ಡಾ. ಸಿ.ಆರ್. ಗೋಪಾಲ್
ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್, ಸಂಡೂರು
ಅಭ್ಯುದಯ ಅನೇಕ ಪ್ರಕ್ರಿಯೆಗಳನ್ನು ಅಪೇಕ್ಷಿಸುತ್ತದೆ. ಯಾವುದೇ ಸಮಾಜ ಪ್ರಗತಿಯನ್ನು ಕಾಣಬೇಕಾದರೆ ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ತಂತ್ರಜ್ಞಾನ, ಸೇವೆಗಳು ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಅನಿವಾರ್ಯ ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ಈ ಪ್ರತಿಯೊಂದು ಕ್ಷೇತ್ರಗಳಲ್ಲಿನ ವಿವಿಧ ಆಯಾಮಗಳಲ್ಲಿ ಉನ್ನತಿಯನ್ನು ಸಾಧಿಸಬೇಕಾಗುತ್ತದೆ. ಕೈಗಾರಿಕಾ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಕೈಗಾರಿಕೆಗಳು ಅಸ್ತಿತ್ವಕ್ಕೆ ಭೂಮಿ, ಬಂಡವಾಳ, ಬೆಂಬಲ, ವ್ಯವಸ್ಥೆ ಮುಂತಾದವುಗಳು ಬೇಕಾದಂತೆ ಮಾನವ ಸಂಪನ್ಮೂಲವೂ ಅಷ್ಟೇ ಮುಖ್ಯ. ಕೈಗಾರಿಕೆಗಳಲ್ಲಿ ಉತ್ಪಾದನೆ, ಮಾರಾಟ, ಲಾಭ ಮುಂತಾದ ಅನೇಕ ಪರಿಕಲ್ಪನೆ ಮತ್ತು ಪ್ರಕ್ರಿಯೆಗಳಿಗೆ ವಿದ್ಯಾವಂತ, ತಾಂತ್ರಿಕ ಜ್ಞಾನವುಳ್ಳ ಮಾನವ ಸಂಪನ್ಮೂಲ ಅತೀ ಅವಶ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲಕ್ಕೆ ಮತ್ತು ಆ ಕ್ಷೇತ್ರದಲ್ಲಿ ಕನ್ನಡದ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿರುವುದು ಸಂತಸದ ಮಾತೆ. ಹಾಗಾಗಿ ಈ ಕ್ಷೇತ್ರದ ಆಗುಹೋಗುಗಳನ್ನು ಪರಿಶೀಲಿಸಲು, ಚರ್ಚಿಸಲು ಹಾಗೂ ಪುನಶ್ಚೇತನಗೊಳಿಸಲು, ನಿರಾತಂಕ, ಮಾನವ ಸಂಪನ್ಮೂಲ ರಾಷ್ಟ್ರೀಯ ಸಂಸ್ಥೆ, ವೃತ್ತಿಗತ ಸಮಾಜಕಾರ್ಯದ ರಾಷ್ಟ್ರೀಯ ಸಂಸ್ಥೆ, ಕರ್ನಾಟಕ ಉದ್ಯೋಗಿಗಳ ಸಂಸ್ಥೆ ಮುಂತಾದ ಹಲವು ಹತ್ತು ಸಂಘಸಂಸ್ಥೆಗಳು ಸೇರಿ, ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು, ಈಗ ನಾಲ್ಕೂ ವರ್ಷಗಳಿಂದ ಮಾಡುತ್ತಿರುವುದು ನೋಡಿ, ಭಾಗವಹಿಸಿ ನನಗೆ ತುಂಬಾ ಸಂತೋಷವಾಗಿದೆ.
0 Comments
|
|