ಮಾನವರ ವರ್ತನೆಯು ತುಂಬ ವಿಶೇಷ ಮತ್ತು ಸಂಕೀರ್ಣ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ಪ್ರತಿಯೊಬ್ಬರೂ ತಮ್ಮದೇ ಆದ ವ್ಯಕ್ತಿತ್ವ ಮತ್ತು ವರ್ತನೆಗಳನ್ನು ಹೊಂದಿರುತ್ತಾರೆ. ಈ ವಿಶೇಷತೆಗೆ ಮತ್ತು ವಿಭಿನ್ನತೆಗೆ ಅವರು ಇರುವ ಸಮಾಜದ ಪರಿಸ್ಥಿತಿಗಳು, ತಮ್ಮ ಜೀವನದಲ್ಲಿ ಆದ ಬದಲಾವಣೆಗಳು, ಅವರ ಮೇಲೆ ಆದ ಪ್ರಭಾವಗಳು, ಅವರು ಮಾಡಿಕೊಂಡ ಸಹವಾಸಗಳು, ಅಭ್ಯಾಸಗಳು ಇನ್ನೂ ಅನೇಕ ಅಂಶಗಳು ಕಾರಣವಾಗುತ್ತವೆ. ಈ ವಿಶೇಷತೆಯೊಂದಿಗೆ ಉದ್ಯಮಗಳು ತಮಗೆ ಬೇಕಾದ ಮಾನವ ಸಂಪತ್ತನ್ನು ಸಮಾಜದಿಂದ ತೆಗೆದುಕೊಳ್ಳುತ್ತವೆ. ಉದ್ಯಮಗಳು ಈ ಮಾನವ ಸಂಪತ್ತನ್ನು ತಮ್ಮ ಉದ್ದೇಶಗಳ ಸಾಧನೆಗಾಗಿ ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು ಮತ್ತು ಸತತವಾಗಿ ಅವರನ್ನು ಹೆಚ್ಚಿನ ಸವಾಲುಗಳನ್ನು ಎದುರಿಸಲು ತಯಾರು ಮಾಡುತ್ತಿರಬೇಕು. ಅಲ್ಲದೆ ಹೆಚ್ಚಿನ ಕಾಲ ಒಟ್ಟಿಗೆ ಕೆಲಸ ಮಾಡಲು ಹಾಗು ಸಹಭಾಗಿತ್ವವನ್ನು ತರಲು ಅವರಲ್ಲಿ ಉತ್ಸಾಹ ತುಂಬಿ ಅಗತ್ಯ ಪಕ್ವತೆಯನ್ನು (maturity) ಬೆಳಸಬೇಕು. ಅಗತ್ಯ ಶಿಕ್ಷಣ, ತರಬೇತಿ ಮತ್ತು ಲವಲವಿಕೆ (engagement) ಮತ್ತಿತರ ಯೋಜಿತ ಕಾರ್ಯಕ್ರಮಗಳ ಮುಖಾಂತರ ಕಾರ್ಮಿಕರ ಅಭಿವೃದ್ದಿಗೆ ಶ್ರಮಿಸುವುದು ಯಾವಾಗಲೂ ಸಂಸ್ಥೆಯ/ಉದ್ಯಮದ ಜವಾಬ್ಧಾರಿಯಾಗುತ್ತದೆ. ಹಾಗೆಯೇ ಕಾರ್ಮಿಕರೊಂದಿಗೆ ವ್ಯವಹರಿಸುವಾಗ ನ್ಯಾಯೋಚಿತವಾಗಿ ನಡೆದುಕೊಳ್ಳಬೇಕು. ಯಾವಾಗ ಸಂಸ್ಥೆ ತನ್ನ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ವಿಫಲಗೊಳ್ಳುತ್ತದೆಯೋ ಆಗ ಕಾರ್ಮಿಕ ಅಶಾಂತಿ, ವಿವಾದಗಳು ಮತ್ತು ಸಂಘರ್ಷಗಳು ಉದ್ಬವವಾಗುತ್ತವೆ. ಹಾಗೆಂದಾಕ್ಷಣ, ಕಾರ್ಮಿಕರಿಗೆ ಯಾವುದೇ ಜವಾಬ್ದಾರಿಗಳು ಇಲ್ಲವೆಂದರ್ಥವಲ್ಲ ಮತ್ತು ಅವರು ತಪ್ಪುಗಳನ್ನು ಮಾಡುವುದಿಲ್ಲ ಎಂದರ್ಥವಲ್ಲ. ಅವರಿಗೂ ತಮ್ಮದೇ ಆದ ಜವಬ್ದಾರಿಗಳಿವೆ ಮತ್ತು ಅವರ ಉದ್ದೇಶಪೂರ್ವಕ ಇಲ್ಲವೆ ನಿರುದ್ದೇಶ ಪೂರ್ವಕ ತಪ್ಪುಗಳು ತೀವ್ರ ಸಂಘರ್ಷಗಳಿಗೆ ಮತ್ತು ಅಡ್ಡ ಪರಿಣಾಮಗಳಿಗೆ ಕಾರಣಗಳಾಗಿವೆ. ಆದರೆ, ಗಮನಿಸಬೇಕಾದ ಒಂದು ವಿಚಾರವೆಂದರೆ ಕಾರ್ಮಿಕರನ್ನು ಸರಿಯಾಗಿ ಸಿದ್ದಪಡಿಸಿ ಅವರನ್ನು ಕಂಪನಿಯ ಉದ್ದೇಶಗಳ ಸಾಧನೆಗೆ ಉಪಯೋಗಿಸಿಕೊಳ್ಳಬೇಕಾದದ್ದು ಸಂಸ್ಥೆಯ ಪ್ರಾಥಮಿಕ ಜವಬ್ದಾರಿ. ಈ ಪ್ರಕ್ರಿಯೆಯಲ್ಲಿ ಕಾರ್ಮಿಕರ ಕೊಡುಗೆಗಳಿಗೆ ಅನುಸಾರವಾಗಿ ಅವರಿಗೆ ಮೌಲ್ಯ ವೃದ್ದಿ ಸೃಷ್ಟಿಸುವುದು ಉದ್ಯಮದ ಜವಾಬ್ದಾರಿಯಾಗುತ್ತದೆ. ಯಾವ ಕೆಲಸಗಳು, ಬೇಕು ಬೇಡಗಳು ಉತ್ತಮ ಕೈಗಾರಿಕಾ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ ಎಂಬುದನ್ನು ನಮ್ಮ ಅನುಭವ ನಮಗೆ ಕಲಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ, ಕೆಲವೊಂದು ಬೇಕು ಬೇಡಗಳು, ಕೈಗೊಳ್ಳಬಹುದಾದ ಯೋಜನೆಗಳು ಮತ್ತು ಎಚ್ಚರಿಕೆ ವಹಿಸಬೇಕಾದ ಕೆಲವು ಕ್ರಮಗಳನ್ನು ಈ ಕೆಳಗೆ ವಿವರಿಸಲು ಪ್ರಯತ್ನಿಸಲಾಗಿದೆ.
ಗೋವಿಂದರಾಜು ಎನ್.ಎಸ್ ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕರು ಕರ್ನ್ ಲಿಬರ್ಸ್ ಇಂಡಿಯಾ ಪ್ರೈ. ಲಿ ತುಮಕೂರು ಲೇಖಕರಘೋಷಣೆ ಈ ಲೇಖನದ ಮಾಹಿತಿಗಳನ್ನು ಲೇಖಕರ 'ಮ್ಯಾನೇಜಿಂಗ್ ಲೇಬರ್ ರಿಲೇಷನ್ಸ್' ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಉದ್ಯಮ ಮತ್ತು ಮಾನವ ಸಂಪನ್ಮೂಲ ವೃತ್ತಿಪರರಿಗೆ ಅನುಕೂಲವಾಗಲೆಂದು ಈ ಪುಸ್ತಕದ ಕನ್ನಡ ಆವೃತ್ತಿಯನ್ನು ಮತ್ತಷ್ಟು ಮಾಹಿತಿಗಳೊಂದಿಗೆ ಸದ್ಯದಲ್ಲೇ ಹೊರತರಲಾಗುವುದೆಂದು ತಿಳಿಸಲು ಹರ್ಷವೆನಿಸುತ್ತದೆ.
0 Comments
Leave a Reply. |
Categories
All
Archives
May 2024
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |