HR KANNADA CONFERENCE
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
www.niratanka.org

ವೈವಿಧ್ಯಮಯ ಉದ್ಯಮಗಳಲ್ಲಿ ಮಾನವ ಸಂಪನ್ಮೂಲ ವೃತ್ತಿನಿರತರು ಧೀಮಂತ ನಾಯಕರಾಗಿ ಯಶಸ್ಸು ಸಾಧಿಸಲು 36 ಸೂತ್ರಗಳು

11/30/2019

0 Comments

 
Picture
ಡಾ|| ನಂದೀಶ ವಿ. ಹಿರೇಮಠ
ಪ್ರಾಧ್ಯಾಪಕರು (HR), ಇಂಡಸ್ ಬಿಸಿನೆಸ್ ಅಕಾಡೆಮಿ ಮತ್ತು ಕಾರ್ಪೋರೇಟ್ ಟ್ರೈನರ್, ಬೆಂಗಳೂರು-560082

ಪೀಠಿಕೆ:
ಯಾವುದೇ ಸಂಸ್ಥೆ ಅಥವಾ ಉದ್ಯಮ ಯಶಸ್ಸನ್ನು ಪಡೆಯಬೇಕಾದರೆ ಧೀಮಂತ ನಾಯಕನ ಆವಶ್ಯಕತೆ ಬಹುಮುಖ್ಯ. ಮಾನವ ಸಂಪನ್ಮೂಲ ವೃತ್ತಿನಿರತರ (HR Professionals) ಮತ್ತು ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರ (HR Manages) ಪಾತ್ರ ಉದ್ಯಮಗಳನ್ನು ಯಶಸ್ಸಿನ ದಾರಿಯಲ್ಲಿ ಸಾಗಲು ಮಹತ್ವದ ಪಾತ್ರ ವಹಿಸುತ್ತಾರೆ. ಅರ್ಥಾತ್ ಇವರು ಉದ್ಯಮಗಳ ಪಾಲುದಾರರಲ್ಲ (Business Partners) ಬದಲಾಗಿ ಉದ್ಯಮಗಳ ನಾಯಕರು (Business Leaders) ಏಕೆಂದರೆ ಮಾನವ ಸಂಪನ್ಮೂಲಗಳು ಅತ್ಯುತ್ತಮ ಉಪಯೋಗವಾದಾಗ ಉದ್ಯಮಗಳು ತಮ್ಮ ಧ್ಯೇಯೋದ್ದೇಶ ಪೂರೈಸಲು, ಹಾಗೂ ಲಾಭಗಳಿಸಲು ಸಾಧ್ಯವಾಗುತ್ತದೆ.

ಈಗ ನಾವೆಲ್ಲ ಉದ್ಯಮ 4.0 (Industry 4.0) ಯುಗದಲ್ಲಿದ್ದೇವೆ, ಹಾಗೆಯೇ HR4.0  ಬೇಕಾಗಿದೆ! ಇತ್ತೀಚಿನ 2-3 ವರ್ಷಗಳಲ್ಲಿ VUCA (Volatile= ಬಾಷ್ಟಶೀಲ, Uncertain= ಅನಿಶ್ಚಿತ, Complex=ಸಂಕೀರ್ಣ, Ambiguous= ಅಸ್ವಷ್ಟ) ಎಂಬ ತತ್ವ ವಿವಿಧ ರೀತಿಯಲ್ಲಿ ಚರ್ಚೆಗೆ ಒಳಪಟ್ಟಿದೆ. ಈ ಕ್ಲಿಷ್ಠಕರ VUCA  ಜಗತ್ತಿನಲ್ಲಿ ಉದ್ಯೋಗಿಗಳಿಂದ ಮತ್ತು ವ್ಯವಸ್ಥಾಪಕರಿಂದ (Managers) ಉದ್ಯಮಗಳಲ್ಲಿ ಕೆಲಸಗಳನ್ನು ನಿರ್ವಹಿಸಿ, ಸಕ್ರೀಯವಾಗಿ ಕ್ರೀಯಾಶೀಲರನ್ನಾಗಿ ಮಾಡಿ ಲಾಭಗಳಿಸುವುದು ಸರ್ವೇಸಾಮಾನ್ಯ ಕೆಲಸವಲ್ಲ! ಆದರೂ ಮಾಡಬೇಕು, ಮತ್ತು ಕಾರ್ಯನಿರ್ವಹಿಸಿ ಸಫಲತೆ ಸಾದಿಸಬೇಕಲ್ಲವೇ?

ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ವೃತ್ತಿನಿರತರ ಪಾತ್ರ ಅತಿ ಮುಖ್ಯವಾಗುತ್ತದೆ. ಇದನ್ನು ಸಾಧಿಸಲು, ಎಲ್ಲರೂ (Business Leaders Managers, Employees) ನಾಲ್ಕು ಸ್ತರಗಳಲ್ಲಿ 1) ವೈಯಕ್ತಿಕ (Personal), 2) ವೃತ್ತಿಪರ (Professional), 3) ಹಣಕಾಸಿನ (Financial), 4) ಸಾಮಾಜಿಕ (Social) ಗಮನ ನೀಡಿ ಕಾರ್ಯನಿರ್ವಹಿಸಿದರೆ, ಸಫಲತೆ ಸಾಧಿಸುವುದು ಸರಳವಾಗುತ್ತದೆ.

``ಒಂದು ಸಂಸ್ಥೆ ಒಬ್ಬ ಯೋಗ್ಯ ನಾಯಕನ ಉದ್ದನೆಯ ನೆರಳು (An organisation is the elongated shadow of an effective leader) ಎಂಬ ಅನುಭವಿಗಳ ಉಕ್ತಿಯಲ್ಲಿ ಎಲ್ಲ ಸಾರಾಂಶ ಅಡಗಿದೆ. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ವೃತ್ತಿನಿರತರು ದೀಮಂತ ನಾಯಕರಾಗಲು ಬೇಕಾದ ಯಶಸ್ಸಿನ ಸೂತ್ರಗಳನ್ನು ಇಲ್ಲಿ ವಿವರಣೆ ನೀಡುವ ಪ್ರಯತ್ನ ಮಾಡಲಾಗಿದೆ:
Picture
Join Our Conference Google Group
​ಧೀಮಂತ ನಾಯಕನ ಯಶಸ್ಸಿಗೆ ಬೇಕಾದ ಸಫಲತೆಯ ಸೂತ್ರಗಳು:
ಒಬ್ಬ ಸಾಮಾನ್ಯ ಮಾನವ ಸಂಪನ್ಮೂಲ ವೃತ್ತಿನಿರತ ವ್ಯಕ್ತಿ ಅಸಾಮಾನ್ಯ ಶಕ್ತಿ ಮೈಗೂಡಿಸಿಕೊಂಡು ಧೀಮಂತನಾಯಕನಾಗಲು ಸಾಧ್ಯ. ಈ ಕೆಳಕಂಡ ಸೂತ್ರಗಳನ್ನು ಅರಿತು, ಅರ್ಥಮಾಡಿಕೊಂಡು, ಅಳವಡಿಸಿಕೊಂಡರೆ ವೃತ್ತಿಯಲ್ಲಿ ಯಶಸ್ವಿಯನ್ನು ಕಾಣಬಹುದು.
  1. ಮಾನವ ಸಂಪನ್ಮೂಲ ಕ್ಷೇತ್ರದ ಜ್ಞಾನ ಮತ್ತು ಪರಿಣಿತೆ (Knowledge and Expertise in HR domain) ಒಂದು ದೀರ್ಘ ಪ್ರವಾಸದಲ್ಲಿ ಮೊದಲಿನ ಹೆಜ್ಜೆ ಎಷ್ಟು ಮುಖ್ಯವೋ, ಅದೇ ರೀತಿ ಧೀಮಂತ ನಾಯಕನ ಹುದ್ದೆಗೆ ಪಾತ್ರರಾಗಲು ತನ್ನ ಕರ್ಮಭೂಮಿಯಾದ ಮಾನವ ಸಂಪನ್ಮೂಲ ಕ್ಷೇತ್ರದ (HR domain) ವಿವಿಧ ಮಜಲುಗಳನ್ನು, ಆಗು-ಹೋಗುಗಳನ್ನು, ಎತ್ತರ-ಆಳಗಳನ್ನು ತಿಳಿದುಕೊಳ್ಳಬೇಕಾದದ್ದೂ ಅಷ್ಟೇ ಮುಖ್ಯ. ಏಕೆಂದರೆ ತನ್ನ ಕ್ಷೇತ್ರದ ಬಗ್ಗೆ ಆಳವಾದ ಪರಿಣಿತಿ ಇದ್ದರೆ ಗೌರವ ತಾನಾಗಿಯೇ ಬರುತ್ತದೆ: ಈ ರೀತಿಯ ಜ್ಞಾನ-ಗೌರವ ಬಹುಕಾಲ ಉಳಿಯುತ್ತದೆ-ಬೆಳೆಯುತ್ತದೆ.
  2. ವಿವಿಧ ಕಾನೂನುಗಳ ಮಾಹಿತಿ (Knowledge of Various laws & Acts for HR): ಸಂಸ್ಥೆಗಳು ಮತ್ತು ಉದ್ಯಮಗಳು ವಿವಿಧ ರೀತಿಯ ಕಾನೂನುಗಳ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿರುವುದು ಅನಿವಾರ್ಯ, ಅದೇ ರೀತಿ ಪ್ರತಿಯೊಬ್ಬ ಮಾನವ ಸಂಪನ್ಮೂಲ ವೃತ್ತಿನಿರತನೂ ಸಹ ಸಂಬಂಧಪಟ್ಟ ಎಲ್ಲ ಕಾನೂನುಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸಿದರೆ ಕಾರ್ಯಕ್ಷಮತೆ ಹೆಚ್ಚುತ್ತದೆ. ಈಗಿರುವ ಉದ್ಯೋಗಿಗಳ (Employees) ಮತ್ತು ಗ್ರಾಹಕರ (Customer) ಮಾಹಿತಿಗಿರುವ ಅರಿವಿನಲ್ಲಿ ಸದರಿ ಕಾನೂನುಗಳ ಮಾಹಿತಿ ಅತಿ ಮುಖ್ಯವೆನಸುತ್ತದೆ.
  3. ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಉದ್ಯಮಗಳಲ್ಲಿ ಪಾಲುದಾರನಲ್ಲ, ಆದರೆ ಉದ್ಯಮದ ನಾಯಕ (HR Manager is not a Business partner, but a business leaders): 1990ರ ದಶಕದಿಂದ 2010ರ ದಶಕದವರೆಗೆ ಮಾನವ ಸಂಪನ್ಮೂಲ ವೃತ್ತಿನಿರತರನ್ನು ಉದ್ಯಮಗಳ ಪಾಲುದಾರರೆಂದು ಪರಿಗಣಿಸಿದ್ದೆವು (1960ರಿಂದ 1990ರ ವರೆಗೆ ಒಬ್ಬ ಕೆಲಸಗಾರ ಎಂಬ ಧೋರಣೆ ಇತ್ತು!?) ಆದರೆ ಈಗಿರುವ Industry 4.0/HR 4.0 ಯುಗದಲ್ಲಿ ಮಾನವ ಸಂಪನ್ಮೂಲ ವೃತ್ತಿನಿರತರು ನಿಜವಾಗಿಯೂ ಉದ್ಯಮದ ಪಾಲುದಾರರಿಗಿಂತ ಹೆಚ್ಚಾಗಿ ಉದ್ಯಮದ ನಾಯಕರಾಗಿದ್ದಾರೆ. ಇನ್ನೂ ಬೆಳೆಯಬೇಕಾದ ಆವಶ್ಯಕತೆ ಇದೆ, ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.
  4. ಸಕಾರಾತ್ಮಕ ಮನೋಭಾವನೆ (Positive Mental Attitude): ಹೊಸ ದೃಷ್ಟಿಕೋನದಿಂದ, ಹೊಸತನವನ್ನು ಸೃಷ್ಟಿಸಲು ಸಾದ್ಯ. ಇದಕ್ಕೆ ಬೇಕಾದ ಮೂಲ ಅಸ್ತ್ರವೆಂದರೆ ಸಕಾರಾತ್ಮಕ ಮನೋಭಾವನೆಯಿಂದ ತನ್ನ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ಬೇರೆಯವರೊಡನೆ ವ್ಯವಹರಿಸುವುದು. Where there is a will, there is way (ಎಲ್ಲಿ ಛಲವಿದೆಯೋ ಅಲ್ಲಿ ದಾರಿಯಿದೆ) ಎಂಬ ಅನುಭವಿಕರ ಮಾತು ಎಲ್ಲವನ್ನೂ ಸಾರಾಂಶಗೊಳಿಸುತ್ತದೆ.
  5. ಗುರಿಗಳ ಸ್ಪಷ್ಟತೆ (Goal Clarity): ವ್ಯಕ್ತಿಯೊಬ್ಬನು ಶಕ್ತಿಯುತವಾಗಿ ಬೆಳೆದು ನಾಯಕನಾಗಬೇಕಾದರೆ ಸ್ಪಷ್ಟ ಗುರಿಗಳು ಬಹುಮುಖ್ಯ. ಸಾಧಿಸಬೇಕಾದ ವೈಯಕ್ತಿಕ (Personal Goald) ಮತ್ತು ಸಾಂಸ್ಥಿಕ (Organisationl goals) ಗುರಿಗಳ ಅರಿವು-ಜ್ಞಾನ-ಸ್ಪಷ್ಟತೆಗಳ ಜೊತೆ, ಫಲಿತಾಂಶ (Results)  ಪಡೆಯಲು, ಬೇಕಾದ ಸಂಪನ್ಮೂಲಗಳು ಮತ್ತು ವೇಳೆ (Resources time) ಮೌಲ್ಯಮಾಪನದಿದ್ದರೆ, ಸಾಧನೆ ಸರಳವಾಗುತ್ತದೆ.
  6. ಪಾತ್ರಗಳು ಹಾಗೂ ಜವಾಬ್ದಾರಿಗಳು (Roles & Responsibilities): ಗುರಿಗಳ ಅರಿವಿನ ನಂತರ ತಾನು ನಿರ್ವಹಿಸಬೇಕಾದ ಪಾತ್ರಗಳ ಬಗ್ಗೆ ಮತ್ತು ಜೋಳಿಗೆಗೆ ಏರಿಸಿಕೊಳ್ಳಬೇಕಾದ ಜವಾಬ್ದಾರಿಗಳ ಸಂಪೂರ್ಣ ಮಾಹಿತಿ ಇದ್ದರೆ, ಅವುಗಳೊಂದಿಗೆ ಸ್ವಂತಿಕೆ ಭಾವನೆ (Ownership Feeling) ಅಂತರ್ಗತವಾಗಿ ಬರಬೇಕು.
  7. ವಿಶಾಲ ದೃಷ್ಟಿಯ ಆಲೋಚನೆಗಳು (Broad Based thinking): ಯಾವುದೇ ಕೆಲಸ ಸಫಲತೆ ಹೊಂದಬೇಕಾದಲ್ಲಿ ವಿಶಾಲವಾಗಿ ಆಲೋಚಿಸುವ ಮತ್ತು ವಿವಿಧ ದೃಷಿಕೋನಗಳಿಂದ ವಿಮರ್ಶೆ ಮಾಡುವುದು ಆವಶ್ಯ. ಸಂಕುಚಿತ ಮನೋಭಾವನೆ/ವರ್ತನೆ ಬಹಳಮಟ್ಟಿಗೆ ಇರಬಾರದು ಅಥವಾ ಕಡಿಮೆಯಾಗಬೇಕು.
  8. ಪರಿಣಾಮಕಾರಿ ಯೋಚನೆಗಳು (Effective Planning Skills): ಬರಿ ಒಳ್ಳೆಯ ಯೋಚನೆಗಳಿದ್ದರೆ ಸಾಲದು, ಅವುಗಳನ್ನು ಅಳವಡಿಸಿಕೊಳ್ಳತಕ್ಕದ್ದಾದ ಯೋಜನೆ (Plan) ಗಳು ಬೇಕಾಗುತ್ತದೆ. ಈ ಕಾರ್ಯತಂತ್ರಗಳು (Plan of Action) ಸರಳವಾಗಿರಬೇಕು, ಸಮಗ್ರತೆಯಿಂದ ನಿಜಸ್ಥಿತಿಗೆ ಸಮೀಪವಾಗಿದ್ದರೆ ಯಶಸ್ಸನ್ನು ಸಾಧಿಸುವುದು ಸುಲಭಸಾಧ್ಯ.
  9. ಸಂವಹನಾ ಮತ್ತು ಪ್ರಸ್ತುತಿಗೊಳಿಸುವ ಕೌಶಲ್ಯಗಳು (Communication & Presentation skills): ತನ್ನ ವಿಚಾರಧಾರೆಗಳನ್ನು ಸಂಸ್ಥೆಯು ಸಾಧಿಸಬೇಕಾದ ಗುರಿಗಳನ್ನು ಗ್ರಾಹಕರಿಗೆ ನಿರೀಕ್ಷೆಗಳನ್ನು ಪೂರೈಸಲು ಬೇಕಾದ ಕಾರ್ಯತತ್ರಗಳನ್ನು ಉದ್ಯೋಗಿಗಳಿಗೆ ಹಾಗೂ ತಂಡದವರಿಗೆ ತಿಳಿಸಿ-ಮನವರಿಕೆ ಮಾಡಿಕೊಡುವ ಕಲೆಗಾರಿಕೆಗಳು ಇದ್ದರೆ ಲಾಭದಾಯಕ ಕಾರ್ಯಗಳ ಪಾಲು ಹೆಚ್ಚುತ್ತದೆ.
  10. ಅನ್ಯೋನ್ಯ ಸಂಬಂಧ ಬೆಳೆಸುವ ಚಾಕಚಕ್ಯತೆ (Interpersonal relationship building skill) : ಸಂಸ್ಥೆಯ ಒಳಗೆ ಮತ್ತು ಹೊರಗೆ ಇರುವ ಎಲ್ಲಾ ವ್ಯಕ್ತಿಗಳ/ಗ್ರಾಹಕರ/ಪಾಲುದಾರರ/ಸರಕಾರ/ಖಾಸಗಿ/ ನಿಯಂತ್ರಕರ ಜೊತೆಗೆ ಅನ್ಯೋನ್ಯವಾದ ಸಂಬಂಧ ಬೆಳೆಸಿಕೊಂಡು, ಉಳಿಸಿಕೊಂಡು, ಅಭಿವೃದ್ಧಿ ಪಥದಲ್ಲಿ ಮುನ್ನಡಿಯುವ ಕಲೆಯನ್ನು ಮಾನವ ಸಂಪನ್ಮೂಲ ವೃತ್ತಿನರತರು ಮೈಗೂಡಿಸಿಕೊಳ್ಳಬೇಕು.
  11. ಒಳ್ಳೆಯ ಆಲಿಸುವಿಕೆ ಗುಣ (Good Listioning skill):  ಯಾವುದೇ ಕ್ರೀಯಾತ್ಮಕ ನಾಯಕನ (Dynamic Leader) ಅತಿ ಮುಖ್ಯ ಗುಣವೆಂದರೆ ಮಾತನಾಡುವ ರೀತಿ, ಲಕ್ಷ್ಯಕೊಟ್ಟು, ವಿಚಾರವಂತಿಕೆಯಿಂದ, ಸೂಕ್ಷ್ಮ-ಗ್ರಾಹಿಯಾಗಿ ಆಲಿಸುವ ಪರಿಪಾಠ ಹಾಗೂ ಆಲಿಸಿದ ವಿಚಾರಗಳನ್ನು ವಿಶ್ಲೇಷಿಸಿ ಕಾರ್ಯರೂಪಕ್ಕೆ ತರುವುದಾಗಿರುತ್ತದೆ.
  12. ಸತತವಾಗಿ ಕಲಿಯುವ ಪ್ರವೃತ್ತಿ (Continuous learning habit): ಮೇಲೆ ವಿವರಿಸಿದ ಗುಣಗಳ ಜೊತೆ, ಸತತವಾಗಿ ಹೊಸದಾದ ವಿಚಾರ-ತಂತ್ರ-ಕೌಶಲ್ಯ-ನೀತಿ-ಕೌಶಲ್ಯಗಳನ್ನು ಕಲಿತರೆ ಮತ್ತು ಕಲಿಯುತ್ತದ್ದರೆ, ಏನೇ ಕ್ಲಿಷ್ಟಕರ ಪರಿಸ್ಥಿತಿಗಳು ಎದುರಾದರೂ ಅವುಗಳನ್ನು ಮೆಟ್ಟಿನಿಂತು ನಿರಂತರ ಯಶಸ್ಸನ್ನು ಗಳಿಸಬಹುದು.
  13. ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ: (Proper decision Making skill): ಸಂಸ್ಥೆಯು ಪ್ರಗತಿಯ ಹಾದಿಯಲ್ಲಿ, ಹತ್ತಾರು-ನೂರಾರು-ಸಾವಿರಾರು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ತತ್ವಾಧರಿತ ವಿಶ್ಲೇಷಣೆ ಮಾಡಿ, ಸಾಧಕ-ಭಾದಕಗಳನ್ನು ಅವಲೋಕಿಸಿ, ಯಾವುದೇ ಆಸೆ ಅಮಿಷಗಳಿಗೆ ಬಲಿಯಾಗದೆ ತೆಗೆದುಕೊಂಡ ನಿರ್ಧಾರಗಳಲ್ಲಿ ಬದ್ಧನಾಗಿ/ಳಾಗಿ ನಿರಂತರ ಯಶಸ್ಸು ಖಚಿತ.
  14. ಬೇರೆ/ಪ್ರತಿನಿಧಿಗಳಿಂದ ಕೆಲಸ ಮಾಡಿಸುವ ಕೌಶಲ್ಯ (Delegation skill): ತನ್ನ ಪಾಡಿಗೆ ತಾನು, ಕೆಲಸ ಮಾಡಿದರೆ ಸಾಕಾಗುವುದಿಲ್ಲ. ಅದರ ಜೊತೆಗೆ ಬೇರೆಯವರನ್ನು ತಮ್ಮ ಕೆಲಸ ಅರಿತು ಜವಾಬ್ದಾರಿಯನ್ನು ಹೊತ್ತು ಹೊಣೆಗಾರಿಕೆಯಿಂದ ಕೆಲಸ ಮಾಡುವಂತೆ ತರಬೇತಿ ನೀಡುವುದು, ಮಾರ್ಗದರ್ಶನ ನೀಡಿ ಹೆಚ್ಚಿನ ಸಾಧನೆ ಮಾಡುವಂತೆ ಪ್ರೇರೇಪಿಸುವುದು ಧೀಮಂತ ನಾಯಕನ ವಿಶಿಷ್ಟ ಗುಣ.
  15. ಸಮಸ್ಯೆ ನಿರ್ವಹಣಾ ಸಾಮರ್ಥ್ಯಗಳು (Problem solving capacities): ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ-ಆವಶ್ಯಕತೆ-ಸಮರ್ಪಕವಾಗಿ ನಿಭಾಯಿಸುವ ಕೌಶಲ್ಯ ನಾಯಕನ ಉತ್ಪಾದಕತೆ (Productivity) ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.
  16. ಸಂಯೋಜಕತ್ವ ಕೌಶಲ್ಯ (Co-ordinating skill): ಯಾವುದೇ ಸಂಸ್ಥೆಯಲ್ಲಿ ಸರಳ ಅಥವ ಕ್ಲಿಷ್ಟ ವಿಷಯಗಳನ್ನು ನಿಭಾಯಿಸುವಾಗ ಪ್ರಜಾತಂತ್ರ ತತ್ವದಿಂದ, ಭೇದಭಾವ ಇಲ್ಲದೆ, ಸಹಕಾರಿ ಮನೋಭಾವನೆಯಿಂದ ಕಾರ್ಯಗಳನ್ನು ಸಂಯೋಜಿಸಿದರೆ, ತಂಡದವರು ಸಂತೋಷದಿಂದ ಪ್ರಗತಿಯತ್ತ ದಾಪುಗಾಲು ಹಾಕುತ್ತಾರೆ. ಈ ಸಂಯೋಜಕತ್ವ ಗುಣ ನಾಯಕನ ವ್ಯಕ್ತಿತ್ವ ಅವಿಬಾಜ್ಯ ಅಂಗವಾಗಿರಬೇಕು.
  17. ಪ್ರೇರಣೆ ನೀಡುವ ಕೌಶಲ್ಯ (Motivation skill) ಯಾವಾಗಲು ತನ್ನನ್ನು, ತನ್ನವರನ್ನು, ಪರರನ್ನು ಸತತವಾಗಿ ಪ್ರಯತ್ನ ಮಾಡಲು ಪ್ರೇರಣೆ ನೀಡಿ-ಶಕ್ತಿ ತುಂಬಿ-ಹುರಿದುಂಬಿಸಿ ಖುಷಿಯಿಂದ ಕೆಲಸ ತೆಗೆದುಕೊಳ್ಳುವುದು ಒಂದು ವಿಶೇಷ ಕೌಶಲ್ಯ-ಕಲೆಗಾರಿಕೆ. ನಾಯಕನು ಉತ್ಸಾಹದ ಚಿಲುಮೆಯಾಗಿದ್ದರೆ ತಂಡದವರು ಅವನನ್ನು ಅನುಯಾಯಿಗಳಾಗಿ ಹಿಂಬಾಲಿಸುತ್ತಾರೆ.
  18. ಅನುಭೂತಿ ಮತ್ತು ನಂಬಿಕೆ (Empathy & Trust in the team) ಸಂಸ್ಥೆಗಳಲ್ಲಿ ಸಮಸ್ಯೆಗಳು, ತೊಂದರೆಗಳು-ಸವಾಲುಗಳು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ತಂಡದ ಸದಸ್ಯರೊಂದಿಗೆ ಕುಳಿತು-ಚರ್ಚೆ ಮಾಡಿ ಅನುಭೂತಿ ಭಾವದಿಂದ ವಿಶ್ಲೇಷಣೆ ಮಾಡಿ, ನೀವು ಮಾಡಬಲ್ಲಿರಿ-ಗೆಲ್ಲುತ್ತೀರಿ ಎಂದು ಹುರಿದುಂಬಿಸುವ ಮೂಲಕ ನಂಬಿಕೆ ವಾತಾವರಣ ಸೃಷ್ಟಿ ಮಾಡಿದರೆ, ಪರಿಣಾಮಕಾರಿತ್ವ (Effectiveness) ಹೆಚ್ಚುತ್ತದೆ, ಸಂಸ್ಥೆಗೆ ಲಾಭವೂ ಬರುತ್ತದೆ!
  19. ತಂಡದ ಮುಖಂಡತ್ವ (Team Spirit) ದಿಂದ ಮುನ್ನಡೆ ಸಾಗಿಸುವುದು: ತನ್ನ ತಂಡದಲ್ಲಿ, ಎಲ್ಲರ ವಿಚಾರ-ಆಶಯ-ಅಭಿಮತ-ವಿನೂತನ ಸಲಹೆಗಳನ್ನು ಆಲಿಸಿ, ವಿಶ್ಲೇಷಣೆ ಮಾಡಿ, ವಿಮರ್ಶಾತ್ಮಕವಾಗಿ ನಿರ್ಧಾರ ತೆಗೆದುಕೊಂಡು ಕೆಲಸ ನಿರ್ವಹಿಸಿದರೆ ಸಹವರ್ತಿಗಳು ಸಂತೋಷದಿಂದ ಕಾರ್ಯಪ್ರವೃತ್ತರಾಗುತ್ತಾರೆ. ಅದರ ಬದಲಿಗೆ ಚಾಡಿ ಹೇಳುವುದು, ಕೇಳುವುದು, ಭೇದಭಾವ ಮಾಡುವುದು ಇವೇ ಮೊದಲಾದವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ, ಇದು ಸಂಸ್ಥೆಗೆ ಹಾನಿಕಾರಕವೂ ಆಗುತ್ತದೆ.
  20. ತಂಡಗಳ ನಿರ್ವಹಣೆಯ ಸಾಮರ್ಥ್ಯ (Managing Team): ಸಂಸ್ಥೆಗಳಲ್ಲಿ ವಿವಿಧ ತಂಡಗಳು ವೈವಿಧ್ಯಮಯ ಹಾಗೂ ಅವುಗಳದ್ದೇ ಆದ ಕಂಪನ್ನು ಹೊಂದಿರುತ್ತದೆ. ತಂಡದ ಸದಸ್ಯರ ಅನುಗುಣವಾಗಿ ನಾಯಕನು ಒಳ್ಳೆ ಕೆಲಸ ಮಾಡಿದವರಿಗೆ ಹುರಿದುಂಬಿಸಿ ಪ್ರೇರೇಪಿಸಿದರೆ ಕೆಲಸಗಳು ಸುಲಲಿತವಾಗಿ ಆಗುತ್ತದೆ. ಅದೇ ರೀತಿ ಕೆಲವರು ತಪ್ಪು ಮಾಡಿದರೆ, ಬುದ್ಧಿಹೇಳಿ ತಿದ್ದಿ-ತೀಡಿ ಅವರ ಅಭಿವೃದ್ಧಿಗೆ ಕಾರಣೀಭೂತರಾದಲ್ಲಿ ಪ್ರಗತಿ ತಾನಾಗಿಯೇ ಬರುತ್ತದೆ.
  21. ಸಮಯ ಪ್ರಜ್ಞೆಯ ಕೌಶಲ್ಯಗಳು (Time Management skill) ಸಮಯ ಹಣಕ್ಕಿಂತಲೂ ಅತ್ಯಮೂಲ್ಯ; ಸಮಯ ಹಿಂದುರುಗಿ ಬರಲಾರದ ಸಂಪನ್ಮೂಲ ಎಂಬ ಯುಕ್ತಿಗಳು ನಮಗೆ ಗೊತ್ತಿರುವ ಸತ್ಯಗಳು. ಬಹುಶಃ ಈ ಜಗತ್ತಿನಲ್ಲಿ ಸಮಯ/ವೇಳೆಗಿಂತ ಪ್ರಜಾಪ್ರಭುತ್ವವಾಗಿರುವ ಸಂಪನ್ಮೂಲ/ವಸ್ತು/ವಿಷಯವಸ್ತು ಯಾವುದೂ ಇಲ್ಲ! ಏಕೆಂದರೆ ರಾಜನಿಂದ-ಭಿಕ್ಷುಕನವರೆಗೂ ಮಾನೇಜರ್ನಿಂದ-ಮೇಸೆಂಜರನಿಗೆ, ಚೇರಮನನಿಂದ-ಚಪರಾಸಿಗೆ ಸಮಾನವಾಗಿ ಲಭ್ಯವಿರುವುದು ಸಮಯ ಮಾತ್ರ. ಈ ಅತ್ಯಮೂಲ್ಯ ಸಮಯವನ್ನು ಯೋಚನೆ ಮೂಲಕ-ಸಮರ್ಪಕವಾಗಿ ಸಮಯೋಚಿತವಾಗಿ ಉಪಯೋಗಿಸಿದರೆ ವ್ಯಕ್ತಿಗೆ, ತಂಡ ಮತ್ತು ಸಂಸ್ಥೆಗೆ ಲಾಭದಾಯಕವಾಗುತ್ತದೆ.
  22. ಸಂದಿಗ್ಧ ನಿರ್ವಹಣೆ ಕೌಶಲ್ಯಗಳು (Conflict Management Skill): ಸಂಸ್ಥೆಗಳು ಪ್ರಗತಿಯ ಹಂತದಲ್ಲಿ ಸಂದಿಗ್ಧ ಪರಿಸ್ಥಿತಿಗಳು ಬರುವುದು ಸಹಜ ಮತ್ತು ವಸ್ತುಸ್ಥಿತಿ ಸತ್ಯಾಂಶ ಅನೇಕ ರೀತಿಯ ಸಂದಿಗ್ಧಗಳು ಸೂಕ್ಷ್ಮವಾಗಿ ವಿಶ್ಲೇಷಿಸಿ ಸೂಕ್ತವಾದ ಪರಿಹಾರ ಕಂಡುಕೊಂಡರೆ ಅಭಿವೃದ್ಧಿ ಹೊಂದುವುದು ಸುಲಲಿತವಾಗುತ್ತದೆ.
  23. ತೊಂದರೆಗಳ ಹಂದರದಿಂದ ಗೊರಬೀಳುವ ಚಾಕಚಾಕ್ಯತೆಯ ಕೌಶಲ್ಯಗಳು. (Crises Management Skills): ಸಂಸ್ಥೆಗಳು ಮತ್ತು ಉದ್ಯೋಗಿಗಳು ಅನೇಕ ಬಾರಿ ಕ್ಲಿಷ್ಟಕರವಾದ ಪರಿಸ್ಥಿತಿಗಳಲ್ಲಿ ಸಿಕ್ಕಿಕೊಂಡು, ಬಿದ್ದು ಒದ್ದಾಡುವ ಸಂದರ್ಭಗಳು ಒದಗಿಬರುತ್ತದೆ. ಆ ರೀತಿ ಅನಿರೀಕ್ಷಿತ ಪರಿಸ್ಥಿತಿಗಳಿಗೆ ಅನುಗುಣವಾಗಿ ಜಾಣತನದಿಂದ ಹೊರಬರಲು ಉಪಾಯ ಹೂಡಬೇಕು ಹಾಗೂ ಸಫಲತೆಯತ್ತ ಸೂಕ್ಷ್ಮವಾಗಿ ಮುಂದುವರೆಯಬೇಕು. ಅಂದಾಗ ಎಂತಹುದೆ ಅಂತರಿಕ ಅಥವ ಬಾಹ್ಯ ತೊಂದರೆಗಳನ್ನು ಮೆಟ್ಟಿ ನಿಲ್ಲಬಹುದು.
  24. ಬದಲಾವಣೆಯ ನಿರ್ವಹಣೆ ತಂತ್ರಗಳು (Change management stategies) ನಾಯಕನಾದವನು ಬದಲಾವಣೆಯ ಹರಿಕಾರನಾಗಬೇಕು, ಏಕೆಂದರೆ ಜಗತ್ತು ಹಾಗು ಉದ್ಯಮಗಳು ನಾಗಾಲೋಟದ ರೀತಿಯಲ್ಲಿ ಬದಲಾಗುತ್ತದೆ. ಕಾಲಕ್ಕೆ ತಕ್ಕಂತೆ ವಿಚಾರದಲ್ಲಿ-ಕಾರ್ಯಪ್ರವೃತ್ತಿಯಲ್ಲಿ ತಂತ್ರಜ್ಞಾನದಲ್ಲಿ ಸಂಪರ್ಕಜಾಲದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಯು ತಂತ್ರಗಾರಿಕೆಗಳಲ್ಲಿ ಹಾಗೂ ಗ್ರಾಹಕ ನಿರ್ವಹಣೆಯಲ್ಲಿ ವಿವಿಧ ರೀತಿಯ ಬದಲಾವಣೆಗಳನ್ನು ಸತತವಾಗಿ ಅಳವಡಿಸಿಕೊಳ್ಳಬೇಕು, ಏಕೆಂದರೆ ಬದಲಾವಣೆ ಒಂದೆ ಈ ಜಗದಲ್ಲಿ ನಿಶ್ಚಿತ ಸತ್ಯ (Change is the only constant thing in this world).
  25. ಸಮಾನತೆ ಮಾನದಂಡ (Principle of equality & fair treatment): ಇಂಗ್ಲೀಷಿನಲ್ಲಿ ಒಂದು ಉಕ್ತಿ ಇದೆ: Rule is a rule, rule for all  (ನಿಯಮ ನಿಯಮವೇ, ಎಲ್ಲರಿಗೂ ಒಂದೇ ನಿಯಮ). ಈ ಸಮಾನತೆ ಮತ್ತು ಭೇದಭಾವ ಇಲ್ಲದ ನೀತಿ, ನಿಯಮ, ಕಾರ್ಯರೂಪಗೊಂಡರೆ ಎಲ್ಲರೂ ಸಂತೋಷ ಮನಸ್ಕರಾಗಿ ಒಳ್ಳೆ ಕೆಲಸ ನಿರ್ವಹಿಸುತ್ತಾರೆ.
  26. ಸವಾಲುಗಳಿಂದ ಅವಕಾಶಗಳತ್ತ ದಾಪುಗಾಲು (Marching forward from challenge towards opportunities):  ವ್ಯಕ್ತಿಯ ಜೀವನದಲ್ಲಿ ಉದ್ಯೋಗಿಯ ವ್ಯವಹಾರದಲ್ಲಿ, ಸಂಸ್ಥೆಯ ಬೆಳವಣಿಗೆ ಪಥದಲ್ಲಿ ಸವಾಲುಗಳು ಎದುರಾಗದಿದ್ದರೆ ಹೊಸ ಅವಕಾಶಗಳನ್ನು ನಾವು ನೋಡುವುದಿಲ್ಲ. ಆದ್ದರಿಂದ ನಮ್ಮ ಸುತ್ತ ಮುತ್ತ ಇರುವ ಯಾವುದೇ ರೀತಿಯ ತೊಂದರೆಗಳನ್ನು ಸಮಸ್ಯೆಗಳನ್ನು ನಾವು ಸವಾಲಾಗಿ ಸ್ವೀಕರಿಸಿ ವಿಶೇಷ/ಅಮಾನಕ ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಹೋದದ್ದೇ ಆದರೆ ಪರಿಣಾಮಗಳು (Results) ಮತ್ತು ಲಾಭ (profit) ತಾನಾಗಿಯೇ ಬರುತ್ತದೆ. ನಮ್ಮ ಪಯಣ ಯಶಸ್ಸಿನತ್ತ ದಾಪುಗಾಲಿನಿಂದ ಮುನ್ನಡೆಯುತ್ತದೆ.
  27. ಮಾಪಕತೆಯಿಂದ ಮಾರ್ಪಾಡು (Setting thigh standards & Benchmarks of progress) ನಮ್ಮ ಕಾರ್ಯವೈಖರಿಯಲ್ಲಿ, ಉತ್ಪನ್ನದ ಉತ್ವಾದಕತೆಯಲ್ಲಿ, ಸೇವೆಗಳನ್ನು ನೀಡುವಲ್ಲಿ, ಯೋಚನೆ-ಯೋಜನೆ-ನಿರ್ವಹಣೆಯಲ್ಲಿ ಉತೃಷ್ಟ ಮಟ್ಟದ ಆದರೆ ನಿಜ ಸ್ಥಿತಿಗೆ ಸಮೀಪವಿರುವ ಮಾಪಕತೆಯಿಂದ ಕಾರ್ಯ ಪ್ರವೃತ್ತರಾದಾಗ ಯಶಸ್ಸು ಅತ್ಯುತ್ತಮ ರೀತಿಯಿಂದ ಹೊರಹೊಮ್ಮುತ್ತದೆ.
  28. ಮೌಲ್ಯಗಳು ಮತ್ತು ನೀತಿನಿಯಮಗಳು (Values, Ethics& Principles): ಎಲ್ಲ ರೀತಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಾಗ ಕೆಲವು ಮೂಲಭೂತ ಮೌಲ್ಯಗಳನ್ನು ನೀತಿ ನಿಯಮಗಳನ್ನು ಮತ್ತು ತತ್ವಗಳನ್ನು ಪರಿಪಾಲಿಸಬೇಕು. ಇದು CEO ನಿಂದ Peon/Security guard ವರೆಗೂ ಪರಿಪಾಲಿಸುವ Organisational culture (ಸಾಂಸ್ಥಿಕ ಸಂಸ್ಕಾರ)ವಾದರೆ ಸಂಸ್ಥೆ ಎಲ್ಲ ರೀತಿಯ ಏರಿಳಿತಗಳನ್ನು ಸರಳವಾಗಿ ನಿಭಾಯಿಸಬಹುದು.
  29. ಕ್ರೀಯಾಶೀಲತೆ ಹಾಗೂ ಹೊಸತನ (Creativity and Innovaiotn in approaches): ಮಾಡುವ ಯಾವುದೇ ಕೆಲಸವಾಗಲೀ, ಅಳವಡಿಸಿಕೊಳ್ಳುವ ಪದ್ಧತಿಯಾಗಲಿ, ಗಳಿಸುವ ಯಶಸ್ಸಾಗಲಿ, ಗ್ರಾಹಕರಿಗೆ ಒದಗಿಸುವ ಸೇವೆಗಳಾಗಲಿ, ಎಲ್ಲಾ ಸ್ತರಗಳಲ್ಲಿ ಕ್ರೀಯಾಶೀಲತೆ ಮತ್ತು ಹೊಸತನ ಎದ್ದು ಕಾಣಬೇಕು-ಹಾಗೆ ಆಗಿದ್ದಲ್ಲಿ ಕಾರ್ಯವೈಖರಿ ಹೊಸತನದ ಹಾದಿಯನ್ನು ಹುಟ್ಟು ಹಾಕುತ್ತದೆ.
  30. ಹಿರಿಯ ಅಧಿಕಾರಿಗಳಿಂದ ಮಾದರಿ ವ್ಯಕ್ತಿತ್ವ (Role model personality from Senior executives) ಯಥಾ ರಾಜ, ತಥಾ ಪ್ರಜೆ, ಯಥಾ ಗುರು, ತಥಾ ಶಿಷ್ಯ ಎಂಬುದು ನಮಗೆ ಗೊತ್ತಿರುವ ನಗ್ನ ಸತ್ಯ. ಅದೇ ರೀತಿ ಹಿರಿಯ ಅಧಿಕಾರಿಗಳು ತಮ್ಮ ವ್ಯಕ್ತಿತ್ವ-ನಡವಳಿಕೆ ಮೂಲಕ ಕಿರಿಯರಿಗೆ ಮಾದರಿಯಾಗಬೇಕು. A real leader is one who knows the way, shows the way & walks the way.
  31. ಸರ್ವರಿಗೂ ಲಭ್ಯವಾಗಿರುವ ನಡವಳಿಕೆ ಹಾಗೂ ಸಾಮಾನ್ಯದಲ್ಲಿ ಅಸಾಮಾನ್ಯತೆ (Follow 3a philosophy-be Available, ‘Accessible & Approachable with Simplicity) ಯಾರೆ ತಮ್ಮಿಂದ ಸಹಾಯ-ಸಲಹೆ-ಮಾರ್ಗದರ್ಶನ ಕೇಳಬೇಕಾದರೆ ಅವರಿಗೆ ಲಾಭವಾಗಿರಬೇಕು: ಅವರು ಸಂಕೋಚವಿಲ್ಲದೆ ನಾಯಕನನ್ನು ಸಮೀಪಿಸಿ-ಸಮಾಲೋಚಿಸಬೇಕು: ಸಂದೇಹಗಳನ್ನು ಕೇಳಲು ನಿಮ್ಮ ಕಛೇರಿ ಮತ್ತು ಮನಸ್ಸುಗಳ ಬಾಗಿಲು ತೆರೆದಿರಬೇಕು. ಇವೆಲ್ಲ ಸಾಧ್ಯವಾಗುವುದು ಸರಳತೆ-ಸಜ್ಜನಿಕೆಯ ಸ್ವಭಾವದಿಂದವೇ ಹೊರತು, ಅಧಿಕಾರದ ದರ್ಪದಿಂದಲ್ಲ. ಎಲ್ಲರನ್ನೂ ಬೆಳೆಸೋಣ, ಅವರ ಅಭಿವೃದ್ಧಿಯಲ್ಲಿ ಸಂತೃಪ್ತಿ ಹೊಂದುವ ಜಾಯಮಾನ ನಾಯಕನ ಒಳ್ಳೆ ಗುಣ.
  32. ಮೌಲ್ಯವರ್ಧನೆ ಹಾಗೂ ಬ್ರಾಂಡಗಳನ್ನು ಹೆಚ್ಚಿಸುವುದು (Value addition & Brand building initiatives): ಒಂದು ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಅನೇಕರು ತ್ಯಾಗಮಾಡುತ್ತಾರೆ-ಪರಿಶ್ರಮ ಪಡುತ್ತಾರೆ. Amul ನಂತ ವಿಶ್ವವಿಖ್ಯಾತ brand ಬೆಳೆಯಲು ಪ್ರತಿ ಡೈರಿ ರೈತ ಮತ್ತು ಗ್ರಾಮೀಣ ಮಹಿಳೆ ಎಷ್ಟು ಕಾರಣೀಭೂತವೋ, ಅದೇ ರೀತಿ ಹಾಲಿನ ಕ್ರಾಂತಿ (White revelution) ಯು ಕತೃಕಾರರಾದ ಡಾ| ವಗೀಸ್ ಕುರಿಯನ್‍ರವರ ನಾಯಕತ್ವವು ಅಷ್ಟೇ ಪ್ರಾಮುಖ್ಯ. ಈ ರೀತಿ ನಾವೆಲ್ಲ ಹೊಸತಾದ Brand image ನ್ನು ಸಂಸ್ಥೆಗೆ ನೀಡಲು ಪ್ರಯತ್ನಿಸಬೇಕು.
  33. ಏರಿಳಿತಗಳನ್ನು ನಿಭಾಯಿಸುವ ಕೌಶಲ್ಯಗಳು (Managing ups & downs skills) ಸಂಸ್ಥೆಗಳು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಏರಿಳಿತ ಆಗುವುದು ಸಹಜ-ಸಹಜ-ಸಾಮಾನ್ಯ-ಸತ್ಯದ ಸಂಗತಿ, ಇವುಗಳನ್ನು ಮೀರಿ ನಿಂತು, ತಂಡದ ಸದಸ್ಯರ ಭಾವನೆಗಳನ್ನು (emotions of teammembers) ನಿಭಾಯಿಸಿದ್ದೇ ಆದರೆ, ಎಂತಹದೇ ಕ್ಲಿಷ್ಟಕರ ಏರಿಳಿತಗಳನ್ನು ಮೆಟ್ಟಿನಿಂತು ಸಾಧಿಸಬೇಕಾದ ಸಾಧನೆ ಮಾಡಬಹುದು.
  34. ಸಾಧಿಸುವ-ಬೆಳೆಯುವ ಹುಚ್ಚುತನ (passion for growth & excellence) ಅಸಾಮಾನ್ಯ ಕೆಲಸಗಳನ್ನು ಸಾಮಾನ್ಯ ರೀತಿ ವಿಚಾರ-ವ್ಯಕ್ತಿ-ಪದ್ಧತಿಗಳಿಂದ ಮಾಡಲು ಸಾಧ್ಯವಿಲ್ಲ ಅಂದರೆ ವಿಶೇಷವಾದ ಸಾಧನೆಯನ್ನು ಸಾಧಿಸಲು ಬೆಳೆಯುವ, ಬೆಳೆಸುವ ಅತೀ ಹುಚ್ಚುತನ (Extreme passion) ಇರಬೇಕಾಗುತ್ತದೆ. ಈ ರೀತಿಯ ಹುಚ್ಚುತನದಿಂದ stene jobs  ವಿಶ್ವವಿಖ್ಯಾತ Apple  ಎಂಬ ಕಂಪನಿ ಕಟ್ಟಿರುವ ವಿಷಯ; Jack welch GF company ಬೆಳೆಸಿದ ಮತ್ತು ನಮ್ಮ ಕನ್ನಡಿಗರಾದ N.R. Narayana murthy ಕಟ್ಟಿ-ಬೆಳೆಸಿದ Infosys ಎಂಬ ಹೆಮ್ಮರಗಳು ನಮ್ಮ ಮುಂದಿರುವ ಜ್ವಲಂತ ಸಾಕ್ಷಿಗಳು.
  35. ನಾಯಕತ್ವದ ಬೆಳವಣಿಗೆ/ಪುಷ್ಠಿತನ (Succession of Leadership)  ಒಬ್ಬ ನಿಜವಾದ ನಾಯಕನಾಗಿ ಮಾತ್ರ ಬೆಳೆಯುವುದಿಲ್ಲ, ಬದಲಾಗಿ ತನ್ನ ಜೊತೆಗಿರುವ-ತನ್ನ ಹಿಂದಿರುವ ವ್ಯಕ್ತಿಗಳಿಗೆ ಶಕ್ತಿ-ಸಾಮಥ್ರ್ಯ ತುಂಬಿ ವಿವಿಧ ರೀತಿಯ ಹತ್ತು-ಹಲವು ಬಗೆಯ ನಾಯಕರ ಪೀಳಿಗೆಯನ್ನು ತಯಾರಿಸಿ-ಬೆಳೆಸಿ ಪೋಷಿಸುತ್ತಾನೆ. ಇದು ನಿಜರೂಪದಲ್ಲಿ ಕಾರ್ಯರೂಪಗೊಂಡಾಗ ಮುಂದೆ ಬರುವ ಸವಾಲುಗಳಿಗೆ ಕಾರ್ಯತಂತ್ರಗಳಿಗೆ ನಾಯಕರ ನಾಯಕತ್ವದ ಕೊರತೆ ಕಿಂಚಿತ್ತೂ ಇರುವುದಿಲ್ಲ.
  36. ನಾಯಕತ್ವದ ಅಯಸ್ಕಾಂತತೆ (Magnetic efhasism of leadership) ಇಲ್ಲಿಯವರೆ ನಾವು ಅರಿತ-ತಿಳಿದುಕೊಂಡ 35 ವಿವಿಧ ನಾಯಕರ ಗುಣವೈಶಿಷ್ಯತೆಗಳನ್ನು ನೋಡಿದ್ದೇವೆ. ಇವೆಲ್ಲರೂ ಕೆಳಶಪ್ರಾಯದಂತೆ, ಯಾವುದೇ ಕ್ಷೇತ್ರದಲ್ಲಿ ಧೀಮಂತ ನಾಯಕನ ವ್ಯಕ್ತಿತ್ವ ಆಯಸ್ಕಾಂತದಂತೆ ಇತರರನ್ನು ತನ್ನೆಡೆಗೆ ಸೆಳೆದುಕೊಳ್ಳುವ, ಇನ್ನು ಎತ್ತರಕ್ಕೆ ಬೆಳೆಯುವ ತಂಡಗಳನ್ನು ನಿರ್ಮಾಣಮಾಡುವ ಕರ್ಮಚಾರಿ (Architect) ಯಾಗುತ್ತಾನೆ.​

ಉಪಸಂಹಾರ:
A true Leader Should build a pipeline of Leaders (ಅರ್ಥಾಥ್ ನಿಜವಾದ ನಾಯಕನೊಬ್ಬ ತನ್ನೊಂದಿಗೆ ನಾಯಕರ ದೊಡ್ಡ ತಂಡವನ್ನು ನಿರ್ಮಾಣ ಮಾಡುತ್ತಾನೆ). ಇದರ ಪರಿಣಾಮವಾಗಿ ಒಂದು ವಿಶಿಷ್ಟ ನಾಯಕರ ತಂಡ (Special team of Leader) ನಿರ್ಮಾಣವಾಗುತ್ತದೆ. ಆದ್ದರಿಂದ ಉತೃಷ್ಟತೆ (Excellence) ಹೆಚ್ಚುವಲ್ಲಿಗೆ ಬೆಳೆದು ಬಹುಕಾಲ ಬಾಳುತ್ತದೆ. ಈ ರೀತಿಯ ನಾಯಕರ ತಂಡವನ್ನು ಹುಟ್ಟುಕಾಕಿ, ಉಳಿಸಿ, ಬೆಳೆಸಿ, ಪುಷ್ಟಿಸಿ, ನಿರಂತರವಾಗಿ ಕಾರ್ಯಪ್ರವೃತ್ತರನ್ನಾಗಿ ಮಾಡುವ ನಾಯಕರೆಂದರೆ ಮಾನವ ಸಂಪನ್ಮೂಲ ವೃತ್ತಿನಿರತರು.
0 Comments



Leave a Reply.

    Picture
    Nirathanka

    Categories

    All
    Awards 2017
    Awards 2018
    Awards 2019
    Awards 2020
    Awards 2021
    Awards 2022
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಸಮ್ಮೇಳನದ ಕುರಿತು ಅಭಿಪ್ರಾಯಗಳು
    ಹನಿಗವನ

    Archives

    December 2022
    November 2022
    November 2021
    March 2021
    November 2020
    July 2020
    November 2019
    October 2019


    Picture
    More Details

    Picture
    WhatsApp Group

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now


    RSS Feed

ಸೈಟ್ ನಕ್ಷೆ


ಸೈಟ್

  • ಸ್ವಾಗತ
  • ಸಮಿತಿಯ ಸದಸ್ಯರು
  • ಮಾಧ್ಯಮ​
  • ಆನ್‍ಲೈನ್‍ ಗ್ರೂಪ್ಸ್
  • ಬ್ಲಾಗ್
  • ಸಮ್ಮೇಳನದ ಕೈಪಿಡಿಗಳು

ನಮ್ಮ ಇತರೆ ಜಾಲತಾಣಗಳು

  • ​WWW.NIRATANKA.ORG
  • WWW.NIRUTAPUBLICATIONS.ORG

ಪ್ರಶಸ್ತಿಗಳು

  • CSR EXCELLENCE AWARD
  • THE BEST WOMEN EMPOWERMENT ORGANISATION AWARD
  • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022

ಕನ್ನಡ ಸಮ್ಮೇಳನ

​ಕನ್ನಡ ಸಮ್ಮೇಳನ-2017
​ಕನ್ನಡ ಸಮ್ಮೇಳನ-2018
​ಕನ್ನಡ ಸಮ್ಮೇಳನ-2019
​ಕನ್ನಡ ಸಮ್ಮೇಳನ-2020
​ಕನ್ನಡ ಸಮ್ಮೇಳನ-2021
​ಕನ್ನಡ ಸಮ್ಮೇಳನ-2022

ಪಬ್ಲಿಕೇಷನ್ಸ್

  • LEADER'S TALK
  • NIRUTA'S READ & WRITE INITIATIVE​​
  • ​COLLABORATE WITH NIRUTA PUBLICATIONS

ನಿರಾತಂಕ

  • POSH
  • CSR
  • COLLABORATE WITH NIRATHANKA
  • NIRATHANKA CLUB HOUSE

ಚಂದಾದಾರರಾಗಿ




JOIN OUR ONLINE GROUPS


JOIN WHATSAPP BROADCAST

Copyright : Nirathanka 2021
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ