HR KANNADA CONFERENCE
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
www.niratanka.org

ಮಾನವ ಸಂಪನ್ಮೂಲ ಮತ್ತು ಸಾಹಿತ್ಯ ಸಂಬಂಧ

11/29/2019

0 Comments

 
Picture
ಡಾ. ಶಿವರಾಜ ಬಿ.ಇ.
ಸಹ ಪ್ರಾಧ್ಯಾಪಕರು, ಆಕ್ಸ್ಫರ್ಡ್ ಕಾಲೇಜು, ಎಚ್.ಎಸ್.ಆರ್.ಬಡಾವಣೆ, ಬೆಂಗಳೂರು - 560102
ಮನುಷ್ಯ ಸಂಘ ಜೀವಿ. ಏಕಾಂಗಿಯಾಗಿ ಬದುಕಲಾರ, ಬದುಕಿದರೂ ಅವನು ಶೂನ್ಯದಿಂದ ಏನನ್ನೂ ಸೃಷ್ಟಿಸಲಾರ. ಮನುಷ್ಯ ಏಕಾಂಗಿಯಾಗಿ ಬದುಕಬಹುದು ಇಲ್ಲವೇ ಆಲೋಚಿಸಬಹುದೇ ಹೊರತು ಸ್ವತಂತ್ರವಾಗಿ ಯಾವುದನ್ನೂ ಉತ್ಪಾದಿಸಲು ಮತ್ತು ಸೃಷ್ಠಿಸಲು ಸಾಧ್ಯವಾಗುವುದಿಲ್ಲ. ಮಾನವ ಹುಟ್ಟಿನಿಂದ, ತನ್ನ ಬುದ್ಧಿಶಕ್ತಿ ಹಾಗೂ ಆಲೋಚನಾಶಕ್ತಿಯಿಂದಾಗಿಯೇ ಪ್ರಾಣಿಗಳಿಗಿಂತ ಭಿನ್ನ ನೆನೆಸಿಕೊಂಡಿದ್ದಾನೆ. ಮಾನವ ಆಲೋಚಿಸಿದಂತೆಲ್ಲಾ ತನ್ನ ದೈಹಿಕ ಸಾಮರ್ಥ್ಯ ಮತ್ತು ವಿವೇಚನಾ ಶಕ್ತಿಯಿಂದಾಗಿ ಇತರೆ ಜೀವರಾಶಿಗಳಿಗಿಂತ ಭಿನ್ನವಾಗಿ ಬದುಕನ್ನು ಕಟ್ಟಿಕೊಂಡಿದ್ದಾನೆ. ಇದನ್ನೇ ನಾವು ತೊಡಗಿಸಿಕೊಳ್ಳುವುದು ಅಥವಾ ಕ್ರಿಯಾಶಕ್ತಿ ಎಂದು ಕರೆಯಬಹುದು. ಮಾನವ ಕೈಗೊಳ್ಳುವ ಪ್ರತಿಯೊಂದು ಕೆಲಸ ಆತನ ಸಾಮಥ್ರ್ಯದ ಮೇಲೆ ನಿರ್ಧಾರವಾಗುವುದರಿಂದ ಅದನ್ನು ಸಂಪನ್ಮೂಲ ಎಂದು ಪರಿಗಣಿಸಬಹುದು. 
ಜನ್ಮಿಸಿದ ಮಾನವ ಜೀವನೋಪಾಯಕ್ಕಾಗಿ ವಿವಿಧ ಕಸುಬುಗಳನ್ನು ಕೈಗೊಂಡು ಆ ಮೂಲಕ ತನ್ನ ಜೀವನವನ್ನು ರೂಪಿಸಿಕೊಳ್ಳುವ ಪ್ರಕ್ರಿಯೆ ಬಹಳ ಹಿಂದಿನಿಂದ ನಡೆದು ಬಂದಿದೆ. ಮನುಷ್ಯ ಇತರೆ ಜೀವರಾಶಿಗಳಿಗಿಂತ ವಿಭಿನ್ನವಾಗಿ ಜೀವಿಸುತ್ತಿದ್ದಾನೆ ಎಂದರೆ ಅದಕ್ಕೆ ಅವನಲ್ಲಿರುವ ಸೃಜನಾತ್ಮಕ ಹಾಗೂ ಕ್ರಿಯಾಶೀಲ ಶಕ್ತಿಯೇ ಕಾರಣವೆನ್ನಬಹುದು. ಅಸ್ತಿತ್ವಗೊಂಡಿರುವ ಪ್ರತಿ ವಸ್ತು ಮಾನವನಿಂದಲೇ ಸೃಷ್ಠಿಯಾಗದಿದ್ದರೂ ನೈಸರ್ಗಿಕವಾಗಿ ದೊರಕುವ ಹೇರಳ ಸಂಪನ್ಮೂಲಗಳನ್ನು ತನ್ನ ಸೃಜನಾತ್ಮಕತೆಯಿಂದ ತನಗೆ ಬೇಕಾದ ಹಾಗೆ ರೂಪಿಸಿಕೊಂಡು ಇಲ್ಲವೇ ಮಾರ್ಪಡಿಸಿಕೊಂಡು ತನ್ನ ಜೀವನದ ಹಾದಿಯನ್ನು ಸುಗಮಮಾಡಿಕೊಂಡಿರುವುದು ಈಗ ಇತಿಹಾಸ. ಮನುಷ್ಯ ತನ್ನ ಭೌದ್ಧಿಕ ಶಕ್ತಿಯಿಂದ ತನ್ನ ಜೀವನಕ್ಕೆ ಅವಶ್ಯಕವಾದ ವಸ್ತುಗಳನ್ನು ತಯಾರಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ಮನುಷ್ಯನ ಕ್ರಿಯೆ ಮತ್ತು ಶಕ್ತಿಯೇ ಸಂಪನ್ಮೂಲವಾಗಿ ಕೆಲಸ ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಸಂಪನ್ಮೂಲ ಏಕವೂ ಮತ್ತು ಸಮೂಹವೂ ಆಗಿರುವುದರಿಂದ ಸದಾ ಚೈತನ್ಯದಿಂದ ಕೂಡಿದ್ದರೆ ಮಾತ್ರ ಅದು ಮತ್ತೊಂದು ವಸ್ತುವಿನ ಉತ್ಪಾದನಾ ಶಕ್ತಿಯಾಗಿ ರೂಪಿಸಲು ಸಾಧ್ಯವಾಗುತ್ತದೆ.

ಮನುಷ್ಯ ತನ್ನ ಶಕ್ತಿಯನ್ನು ಸಂಯೋಜಿಸಿ ಸೃಷ್ಟಿಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ವಿಧಾನವನ್ನು ಬಹಳ ಹಿಂದಿನಿಂದಲೂ ಪರಿಣಾಮಕಾರಿಯಾಗಿ ಕಂಡುಕೊಳ್ಳುತ್ತಾ ಬಂದಿದ್ದಾನೆ. ವ್ಯಕ್ತಿಯೊಬ್ಬನಿಂದ ಅಸಾಧ್ಯವಾದ ಕಾರ್ಯವನ್ನು ಸಂಘಟಿತ ರೂಪದಲ್ಲಿ ಸಾಂಘಿಕ ಪ್ರಯತ್ನದಿಂದ ಸಾಧಿಸಬಹುದೆಂಬುದನ್ನು ಅರಿತು ಕಾರ್ಯಪ್ರವೃತ್ತನಾದನು. ಇದರ ಫಲವಾಗಿ ಕೈಗೊಂಡ ಕಾರ್ಯ ಬಹುಬೇಗ ಕಾರ್ಯಸಿದ್ಧಿಯಾಯಿತು. ಹೀಗೆ ಸಾಂಘಿಕ ಮತ್ತು ಶ್ರಮ ವಿಭಜನೆಯಂತಹ ಮಾರ್ಗಗಳು ಬಹುಬೇಗ ಫಲ ನೀಡುವುನ್ನು ಕಂಡುಕೊಂಡ ಮಾನವನ ಶ್ರಮವನ್ನೂ ಸಂಪನ್ಮೂಲವಾಗಿ ಪರಿಗಣಿಸಲಾಯಿತು. ಮಾನವನಲ್ಲಿರುವ ಇಚ್ಛಾಶಕ್ತಿ, ಕಾರ್ಯ ಸಾಧಿಸುವ ಸಾಮರ್ಥ್ಯ, ಸ್ವಯಂ ಪ್ರೇರಣೆ, ಆತ್ಮ ವಿಶ್ವಾಸ, ದೈಹಿಕ, ಬೌದ್ಧಿಕ ಹಾಗೂ ಮಾನಸಿಕ ಸಾಮಥ್ರ್ಯಗಳನ್ನೂ ಸಂಪನ್ಮೂಲಗಳೆಂದು ಪರಿಗಣಿಸಿದರೆ ತಪ್ಪಾಗಲಾರದು. ಇಷ್ಟಾದರೂ ಮಾನವ ಸಂಪನ್ಮೂಲ ಎಂದರೆ ತುಂಬಾ ಗಾಢವಾಗಿ ಯೋಚಿಸಬೇಕಾಗಿಲ್ಲ ಬದಲಿಗೆ ತನ್ನ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಶಕ್ತಿಯ ಶ್ರಮದಿಂದ ಕೈಗೊಂಡ ಕಾರ್ಯಗಳನ್ನು ಪೂರ್ಣಗೊಳಿಸುವುದೇ ಆಗಿದೆ. ಸಂಪನ್ಮೂಲವೆಂಬುದು ಕೇವಲ ದೈಹಿಕ ಕಸರತ್ತಿನ ಜೊತೆಗೆ ಮನುಷ್ಯನ ಬೌದ್ಧಿಕ ಹಾಗೂ ಮಾನಸಿಕ ಶಕ್ತಿಯೂ ಅಡಗಿದೆ ಎಂಬುದು ಗಮನಾರ್ಹ. ಎಲ್.ಎಫ್. ಉರ್ವಿಕ್ ಪ್ರಕಾರ ವ್ಯವಹಾರಿಕ ಸಂಸ್ಥೆಗಳು ದೀರ್ಘಾವಧಿಯಲ್ಲಿ ಮುಂದುವರೆಯುವುದು ಅಥವಾ ಮುರಿದು ಬೀಳುವುದು ಕೇವಲ ಮಾನವರಿಂದಲೇ ಹೊರತು ಮಾರುಕಟ್ಟೆಗಳಿಂದಲಾಗಲೀ ಅಥವಾ ಬಂಡವಾಳದಿಂದಾಗಲೀ, ಪೇಟೆಗಳಿಂದಾಗಲೀ ಅಥವಾ ಯಂತ್ರೋಪಕರಣಗಳಿಂದ ಅಲ್ಲ ಈ ಮಾತು ಯಂತ್ರವನ್ನು ಸಂಶೋಧಿಸಿದ ಮನುಷ್ಯನು ಕಾಲಾನುಕ್ರಮದಂತೆ ತನ್ನ ಸಂಪನ್ಮೂಲ ಶಕ್ತಿಯನ್ನು ಕಡಿಮೆ ಬಳಸುತ್ತಿರಬಹುದು. ಆದರೆ ಅದರ ರೂಪುರೇಷೆ, ಕಲ್ಪನೆ, ಜ್ಞಾನ, ನೈಪುಣ್ಯತೆ, ಅದರ ಕಾರ್ಯಸಾಮರ್ಥ್ಯತೆಯಿಂದಾಗಿ ಒಂದು ಸಂಸ್ಥೆಗೆ ಬೇಕಾದ ಅನುಕೂಲಗಳು ಸಿಗುತ್ತವೆ. ಜಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳು ಆರ್ಥಿಕತೆಯ ಬೆಳವಣಿಗೆಗೆ ಎಷ್ಟು ಪೂರಕವೋ ಅಷ್ಟೇ ಪ್ರಮಾಣದಲ್ಲಿ ಮಾರಕವೂ ಆಗಿವೆ. ಆದರೆ ಅವುಗಳನ್ನು ಲೋಕ ಕಲ್ಯಾಣಕ್ಕೆ ಬಳಸಿಕೊಳ್ಳುವ ರೀತಿ ಮನುಷ್ಯನ ವಿವೇಚನೆಗೆ ಸಂಬಂಧಿಸಿದ್ದಾಗಿದೆ. ಅಂದರೆ ಇಲ್ಲಿ ಮನುಷ್ಯನ ಬುದ್ಧಿಶಕ್ತಿ ಪ್ರಮುಖ ಪಾತ್ರವಹಿಸುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.

ಒಂದು ರಾಷ್ಟ್ರದ ಪ್ರಗತಿಗೆ ಆ ದೇಶದ ಜನರೇ ಪ್ರಮುಖ ಸಂಪನ್ಮೂಲವಾಗಿರುತ್ತಾರೆ. ಕೈಗಾರಿಕೆಗಳಲ್ಲಿ ಕಾರ್ಮಿಕರು ಇರುವ ಹಾಗೆ ಕುಶಲಮತಿಗಳಾದ ರಾಜಕಾರಣಿಗಳು ತಮ್ಮ ಕಾರ್ಯದಕ್ಷತೆಯಿಂದ ಸರ್ಕಾರಿ ನೌಕರರೊಡಗೂಡಿ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಇಡೀ ನೌಕರರು ಪ್ರಮುಖ ಸಂಪನ್ಮೂಲವಾಗಿ ಹೊರಹೊಮ್ಮುತ್ತಾರೆ.

ಮಾನವ ಸಂಪನ್ಮೂಲ ಇತ್ತೀಚೆಗೆ ಬೆಳೆದು ಬಂದ ವಿದ್ಯಮಾನವಲ್ಲ. ಮಾನವ ತನ್ನ ಅಭಿವೃದ್ಧಿಯನ್ನು ತನ್ನಿಂದಲೇ ಕಂಡುಕೊಂಡಿದ್ದಾನೆ ಮತ್ತು ನಿಸರ್ಗದ ಮಡಿಲಲ್ಲಿ ಹಲವು ವಿಚಾರಗಳನ್ನು ಕಲಿಯುತ್ತಾ, ಕಲಿಸುತ್ತಾ ಜೀವನವನ್ನು ಕಟ್ಟಿಕೊಂಡು ಅಭಿವೃದ್ಧಿಯ ಪಥದಲ್ಲಿ ಸಾಗಿ ಬಂದಿರುವುದನ್ನು ಕಾಣಬಹುದು. 1969ರಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ಲಿಯೊನಾರ್ಡ್ ನ್ಯಾಡ್ಲರ್ (Leonard Nadler) ಎಂಬುವವರು ಪ್ರಥಮವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಎಂಬ ಪದವನ್ನು ಬಳಕೆಗೆ ತಂದರು  ನಿರ್ದಿಷ್ಟ ಕಾಲಕ್ಕೆ ಸಂಘಟಿತವಾದ ಮತ್ತು ಮಾನವನ ವರ್ತನೆಯಲ್ಲಿ ಬದಲಾವಣೆಯಾಗಬಹುದೆಂದು ರೂಪಿಸಿದ ಕಲಿಕೆಯ ಅನುಭವವೇ ಮಾನವ ಸಂಪನ್ಮೂಲ ಎಂದು ವ್ಯಾಖ್ಯಾನಿಸಿದ್ದಾನೆ. ಒಟ್ಟಿನಲ್ಲಿ ಒಬ್ಬರಿಂದ ಮತ್ತೊಬ್ಬರು ನೋಡಿ ಕಲಿಯುತ್ತಾ, ಸಂಘಟಿತರಾಗುತ್ತಾ ನಿರ್ದಿಷ್ಟ ಯೋಜನೆಯನ್ನು ಗುರಿಮುಟ್ಟುವಲ್ಲಿ ಮಾನವ ಹಲವು ಸಾಮರ್ಥ್ಯವನ್ನು ತೋರಿದ್ದಾನೆ. 1969ರ ಮುಂಚೆ ಅಧ್ಯಯನ ದೃಷ್ಟಿಯಿಂದ ಇದನ್ನು ನೋಡಿಲ್ಲದ ಕಾರಣ ಅದು ಮನುಷ್ಯನಿಗೆ ತನ್ನ ಶಕ್ತಿ ಸಾಮರ್ಥ್ಯವೇನೆಂದು, ಅದಕ್ಕೆ ಯಾವ ಹೆಸರೆಂದೂ ತಿಳಿಯದಿರಬಹುದು. ದೈಹಿಕ ಶ್ರಮ ಬೇಡುವ ಕಾರ್ಯಗಳು ಒಂದೆಡೆಯಾದರೆ ಯುಕ್ತಿಯಿಂದ ಕೈಗೊಳ್ಳುತ್ತಿದ್ದ ಕೆಲಸಕಾರ್ಯಗಳು ಮತ್ತೊಂದೆಡೆ. ಹೀಗೆ ದೈಹಿಕ ಹಾಗೂ ಬೌದ್ಧಿಕ ಶ್ರಮದ ಆಧಾರದ ಮೇಲೆ ಕೈಗೊಳ್ಳುತ್ತಿದ್ದ ಎರಡೂ ಬಗೆಯ ಕಾರ್ಯಗಳಿಗೂ ಮಾನವ ಸಂಪನ್ಮೂಲವೇ ಮೂಲ.
ಮಾನವಸಂಪನ್ಮೂಲ: ಒಂದು ಸಂಸ್ಥೆಯ ಕ್ರಿಯಾಶಕ್ತಿ, ಸಮೂಹ ಚಿಂತನಾಕ್ರಮ, ಬಂಡವಾಳದಷ್ಟೇ ಹೆಚ್ಚು ಮೌಲ್ಯವೂ, ಬೆಲೆಯುಳ್ಳದ್ದೂ ಆಗಿರುವ ಮುಖ್ಯವಾದ ಕಾರ್ಯಶಕ್ತಿಯೇ ಮಾನವ ಸಂಪನ್ಮೂಲವಾಗುತ್ತದೆ. ಹಲವು ವ್ಯಕ್ತಿಗಳು ಒಂದು ಕ್ರಿಯಾ ಯೋಜನೆಯಲ್ಲಿ ತೊಡಗಿಕೊಂಡರೆ ನಿರ್ದಿಷ್ಟ ಗುರಿಯನ್ನು ತಲುಪುವುದು ಸುಲಭವಾಗುತ್ತದೆ. ಒಟ್ಟಿನಲ್ಲಿ ಮಾನವನು ತಾನು ತೊಡಗಿಕೊಳ್ಳುವಿಕೆಯಿಂದ ಈ ಸಂಪನ್ಮೂಲದ ಕೊಡುಗೆ ಚಿಗುರೊಡೆಯುತ್ತದೆ. ಈ ಸಂಪನ್ಮೂಲ ಕೆಲವು ಬಾರಿ ವ್ಯಕ್ತಿಗೆ ಪ್ರತಿನಿಧಿಯಾದರೆ ಕೆಲವೊಮ್ಮೆ ಭಿನ್ನತೆಯಿಂದ ಕೂಡಿರುತ್ತದೆ.


  1. ಮಾನವಸಂಪನ್ಮೂಲ ಹಲವು ಬಗೆಯ ಯೋಚನೆ ಮತ್ತು ಸಂದರ್ಭ, ಘಟನೆ ಮತ್ತು ಸ್ಥಳದ ಮೇಲೆ ನಿರ್ಧಾರವಾಗುತ್ತವೆ.
  2. ಮಾನವ ಸಂಪನ್ಮೂಲ ವ್ಯಕ್ತಿಗತವಾಗಿರದೇ ಸಮೂಹತೆಯಿಂದ, ಜನಾಂಗೀಯ ದೃಷ್ಟಿಯಿಂದಲೂ ಮತ್ತು ತನ್ನ ಕುಶಲತೆಯಿಂದಲೂ ಕೌಟುಂಬಿಕ ಪ್ರಭಾವಳಿಯಿಂದಲೂ ಕಾಣಬಹುದು.
  3. ಸಂಸ್ಥೆಗೆ ಮುಖ್ಯವಾಗಿ ಬೇಕಾದುದು ಮಾನವ ಸಂಪನ್ಮೂಲವೇ, ಸರಿಯಾದ ಸಮಯಕ್ಕೆ, ನಿರ್ದಿಷ್ಟ ಗುರಿಗೆ ತಕ್ಕ ಹಾಗೆ ಸಿಗಬೇಕಾದ ಕಾರ್ಯಕ್ಷಮತೆ, ಅನುಭವದಿಂದ, ತರಬೇತಿಯಿಂದ ವಂಶಪಾರಂಪರ್ಯವಾಗಿ ದಕ್ಕಬಹುದು.
  4. ಮಾನವ ಸಂಪನ್ಮೂಲ ಎನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲೂ ಇರುತ್ತದೆ. ತಾನು ದುಡಿಯುವ, ತೊಡಗಿಸಿಕೊಳ್ಳುವ, ಕಾರ್ಯಕ್ಷಮತೆಯ ಆಧಾರದ ಮಾನವ ಸಂಪನ್ಮೂಲದ ಫಲ ನಿರ್ಧರಿತವಾಗುತ್ತದೆ.
  5. ಅಂದಿಗಿಂತಲೂ ಇಂದು ಮಾನವ ಸಂಪನ್ಮೂಲ ಶಿಕ್ಷಣದ ಸಾಮರ್ಥ್ಯದಿಂದ ಹೆಚ್ಚು ಹೆಚ್ಚು ಅವಲಂಭಿತವಾಗುತ್ತಿರುವುದು ಗಮನಿಸಬೇಕಾದ ಸಂಗತಿ.
  6. ಶಿಕ್ಷಣದ ಬೆಳಕಿನಿಂದಲೇ ಹೊಸ ಪರಿಕಲ್ಪನೆಗಳನ್ನು ಹುಟ್ಟು ಹಾಕುವ ಅನುಭವ ಜನ್ಯವಾದ ಹೊಸಲೋಕವನ್ನು ತನ್ನ ಕಲ್ಪನೆ, ವಾಸ್ತವತೆಯಿಂದ ಸಾಹಿತ್ಯ ಸೃಷ್ಟಿಸಿ ಅದರಿಂದ ಮಾನವನ ಬುದ್ಧಿ ವಿಕಾಸಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳುವ ಪರಿ ಮುಖ್ಯವಾದುದು.​
Picture
Join Our Conference Google Group
ಮಾನವ ಸಂಪನ್ಮೂಲ ಒಂದು ಚಟುವಟಿಕೆಯಾಗಿದ್ದು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ ಬುದ್ಧಿವಿವೇಚನೆಯ ಆಳದಲ್ಲಿಯೇ ಯೋಚಿಸುತ್ತಾ ಕೈಗೂಡುವ ಕಾರ್ಯಗಳು ಮೌಖಿಕವಾಗಿಯೂ ನಡೆಯುತ್ತಿರುತ್ತದೆ. ಮಾನವನ ಬುದ್ಧಿಶಕ್ತಿಯ ಆಧಾರದ ಮೇಲೆ ಮಾತನಾಡುವ ಕಲೆಯು ಒಬ್ಬರಿಗಿಂತ ಮತ್ತೊಬ್ಬರಲ್ಲಿ ಭಿನ್ನವಾಗಿರುತ್ತದೆ. ಹಾಗೆಯೇ ಆಲೋಚಿಸುವ ಹಾಗೂ ಚಿಂತಿಸುವ ಕವಿಯು ಸಾಮಾನ್ಯ ಮನುಷ್ಯನಿಗಿಂತ ಭಿನ್ನವಾಗಿ ಯೋಚಿಸುತ್ತಾನೆ. ತನ್ನ ಸುತ್ತಮುತ್ತಲಿನ ಸಮಾಜ ಆತನಿಗೆ ಸೂಕ್ಷ್ಮಗ್ರಹಿಕೆಯಿಂದಾಗಿ ಭಿನ್ನನೋಟದಲ್ಲಿ ನೋಡುವ ಕ್ರಮದಿಂದಾಗಿ ಪೂರ್ವಜರು ಪುರಾಣ, ಘಟನೆ, ಇತಿಹಾಸ ಸೃಷ್ಟಿಯ ಲಯ-ವಿಲಯಗಳ ವಿವರಗಳು ಪುರಾಣ ಕಾವ್ಯಗಳಾಗಿ ಮೂಡಿಬಂದಿದೆ. ಪ್ರಕೃತಿಯ ಗರ್ಭದಲ್ಲಿಯೇ ಉದಯಿಸಿದ ಎಲ್ಲಾ ನಿಗೂಢ ವಿವರಗಳು ಕಾವ್ಯ ಸಾಹಿತ್ಯವಾಗಿ ಮೂಡಿಬಂದಿರುವುದನ್ನು ನಾವು ಕಾಣಬಹುದು. ಉದಾ: ಗರುಡಪುರಾಣ, ಮತ್ತು ವಿಷ್ಣುಪುರಾಣ ಗ್ರಂಥಗಳು ಹಿಂದಿನದೆಲ್ಲವನ್ನು ಹೇಳಿರುವ ದಾಖಲೆಯು ನಮ್ಮ ಕಣ್ಣುಗಳ ಮುಂದಿವೆ. ಧಾರ್ಮಿಕ ಜಿಜ್ಞಾಸೆಗಳನ್ನು ಕುರಿತು ಹಲವು ಗ್ರಂಥಗಳು ಬಂದಿರುವುದನ್ನು ನಾವು ಕಾಣಬಹುದು. ವಿಶ್ವಸೃಷ್ಟಿಯಲ್ಲಿ ಮೂಲವಾಗಿ ನೊಡುವುದಾದರೆ ಪಶುಸಂಗೋಪನೆ, ಬೇಟೆಯಂತಹ ಕಲಿಕೆಯನ್ನು ಕುರಿತ ಮನುಷ್ಯ ಕಾಡಿನಿಂದ ನಾಡಿಗೆ ಬರುವಾಗ ಹಲವು ಪಲ್ಲಟಗಳನ್ನು ಪಡೆದುಕೊಂಡು ಬರುತ್ತಾನೆ. ಪಶು, ಪಕ್ಷಿ, ಪ್ರಾಣಿಗಳನ್ನು ನೋಡಿ ಅದರಂತೆ ಕೂಗುವುದು, ಸೂರ್ಯ, ಚಂದ್ರ, ಮಳೆ, ಮೋಡಗಳನ್ನು ನೋಡಿ ಗಾಬರಿಯಾಗಿ ಅವುಗಳನ್ನು ಹೆದರಿಕೆಯಿಂದ ಪೂಜಿಸುವುದು ಮತ್ತು ಅವುಗಳಿಗೆ ಕೃತಜ್ಞನಾಗಿ ಮತ್ತು ವಿಧೇಯನಾಗಿ ನಡೆದುಕೊಂಡಿರುವುದು ನಮ್ಮ ಜನಪದ ಪೂರ್ವದ ಇತಿಹಾಸ ಹೇಳುತ್ತದೆ. ಈ ತಿಳುವಳಿಕೆಯ ಸಂಪನ್ಮೂಲವೇ ನಮ್ಮಲ್ಲಿ ಹೊಸಕಾವ್ಯಗಳ ಸೃಷ್ಟಿಗೆ ಪ್ರೇರಕ. 

ಕನ್ನಡದ ಕವಿರಾಜಮಾರ್ಗಕಾರ ಶ್ರೀವಿಜಯ ನಮ್ಮ ಹಿಂದಿನವರು ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಎಂದು ಹೇಳಿರುವುದು ಅವರ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ. ತಮಗೆ ಆಶ್ರಯ ನೀಡಿದ್ದ ರಾಜನ ರಾಜ್ಯನೀತಿ, ಯುದ್ಧನೀತಿ, ತೆರಿಗೆನೀತಿ, ಜನಕಲ್ಯಾಣ ಕಾರ್ಯಕ್ರಮಗಳಿಗೆ ಕಾವ್ಯ ರೂಪ ನೀಡಿದ ಕವಿಗಳ ಜ್ಞಾನಸಂಪತ್ತಿಗೆ ಮನ್ನಣೆ ನೀಡಿದ ರಾಜರ ಕೊಡುಗೆಯನ್ನು ಕನ್ನಡನಾಡು ಸದಾ ನೆನಪಿಸಿಕೊಳ್ಳುತ್ತದೆ. ಸಾಹಿತ್ಯ, ಸಮಾಜ, ಸಂಸ್ಕೃತಿಯ ಮೌಲ್ಯವನ್ನು ಉತ್ತೇಜಿಸುವುದೇ ಶಿಕ್ಷಣದ ಆಶಯವಾಗಿದೆ. ಗುರುಕುಲ ಶಿಕ್ಷಣದ ಪದ್ದತಿಯಲ್ಲಿ ಸಾಹಿತ್ಯವನ್ನು ಪ್ರಧಾನವಾಗಿ ಬೋಧಿಸುತ್ತಿದ್ದರೂ ಸಹ ಶಿಕ್ಷಣ ಜಾತೀಯ ಶ್ರೇಣೀಕರಣದಲ್ಲಿ ದೊರೆಯುತ್ತಿತ್ತು. ಅಂದು ಶಿಕ್ಷಣವನ್ನು ಪಡೆಯುತ್ತಿದ್ದವರು ಮೇಲ್ವರ್ಗದವರು ಮಾತ್ರ ಎಂಬುದನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ.

ಇಂದು ಎಲ್ಲಾ ವರ್ಗದವರಿಗೂ ಶಿಕ್ಷಣ ಲಭಿಸುತ್ತಿದೆ. ಇದರಿಂದಾಗಿ ಮನುಷ್ಯನು ವಿಕಾಸ ಪಥದಲ್ಲಿ ಸಾಗುತ್ತಿದ್ದಾನೆ ಹಾಗೂ ಪ್ರಪಂಚವನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳುತ್ತಿದ್ದಾನೆ. ಮಾನವನ ವಿಕಾಸದಲ್ಲಿ  ಸಾಹಿತ್ಯ ಕ್ಷೇತ್ರದ ಮಹತ್ವವನ್ನು ಅಲ್ಲಗಳೆಯುವಂತಿಲ್ಲ. ಮಗು ಹುಟ್ಟಿದಾಗಿನಿಂದಲೇ ತಾಯಿಯ ಜೋಗುಳದಿಂದಲೇ, ಮಗುವಿನ ಕರ್ಣಪಟಲದ ಮೇಲೆ ಸಾಹಿತ್ಯದ ತುಣುಕುಗಳು ಮೇಲಿಂದ ಮೇಲೆ ಬೀಳುತ್ತಿರುತ್ತದೆ. ಜ್ಞಾನದ ವಿಸ್ತರಣೆಯಲ್ಲಿ ಒಂದಾದ ಕಾವ್ಯವು ವಿಶಿಷ್ಟವಾದ ಒಂದು ಕಲೆ. ಕಾವ್ಯವನ್ನು ಎಲ್ಲರೂ ಬರೆಯಲಾರರು. ಅಥವಾ ಕಾವ್ಯವು ಎಲ್ಲರಿಗೂ ತಲುಪದು. ಆದ ಕಾರಣ ಸರ್ವಜ್ಞನ ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ, ಸಾಹಿತ್ಯ ಎಲ್ಲರಿಗಲ್ಲ ಮಾತು ಸಾರ್ವಕಾಲಿಕವಾದುದು. ಆದರೆ ಹೀಗೆ ಹೇಳಿದ ಜ್ಞಾನದ ಸರದಾರ ಸರ್ವಜ್ಞನನ್ನು ಕನ್ನಡಿಗರ ನಾಲಗೆಯ ಮೇಲೆ ನಲಿದಾಡಿದ್ದನ್ನು ನಾವು ನೆನಪಿಸಿಕೊಳ್ಳಬಹುದು. ಓದು ಬರಹ ಕಲಿಯದ ವ್ಯಕ್ತಿಯು ಸರ್ವಜ್ಞನ ತ್ರಿಪದಿ ಸಾಲುಗಳನ್ನು ನೆನಪಿಸಿಕೊಳ್ಳುವನು. ಇದರಿಂದ ತನ್ನ ದೈಹಿಕ ಮತ್ತು ಮಾನಸಿಕ ಬುದ್ಧಿ ಬೆಳವಣಿಗೆಯಲ್ಲಿ ಸಾಹಿತ್ಯದ ಪ್ರಭಾವವನ್ನು ಅಲ್ಲಗಳೆಯಲಾಗುವುದಿಲ್ಲ.

ಇನ್ನೂ ಹಿಂದಿನ ಸಾಹಿತ್ಯ ಪ್ರಕಾರಗಳನ್ನು ಯೋಚಿಸುವುದಾದರೆ ಜನಪದರು ಹೆಣೆದ ಜನಪದ ಕಾವ್ಯ ಪ್ರಕಾರದ ಶ್ರೀಮಂತಿಕೆ ಅಕ್ಷಯವನ್ನು ನೋಡಿದರೆ ಅಚ್ಚರಿಯಾಗುತ್ತದೆ.

ಬೆಳಗಾಗ ನಾನಾದ್ದು ಯಾರ್ಯಾರಾ
ನೆನೆಯಲಿ| ಎಳ್ಳು ಜೀರಿಗೆ
ಬೆಳೆಯೋಳ | ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು|

ಈ ಜನಪದ ಗೀತೆಯು ಭೂಮಿ ಮತ್ತು ಪ್ರಕೃತಿಯ ತತ್ವವನ್ನು ನೆನೆಯುವುದರ ಜೊತೆಗೆ ಕೃತಜ್ಞತೆಯ ಸಾಕಾರವೂ ಇದೆ.

ಜನಪದ ಸಾಹಿತ್ಯದ ಅಪಾರ ಕೊಡುಗೆ :- ಜನಪದ ಸಾಹಿತ್ಯವು ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಅಪಾರವಾದ ತನ್ನ ಜ್ಞಾನಶಿಸ್ತುಗಳನ್ನು ಕೊಡುಗೆ ನೀಡಿದೆ. ಶಿಸ್ತು, ಮಾನವೀಯ ಹಾಗೂ ನೈತಿಕ ಮೌಲ್ಯಗಳು, ಲೋಕಜ್ಞಾನ, ತಿಳುವಳಿಕೆ, ಪ್ರಕೃತಿ ಜ್ಞಾನದಿಂದಾಗಿ ಕೃಷಿಯ ಹಾಗೂ ದುಡಿಮೆಯ ಎಲ್ಲಾ ಆಯಾಮಗಳು ಜಾನಪದ ಸಾಹಿತ್ಯದಲ್ಲಿ  ಅಡಗಿವೆ. ಹೀಗೆ ಎಲ್ಲವೂ ಅಪಾರವಾಗಿರುವ ಜ್ಞಾನಶಿಸ್ತುಗಳು ಭೂಮಿ ಮತ್ತು ಆಕಾಶಗಳ ನಡುವೆ ಇರುವ ಸಂಸ್ಕೃತಿ ಮತ್ತು ಜೀವನಮೌಲ್ಯಗಳನ್ನು ತನ್ನ ಚಟುವಟಿಕೆಯಿಂದಲೇ ಹಿಡಿದಿಟ್ಟಿರುವ ಶ್ರೇಯಸ್ಸು ಜನಪದ ಸಾಹಿತ್ಯಕ್ಕೆ ಸಲ್ಲುತ್ತದೆ.

ಶಿಕ್ಷಣ ಕ್ಷೇತ್ರದಲ್ಲಿ ಮಾನವಸಂಪನ್ಮೂಲ ಮತ್ತು ಸಾಹಿತ್ಯ: ಶಿಕ್ಷಣ ಕ್ಷೇತ್ರದಲ್ಲಿನ ಸಾಹಿತ್ಯದ ಮೌಲಿಕ ವಿಚಾರಗಳು ಮಗುವಿನ ಬುದ್ದಿ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಗು ಬೆಳೆದಂತೆ ಆಲೋಚಿಸುವ, ವಿಮರ್ಶಿಸುವ, ಅವಲೋಕಿಸುವ ಹಾಗೂ ತರ್ಕಿಸುವ ಜ್ಞಾನವನ್ನು ಶಿಕ್ಷಣವೆಂಬ ಜ್ಯೋತಿ ದೊರಕಿಸಿಕೊಡುವುದು. ಮಾನವೀಯ ಮೌಲ್ಯವನ್ನು ಉಳಿಸುವ, ಬೆಳೆಸುವ ಕಾವ್ಯ ಸಂಪತ್ತು ಮನುಷ್ಯನ ವಿಕಾಸಕ್ಕೆ ನಾಂದಿಯಾಡುತ್ತದೆ. ಕಾವ್ಯದಿಂದ ನಮಗೆ ಆಗುವ ಪ್ರಯೋಜನಗಳನ್ನು ಡಿ.ವಿ.ಜಿ ಹೀಗೆ ಪಟ್ಟಿ ಮಾಡುತ್ತಾರೆ.


  1. ಅದು ನಮಗೆ ನಮ್ಮಗಳ ಅಂತಃ-ಪ್ರಪಂಚವನ್ನು ತೋರಿಸಿಕೊಡುವ ಕಿಟಕಿ, ಮನುಷ್ಯ ವಿಜ್ಞಾನಶಾಸ್ತ್ರದ ಮೂಲ ಸಾಮಗ್ರಿ ಅದರಲ್ಲಿರುತ್ತದೆ. ಅದು ನಮ್ಮಗಳ ಮೈಯನ್ನು ನಮ್ಮ ಕಣ್ಣ ಮುಂದೆ ಬಿಚ್ಚಿರಿಸುತ್ತದೆ.
  2. ಅದು ಹೃದಯದ ನೀರ್ಗಲ್ಲನ್ನು ಹೊಳೆಯಾಗಿಸಿ ಹರಿಯಿಸುವ ಮತ್ತು ಅಲ್ಲಿಯ ಕೆಸರು ಮಣ್ಣನ್ನು ಗಟ್ಟಿ ಮಾಡಿ ವಜ್ರವಾಗಿಸುವ ಸೂರ್ಯಪ್ರಭೆ
  3. ಒಂದು ಮಹತ್ವದ ಕಡೆಗೆ ಜೀವನವನ್ನು ಕರೆದೆಳೆಯುವ ದಿವ್ಯಧ್ವನಿ ಅದರಿಂದ ಶ್ರೇಯ ಸ್ವರೂಪದ ದರ್ಶನ.

ಈ ಮೂರೂ ಅಂಶಗಳಲ್ಲಿ ಕಂಡುಬರುವ ಜ್ಞಾನದ ವೃದ್ಧಿಯು ಬದುಕಿನ ಮೇಲೆ ಸಾಹಿತ್ಯ ಬೀರುವ ಪ್ರಭಾವವನ್ನು ಸೂಚಿಸುತ್ತದೆ. ಹಾಗಾಗಿಯೇ ಇಂದು ಜ್ಞಾನದಿಂದ ಅಪಾರ ಬುದ್ಧಿವಂತಿಕೆಯು ಸಂಪನ್ಮೂಲವಾಗಿ ಮಾರ್ಪಟ್ಟಿರುವುದನ್ನು ನೋಡಬಹುದು. ಪ್ರತಿಯೊಬ್ಬ ವಿಜ್ಞಾನಿ, ರಾಜಕಾರಣಿ, ಚಿತ್ರಕಾರ, ಕವಿ, ಕಲಾವಿದ ಅಥವಾ ಸೃಜನಶೀಲವಾದುದನ್ನು ಸೃಷ್ಟಿಸುವ ಪ್ರತಿ ವ್ಯಕ್ತಿಯಲ್ಲೂ ಒಬ್ಬ ಗುರುವಿರುತ್ತಾನೆ ಎನ್ನುವುದು ಅವನಲ್ಲಿರುವ ಜ್ಞಾನಸಂಪನ್ನತೆಯಿಂದ ರೂಪಿತವಾಗಿರುತ್ತದೆ. ವ್ಯವಹಾರ ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ, ಹಣಕಾಸಿನ ನಿರ್ವಹಣೆ, ರಾಜಕೀಯ ಶಾಸ್ತ್ರ ಇವುಗಳೊಂದಿಗೆ ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನ ಕಾಲದ ಹಲವು ವಚನಕಾರರು ತಮ್ಮ ವೃತ್ತಿಯಲ್ಲಿ ತೋರಿಸಿದ ಅಪಾರ ಶ್ರದ್ಧೆ ಹಾಗೂ ಕೂಡಿ ಬಾಳುವ ಹೃದಯ ವೈಶಾಲ್ಯತೆ ಇಂದಿನ ಜಾತ್ಯಾತೀತ ಶಕ್ತಿಗೆ ಭದ್ರಬುನಾದಿ ಹಾಕಿಕೊಟ್ಟಿದೆ.

ಕನ್ನಡ ಸಾಹಿತ್ಯಕ್ಕೆ ಕುವೆಂಪು, ಶಿವರಾಮಕಾರಂತ, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿನಾಯಕ ಕೃಷ್ಣ ಗೋಕಾಕ್ ಇನ್ನಿತರ ಮೇರು ಕವಿಗಳ ಕೊಡುಗೆ ಅನನ್ಯವಾದುದ್ದು. ಕುವೆಂಪು ಮತ್ತು ಬೇಂದ್ರೆಯವರು ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಲು ತಮ್ಮ ಕಾವ್ಯ-ಕವನಗಳನ್ನು ಧೀಶಕ್ತಿಯನ್ನು ಬಳಸಿಕೊಂಡಿದ್ದು ಸಾಮಾನ್ಯವಾದ ಕೆಲಸವಲ್ಲ. ಅಂದು ಬರುತ್ತಿದ್ದ ಪತ್ರಿಕೆಗಳಲ್ಲಿ ಇವರ ಕವಿತೆಗಳು ಮತ್ತು ಬರೆಯುತ್ತಿದ್ದ ಲೇಖನಗಳು ಭಾವನಾತ್ಮಕವಾಗಿ ಒಂದುಗೂಡಿಸುವ ನಿಟ್ಟಿನಲ್ಲಿ ಜನರ ಮೇಲೆ ಪ್ರಭಾವ ಬೀರಿವೆ. ಕುವೆಂಪುರವರು ಒಂದು ಯುಗದ ಜನಮಾನಸವನ್ನು ಬದಲಿಸುವಲ್ಲಿ ಅವರ ವೈಚಾರಿಕ ಕಾದಂಬರಿಗಳು ಗಮನಾರ್ಹವಾಗಿ ಕೆಲಸ ಮಾಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಸಾಹಿತ್ಯ ಪಠ್ಯವನ್ನು ಅಭ್ಯಸಿಸಿದ ಸಮುದಾಯಗಳು ಸ್ವಾಭಿಮಾನ, ಸಾಮಾಜಿಕತೆ, ದನಿ ಇಲ್ಲದವರ ಬಗೆಗಿನ ಅನುಕಂಪ, ಮಾನವೀಯತೆ ಮೂಡಿಸಿಕೊಳ್ಳಲಿಕ್ಕೆ ಸಾಧ್ಯವಾಗಿದೆ. ಉದಾಹರಣೆಗೆ ಸಾಹಿತ್ಯದ ಅಭಿರುಚಿ ಇರುವವನು ನೌಕರಿಯಲ್ಲಿ ಇರುವಾಗ ಆತ ಗ್ರಾಹಕರನ್ನು ಮತ್ತು ಸಾರ್ವಜನಿಕರನ್ನು ನೋಡುವ ಮತ್ತು ಅದಕ್ಕೆ ಪ್ರತಿ ಸ್ಪಂದಿಸುವ ಭಿನ್ನತೆಯನ್ನು ಕಾಣಬಹುದು. ಗಾಂಧೀಜಿಯೇ ತಮ್ಮ ಜೀವನ ಚರಿತ್ರೆಯಲ್ಲಿ ಜಾನ್ ರಸ್ಕಿನ್ ಬರೆದ ಅನ್ ಟು ದಿ ಲಾಸ್ಟ್, ವಾರ್ ಅಂಡ್ ಪೀಸ್, ತಮ್ಮ ಜೀವನದ ಮೇಲೆ ಪ್ರಭಾವಿಸಿದ ಕೃತಿ ಎಂದು ಹೇಳಿಕೊಂಡಿದ್ದಾರೆ. ರಾಜಾ ಸತ್ಯ ಹರಿಶ್ಚಂದ್ರ ಸಿನಿಮಾವನ್ನು ನೋಡಿ ಕಣ್ಣೀರು ಹಾಕಿದವರು ಭವಿಷ್ಯದಲ್ಲಿ ಸತ್ಯ ಮತ್ತು ಧರ್ಮದ ಹಾದಿಗಳಲ್ಲಿ ಸಾಗಲು ತಮ್ಮ ಜೀವನದ ಹಲವು ಸುಖ ಮತ್ತು ಲೋಲುಪತೆಯನ್ನು ತ್ಯಜಿಸಿರುವ ಹಲವಾರು ನಿದರ್ಶನಗಳಿವೆ. ಸಾಹಿತ್ಯ ಮಾನವ ಸಂಪನ್ಮೂಲಕ್ಕೆ ಉತ್ತಮ ಬುನಾದಿ ಹಾಕಿಕೊಡುವಲ್ಲಿ ಓದುವ ಕೃತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರೆ ಅತಿಶಯೋಕ್ತಿಯಾಗಲಾರದು. ರಾಜಕಾರಣಿಗಳಿಗೆ ಓದುವ ಅಭಿರುಚಿ ಇದ್ದರೆ ಮಾನವೀಯ ಸ್ಪರ್ಶವು ಮತ್ತಷ್ಟು ಹೆಚ್ಚಾಗುತ್ತದೆ. ಇದರಿಂದಾಗಿಯೇ ಸಾಹಿತ್ಯ, ಸಮಾಜ ಹಾಗೂ ರಾಜಕಾರಣ ಪರಸ್ಪರ ಕೊಂಡಿಗಳಂತೆ ಸಂಬಂಧವಿರಿಸಿಕೊಂಡು ಕೆಲಸ ಮಾಡುತ್ತವೆ.

ಯಾವುದೇ ಕಾರ್ಯಗಳಿಗೆ ಸ್ಪೂರ್ತಿ, ಪ್ರಭಾವಳಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಶ್ರೀಸಾಮಾನ್ಯರು ಕೈಗೊಳ್ಳುವ ಪ್ರತಿಯೊಂದು ನಿರ್ಧಾರ ತಾವು ಓದಿದ ಕೃತಿಯಿಂದಲೋ ಅಥವಾ ತನ್ನ ಕಣ್ಣಮುಂದೆ ನಡೆದ ಘಟನೆಯಿಂದಲೋ ಅಥವಾ ತಮ್ಮ ಸ್ವಂತ ಅನುಭವದಿಂದಲೋ ಸ್ಪೂರ್ತಿ ಪಡೆದಿರುತ್ತದೆ ಎಂಬುದನ್ನು ನಂಬಲೇಬೇಕು. ವಕೀಲನಾದವನು ಕೇವಲ ಕೇಸ್‍ಗಳನ್ನು ಗೆದ್ದು ಕೊಡುವುದರ ಜೊತೆಗೆ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕು. ಆಗ ಮಾತ್ರ ಓದಿದ ಸಾಹಿತ್ಯದ ವಿವೇಚನೆ ಅರಿವು ಉಂಟಾಗಿ ಮತ್ತೊಬ್ಬರಿಗೆ ಮಾದರಿಯಾಗುವನು. ಅಕ್ಷರ ಎಂದಿಗೂ ಅಹಂಕಾರವಾಗಬಾರದು ಬದಲಿಗೆ ಅದು ಆರೋಗ್ಯಕರ ಬದಲಾವಣೆಯ ಅಸ್ತ್ರವಾಗಬೇಕು.
​
ಅಂತಿಮವಾಗಿ ಸಂಪನ್ಮೂಲವೆನ್ನುವುದು ಭೌತಿಕ ತಳಹದಿಯ ಜೊತೆಗೆ ಕ್ರಿಯಾಶಕ್ತಿಯ ಮೇಲೆ ನಿಂತಿರುತ್ತದೆ. ಯಾವುದೇ ದೇಶದ ಸಂಪತ್ತು ಆಯಾ ದೇಶದ ಕಾರ್ಯಶಕ್ತಿಯ ಮೇಲೆ ನಿರ್ಧಾರವಾಗುತ್ತದೆ. ಪ್ರಾಕೃತಿಕವಾಗಿ ಎಷ್ಟೇ ಸಂಪನ್ನರಾದರೂ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಅಪಾರ ಅಧಿಕಾರಿವರ್ಗ ಮುಖ್ಯವಾಗುತ್ತದೆ. ಸಾಹಿತ್ಯವೆನ್ನುವುದು ನಿರಂತರವಾಗಿ ಆಯಾ ಕಾಲಕ್ಕೆ ಹೊಸದನ್ನು ಕೊಡುತ್ತಾ ಬಂದಿದೆ. ಕನ್ನಡದ ಸಾಹಿತ್ಯ ಶ್ರೀಮಂತಿಕೆಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಕೀರ್ತಿ ಹಲವು ಮಹನೀಯರಿಗೆ ಸಲ್ಲುತ್ತದೆ. ಸಾಹಿತ್ಯದ ಮೂಲಕ ಮಾನವ ಸಂಪನ್ಮೂಲವನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾದ ಕನ್ನಡ ಭಾಷೆಯನ್ನು ಬಳಸುವ ಹಾಗೂ ಉಳಿಸುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗೋಣ, ಜೈ ಕರ್ನಾಟಕ ಮಾತೆ. 
​
0 Comments



Leave a Reply.

    Picture
    Nirathanka

    Categories

    All
    Awards 2017
    Awards 2018
    Awards 2019
    Awards 2020
    Awards 2021
    Awards 2022
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಸಮ್ಮೇಳನದ ಕುರಿತು ಅಭಿಪ್ರಾಯಗಳು
    ಹನಿಗವನ

    Archives

    December 2022
    November 2022
    November 2021
    March 2021
    November 2020
    July 2020
    November 2019
    October 2019


    Picture
    More Details

    Picture
    WhatsApp Group

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now


    RSS Feed

ಸೈಟ್ ನಕ್ಷೆ


ಸೈಟ್

  • ಸ್ವಾಗತ
  • ಸಮಿತಿಯ ಸದಸ್ಯರು
  • ಮಾಧ್ಯಮ​
  • ಆನ್‍ಲೈನ್‍ ಗ್ರೂಪ್ಸ್
  • ಬ್ಲಾಗ್
  • ಸಮ್ಮೇಳನದ ಕೈಪಿಡಿಗಳು

ನಮ್ಮ ಇತರೆ ಜಾಲತಾಣಗಳು

  • ​WWW.NIRATANKA.ORG
  • WWW.NIRUTAPUBLICATIONS.ORG

ಪ್ರಶಸ್ತಿಗಳು

  • CSR EXCELLENCE AWARD
  • THE BEST WOMEN EMPOWERMENT ORGANISATION AWARD
  • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022

ಕನ್ನಡ ಸಮ್ಮೇಳನ

​ಕನ್ನಡ ಸಮ್ಮೇಳನ-2017
​ಕನ್ನಡ ಸಮ್ಮೇಳನ-2018
​ಕನ್ನಡ ಸಮ್ಮೇಳನ-2019
​ಕನ್ನಡ ಸಮ್ಮೇಳನ-2020
​ಕನ್ನಡ ಸಮ್ಮೇಳನ-2021
​ಕನ್ನಡ ಸಮ್ಮೇಳನ-2022

ಪಬ್ಲಿಕೇಷನ್ಸ್

  • LEADER'S TALK
  • NIRUTA'S READ & WRITE INITIATIVE​​
  • ​COLLABORATE WITH NIRUTA PUBLICATIONS

ನಿರಾತಂಕ

  • POSH
  • CSR
  • COLLABORATE WITH NIRATHANKA
  • NIRATHANKA CLUB HOUSE

ಚಂದಾದಾರರಾಗಿ




JOIN OUR ONLINE GROUPS


JOIN WHATSAPP BROADCAST

Copyright : Nirathanka 2021
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ