ಜಾಗತೀಕರಣದ ಪ್ರಭಾವದಿಂದ ಮಾನವ ಸಂಪನ್ಮೂಲ ವಿಭಾಗದ ಉಗಮ ಎಂಬ ಅಭಿಪ್ರಾಯ ಇಂದು ಎಲ್ಲರಲ್ಲಿಯೂ ಮನೆಮಾತಾಗಿರುವುದು ಸತ್ಯವಾಗಿರುವುದಷ್ಟೇ ಅಲ್ಲದೇ ಈ ವಿಭಾಗವು ಹೊರ ರಾಷ್ಟ್ರಗಳು ಭಾರತಕ್ಕೆ ಮತ್ತು ಭಾರತದ ಕೈಗಾರಿಕಾ ಬೆಳವಣಿಗೆಗೆ, ನೀಡಿದ ಕೊಡುಗೆಯಾಗಿದೆ ಎಂಬುದು ಹಾಸ್ಯಾಸ್ಪದವೇ ಸರಿ. ಕಾರಣ ಈ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಪರಿಕಲ್ಪನೆಗಳಾದ Organisational values, Diversity, Performance Management, Training and Development, People transformation, Problem solving, Communication etc., ಮುಂತಾದವುಗಳ ಉಲ್ಲೇಖ ಅಷ್ಟೇ ಅಲ್ಲದೆ ಈ ವಿಷಯಗಳಲ್ಲಿನ ಪರಿಪೂರ್ಣ ಪರಿಕಲ್ಪನೆಗಳನ್ನು ಸರಿಸುಮಾರು 1200 ವರ್ಷಗಳನ್ನು ಹಿಂದೆಯೇ ನಮ್ಮ ಕನ್ನಡ ಸಾಹಿತ್ಯದಲ್ಲಿ, ಅದರಲ್ಲಿಯೂ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಇತ್ತೀಚೆಗೆ ಬಂದಂತಹ ಡಿ.ವಿ.ಜಿ. ಯವರ ಕಗ್ಗದಂತಹ ಸಾಹಿತ್ಯ ಪ್ರಕಾರಗಳಲ್ಲಿ ಕಾಣಬಹುದಾಗಿದೆ. ಈ ದೃಷ್ಟಿಯಿಂದ, ಮಾನವ ಸಂಪನ್ಮೂಲ ಪರಿಕಲ್ಪನೆಗಳನ್ನು, ಭಾರತ ಅನ್ಯ ರಾಷ್ಟ್ರಗಳಿಗೆ ಎರವಲಾಗಿ ನೀಡಿದೆ ಎಂಬುದು ಕಟು ಸತ್ಯವೇ ಹೊರತು, ಈ ಪರಿಕಲ್ಪನೆ ಹೊರ ರಾಷ್ಟ್ರದಿಂದ ನಮ್ಮ ರಾಷ್ಟ್ರಕ್ಕೆ ಬಂದ ವಿಚಾರವಲ್ಲ. ಈ ಕಟು ಸತ್ಯವನ್ನು ನಾವು ಅಂದರೆ, “So called HR Professionals”, ಜಗತ್ತಿಗೆ ಬಹಳ ಸ್ಪಷ್ಟವಾಗಿ ತಿಳಿಸದೇ ಹೋದಲ್ಲಿ ಹಾಗೂ ಮಾನವ ಸಂಪನ್ಮೂಲ ವಿಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕರಗಳನ್ನು ಅಧ್ಯಯನ ಮಾಡದೇ ಹೋದಲ್ಲಿ ನಮಗೆ ನಾವೇ ದ್ರೋಹ ಬಗೆದುಕೊಂಡಂತಾಗುತ್ತದೆ.
ಈ ದಿಶೆಯಲ್ಲಿ “ಕನ್ನಡ ಸಾಹಿತ್ಯ ಮತ್ತು ಆಧುನಿಕ ಮಾನವ ಸಂಪನ್ಮೂಲ ವಿಭಾಗದ ಸಂಪೂರ್ಣ ಅಭ್ಯುದಯ, ಒಂದು ತುಲನಾತ್ಮಕ ಅಧ್ಯಯನ”ದ ಅವಶ್ಯಕತೆ ಬಹಳವಿದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ. ನಾಗಭೂಷಣ್ Dy. General Manager - HR & IR, SEG Automotive (BOSCH Ltd.,)
0 Comments
Leave a Reply. |
Categories
All
Archives
May 2024
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |