ಮಾನ್ಯರೇ
ನಿರಾತಂಕ ಸಂಸ್ಥೆಯ ವತಿಯಿಂದ ದಿನಾಂಕ 13.11.2021 ರಂದು ನಡೆದ ರಾಜ್ಯಮಟ್ಟದ ಐದನೇ ಕನ್ನಡ ಸಮ್ಮೇಳನ ಅತ್ಯಂತ ವ್ಯವಸ್ಥಿತವಾಗಿ ಹಾಗೂ ವೃತ್ತಿಪರತೆಯಿಂದ ನಡೆದಿದೆ. ನಿರಾತಂಕ ಸಂಸ್ಥೆಯ ಈ ಹಿಂದಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದವರಿಗೆ ಈ ಸಮ್ಮೇಳನದ ಅಚ್ಚುಕಟ್ಟುತನ, ವೃತ್ತಿಪರತೆ, ಅತಿಥಿಗಳ ಹಿರಿಮೆ, ಸ್ವಯಂ ಸೇವಕರ ಸಹೃದಯತೆ ವಿಶೇಷವೆನಿಸುವುದಿಲ್ಲ. ಯಾಕೆಂದರೆ ನಿರಾತಂಕ ಸಂಸ್ಥೆಯು ತನ್ನೆಲ್ಲಾ ಕಾರ್ಯಕ್ರಮಗಳನ್ನು ಇದೇ ಘನತೆ ಹಾಗೂ ಮಟ್ಟದಲ್ಲಿ ನಡೆಸಿಕೊಂಡು ಬಂದಿದೆ. ಹೀಗಾಗಿಯೇ ಇಂದು ನಿರಾತಂಕ ಕರ್ನಾಟಕದ ಮಾನವ ಸಂಪನ್ಮೂಲ ವೃತ್ತಿನಿರತರ ಬಹು ದೊಡ್ದ ಸಂಸ್ಥೆಯಾಗಿ ಬೆಳೆದು ನಿಂತಿದೆ. ನಿರಾತಂಕದ ಶ್ರೀ ರಮೇಶ್, ಶ್ರೀ ಕೆಂಪೇಗೌಡ, ಶ್ರೀ ಶೇಖರ್ ಗಣಗಲೂರು, ಶ್ರೀ ಗೋವಿಂದರಾಜು, ಶ್ರೀ ಮಹದೇವ್ ಮುಂತಾದವರಿಗೆ ನಮ್ಮ ವಿಶೇಷ ಧನ್ಯವಾದಗಳು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಸಮ್ಮೇಳನಕ್ಕೆ ಆರಿಸಿದ ವಿಷಯ ಸಮಂಜಸವಾಗಿತ್ತು. ಡಾ. ಸಿ.ಆರ್. ಚಂದ್ರಶೇಖರ್, ಡಾ. ಶುಭ ಮಧುಸೂಧನ್, ಕಾರ್ಖಾನೆಗಳ ನಿರ್ದೇಶಕರಾದ ಶ್ರೀ ಶ್ರೀನಿವಾಸ್, ಮುಂತಾದವರ ವಿಚಾರಗೋಷ್ಟಿಗಳು ಉಪಯೋಗಕಾರಿಯಾಗಿದ್ದವು. ಆದರೆ ಗೌರಿಶಂಕರದೆತ್ತರದ ಸಾಧನೆ, ನಿರೂಪಣೆ ಶ್ರೀ ಸದಾನಂದ ಮಯ್ಯರದು. ಎಂ.ಆರ್. ನಟರಾಜ್
0 Comments
|
|