿ. ಉದ್ಯೋಗವನ್ನು ಸರಿಯಾಗಿ ಆರಿಸುವುದು ಮತ್ತು ಅದರಲ್ಲಿ ಮುಂದೆ ಬರುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು. ಸೂಕ್ತ ಶಿಬಿರಗಳನ್ನು ನಡೆಸಿ ಶಿಬಿರಗಳಿಗೆ ಬಂದವರ ದಕ್ಷತೆಯನ್ನು ಹೆಚ್ಚಿಸುವುದು. ಹೊಸ ಯಂತ್ರಗಳು ಮತ್ತು ತಾಂತ್ರಿಕತೆಗಳ ಬಗ್ಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೆಲಸಗಾರರ ಮತ್ತು ಮೇಲಾಧಿಕಾರಿಗಳ ನಡುವೆ ಒಳ್ಳೆಯ ಸಂಬಂಧ ಇರುವಂತೆ ನೋಡಿಕೊಳ್ಳಬೇಕು. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಸೌಹಾರ್ದಯುತವಾದ ಸಂಬಂಧವನ್ನು ವೃದ್ಧಿಸುವಲ್ಲಿ ವ್ಯವಸ್ಥಾಪಕರಾದ ಮಾನವ ಸಂಪನ್ಮೂಲ ಅಧಿಕಾರಿಗಳ ಪಾತ್ರ ನಿರ್ಣಾಯಕವಾಗಿರುತ್ತದೆ.

ಕಾರ್ಮಿಕರ ಅವಶ್ಯಕತೆಗಳು, ಬೇಡಿಕೆಗಳು ಮತ್ತು ನಿರೀಕ್ಷೆಗಳು ಸಮರ್ಪಕವಾಗಿದ್ದು, ನ್ಯಾಯಸಮ್ಮತವೆನಿಸಿದರೆ ಅವುಗಳನ್ನು ಸಂಸ್ಥೆಯ ವ್ಯವಸ್ಥಾಪಕ ಮಂಡಳಿಯು ಮನ್ನಿಸಬೇಕು. ಸಂಸ್ಥೆಯ ಕಾರ್ಮಿಕರು ಅಥವಾ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಆಸಕ್ತಿ ವಹಿಸಿ ದುಡಿಯುವಂಥವರಾಗಿರಬೇಕು ಮತ್ತು ಅವರಿಗೆ ಕೆಲಸದಲ್ಲಿ ಸ್ಫೂರ್ತಿ, ತೃಪ್ತಿ ಸಿಗುವಂತಹ ವಾತಾವರಣವನ್ನು ಸಂಸ್ಥೆಯ ವ್ಯವಸ್ಥಾಪಕರು ನಿರ್ಮಿಸಬೇಕು. ತನ್ನ ಉದ್ಯೋಗಿಗಳು ತಮ್ಮ ಸಂಪೂರ್ಣ ಸಹಕಾರವನ್ನು ನೀಡುವಂತೆ ವ್ಯವಸ್ಥಾಪಕ ಮಂಡಳಿಯ ಸರ್ವ ರೀತಿಯಿಂದಲೂ ಪ್ರಯತ್ನಿಸಬೇಕು. ಸಂಸ್ಥೆಯ ಉದ್ಯೋಗಿಗಳು ತಾವೂ ವ್ಯವಸ್ಥಾಪಕರಂತೆ ಸಂಸ್ಥೆಯು ಅವಿಭಾಜ್ಯ ಅಂಗವಾಗಿರುವಿರೆಂಬ ನಂಬಿಕೆ ಉಳ್ಳವರಾಗಿರಬೇಕು. ಸಂಸ್ಥೆಯ ಹಿತವೇ ತಮ್ಮ ಹಿತವಾಗಿದೆಯೆಂದೂ ಬಲವಾದ ಭಾವನೆ ಹೊಂದಿರಬೇಕು.
​
ಸಂಸ್ಥೆಯ ಉದ್ಯೋಗಿಗಳು ತಾವೂ ಸಹ ವ್ಯವಸ್ಥಾಪಕ ಉತ್ಪಾದನಾ ಸಾಮರ್ಥ್ಯವನ್ನು ಅಧಿಕಗೊಳಿಸಲು ಮತ್ತು ತಮ್ಮ ಮೂಲಕ ಸಂಸ್ಥೆಯ ದಕ್ಷತೆ ಸುಧಾರಿಸಲು ವ್ಯವಸ್ಥಾಪಕ ಮಂಡಳಿಯೊಂದಿಗೆ ಶ್ರಮಿಸಬೇಕು. ಸಂಸ್ಥೆಯ ಬಗೆಗೆ ತನ್ನ ಉದ್ಯೋಗಿಗಳು ಒಳ್ಳೆಯ ಅಭಿಪ್ರಾಯವನ್ನು ಹೊಂದಿರುವಂತೆ ಮತ್ತು ಸಂಸ್ಥೆಯ ಬಗೆಗೆ ಭಾರೀ ಅಭಿಮಾನವುಳ್ಳವರಂತೆ ಮಾಡಲು ವ್ಯವಸ್ಥಾಪಕರು ಪ್ರಯತ್ನಿಸಬೇಕು. ಸಂಸ್ಥೆಯ ವ್ಯವಸ್ಥಾಪಕರು ಸಂಸ್ಥೆಯ ಉದ್ಯೋಗಿಗಳೂ ಮಾನವರಾಗಿದ್ದಾರೆಂಬುದನ್ನು ತಿಳಿದು ಅವರನ್ನು ಒಳ್ಳೆಯ ರೀತಿಯಿಂದ ಉಪಚರಿಸಿದರೆ ಉದ್ಯೋಗಿಗಳ ನೈತಿಕ ಮಟ್ಟು ಅಧಿಕವಾಗಿರುವುವರಲ್ಲಿ ಸಂಶಯವಿಲ್ಲ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಶಿಸ್ತನ್ನು ಕಾಯ್ದುಕೊಳ್ಳುವಂತೆ ವ್ಯವಸ್ಥಾಪಕರು ಪ್ರಯತ್ನಿಸಬೇಕು. ಸಂಸ್ಥೆಯ ಉದ್ಯೋಗಿಗಳ ಕುಂದು-ಕೊರತೆಗಳನ್ನು ಮತ್ತು ದೂರುದುಮ್ಮಾನಗಳನ್ನು ಆಲಿಸಿ, ಅವುಗಳನ್ನು ಪರಿಹರಿಸಲು ವ್ಯವಸ್ಥಾಪಕರು ಪ್ರಯತ್ನಿಸಬೇಕು. ತನ್ನ ಉದ್ಯೋಗಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು ವ್ಯವಸ್ಥಾಪಕರ ಆದ್ಯ ಕರ್ತವ್ಯವಾಗಿರುತ್ತದೆ. ಸಂಸ್ಥೆಯ ಕಾರ್ಮಿಕರು ಮತ್ತು ವ್ಯವಸ್ಥಾಪಕರ ನಡವಿನ ಅಂತರವನ್ನು ಕಡಿಮೆ ಮಾಡಿ, ಅವರ ಪರಸ್ಪರ ತಿಳಿದುಕೊಳ್ಳುವಂತಹ ಸನ್ನಿವೇಶವನ್ನು ವ್ಯವಸ್ಥಾಪಕರು ನಿರ್ಮಿಸಬೇಕು. ವ್ಯವಸ್ಥಾಪಕರು ಅತ್ಯುತ್ತಮ ಮಾನವ ಸಂಪನ್ಮೂಲವನ್ನು ರೂಪಿಸಿ ಉದ್ಯೋಗಿಗಳ ಹಿತವೂ ಸಂಸ್ಥೆಯ ಹಿತವಾಗಿದೆಯೆಂಬುದನ್ನು ತಿಳಿದುಕೊಳ್ಳಬೇಕು. ಒಟ್ಟಿನಲ್ಲಿ ಸಂಸ್ಥೆಯು ಉತ್ತಮವಾದ ಮತ್ತು ತೃಪ್ತಿಕರವಾದ ಮಾನವ ಸಂಪನ್ಮೂಲ ಯೋಜನೆಯ ಮೂಲಕ ಸಂಸ್ಥೆಯು ಮತ್ತು ಅದರ ಉದ್ಯೋಗಿಗಳ ಹಿತರಕ್ಷಣೆಯನ್ನು ಸಾಧಿಸಿ, ಸಂಸ್ಥೆಯ ವ್ಯವಹಾರವು ಯಶಸ್ವಿಯಾಗುವಂತೆ ಪ್ರಯತ್ನಿಸಬೇಕಾಗುತ್ತದೆ.

1 Comment
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ link
2/20/2023 09:17:07 am

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
[email protected]

Reply



Leave a Reply.

    Picture
    Nirathanka

    Categories

    All
    Awards 2017
    Awards 2018
    Awards 2019
    Awards 2020
    Awards 2021
    Awards 2022
    Awards 2023
    Awards 2024
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಸಮ್ಮೇಳನದ ಕುರಿತು ಅಭಿಪ್ರಾಯಗಳು
    ಹನಿಗವನ

    Archives

    January 2025
    May 2024
    January 2024
    November 2023
    September 2023
    December 2022
    November 2022
    November 2021
    March 2021
    November 2020
    July 2020
    November 2019
    October 2019


    Picture

    Human Resource Kannada Conference

    Join WhatsApp Channel

    Picture
    More Details

    Picture
    WhatsApp Group

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now

    Niratanka

    Human Resources Kannada Conference

    Leaders Talk


    RSS Feed

ಸೈಟ್ ನಕ್ಷೆ


ಸೈಟ್

  • ಸ್ವಾಗತ
  • ಸಮಿತಿಯ ಸದಸ್ಯರು​
  • ಮಾಧ್ಯಮ​
  • ಆನ್‍ಲೈನ್‍ ಗ್ರೂಪ್ಸ್
  • ಬ್ಲಾಗ್
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು

ನಮ್ಮ ಇತರೆ ಜಾಲತಾಣಗಳು

  • ​WWW.NIRATANKA.ORG
  • WWW.NIRUTAPUBLICATIONS.ORG

​ಪ್ರಶಸ್ತಿಗಳ ವಿಭಾಗ

  • CSR EXCELLENCE AWARD-2024
  • THE BEST WOMEN EMPOWERMENT ORGANISATION AWARD-2024
  • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
  • ಪ್ರಶಸ್ತಿ ಪುರಸ್ಕೃತರು (2017-2023)​

ಕನ್ನಡ ಸಮ್ಮೇಳನ

​ಕನ್ನಡ ಸಮ್ಮೇಳನ-2017
​ಕನ್ನಡ ಸಮ್ಮೇಳನ-2018
​ಕನ್ನಡ ಸಮ್ಮೇಳನ-2019
​ಕನ್ನಡ ಸಮ್ಮೇಳನ-2020
​ಕನ್ನಡ ಸಮ್ಮೇಳನ-2021
​ಕನ್ನಡ ಸಮ್ಮೇಳನ-2022
​ಕನ್ನಡ ಸಮ್ಮೇಳನ-2023
​ಕನ್ನಡ ಸಮ್ಮೇಳನ-2024

ಪಬ್ಲಿಕೇಷನ್ಸ್

  • LEADER'S TALK
  • NIRUTA'S READ & WRITE INITIATIVE​​
  • ​COLLABORATE WITH NIRUTA PUBLICATIONS

ನಿರಾತಂಕ

  • POSH
  • CSR
  • COLLABORATE WITH NIRATHANKA​

ಚಂದಾದಾರರಾಗಿ




Picture
Join Here

Copyright : Nirathanka 2021
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2024
      • ಮಹಿಳಾ ಸಬಲೀಕರಣ ಪ್ರಶಸ್ತಿ-2024
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2024
      • ಲೇಖನಗಳಿಗಾಗಿ ಆಹ್ವಾನ-2024
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
    • 2023
      • ಮಹಿಳಾ ಸಬಲೀಕರಣ ಪ್ರಶಸ್ತಿ-2023
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ