ಮೂಲ: ಪಾಂಡುನಾಯಕ್ (ಆಂಗ್ಲಭಾಷೆ) ಅನುವಾದ: ಡಾ. ನಾಗರಾಜ್ ನಾಯಕ್ ಮತ್ತು ಅನಿತಾ ಎಸ್. ಹಿನ್ನೆಲೆ: ಲೈಂಗಿಕ ಕಿರುಕುಳದ ಪರಿಕಲ್ಪನೆಯು ಮನುಕುಲದ ಇತಿಹಾಸದಷ್ಟು ಹಳೆಯದಾಗಿದ್ದರೂ, ಉದ್ಯೋಗ ಸ್ಥಳದಲ್ಲಿ ಇದರ ಬಗೆಗಿನ ಅರಿವು ಇತ್ತೀಚಿನ ದಿನಗಳಲ್ಲಿ ಗಮನ ಸೆಳೆದಿದೆ. ವಾಸ್ತವವಾಗಿ ವಿಶಾಖ v/s ರಾಜಸ್ಥಾನ ರಾಜ್ಯದ (1997) ಪ್ರಕರಣದಲ್ಲಿ, ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪು ಬರುವವರೆಗೂ (1997) ಈ ವಿಷಯದ ಬಗ್ಗೆ ವ್ಯವಹರಿಸಲು ಯಾವುದೇ ಅಧಿಕೃತ ಮಾರ್ಗಸೂಚಿಗಳಿರಲಿಲ್ಲ. ಈ ಪ್ರಕರಣವು ರಾಜಸ್ಥಾನದ ಗ್ರಾಮದಲ್ಲಿನ ಸಾಮಾಜಿಕ ಕಾರ್ಯಕರ್ತೆಯ ಮೇಲಿನ ಸಾಮೂಹಿಕ ಆತ್ಯಾಚಾರಕ್ಕೆ ಸಂಬಂಧಿಸಿದೆ. ಸರ್ವೋಚ್ಛ ನ್ಯಾಲಯವು ಲೈಂಗಿಕ ಕಿರುಕುಳವನ್ನು ವ್ಯಕ್ತಿಯ ಹಕ್ಕುಗಳ ಉಲ್ಲಂಘನೆಯೆಂದು ಅಭಿಪ್ರಾಯಪಟ್ಟು ಸಂವಿಧಾನದ ವಿಧಿ 14 (ಕಾನೂನಿನ ಮುಂದೆ ಸಮಾನತೆ), ವಿಧಿ 15 (-ಲೈಂಗಿಕ ನೆಲೆಯಲ್ಲಿ ತಾರತಮ್ಯವನ್ನು ನಿಷೇಧಿಸುವುದು), ವಿಧಿ 19 (ಸ್ವತಂತ್ರವಾಗಿ ವ್ಯಕ್ತಿಯು ಯಾವುದೇ ವೃತ್ತಿ ವ್ಯಾಪಾರ ಅಥವ ಉದ್ಯೋಗವನ್ನು ಮಾಡುವುದು). ವಿಧಿ 42- (ಕೆಲಸದ ಸ್ಥಳದಲ್ಲಿ ಮಾನವೀಯ ಪರಿಸ್ಥಿತಿಯನ್ನು ಒದಗಿಸುವುದು). ಮತ್ತು ನಾಗರೀಕ ಕರ್ತವ್ಯಗಳ ಅಡಿಯಲ್ಲಿ ವಿಧಿ 51-ಎ, (ಮಹಿಳಾ ಘನತೆಗೆ ಚ್ಯುತಿ ತರದಿರುವುದು), ಇವುಗಳ ಸ್ಪಷ್ಟ ಉಲ್ಲಂಘನೆಯೆಂದು ತಿಳಿಸಿದೆ. ಈ ಪ್ರಕರಣದಲ್ಲಿ ಅಪೆಕ್ಸ್ ಕೋರ್ಟ್, ಲಿಂಗ ಸಮಾನತೆಯೆಂದರೆ ಲೈಂಗಿಕ ಕಿರುಕುಳದಿಂದ ರಕ್ಷಣೆ, ಘನತೆಯೊಂದಿಗೆ ಕಾರ್ಯನಿರ್ವಹಿಸುವ ಹಕ್ಕುಗಳನ್ನು ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ಮಾನವ ಹಕ್ಕುಗಳೆಂದು ಅಭಿಪ್ರಾಯಪಟ್ಟಿದೆ. ಉದ್ಯೋಗದ ಸ್ಥಳದಲ್ಲಿ ಲಿಂಗ ನಿರ್ದಿಷ್ಟ ಲೈಂಗಿಕ ಕಿರುಕುಳದಂತಹ ಹಿಂಸಾಚಾರಕ್ಕೆ ಮಹಿಳೆಯರು ತುತ್ತಾಗುವಾಗ ಉದ್ಯೊಗದ ಸಮಾನತೆಯು ಗಂಭೀರವಾದಂತಹ ಪ್ರಶ್ನೆಯಾಗುತ್ತದೆ. ಮಾನ್ಯ ನ್ಯಾಯಾಲಯವು 1997 ರಿಂದ 2013ರ ಅವದಿಯಲ್ಲಿ ಕಾನೂನಾಗಿ ಮಾರ್ಪಡಿಸಿದ ಕಾಯ್ದೆ ಉದ್ಯೋಗದ ಸ್ಥಳದಲ್ಲಿ ಮಹಿಳೆಯ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013 ರಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಮಾರ್ಗಸೂಚಿಗಳನ್ನು ಕಾಣಬಹುದು. ಈ ಕಾಯ್ದೆಯನ್ನು 2013 ರಲ್ಲಿ ಜಾರಿಗೊಳಿಸಲಾಯಿತು. ವಿಶಾಖ ಪ್ರಕರಣದಲ್ಲಿನ ಮಾರ್ಗಸೂಚಿಗಳನ್ನು ಈ ಕಾಯ್ದೆಯಲ್ಲಿ ಉಳಿಸಿಕೊಳ್ಳಲಾಗಿದೆ. ಅ್ಯಪರಲ್ ಎಕ್ಸ್‍ಪೋರ್ಟ್ ಪ್ರಮೋಷನ್ ಕೌನ್ಸಿಲ್ v/s ಎ.ಕೆ. ಚೋಪ್ರಾ (1999) ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕಿರುಕುಳ ನೀಡಿದ ವ್ಯಕ್ತಿಗೆ ಉದ್ಯೋಗದಾತರು ನೀಡುವ ಶಿಕ್ಷೆಯ ಪ್ರಮಾಣವನ್ನು ಕೆಳಹಂತದ ನ್ಯಾಯಾಲಯಗಳು ಕಡಿಮೆ ಮಾಡುವಂತಿಲ್ಲ ಹಾಗೂ ಮೇಧಾಕೋಟ್ರಾಲ್ ಲೀಲೆ v/s ಯೂನಿಯನ್ ಆಫ್ ಇಂಡಿಯಾ (2012) ರ ತೀರ್ಪಿನ ಪ್ರಕಾರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಮಿತಿಯ ಸಂಶೋಧನಾ ವರದಿಯನ್ನು ಉದ್ಯೋಗದಾತನು ಅಂತಿಮವಾಗಿ ಪರಿಗಣಿಸಿ ಅದರ ಆಧಾರದ ಮೇಲೆ ಶಿಕ್ಷೆಯನ್ನು ವಿಧಿಸಬಹುದಾಗಿರುತ್ತದೆ ಹಾಗೂ ಇದರ ಬಗ್ಗೆ ಗೃಹ ವಿಚಾರಣೆಯ ಅವಶ್ಯಕತೆಯಿರುವುದಿಲ್ಲ. ಕಾಯ್ದೆಯ ಉದ್ದೇಶ: ಈ ಕಾಯ್ದೆಯ ಮುಖ್ಯ ಉದ್ದೇಶ ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವನ್ನು ತರಬೇತಿ, ನಿವಾರಣಾ ಕ್ರಮಗಳು ಮತ್ತು ಕಾನೂನಾತ್ಮಕ ಕ್ರಮಗಳ ಮೂಲಕ ತಡೆಗಟ್ಟುವುದು, ಶಿಕ್ಷಾರ್ಹ ಕ್ರಮಗಳಾದ ವರ್ಗಾವಣೆ, ಶಿಸ್ತಿನ ಕ್ರಮ ಜರುಗಿಸುವಿಕೆ, ಹಣದ ರೂಪದಲ್ಲಿ ಪರಿಹಾರ ಮುಂತಾದ ವಿಧಗಳನ್ನು ಬಳಸುವುದು. ಕಾಯ್ದೆಯು ಮನೆಗೆಲಸ ಮಾಡುವ ಮಹಿಳೆಯರು, ಕಾರ್ಮಿಕರು, ಕಾರ್ಮಿಕೇತರ ಮಹಿಳಾ ಸಿಬ್ಬಂದಿಗಳು, ಸಿಬ್ಬಂದಿವರ್ಗದಲ್ಲದವರು ಯಾರಾದರೂ ಸಹ ಕಿರುಕುಳಕ್ಕೆ ಒಳಗಾದಲ್ಲಿ ಈ ಕಾನೂನಿನ ವ್ಯಾಪ್ತಿಯೊಳಗೆ ಪರಿಹಾರವನ್ನು ಹಾಗೂ ನೆರವನ್ನು ನೀಡುವುದು. ಕಾಯ್ದೆಯ ಅನ್ವಯಿಸುವಿಕೆ: ಈ ಕಾಯ್ದೆಯು 2013ರ ಡಿಸೆಂಬರ್ 9 ರಿಂದ ಜಾರಿಗೆ ಬಂದಿತು. ಈ ಕಾಯ್ದೆಯು ವಾಸ ಸ್ಥಳದ ಮನೆ ಹಾಗೂ ಕೆಲಸದ ಎಲ್ಲಾ ಜಾಗಗಳಲ್ಲಿಯೂ ಅನ್ವಯಿಸುತ್ತದೆ. ವ್ಯಕ್ತಿಯ ವಯಸ್ಸು, ಸಂಬಳ, ಹೆಸರು ಮತ್ತು ಉದ್ಯೋಗದ ಸ್ವಭಾವದ ಹೊರತಾಗಿ ಕೆಲಸದ ಸ್ಥಳದಲ್ಲಿರುವ ಎಲ್ಲಾ ಮಹಿಳೆಯರು ಈ ಕಾಯ್ದೆಯಡಿ ರಕ್ಷಿಸಲ್ಪಡುತ್ತಾರೆ. ಸಲಹೆಗಾರರು, ಸೇವಾ ಪೂರೈಕೆದಾರರು, ಗ್ರಾಹಕರು ಮತ್ತು ಸರಬರಾಜುದಾರರು ಹೀಗೆ ಉದ್ಯೋಗಿಗಳಲ್ಲದ ಮಹಿಳೆಯರು ಕೂಡ ಈ ಕಾಯ್ದೆಯಡಿಯಲ್ಲಿ ರಕ್ಷಿಸಲ್ಪಡುತ್ತಾರೆ. ಕಿರುಕುಳ ನೀಡಿದವರು ಪುರುಷರು, ಸ್ತ್ರೀ ನೌಕರರು, ಸಲಹೆಗಾರರು ಸೇವಾ ಪೂರೈಕೆದಾರರು ಹೀಗೆ ಯಾರೇ ಆಗಿರಬಹುದು. ಲೈಂಗಿಕ ಕಿರುಕುಳವು ದೈಹಿಕ ಸಂಪರ್ಕ ಮತ್ತು ಆ ನಿಟ್ಟಿನ ಬೆಳವಣಿಗೆಗಳನ್ನು ಒಳಗೊಂಡಿದೆ. ಲೈಂಗಿಕ ಬೇಡಿಕೆ, ವಿನಂತಿ ಅಥವಾ ಲೈಂಗಿಕವಾಗಿ ವರ್ಣಮಯವಾದ ಟೀಕೆಗಳನ್ನು ಮಾಡುವುದು, ಅಶ್ಲೀಲತೆ ಅಥವಾ ಯಾವುದೇ ಇತರ ಅಹಿತಕರ ದೈಹಿಕ, ಮೌಖಿಕ ಅಥವಾ ಮೌಖಿಕ ಸ್ವಭಾವದ ವರ್ತನೆಯು ಮಹಿಳಾ ಉದ್ಯೋಗ ಸ್ಥಳದಲ್ಲಿ ಒಳಗೊಂಡಿರುತ್ತವೆ. ಲೈಂಗಿಕ ಕಿರುಕುಳದ ಕ್ರಿಯೆಯು ಉದ್ಯೋಗದ ಆಧ್ಯತೆಯ ಮೇರೆಗೆ ಪ್ರಸ್ತಾಪಿತ ಅಥವಾ ಸ್ಪಷ್ಟವಾದ ಭರವಸೆಯೊಂದಿಗೆ ಸೇರಿಕೊಂಡಿದ್ದರೆ ಅಥವಾ ಪ್ರಸ್ತುತ ಇಲ್ಲವೆ ಭವಿಷ್ಯದ ಸ್ಥಾನಮಾನದ ಬಗ್ಗೆ ಬೆದರಿಕೆ ಬಹಿರಂಗಪಡಿಸುವುದು ಅಥವಾ ಮಹಿಳೆಯರ ಕೆಲಸದ ಹಸ್ತಕ್ಷೇಪ, ಬೆದರಿಕೆ ಅಥವಾ ಆಕ್ರಮಣಕಾರಿ ಅಥವಾ ಪ್ರತಿಕೂಲ ಕೆಲಸದ ವಾತಾವರಣವನ್ನು ಸೃಷ್ಟಿಸುವುದು, ಇಲ್ಲವೇ ಅವರ ಆರೋಗ್ಯ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಅಮಾನವೀಯವಾಗಿ ವರ್ತಿಸುವುದು ಇವುಗಳೆಲ್ಲವು ಲೈಂಗಿಕ ಕಿರುಕುಳಕ್ಕೆ ಕಾರಣವಾಗುತ್ತವೆ. ಉದ್ಯೋಗ ಸ್ಥಳವು ಕಾರ್ಖಾನೆಗಳು, ಗಣಿಗಳು, ತೋಟಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಕ್ರೀಡಾ ಸೌಲಭ್ಯಗಳು, ಮತ್ತು ಮಹಿಳಾ ಉದ್ಯೋಗಿ ಕರ್ತವ್ಯ, ನಿರ್ವಹಿಸುವ ದತ್ತಿ ಸಂಸ್ಥೆಗಳು ವಾಸಸ್ಥಳ ಅಥವಾ ಪ್ರಯಾಣಿಸುವ ಸ್ಥಳಗಳನ್ನೊಳಗೊಂಡಿರುತ್ತದೆ. ಲೈಂಗಿಕ ಕಿರುಕುಳದ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಈ ಕಾಯ್ದೆಯ ಸೆಕ್ಷನ್ 3 ತಿಳಿಸಿಕೊಡುತ್ತದೆ. ಅಂತೆಯೇ ಯಾವುದೇ ಮಹಿಳೆಯೂ ಉದ್ಯೋಗದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಬಾರದು ಎಂದು ನಿರ್ದೇಶಿಸುತ್ತದೆ. ದೂರು ಸಮಿತಿಯ ರಚನೆ:
ದೂರಿನ ವಿಧಾನ:
ಸಂಧಾನ ಮತ್ತು ಒಪ್ಪಂದ (ಕಾನ್ಸಿಲಿಯೇಶನ್ ಮತ್ತು ಸೆಟ್ಲಮೆಂಟ್):
ದೂರಿನ ವಿಚಾರಣೆ:
ವಿಚಾರಣಾ ಪೂರ್ವ ಕ್ರಮಗಳು: ಈ ಕಾಯಿದೆ ಅಡಿಯಲ್ಲಿ ತನಿಖೆ ಬಾಕಿ ಉಳಿದಿರುವಾಗ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ವ್ಯವಹರಿಸುತ್ತದೆ. ಅನ್ಯಾಯಕ್ಕೊಳಗಾದ ಮಹಿಳೆಯು ಮಾಡಿದ ಲಿಖಿತ ಮನವಿಯ ಆಧಾರದ ಮೇಲೆ, ಸಮಿತಿಯು ಉದ್ಯೊಗದಾತನಿಗೆ ಶಿಫಾರಸ್ಸು ಮಾಡಬಹುದು:
ವಿಚಾರಣಾ ನಂತರ ಕ್ರಮಗಳು:
ಕ್ರಮಕ್ಕೆ ವಿರುದ್ದವಾಗಿ ಮೇಲ್ಮನವಿ: ಸಮಿತಿಯ ಶಿಫಾರಸಿನ ಅನುಷ್ಠಾನದಿಂದ ಅಥವಾ ಅದರ ಅನುಷ್ಠಾನದ ಮೂಲಕ ವ್ಯತಿರಿಕ್ತ ಭಾವನೆ ಹೊಂದಿರುವ ನಿಯಮಗಳು/ ಸ್ಥಾಯಿ ನಿಯಮಗಳ ಪ್ರಕಾರ ಅಥವಾ ಸರ್ಕಾರದ ಸೂಚನೆಯ ವಿಧಾನದ ಪ್ರಕಾರ ಶಿಫಾರಸ್ಸು ದಿನಾಂಕದಿಂದ ಹಿಡಿದು 90 ದಿನಗಳ ಒಳಗೆ ಮೇಲ್ಮನವಿಯನ್ನು ಸಲ್ಲಿಸಬಹುದು. ತಪ್ಪು ದೂರು ಮತ್ತು ತಪ್ಪು ಸಾಕ್ಷಿಯ ವಿರುದ್ದ ಕ್ರಮ: ಸೆಕ್ಷನ್ 14ರ ಪ್ರಕಾರ ಸುಳ್ಳು ದೂರು ನೀಡಿದ್ದಾನೆ ಅಥವಾ ತನಿಖೆಯಲ್ಲಿ ಸುಳ್ಳು ಪುರಾವೆಗಳನ್ನು ಒದಗಿಸಿದ್ದಾನೆ ಎಂದು ಸಮಿತಿಯು ತೀರ್ಮಾನಕ್ಕೆ ಬಂದಾಗ, ಅದು ಅಂತಹ ವ್ಯಕ್ತಿಯ ವಿರುದ್ದ ನಿಂತಿರುವ ಆದೇಶ/ ಸೇವೆ ನಿಯಮಗಳ ಪ್ರಕಾರ ಕ್ರಮವನ್ನು ಕೈಗೊಳ್ಳಬೇಕೆಂದು ಉದ್ಯೋಗದಾತನಿಗೆ ಅಥವಾ DO ಗೆ ಶಿಫಾರಸ್ಸು ಮಾಡಬಹುದು, ಅಥವಾ ಸರ್ಕಾರವು ಸೂಚಿಸಿದ ಕಾರ್ಯವಿಧಾನದ ಪ್ರಕಾರ ಕ್ರಮ ಕೈಗೊಳ್ಳಬಹುದು. ತೆಗೆದುಕೊಳ್ಳುವ ಕ್ರಮದ ಗೌಪ್ಯತೆ: ಈ ಅಧಿನಿಯಮದ ಅಡಿಯಲ್ಲಿ ನಡೆಯುವ ಪ್ರಕ್ರಿಯೆಗಳ ವಿಷಯಗಳ ಮತ್ತು ತೆಗೆದುಕೊಂಡ ಕ್ರಮಗಳನ್ನು ಸಾರ್ವಜನಿಕ, ಪತ್ರಿಕಾ ಅಥವಾ ಯಾವುದೇ ಸಾಮೂಹಿಕ ಮಾಧ್ಯಮಗಳಿಗೆ ಬಹಿರಂಗಪಡಿಸಬಾರದು. ಅಂತಹ ಮಾಹಿತಿಯನ್ನು ಬಹಿರಂಗಪಡಿಸುವವರು ಸೇವಾ ನಿಯಮಗಳ ಪ್ರಕಾರ ಅಥವಾ ಸರ್ಕಾರ ಸೂಚಿಸಿರುವ ವಿಧಾನದ ಪ್ರಕಾರ (ಸೆಕ್ಷನ್ 16 & 17) ರ ಅಡಿಯಲ್ಲಿ ಶಿಕ್ಷೆಗೊಳಗಾಗಬಹುದು; ಉದ್ಯೋಗದಾತರು ಮತ್ತು ಜಿಲ್ಲಾ ಅಧಿಕಾರಿಗಳ ಕರ್ತವ್ಯಗಳು:
ದಂಡಗಳು (Penalties):
ಸರ್ಕಾರದ ಕರ್ತವ್ಯಗಳು ಮತ್ತು ಅಧಿಕಾರಗಳು:
ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯಿದೆ 2013 - ಅನುಚ್ಛೇದ: ಲೈಂಗಿಕ ದೌರ್ಜನ್ಯ ಪರಿಕಲ್ಪನೆ ಮನುಕುಲದ ಇತಿಹಾಸದಲ್ಲಿ ಅತ್ಯಂತ ಹಳೆಯದಾದರೂ, ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸ್ಥಳಗಳಲ್ಲಿ ಇದರ ಪರಿಣಾಮ ಎಲ್ಲರ ಗಮನವನ್ನು ಸೆಳೆದಿದೆ. References (Paramarshe):
0 Comments
Leave a Reply. |
Categories
All
Archives
May 2024
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |