ಗೋವಿಂದರಾಜು ಎನ್.ಎಸ್. ಪ್ರಧಾನ ವ್ಯವಸ್ಥಾಪಕರು - ಮಾನವ ಸಂಪನ್ಮೂಲ ಹಾಗೂ ಲೇಖಕರು ಮೆ. ಕರ್ನ್ ಲೀಬರ್ಸ್ (ಇಂಡಿಯ) ಪ್ರೈ.ಲಿ., ತುಮಕೂರು ಆರ್ಥಿಕತೆ ಮತ್ತು ಸಮಾಜ ನಿರಂತರ ಬದಲಾವಣೆಯ ಪಥದಲ್ಲಿ ಸಾಗುತ್ತಿದೆ. ಇದರ ಜೊತೆಯಲ್ಲಿ ಮಾನವ ಸಂಪನ್ಮೂಲ ವೃತ್ತಿ ಕೇವಲ ಕೆಲಸದ ಅವಧಿಯ ಲೆಕ್ಕಾಚಾರ ಮತ್ತು ಸಂಬಳ ನೀಡುವ (Time office and payroll function) ಕೆಲಸದಿಂದ ವ್ಯವಹಾರದ ಅವಿಭಾಜ್ಯ ಅಂಗವಾಗಿ ಪಾಲುದಾರನಂತೆ ಬೆಳೆದು ನಿಂತಿದೆ (Strategic Partner). ಹಾಗಾದರೆ ಮುಂದೇನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ವ್ಯವಹಾರದಲ್ಲಿ ಆಗುತ್ತಿರುವ ಬದಲಾವಣೆಗಳ ಅವಲೋಕನ ಅತ್ಯಗತ್ಯ. ಮಾನವ ಸಂಪನ್ಮೂಲ ವೃತ್ತಿ ವ್ಯವಹಾರದ ಬದಲಾವಣೆಗಳಿಗೆ ಹೊಂದಾಣಿಕೆ ಮಾಡಿಕೊಂಡು ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಳ್ಳದೇ ಹೋದರೆ ಈ ವೃತ್ತಿಯ ಭವಿಷ್ಯ ಅತಂತ್ರವಾಗಬಹುದು. ವ್ಯವಹಾರ ಮತ್ತು ಅದರ ಸ್ವರೂಪಗಳಲ್ಲಿ ಅದರಲ್ಲಿಯೂ ಮಾನವ ಸಂಪನ್ಮೂಲ / ಕೆಲಸಗಾರರ ಪ್ರವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಅವುಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ವಿವರಿಸಬಹುದು. ತಾಂತ್ರಿಕತೆ ವ್ಯವಹಾರದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಾ ಹೋಗುತ್ತದೆ. ಎಲ್ಲ ಉತ್ಪಾದನೆ ಮತ್ತು ಇತರ ಪ್ರಕ್ರಿಯೆಗಳಲ್ಲಿ ತಾಂತ್ರಿಕತೆ ಮತ್ತು ಯಾಂತ್ರಿಕ ಜ್ಞಾನ ಹಾಗೂ ಕೃತಕ ಬುದ್ದಿಮತ್ತೆಯ (Artificial Intelligence) ಬಳಕೆ ಮಾಮೂಲಾಗಿ ಬಿಡುತ್ತದೆ. ಈಗಾಗಲೇ ನಾವು ಇಂಡಸ್ಟ್ರಿ 4.0 ಎಂದೆಲ್ಲ ಕೇಳುತ್ತಿದ್ದೇವೆ. ಮುಂದೆ ಇದು 4.1 ರ ಸರಣಿ ಅಥವಾ 5.0 ಎಂದೆಲ್ಲ ಹೇಳಿಸಿಕೊಂಡು ಸಾಕಷ್ಟು ಬದಲಾವಣೆಗಳಿಗೆ ನಾಂದಿ ಮಾಡಿಕೊಡಬಹುದು. ಮನುಷ್ಯರೇ ಇಲ್ಲದ ಹಾಗೂ ರೋಬೋಟ್ಗಳು ಉತ್ಪಾದನೆಯಲ್ಲಿ ನಿರತವಾಗಿರುವ ಉತ್ಪಾದನಾ ಕೇಂದ್ರಗಳು ಮತ್ತಷ್ಟು ಹೆಚ್ಚಾಗಬಹುದು.
ಈ ಮೇಲಿನ ಎಲ್ಲ ಅಂಶಗಳು ಮುಂದಿನ ದಿನಗಳಲ್ಲಿ ಹೆಚ್ಆರ್ ಕ್ಷೇತ್ರದ ಸ್ವರೂಪವನ್ನು ನಿರ್ಧರಿಸುತ್ತವೆ. ಹಾಗಾದರೆ ಇವುಗಳನ್ನು ನಿರ್ವಹಿಸಲು ಮಾನವ ಸಂಪನ್ಮೂಲ ವೃತ್ತಿನಿರತರಿಗೆ ಸಾಮಾನ್ಯವಾಗಿ ಬೇಕಾಗಬಹುದಾದ ಕೌಶಲ್ಯಗಳ ಜೊತೆಗೆ, ಈ ಕೆಳಗಿನ ಕೌಶಲ್ಯಗಳು ಅಗತ್ಯವಾಗಬಹುದು.
ಉಲ್ಲೇಖಗಳು:
ಲೇಖಕರ ಘೋಷಣೆ: ಈ ಲೇಖನವನ್ನು ನನ್ನ ಅನುಭವ, ದೂರದೃಷ್ಟಿ, ಜ್ಞಾನ ಮತ್ತು ಪ್ರಚಲಿತ ವಿಧ್ಯಮಾನಗಳನ್ನು ಆಧರಿಸಿ ಸಿದ್ದಪಡಿಸಲಾಗಿದೆ. ವಿಚಾರಗಳನ್ನು ಕಲೆ ಹಾಕುವಾಗ, ಈ ವಿಚಾರದಲ್ಲಿ ಲಭ್ಯವಿರುವ ಲೇಖನಗಳು ಮತ್ತು ಮಾಹಿತಿಗಳನ್ನು ಅಧ್ಯಯನ ಮಾಡಿ ಸಿದ್ದಪಡಿಸಲಾಗಿದೆ.
0 Comments
Leave a Reply. |
Categories
All
Archives
May 2024
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |