ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವ ಪರಿಣಾಮಗಳು, ಅದನ್ನು ತಡೆಯುವಲ್ಲಿ ಮಾನವ ಸಂಪನ್ಮೂಲ11/29/2019 ಶಿವಕುಮಾರ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ರಾಮನಗರ ಸ್ನಾತಕೋತ್ತರ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ಸಾರಲೇಖ: ಮಾನವ ಸಂಪನ್ಮೂಲ ವಿಭಾಗವು ಪ್ರಸ್ತುತ ಜಗತ್ತಿನಲ್ಲಿ ತನ್ನದೆ ಆದತಂಹ ಮಹತ್ವವನ್ನು ಪಡೆದಿದೆ ಹಾಗೂ ಉದ್ಯಮಗಳ ಏಳಿಗೆಗೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ. ಅದರ ಬಹುಮುಖ್ಯ ಕಾರ್ಯಗಳಲ್ಲಿ ಕಾರ್ಮಿಕರ ನಿರ್ವಹಣೆಯು ಪ್ರಮುಖವಾದದ್ದು, ಅದರಲ್ಲಿ ಕಾರ್ಮಿಕರು ತನ್ನ ಉದ್ಯೋಗವನ್ನು ತೊರೆಯದಂತೆ (labour turnover) ನೋಡಿಕೊಳ್ಳುವುದು ಒಂದಾಗಿದೆ. ಉದ್ಯೋಗ ತೊರೆಯುವುದು (labour turnover) ಅದರ ಅರ್ಥ, ವ್ಯಾಖ್ಯಾನ, ನೌಕರರು ಉದ್ಯೋಗ ತೊರೆಯಲು ಕಾರಣಗಳು, ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವಂತಹ ಪರಿಣಾಮಗಳು, ಇದರಿಂದ ಕಂಪನಿಯ ಅಭಿವೃದ್ಧಿಯ ಮೇಲಾಗುವ ಗಂಭೀರ ಪರಿಣಾಮಗಳು ಹಾಗೂ ಮಾನವ ಸಂಪನ್ಮೂಲ ವಿಭಾಗವು ನೌಕರರು ಉದ್ಯೋಗ ತೊರೆಯದ ಹಾಗೆ ಕಾರ್ಮಿಕರ ನಿರ್ವಹಣೆ ಹಾಗೂ ಅದರ ಮಾರ್ಗೋಪಾಯಗಳ ಬಗ್ಗೆ ವಿವರಿಸಲಾಗಿದೆ. ಮಾನವ ಸಂಪನ್ಮೂಲದ ಹಿನ್ನೆಲೆಯಲ್ಲಿ ಹೇಳಬೇಕೆಂದರೆ ನೌಕರರು ಉದ್ಯೋಗ ತೊರೆಯುವಿಕೆ (labour turnover) ಅಂದರೆ ಕೆಲಸದ ಸಮಯದಲ್ಲಿ ನೌಕರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದು ಅಥವಾ ಉದ್ಯೋಗದಾತನು ತನ್ನ ಉದ್ಯೋಗಿಗಳನ್ನು ಕಳೆದುಕ್ಕೊಳ್ಳುವುದಾಗಿದೆ. ಇದರಿಂದ ಕಂಪನಿಯ ಉತ್ಪಾದನೆ, ಆದಾಯ, ವೆಚ್ಚಗಳಲ್ಲಿ ಏರುಪೇರಾಗಿ ಸಮಸ್ಯೆಗಳು ಉಲ್ಬಣಗೊಂಡು ಕಂಪನಿ ಅವನತಿಯತ್ತ ಸಾಗಬಹುದು, ಆದ್ದರಿಂದ ಕಾರ್ಮಿಕರ ತೊರೆಯುವಿಕೆಯ ನಿರ್ವಹಣೆಯು ಮಾನವ ಸಂಪನ್ಮೂಲ ವಿಭಾಗದ ಪ್ರಮುಖ ಕರ್ತವ್ಯವಾಗಿದೆ. ನೌಕರರು ಉದ್ಯೋಗ ತೊರೆಯುವಿಕೆಯನ್ನು ಒಂದು ನಿರ್ದಿಷ್ಟ ಸಮಯದಲ್ಲಿ ನೌಕರರು ಎಷ್ಟು ಜನ ಕೆಲಸಕ್ಕೆ ಹಾಜರಾಗಿಲ್ಲ ಎಂಬುದನ್ನು ತಾಳೆ ಹಾಕಿ ನೋಡುವುದಾಗಿದೆ, ಈ ಸಮಯದಲ್ಲಿ ವಜಾಗೊಂಡಿರುವ ಉದ್ಯೋಗಿಗಳು, ಕೆಲಸಕ್ಕೆ ಹಾಜರಾಗದೆ ಇರುವ ಉದ್ಯೋಗಿಗಳು ಹಾಗೂ ರಾಜೀನಾಮೆ ನೀಡಿರುವ ನೌಕರರು ಹೀಗೆ ಎಲ್ಲರ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಒಟ್ಟು ಕಾರ್ಮಿಕರ ಸಂಖ್ಯೆಯಿಂದ ಕಳೆದಾಗ ಉದ್ಯೋಗ ತೊರೆದ ಕಾರ್ಮಿಕರ ಸಂಖ್ಯೆ ದೊರೆಯುತ್ತದೆ. ಉದ್ಯೋಗ ತೊರೆಯುವಿಕೆ ಹೇರಳವಾಗಿದ್ದಾಗ, ನೇಮಕಾತಿ ಮತ್ತು ರಾಜೀನಾಮೆ ದರಗಳು ಉದ್ಯೋಗಗಳ ನಡುವೆ ಕಾರ್ಮಿಕರ ಹೆಚ್ಚಿನ ಪ್ರತಿಫಲನವನ್ನು ತೋರಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಆರ್ಥಿಕ ಕುಸಿತದ ಅವಧಿಯಲ್ಲಿ ದರಗಳು ಕಡಿಮೆ ಇರುತ್ತವೆ. ಉದ್ಯೋಗ ತೊರೆಯುವಿಕೆ (labour turnover) ವ್ಯಾಖ್ಯಾನಗಳು: ನೌಕರರು ಉದ್ಯೋಗ ತೊರೆಯುವಿಕೆಯೆಂದರೆ ಒಂದು ಕಂಪನಿಯಲ್ಲಿ ನೌಕರರು ನಿರ್ದಿಷ್ಟ ಸಮಯದಲ್ಲಿ ಉದ್ಯೋಗ ತ್ಯಜಿಸುವುದು ಮತ್ತು ನೇಮಕವಾಗುವುದಾಗಿದೆ ನೌಕರರು ಉದ್ಯೋಗ ತೊರೆಯುವಿಕೆಯು ಹೆಚ್ಚಳವಾದರೆ ಕಂಪನಿಯಲ್ಲಿ ಸಮಸ್ಯೆಗಳು ಉದ್ಬವವಾಗುತ್ತವೆ. ಡಾ|| ರವೀಂದ್ರ ಬಾಡಿಯವರ ಪ್ರಕಾರ ಉದ್ಯೋಗಿಗಳ ಬಿಡುಗಡೆ ಮತ್ತು ಉದ್ಯೋಗಿಗಳ ಬದಲಿಯಿಂದ ಕಾರ್ಯಪಡೆಯ ಸಂಯೋಜನೆಯಲ್ಲಿ ಕಾಲಕಾಲಕ್ಕೆ ಉಂಟಾಗುವ ಬದಲಾವಣೆ ಆಗಿರುತ್ತದೆ ಎಂದು ಹೇಳಿದ್ದಾರೆ. ಜಾನ್ ರೆಚ್‍ರವರ ಪ್ರಕಾರ ಕಂಪನಿಯ ಒಂದು ನಿರ್ದಿಷ್ಟ ಅವಧಿಯಲ್ಲಿ ಉದ್ಯೋಗ ತೊರೆಯುವ ಉದ್ಯೋಗಿಯ ಶೇಕಡಾವಾರಾಗಿರುತ್ತದೆ ಎಂದು ತಿಳಿಸಿದ್ದಾರೆ. ಉದ್ಯೋಗ ತೊರೆಯುವಿಕೆಯ ವಿಧಗಳು: ಕಾರ್ಮಿಕರು ಉದ್ಯೋಗ ತೊರೆಯುವುದರಲ್ಲಿ ಎರಡು ಪ್ರಮುಖ ವಿಧಗಳಿವೆ.
ಉದಾ: ಕಾರ್ಮಿಕರಿಗೆ ಕೆಲಸದ ಬಗ್ಗೆ ತೃಪ್ತಿ ಇಲ್ಲದಿದ್ದಾಗ, ಕೆಲಸದ ಸ್ಥಳ ಹೊಂದಾಣಿಕೆಯಾಗದೆ ಇದ್ದಾಗ ಮತ್ತು ಬೇರೆಡೆ ಕೆಲಸ ದೊರೆತಾಗ ಸ್ವ ಇಚ್ಚೆಯಿಂದ ಕಾರ್ಮಿಕರು ಉದ್ಯೋಗ ತೊರೆಯುತ್ತಾರೆ. ಅನೈಚ್ಚಿಕ ಉದ್ಯೋಗ ತೊರೆಯುವಿಕೆ: ಅನೈಚ್ಚಿಕ ಉದ್ಯೋಗ ತೊರೆಯುವಿಕೆ ಎಂದರೆ ಕಾರ್ಮಿಕರು ಕಂಪನಿಯ ಕಾನೂನುಗಳನ್ನು ಮೀರಿದಾಗ ಉದ್ಯೋಗದಾತನು ಅವರನ್ನು ಕೆಲಸದಿಂದ ವಜಾ ಮಾಡುವುದಾಗಿದೆ, ಉದಾ: ಉತ್ಪಾದನಾ ಮಟ್ಟ ಕಡಿಮೆಯಾದಾಗ ಕೆಲಸದಿಂದ ತೆಗೆಯಬಹುದು, ಕಾರ್ಮಿಕರ ಕೆಲಸದ ಕ್ಷಮತೆ ಕಡಿಮೆಯಾದಾಗ ವಜಾಮಾಡಬಹುದು ಇತರೆ.... ಕಾರ್ಮಿಕರು ಉದ್ಯೋಗ ತೊರೆಯಲು ಕಾರಣಗಳು: ಕಾರ್ಮಿಕರು ಉದ್ಯೋಗ ತೊರೆಯಲು ಎರಡು ರೀತಿಯ ಕಾರಣಗಳನ್ನು ನೀಡಬಹುದಾಗಿದೆ.
ಉದ್ಯೋಗ ತೊರೆಯದಂತೆ ತಪ್ಪಿಸಬಹುದಾದ ಕಾರಣಗಳು:
ಉದ್ಯೋಗ ತೊರೆಯದಂತೆ ತಪ್ಪಿಸಲಾಗದ ಕಾರಣಗಳು:
ಕಾರ್ಮಿಕರು ಉದ್ಯೋಗ ತೊರೆಯುವುದನ್ನು ಲೆಕ್ಕ ಹಾಕುವುದು: ಕಂಪನಿಗಳಲ್ಲಿ ಕಾರ್ಮಿಕರು ಉದ್ಯೋಗ ತೊರೆಯುವುದನ್ನು ಲೆಕ್ಕ ಹಾಕಲು ಹಲವಾರು ರೀತಿಯ ಸೂತ್ರಗಳನ್ನು ಬಳಸುತ್ತಾರೆ ಅವುಗಳಲ್ಲಿ ಪ್ರಮುಖವಾದದ್ದು ಪ್ರತ್ಯೇಕತೆಯ ಸೂತ್ರ. ಪ್ರತ್ಯೇಕತೆಯ ಸೂತ್ರ: ಕಾರ್ಮಿಕರು ಉದ್ಯೋಗ ತೊರೆಯುವುದನ್ನು ತಾಳೆ ಮಾಡಲು ಪ್ರತ್ಯೇಕತೆಯ ಸೂತ್ರವನ್ನು ಅತೀ ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಕಾರ್ಮಿಕರು ಉದ್ಯೋಗ ತೊರೆಯಲು ಇರುವ ಎಲ್ಲ ಕಾರಣಗಳು ಅಂದರೆ ವಜಾಮಾಡುವುದು, ವಿಸರ್ಜನೆ ಮಾಡುವುದು, ರಾಜೀನಾಮೆ ಕೊಡುವುದು, ಮರಣ ಹೊಂದುವುದು, ಅಂಗವಿಕಲತೆ ಹೀಗೆ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಮಾಡುವುದರಿಂದ ಸರಿಯಾದ ಲೆಕ್ಕ ದೊರೆಯುತ್ತದೆ. ಒಟ್ಟು ಉದ್ಯೋಗ ತೊರೆದವರ ಸಂಖ್ಯೆ ಸೂತ್ರ: ಪ್ರತ್ಯೇಕತೆಯ ಸೂತ್ರ: ..................................................................... *100 ಒಟ್ಟು ಕಾರ್ಮಿಕರ ಸಂಖ್ಯೆ ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವ ಪರಿಣಾಮಗಳು: ಅತೀ ಹೆಚ್ಚು ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲೆ ಭಾರೀ ಪ್ರಮಾಣದ ಪರಿಣಾಮವಾಗುತ್ತದೆ. ವಸ್ತುವಿನ ಗುಣಮಟ್ಟ ಕಡಿಮೆಯಾಗುವುದು, ಉತ್ಪಾದನಾ ವೆಚ್ಚ ಹೆಚ್ಚಾಗುವುದು ಹೀಗೆ ಹಲವಾರು ಸಮಸ್ಯೆ ಎದುರಾಗುತ್ತವೆ.
ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಕಾರ್ಮಿಕರ ಮೇಲಾಗುವ ಪರಿಣಾಮಗಳು:
ಕಾರ್ಮಿಕರು ಉದ್ಯೋಗ ತೊರೆಯದಂತೆ ತಡೆಯುವಲ್ಲಿ ಮಾನವ ಸಂಪನ್ಮೂಲ ವಿಭಾಗದ ಪಾತ್ರ:
ಮಾನವ ಸಂಪನ್ಮೂಲ ವಿಭಾಗವು ಒಂದು ಸಂಸ್ಥೆಯಲ್ಲಿ ಕಾರ್ಮಿಕರನ್ನು ನಿರ್ವಹಣೆ ಮಾಡುವುದು ಪ್ರಮುಖ ಕಾರ್ಯವಾಗಿರುತ್ತದೆ. ಅದರಂತೆ ಕಾರ್ಮಿಕರು ಉದ್ಯೋಗ ತೊರೆಯದಂತೆ ತಡೆಯಲು ಈ ಕೆಳಗಿನ ಕಾರ್ಯಗಳನ್ನು ಮಾಡಬಹುದಾಗಿದೆ.
ಗ್ರಂಥಋಣ:
0 Comments
Leave a Reply. |
Categories
All
Archives
May 2024
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |