HR KANNADA CONFERENCE
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
www.niratanka.org

ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆ ಮತ್ತು ಪ್ರಯೋಜನಗಳು

11/29/2019

0 Comments

 
Picture
ಶಿವಲೀಲಾ ಎಚ್. ಅಗಡಿ
ಎಂ.ಫಿಲ್-ಮನೋವೈದ್ಯಕೀಯ ಸಮಾಜಕಾರ್ಯ, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರು

Picture
ಶೀರಿನ್ ಸುಲ್ತಾನ್
ಸಂಶೋಧನಾ ವಿಧ್ಯಾರ್ಥಿನಿ, ಅಕ್ಕಮಹಾದೇವಿ ವಿಶ್ವವಿದ್ಯಾಲಯ, ಸಮಾಜಕಾರ್ಯ ಅಧ್ಯಯನ ವಿಭಾಗ, ವಿಜಯಪುರ
Picture
ಲಿಂಗರಾಜ ನಿಡುವಣಿ
ಸಂಶೋಧನಾ ವಿಧ್ಯಾರ್ಥಿ, ಮಾನವ ಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪೀಠಿಕೆ:
ಮಾನವ ಸಂಪನ್ಮೂಲ ನಿರ್ವಹಣೆ ಪ್ರಸ್ತುತ ದಿನಗಳಲ್ಲಿ ಅತಿ ಅವಶ್ಯಕ ವಸ್ತು ವಿಷಯವಾಗಿದೆ. ಇಂದು ಮಾನವ ಸಂಪನ್ಮೂಲ ನಿರ್ವಹಣೆ ವಿಷಯ ತನ್ನ ವಿಶಾಲವಾದ ಹರವಿನಲ್ಲಿ ಮಹಾ ಕಾವ್ಯದೋಪಾದಿಯಲ್ಲಿ ಅರಳಬೇಕಾದ ಸಮಯ ಬಂದಿದೆ. ವಿವಿಧ ಸಂಘ-ಸಂಸ್ಥೆ, ಕಾರ್ಖಾನೆ ಮತ್ತು ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕ ನೌಕರ ವರ್ಗದವರು ತಮ್ಮ ಉದ್ಯೋಗದಾತರೊಂದಿಗೆ ಸೌಹಾರ್ಧಯುತ ಸಂಬಂಧವನ್ನು ಹೊಂದುವ ಸಲುವಾಗಿ ಮಾನವ ಸಂಪನ್ಮೂಲ ವಿಷಯವನ್ನು ಒಂದು ಸುವ್ಯವಸ್ಥಿತ ಅಭ್ಯಾಸ ಕ್ರಮವನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ. ತ್ವರಿತಗತಿಯಲ್ಲಿ ಬದಲಾಗುತ್ತಿರುವ ಔದ್ಯೋಗಿಕ, ತಾಂತ್ರಿಕ, ಸಂಪರ್ಕ, ಗಣಕಶಾಸ್ತ್ರ ಮತ್ತು ವ್ಯಾಪಾರ ರಂಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಾತಾವರಣ ನಿರ್ವಹಣೆಯು ಆಡಳಿತ ವರ್ಗಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಕಾರ್ಮಿಕರಿಗೆ ಭಾಷೆಯ ತೊಂದರೆಯು ಕೂಡ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಕೈಗಾರಿಕೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳು ಆಂಗ್ಲ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಅಲ್ಪ ಓದಿಕೊಂಡಿರುವ ಕಾರ್ಮಿಕರು ಭಾಷಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾರ್ಮಿಕರು ಕೈಗಾರಿಕೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ. ಕಾರ್ಮಿಕರ ಕಾರ್ಯಕ್ಷಮತೆಯ ಮೇಲೆ ಒಂದು ಕೈಗಾರಿಕೆಯ ಅಳಿವು ಉಳಿವು ನಿಂತಿರುತ್ತದೆ. ಕಾರ್ಮಿಕರೊಂದಿಗೆ ದೈನಂದಿನ ದಿನಗಳಲ್ಲಿ ಬಳಸುವ ಕನ್ನಡ ಭಾಷೆಯು ಕೈಗಾರಿಕೆಗಳನ್ನು ಅಭಿವೃದ್ದಿಯತ್ತ ತೆಗೆದುಕೊಂಡು ಹೋಗುವುಲ್ಲಿ ಸಹಾಯಕವಾಗುತ್ತದೆ.

ಕನ್ನಡ ಭಾಷೆಯ ಪ್ರಾಮುಖ್ಯತೆ:
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯು ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದು ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ 45 ದಶಲಕ್ಷ ಜನರು ಆಡುವ ಬಾಷೆಯಾಗಿದೆ. ಕನ್ನಡ ಕರ್ನಾಟಕ  ರಾಜ್ಯದ ಆಡಳಿತ ಬಾಷೆಯಾಗಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಬಾಷೆಯಲ್ಲಿ ಕನ್ನಡ 29 ನೇ ಸ್ಥಾನದಲ್ಲಿ ಇದೆ. 2011 ರ ಜಣಗಣಿತಿಯ ಪ್ರಕಾರ ಜಗತ್ತಿನಲ್ಲಿ 6.4 ಕೋಟಿ ಜನಗಳ ಮಾತೃ ಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಬರಹದ ಮಾದರಿಗಳಿಗೆ ಸಾವಿರದ ನೂರು ವರ್ಷಗಳ ಚರಿತ್ರೆಯಿದೆ. ಕ್ರಿ.ಶ 6ನೇ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೇಯ ಶತಮಾನದ ರಾಷ್ರ್ಟಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳೆ ಕನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆದಿತ್ತು. ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡ ಭಾಷೆಗಿದೆ. ಕನ್ನಡ ಲಿಪಿ ಸುಮಾರು 1500-1600 ವರ್ಷಗಳಿಗಿಂತಲೂ ಹಿಂದಿನದು. 5ನೆ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೆ ಕನ್ನಡವು ಸಾಕಷ್ಟು ಅಭಿವೃದ್ದಿ ಹೊಂದಿತ್ತು. ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.

ಕಳೆದ ಶತಮಾನದಲ್ಲಿ ಅಂದರೆ 20ನೇ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ದಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಚವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯ ತೊಡಗಿದೆ. ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಬಳಸಲಾಗುತ್ತಿದೆ ಮತ್ತು ಸ್ವಲ್ಪ ಮಟ್ಟಿಗೆ ಅಕ್ಕ ಪಕ್ಕದ ರಾಜ್ಯಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ವಿಶ್ವದ ಬಹುಪಾಲು ಎಲ್ಲಾ ದೇಶಗಳಲ್ಲಿ ಕನ್ನಡಿಗರು ಇದ್ದು, ಕನ್ನಡ ಸಂಘಟನೆಗಳನ್ನು ಹುಟ್ಟು ಹಾಕಿ, ಕನ್ನಡ ಭಾಷೆಯ ಹಿರಿಮೆಯನ್ನು ವಿದೇಶಿಗರಿಗೂ ತಿಳಿಸುತ್ತಿದ್ದಾರೆ. ಸಂಸ್ಕೃತಿ ಸಚಿವಾಲಯ ನೇಮಿಸಿದ ಭಾಷಿಕ ನಿಪುಣರು ಶಿಫಾರಸ್ಸುಗಳನ್ನು ಅನುಮೊದಿಸುತ್ತಾ ಕೇಂದ್ರ ಸರ್ಕಾರ ಕನ್ನಡ ಭಾಷೆ ಎಂಬ ರವತುವಿನ್ನಿತ್ತು ಆದರಿಸಿತು. ಭಾರತದ ಭಾಷೆಗಳಲ್ಲಿ 4ನೇ ಗೌರವ ಸ್ಥಾನವು ಕನ್ನಡಕ್ಕೆ ದೊರಕಿದೆ.
 
ಅಧ್ಯಯನ ಉದ್ದೇಶಗಳು:
  1. ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಇಂದಿನ ಅಗತ್ಯತೆಗಳ ಬಗ್ಗೆ ತಿಳಿದಕೊಳ್ಳುವುದು.
  2. ಔದ್ಯೋಗಿಕ ಕ್ಷೇತ್ರದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರ್ಥಮಾಡಿಕೊಳ್ಳುವುದು.
  3. ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡ ಭಾಷೆ ಇಲ್ಲದೇ ಹೋದರೆ ಆಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು.
ಸಂಶೋಧನಾ ವಿಧಾನ: ಈ ಅಧ್ಯಯನದಲ್ಲಿ ಮುಖ್ಯವಾಗಿ ಆನುಷಂಗಿಕ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಅಧ್ಯಯನದಲ್ಲಿ ಮುಖ್ಯವಾಗಿ ಪುಸ್ತಕಗಳು, ವರ್ತಮಾನ ಪತ್ರಿಕೆಗಳು, ಮ್ಯಾಗಜೀನ್‍ಗಳು, ಅಂತರ್ಜಾಲ ತಾಣಗಳು, ಲೇಖನಗಳು, ಮತ್ತು ಕಿರುಲೇಖನಗಳಲ್ಲಿ ಮುದ್ರಿತವಾದ ಮಾಹಿತಿಗಳನ್ನು ಉಪಯೋಗಿಸಿಕೊಳ್ಳಲಾಗಿದೆ.
 
ಮಾತೃ ಭಾಷೆಯ ಸಂವಹನದ ಪ್ರಾಮುಖ್ಯತೆ:
ಯಾವುದಾದರು ಒಂದು ವಿಷಯವನ್ನು ಬೇರೆಯವರಿಗೆ ತಲುಪಿಸುವಲ್ಲಿ ಭಾಷೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂವಹನದಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ 1. ಮೌಖಿಕ ಸಂವಹನ, 2. ಅಮೌಖಿಕ ಸಂಹನ. ಮೌಖಿಕ ಸಂವಹನ ಘಟಕಗಳೆಂದರೆ ಪದಗಳು, ಮಾತನಾಡುವ ಶೈಲಿ. ಅಮೌಖಿಕ ಸಂವಹನಗಳೆಂದರೆ ಸನ್ನೆಗಳು ಮತ್ತು ದೈಹಿಕ ಭಾಷೆಯ ಮೂಲಕ ನಡೆಯುತ್ತದೆ. ಸಂವಹನದ ಭಾಷೆ ಒಂದೆಯಾಗಿದ್ದರೆ ಸಂವಹನವು ಸರಿಯಾಗಿ ಯಾವುದೆ ಅಡೆತಡೆ ಇಲ್ಲದೆ ನಡೆಯುತ್ತದೆ. ತಿಳಿಸಬೆಕಾದ ವಿಷಯವು ಸರಿಯಾಗಿ ತಿಳಿಸಲು ಮಾತೃಭಾಷೆಯ ಸಂಹವನ ಅನುಕೂಲವಾಗುತ್ತದೆ. ಕೈಗಾರಿಕೆಗಳಲ್ಲಿ ಆಂಗ್ಲ ಭಾಷೆಯು ಬಳಸುತ್ತಿರುವುದರಿಂದ ಕಡಿಮೆ ಓದಿರುವ ಕಾರ್ಮಿಕರಿಗೆ ಕಷ್ಟವಾಗುತ್ತಿದೆ. ಭಾಷೆಯ ಸಮಸ್ಯೆಯು ಕಾರ್ಮಿಕರು ಮತ್ತು ಅಧಿಕಾರಿಗಳ ಮಧ್ಯ ದೊಡ್ಡ ಗೋಡೆಯಾಗಿ ಪರಿಣಮಿಸಿದೆ.
 
ಕೈಗಾರಿಕೆಯಲ್ಲಿ ಮಾನವ ಸಂಪನ್ಮೂಲದ ಅವಶ್ಯಕತೆ:
  • ಕಂಪನಿಯು ಮೂರು ಮೂಲಭೂತ ಅವಶ್ಯಕತೆಗಳನ್ನು ಪರಿಣಾಮಕಾರಿಯಾಗಿ ವ್ಯವಸ್ಥೆ ಮಾಡಿಕೊಂಡು ಹೋಗುತ್ತದೆ. ಅವುಗಳೆಂದರೆ-ಹಣ, ಸರಕು, ಯಂತ್ರಗಳು
  • ಖರ್ಚು ವೆಚ್ಚಗಳನ್ನು ಕಡಿಮೆಗೊಳಿಸಲು ಮಾನವ ಸಂಪನ್ಮೂಲ ಅತ್ಯವಶ್ಯಕ, ಏಕೆಂದರೆ ಸಮಯ ಮತು ಕಾರ್ಮಿಕ    ಕಾರ್ಯಚರಣೆಯಲ್ಲಿ ಪರಿಣಾಮಕಾರಿ ಉಳಿತಾಯಗಳನ್ನು ಮಾಡಲು ಮಾನವ ಸಂಪನ್ಮೂಲ ಸಾಮರ್ಥ್ಯ ಹೊಂದಿದೆ.
  • ಇದು ವಿವಿಧ ಸಂಪನ್ಮೂಲ ದುರುಪಯೋಗವನ್ನು ನಿಯಂತ್ರಿಸಿ, ಸುಭದ್ರತೆ ಆರ್ಥಿಕತೆ ಮತ್ತು ಉತ್ಪಾದಕತೆಗಳನ್ನು ಸಾಧಿಸುತ್ತದೆ.
  • ಸದುದ್ದೇಶದ ಹಂಚಿಕೆಗಳ ಕೃತಿಗಳನ್ನು ಅನುಷ್ಠಾನಗೊಳಿಸಲು ಕಂಪನಿಯು ಹಲವಾರು ಚಟುವಟಿಕೆಗಳ ಐಕ್ಯತೆಯನ್ನು ಮಾನವ ಸಂಪನ್ಮೂಲ ಸಾಧಿಸುತ್ತದೆ.
  • ಮಾನವ ಸಂಪನ್ಮೂಲ ಇಲ್ಲದೆ ಯಾವುದೇ ಕಂಪನಿಯು ತನ್ನ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ
  • ಕಂಪನಿಯು ವ್ಯವಹಾರಗಳಿಗೆ ಸಂಬಂಧಪಟ್ಟ ಧ್ಯೇಯೋದ್ದೆಶಗಳನ್ನು ಸಾಧಿಸಲು ಅವಶ್ಯವಿರುವ ಎಲ್ಲ ವ್ಯವಹಾರಿಕ ನೈತಿಕ ರೂಪು ರೇಷಗಳನ್ನು ಹಂಚಿಕೆ ಮಾಡಲು ಸಂಘಟನೆ ಮಾಡಲು ನಿರ್ದೇಶಿಸಲು ಮತ್ತು ನಿಯಂತ್ರಿಸಲು ಮಾನವ ಸಂಪನ್ಮೂಲವೇ ಹೊಣೆಯಾಗಿರುತ್ತದೆ.
  • ಕಂಪನಿಯೋಂದರ ಯಶಸ್ಸು ಅಥವಾ ವೈಪಲ್ಯವು ಕಂಪನಿಯ ಮಾನವ ಸಂಪನೂಲದ ಗುಣಾತ್ಮಕತೆ ಮತ್ತು ಸಮರ್ಪಕತೆಯ ಮೇಲೆ ನಿರ್ಧರಿಸಲ್ಪಡುತ್ತದೆ.
  • ಮಾನವ ಸಂಪನ್ಮೂಲವು ಕಂಪನಿಯಲ್ಲಿ ಚಲಾನಾತ್ಮಕ ಮತ್ತು ಕ್ರಿಯಾತ್ಮಕತೆಯನ್ನು ಒದಗಿಸುತ್ತದೆ.
 
ಮಾನವ ಸಂಪನ್ಮೂಲದ ನಿರ್ವಹಣೆಯ ಉದ್ದೇಶಗಳು:
  • ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕು.
  • ಸಂಸ್ಥೆಯಲ್ಲಿ ಒಳ್ಳೆಯ ನೈತಿಕಮಟ್ಟ ಮತ್ತು ನೌಕರಿಯಲ್ಲಿ ಆರೋಗ್ಯಕರ ಮತ್ತು ಸಕರಾತ್ಮಕ ಸಂಬಂಧಗಳಿರುವಂತೆ ನೋಡಿಕೊಳ್ಳಬೇಕು
  • ವೈಯಕ್ತಿಕ ಮತ್ತು ಗುಂಪಿನ ಅವಶ್ಯಕತೆಗಳನ್ನು ಆಡಳಿತವು ಗಮನಿಸಬೇಕು ಮತ್ತು ಅವುಗಳನ್ನು ಪೂರೈಸಲು ಪ್ರಯತ್ನಿಸಬೇಕು.
  • ವ್ಯಕ್ತಿಗಳು ಮತ್ತು ಕೆಲವು ಗುಂಪುಗಳು ಮುಂದೆ ಬರಲು ಸೌಕರ್ಯಗಳನ್ನು ಕೆಲಸಗಾರರು ಒದಗಿಸಿಕೊಡಬೇಕಾಗುತ್ತದೆ.
  • ಸಂಸ್ಥೆಯ ಒಳಗೆ ಮತ್ತು ಹೊರಗೆ ನೀತಿಯುತ ಧೊರಣೆ ಮತ್ತು ವರ್ತನೆಯನ್ನು ಕೆಲಸಗಾರರು ಹೊಂದಿರುವಂತೆ ನೋಡಿಕೊಳ್ಳಬೇಕು.
  • ಸಂಸ್ಥೆಯ ಗುರಿಗಳೇನು ಮತ್ತು ವೈಯಕ್ತಿಕ ಗುರಿಗಳೇನು ಎಂಬುದನ್ನು ಸರಿಯಾಗಿ ಮನಗಾಣಿಸಬೇಕು.
  • ಒಂದು ಸಂಸ್ಥೆಗೆ ಚೆನ್ನಾಗಿ ತರಬೇತಿ ಪಡೆದ ಮತ್ತು ನಿರ್ದಿಷ್ಟ ಗುರಿಯೆಡೆಗೆ ಸಾಗಲು ಪ್ರೇರೆಪಿಸಲ್ಪಟ್ಟಂತಹ ಸಿಬ್ಬಂದಿಯನ್ನು ಕೊಡುವ ಮೂಲಕ ಸಂಸ್ಥೆಯು ತನ್ನ ಗುರಿಗಳನ್ನು ತಲುಪುವಂತೆ ಮಾಡುವುದು.​
Picture
Join Our Conference Google Group
ಔದ್ಯೋಗಿಕ ಕಾರ್ಮಿಕರ ಸಮಸ್ಯೆಗಳು:
ಭಾರತದ ಅರ್ಥ ವ್ಯವಸ್ಥೆಯಲ್ಲಿ ಕಾರ್ಮಿಕರು ಅತ್ಯಧಿಕ ಪ್ರಮಾಣದಲ್ಲಿದ್ದರೂ ಬಹುಪಾಲು ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ. ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರು ಕಡೆಗಣಿಸಲ್ಪಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಅವರ ವರಮಾನವು ಬಹಳ ಕಡಿಮೆ ಇದ್ದು ಅದು ಅನಿಶ್ಚಿತವೂ, ಅನಿಯಮಿತವೂ ಆಗಿರುತ್ತದೆ. ಅಸಂಘಟಿತರು, ಅವಿದ್ಯಾವಂತರು ತರಬೇತಿ ಹೊಂದಿಲ್ಲದವರು, ದುರ್ಬಲರು ಹಾಗೂ ನಿರ್ಗತಿಕ ವರ್ಗದವರಾಗಿರುವ ಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಿಗಬೇಕಾಗಿರುವ ಎಲ್ಲಾ ಸವಲತ್ತುಗಳು ಸಿಗುತ್ತಿಲ್ಲ. ಜೊತೆಗೆ ಇವರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಸಂಘಟನಾ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ಎಲ್ಲಾ ಕಾರಣದಿಂದಾಗಿ ಕಾರ್ಮಿಕರು ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರೆಯಲು ಸಾಧ್ಯವಾಗದೆ ಹಲವಾರು ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವುದು ಕಂಡುಬರುತ್ತದೆ.

ಕಾರ್ಮಿಕ ಸಮಸ್ಯೆ ಎಂದರೆ 20ನೇ ಶತಮಾನದ ವಿವಿಧ ಉದ್ದೇಶಗಳೊಂದಿಗೆ ವ್ಯಾಪಕವಾಗಿ ಬಳಸಲಾಗುವ ಆರ್ಥಿಕ ಪದ. ಇದನ್ನು ವೇತನ ಸಂಪಾದಿಸುವ ವರ್ಗಗಳ ಉದ್ಯೋಗದ ಪರಿಸ್ಥಿತಿಗಳನ್ನು ಸುಧಾರಿಸುವ ಸಮಸ್ಯೆಯಂತಹ ಅನೇಕ ವಿಧಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಇದು ವೇತನ ಗಳಿಸುವವರು ಮತ್ತು ಉದ್ಯೋಗಿಗಳು ಎದುರಿಸುತ್ತಿರುವ ತೊಂದರೆಗಳನ್ನು ಒಳಗೊಂಡಿರುತ್ತದೆ. ಮಾಲೀಕರು ತಂತ್ರಜ್ಞಾನದ ಹೆಚ್ಚಳ, ಕಡಿಮೆ ವೆಚ್ಚದ ಬಯಕೆ ಸೇರಿದಂತೆ ಹಲವಾರು ಕಾರಣಗಳಿಗಾಗಿ ವೇತನವನ್ನು ಕಡಿತಗೊಳಿಸಲು ಪ್ರಾರಂಭಿಸಿದರು. ಕಾರ್ಮಿಕರು ಸ್ಟ್ರೈಕ್‍ಗಳೊಂದಿಗೆ ಪ್ರತಿಕ್ರಿಯಿಸಿ, ಒಕ್ಕೂಟಗೊಳಿಸುವ ಮೂಲಕ ಮತ್ತು ಹಿಂಸೆಯ ಕೃತ್ಯಗಳ ಮೂಲಕ ಇದು ರಾಷ್ಟ್ರವ್ಯಾಪಿ ಸಮಸ್ಯೆಯಾಗಿದೆ. 
 
ಔದ್ಯೋಗಿಕ ಕಾರ್ಮಿಕರ ಸಮಸ್ಯೆಗಳು:
  1. ಅನಕ್ಷರತೆ: ಭಾರತದಲ್ಲಿ ಔದ್ಯೋಗಿಕ ಕಾರ್ಮಿಕರ ಅತಿ ದೊಡ್ಡ ಸಮಸ್ಯೆ ಎಂದರೆ ಅನಕ್ಷರತೆ ಮತ್ತು ಅಜ್ಞಾನ. ಆದ್ದರಿಂದ ಕಾರ್ಮಿಕರು ವಿಶೇಷರೂಪದಲ್ಲಿ ಅರ್ಥಶಾಸ್ತ್ರವನ್ನು ತಿಳಿದುಕೊಳ್ಳದೆ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಆದ್ದರಿಂದ ಉತ್ತಮ ರೀತಿಯ ಉದ್ಯೋಗವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.
  2. ಕಾರ್ಮಿಕರ ಅಶಿಸ್ತು: ಭಾರತದ ಕಾರ್ಮಿಕರಲ್ಲಿ ಶಿಸ್ತಿನ ಕೊರತೆಯಿದೆ. ಪೂರಕ ಕಾರಣಗಳಿಲ್ಲದೆ ಗೈರಾಗುವುದು ಸರ್ವೇ ಸಾಮಾನ್ಯದ ಸಂಗತಿ. ಕಡಿಮೆ ಸಂಬಳದ ನೆಪವೊಡ್ಡಿ ಅಥವಾ ಬೇರೆ ಯಾವುದಾದರೂ ಕಾರಣ ನೀಡಿ ಒಂದು ಉದ್ಯೋಗದಿಂದ ಮತ್ತೊಂದು ಉದ್ಯೋಗಕ್ಕೆ ಸ್ಥಳಾಂತರಗೊಳ್ಳುವುದು ಸರ್ವೇ ಸಾಮಾನ್ಯ. ಇದರಿಂದ ಕಾರ್ಮಿಕರು ತಮ್ಮ ಹಿಂದಿನ ಹಾಗೂ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸುವುದಿಲ್ಲ.
  3. ವಲಸೆ: ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಕಾರ್ಮಿಕರು ವಲಸೆ ಹೋಗುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಬಹಳಷ್ಟು ಕಾರ್ಮಿಕರು ಹಳ್ಳಿ ಪ್ರದೇಶದಿಂದ ಬಂದಿದ್ದರಿಂದ ಅವರಲ್ಲಿ ಅಜ್ಞಾನ ತುಂಬಿಕೊಂಡಿರುತ್ತದೆ. ಕಾರ್ಮಿಕರಿಗೆ ಉದ್ಯೋಗ ಇಷ್ಟ ಇಲ್ಲವಿಲ್ಲದಿದ್ದರೆ ಅವರು ಮರಳಿ ತಮ್ಮ ಮನೆಗೆ ಹೋಗುವರು ಅಥವಾ ವ್ಯವಸಾಯಕ್ಕೆ ಮೊರೆ ಹೋಗುತ್ತಾರೆ.
  4. ಅಸಂಘಟನೆ: ಭಾರತದಲ್ಲಿ ಕಾರ್ಮಿಕರು ಒಂದಾಗಿ ಒಗ್ಗೂಡಲು ಅಸಾಧ್ಯ. ಏಕೆಂದರೆ ಜಾತಿ, ಧರ್ಮ ಭಾಷೆ ಮತ್ತು ಉಪಭಾಷೆಯ ತೊಂದರೆಯಿಂದ ಕಾರ್ಮಿಕ- ಕಾರ್ಮಿಕರ ಮಧ್ಯೆ, ಕಾರ್ಮಿಕರ- ಮಾಲೀಕರ ಮಧ್ಯೆ ಸಂಘಟಿತರಾಗಲು ಅಸಾಧ್ಯ. ಇದರ ಪರಿಣಾಮ ಸ್ವರೂಪ ಕೇವಲ ಟ್ರೇಡ್ ಯೂನಿಯನ್ ಮೂಖಾಂತರ ನಿಯಂತ್ರಣದಲ್ಲಿ ಇಡಲಾಗುತ್ತದೆ.
  5. ಕಡಿಮೆ ಸಾಮರ್ಥ್ಯ: ಭಾರತೀಯ ಕಾರ್ಮಿಕರ ಸಾಮರ್ಥ್ಯವು ಅತ್ಯಂತ ಕಡಿಮೆಯಾಗಿದ್ದು ಅವರ ಉತ್ಪಾದನೆಯು ಕೂಡಾ ಕಡಿಮೆಯಾಗಿದೆ. ಕಾರ್ಮಿಕರ ಅನಕ್ಷರತೆ, ತರಬೇತಿ ಇಲ್ಲದಿರುವುದು, ವೈದ್ಯಕೀಯ ಸೌಲಭ್ಯಗಳ ಕೊರತೆ ಇತ್ಯಾದಿ ಕಾರ್ಮಿಕರಲ್ಲಿ ಕಡಿಮೆ ಸಾಮಥ್ರ್ಯ ಮೂಡಿಸುತ್ತದೆ.
  6. ಬಡತನ: ಭಾರತೀಯ ಅತ್ಯಧಿಕ ಕಾರ್ಮಿಕರ ಬಡತನ ರೇಖೆಗಿಂತ ಕಡಿಮೆ ಮಟ್ಟದ ಜೀವನ ನಡೆಸುತ್ತಿದ್ದಾರೆ. ಅವರ ವೇತನ ಜೀವನ ಶೈಲಿ ಮತ್ತು ಉತ್ಪಾದನೆಯು ಕೂಡಾ ಕಡಿಮೆ ಇದೆ. ಕಾರ್ಮಿಕರ ಬಡತನದಿಂದ ಕೆಲಸ ಕಾರ್ಯದಲ್ಲಿ ಆಸಕ್ತಿಯನ್ನು ಹುಟ್ಟಿಸಲು ಸಾಧ್ಯವಾಗುತ್ತಿಲ್ಲ.
  7. ಮೂಢನಂಬಿಕೆ: ಭಾರತದ ಬಹಳಷ್ಟು ಕಾರ್ಮಿಕರು ಮೂಢನಂಬಿಕೆ ಮತ್ತು ಸಂಪ್ರದಾಯವನ್ನು ನಂಬುತ್ತಾರೆ. ಅವರು ಧನಾತ್ಮಕ ಗುಣಗಳ ಹೊರತು ಋಣಾತ್ಮಕ ವಿಚಾರ, ವಸ್ತುಗಳನ್ನೇ ಹೆಚ್ಚು ನಂಬುವ ದೃಷ್ಟಿಕೋನವನ್ನು ಹೊಂದಿರುತ್ತಾರೆ.
  8. ದೊಡ್ಡ ಪ್ರಮಾಣದ ಗೈರುಹಾಜರಿ: ಗೈರುಹಾಜರಿಯು ಕೈಗಾರಿಕಾ ಕಾರ್ಮಿಕರಲ್ಲಿ ಅತಿ ಮುಖ್ಯವಾದ ಲಕ್ಷಣವಾಗಿದೆ. ಅವರು ಯಾವುದೇ ಉದ್ದೇಶವಿಲ್ಲದೇ, ಕಾರಣವಿಲ್ಲದೆ  ಗೈರುಹಾಜರಾಗುತ್ತಾರೆ.
  9. ನಿಯಮಗಳ ಮತ್ತು ನಿಬಂಧನೆಗಳ ಅಜ್ಞಾನ: ಔದ್ಯೋಗಿಕ ಕಾರ್ಮಿಕರಿಗೆ ಉತ್ತಮ ಪ್ರಮಾಣದ ನಿಯಮಗಳ ಮತ್ತು ನಿಬಂಧನೆಗಳ ಬಗ್ಗೆ ತಿಳಿಯುವುದು ಕಷ್ಟದಾಯಕವಾಗಿರುತ್ತದೆ. ಆದ್ದರಿಂದ ಕಾರ್ಮಿಕರು ಬಹಳಷ್ಟು ನಿಯಮಗಳನ್ನು ಉಲ್ಲಂಘಿಸುತ್ತಾರೆ.
  10. ಕೆಟ್ಟ ಚಟಗಳು: ಹೆಚ್ಚಿನ ಔದ್ಯೋಗಿಕ ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲದೆ ಅವರು ಅನಾರೋಗ್ಯಕರ ಅಭ್ಯಾಸದಲ್ಲಿ ಭಾಗಿಯಾಗಿರುತ್ತಾರೆ. ಇದರ ಪರಿಣಾಮವಾಗಿ ಅವರ ದಕ್ಷತೆ ಮತ್ತು ಮಾನಸಿಕ ಶಿಸ್ತು ನೌಕರಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
  11. ವಯಸ್ಸಿನ ಸಮಸ್ಯೆ: ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಆಗಾಗ್ಗೆ ಮುಖ್ಯವಾಗಿ ಕಾರ್ಯನಿರ್ವಹಿಸುತ್ತಾರೆ. ಔದ್ಯೋಗಿಕ ಕ್ಷೇತ್ರದಲ್ಲಿ ಅವರ ಮೇಲೆ ಪ್ರಭಾವ ಬೀರುವಂತಹ ಬದಲಾವಣೆಗಳನ್ನು ಪರಿಚಯಿಸುವ ಮೊದಲು ಅವರಿಗೆ ಸರಿಯಾಗಿ ಮೌಲ್ಯಮಾಪನ ಮಾಡಬೇಕು ಹಾಗೂ ಆರ್ಥಿಕ ಕಾರ್ಯಗಳ ನಿಯಮಗಳ ಬಗ್ಗೆ ಪರಿಚಯಿಸಬೇಕು.
  12. ವಿಶ್ರಾಂತಿ ಇಲ್ಲದಿರುವುದು: ಕಾರ್ಮಿಕರಿಗೆ ಕೆಲಸ ಸಮಯದಲ್ಲಿ ವಿಶ್ರಾಂತಿ ಇಲ್ಲದಿರುವುದರಿಂದ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
  13. ಕಡಿಮೆ ವೇತನ: ಕಾರ್ಮಿಕರಿಗೆ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ವೇತನ ದೊರೆಯದೆ ಹೊದಲ್ಲಿ ಅವರಿಗೆ ತೊಂದರೆ ಉಂಟಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಕೆಲಸಕ್ಕೆ ಸರಿಯಾದ ವೇತನ ದೊರೆಯದೆ ಹೊದಲ್ಲಿ ಕಾರ್ಮಿಕರು ತಮ್ಮ ವೃತ್ತಿಯನ್ನು ತ್ಯಜಿಸುತ್ತಾರೆ.
  14. ಮಾದಕ ವಸ್ತುಗಳ ಸೇವನೆ: ಸಮಾಜದಲ್ಲಿ ಉದ್ಭವಿಸುವ ಬಹುಪಾಲು ಸಮಸ್ಯೆಗಳಿಗೆ ಕುಡಿತ ಮತ್ತು ವಿವಿಧ ಬಗೆಯ ಮಾದಕ ವಸ್ತುಗಳ ಸೇವನೆ ಕಾರಣವಾಗಿವೆ. ಮಿತವಾಗಿ ಮಧ್ಯವನ್ನು ವಿವಿಧ ಕಾರಣಗಳಿಂದ ಜನರು ಬಳಸುತ್ತಾರೆ. ಆದರೆ, ಅತಿಯಾದ ಮದ್ಯ ಸೇವನೆಯಿಂದ ಇಂದು ಅನೇಕ ಜನರು ಆಸ್ಪತ್ರೆಗಳಿಗೆ ದಾಖಲಾಗುವುದು ಸರ್ವೇಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಕುಡಿತವನ್ನು ಬಿಡದೇ ಇರುವ ಸ್ಥಿತಿ ಮತ್ತು ವಿವಿಧ ವೈಯಕ್ತಿಕ, ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ಅಂಶಗಳು ಇಂತಹವರನ್ನು ಅತಿಯಾದ ಕುಡಿತಕ್ಕೆ ದಾಸರನ್ನಾಗಿ ಮಾಡುತ್ತದೆ. ಕೆಲವು ಬಗೆಯ ಮಾದಕ ವಸ್ತುಗಳಾದ ಬ್ರೌನ್ ಶುಗರ್, ಗಾಂಜಾ, ಹೆರಾಯಿನ್, ಎಲ್.ಎಸ್.ಡಿ, ಓಪಿಯಂ, ಹೊಗೆಸೊಪ್ಪು, ಚರಾಸ್ ಮುಂತಾದ ವಿವಿಧ ಮಾದಕ ಔಷಧಗಳನ್ನು ಕಾರ್ಮಿಕರು ಬೇರೆ ಬೇರೆ ಪರಿಸರಗಳ ಪ್ರಭಾವದಿಂದ, ಇವುಗಳ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳದೇ ಬಳಸುತ್ತಾರೆ.
ಕಾರ್ಮಿಕರಲ್ಲಿಯೂ ಕೂಡ ಇಂತಹ ಮದ್ಯವ್ಯಸನಕ್ಕೆ ಬಲಿಯಾಗುತ್ತಿರುವುದನ್ನು ನಾವು ಅನೇಕ ಮಹಾನಗರಗಳಲ್ಲಿ ನೋಡುತ್ತಿದ್ದೇವೆ. ವಿವಿಧ ಮಾದಕ ವಸ್ತುಗಳ ಸೇವನೆಯಿಂದ ಕಾರ್ಮಿಕರು ಆರೋಗ್ಯವನ್ನು ಹಾಳುಮಾಡಿಕೊಂಡ ಉದಾಹರಣೆಗಳು ಸುಲಭವಾಗಿ ಸಿಗುತ್ತವೆ.
 
ಮಾದಕ ವಸ್ತುಗಳ ಸೇವನೆ ಚಟ ಎಂದರೇನು?
  1. ಮಿತಿ ಮಿರಿದ ಪ್ರಮಾಣದಲ್ಲಿ ಪದೇ ಪದೇ ವೈದ್ಯಕೀಯೇತರ ಕಾರಣಗಳಿಗಾಗಿ ಮಾದಕ ವಸ್ತುಗಳನ್ನು ಉಪಯೋಗಿಸುವುದರಿಂದ ವ್ಯಕ್ತಿಯ ಪರಿಣಾಮಕಾರಿಯಾಗಿ ಕಾರ್ಯವೆಸಗುವ ಸಾಮಥ್ರ್ಯವನ್ನು ಏರುಪೇರು ಮಾಡಿ ಅದರಿಂದ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಹಾನಿಯುಂಟಾಗುವುದನ್ನು ಮಾದಕ ವಸ್ತುಗಳ ಸೇವನೆಯ ಚಟ ಎನ್ನಲಾಗುತ್ತದೆ .
  2. ಮಾದಕ ವಸ್ತುಗಳ ಸೇವೆಯ ಚಟವೆಂದರೆ ಸ್ವಾಭಾವಿಕ ಇಲ್ಲವೆ ಸಂಯೋಜಕ ಔಷಧಿಗಳ ಸತತ ಸೇವನೆಯಿಂದ ನಿಯತಕಾಲಿಕ ಇಲ್ಲವೆ ನಿರಂತರ ಮಾದಕ ಸ್ಥಿತಿಯಲ್ಲಿರುವುದು ಹಾಗೂ ವ್ಯಕ್ತಿ ಮತ್ತು ಸಮಾಜಕ್ಕೆ ಘಾತಕವಾಗುವುದೆಂದು ವಿಶ್ವ ಆರೋಗ್ಯ ಸಂಘದ ಪರಿಣಿತರ ಸಮಿತಿಯು ಅಭಿಪ್ರಾಯ ಪಟ್ಟಿದೆ.
  3. ಮಾದಕ ಔಷಧಿಗಳ ಚಟ ಒಂದು ಮಾನಸಿಕ ಅಥವಾ ದೈಹಿಕ ಸ್ಥಿತಿಯಾಗಿದ್ದು ವ್ಯಕ್ತಿಯು ತನ್ನ ಜೀವನದ ಇರುಸು ಮುರಸನ್ನು ತಪ್ಪಿಸಲೋಸುಗ ಆಗಾಗ್ಗೆ ಮಾದಕ ವಸ್ತುಗಳನ್ನು ಉಪಯೋಗಿಸುವುದಾಗಿದೆ (ಎಂ.ನಾರಾಯಣ, 2013, ಪು:197)
ಕೆಲವು ಕಾರ್ಮಿಕರು ವಿವಿಧ ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯನ್ನು ಪ್ರಾಯೋಗಿಕವಾಗಿ ಅಂದರೆ ಇಂತಹ ಮಾದಕ ವಸ್ತುಗಳ ಸೇವನೆಯಿಂದ ಏನಾಗಬಹುದು ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಮತ್ತು ಕುತೂಹಲಕ್ಕಾಗಿ, ಮೋಜಿಗಾಗಿ, ರೋಮಾಂಚನಕ್ಕಾಗಿ, ದೈಹಿಕ ಮತ್ತು ಮಾನಸಿಕ ಉದ್ವೇಗದಿಂದ ಮುಕ್ತರಾಗಲು, ಸಮಸ್ಯೆಗಳ ಪರಿಹಾರಕ್ಕಾಗಿ, ಸಹವಾಸ ದೋಷದಿಂದ ಅಥವಾ ಸ್ನೇಹಿತರ ಒತ್ತಡಕ್ಕಾಗಿ, ವ್ಯವಹಾರ ನಷ್ಟ, ಜೀವನದಲ್ಲಿ ಜಿಗುಪ್ಸೆ, ವೈವಾಹಿಕ ತೊಂದರೆಗಳು/ವಿಚ್ಛೇದನ ಮುಂತಾದ ಕಾರಣಗಳಿಂದ ಇಂತಹ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಾರೆ.
 
ಉಪಸಂಹಾರ:
ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆ ಇಂದು ಅನಿವಾರ್ಯವಾಗಿದೆ. ವಿವಿಧ ಕಾರಣಗಳಿಂದ ದೊಡ್ಡ ದೊಡ್ಡ ಮಹಾನಗರ ಪ್ರದೇಶಗಳಲ್ಲಿ ಆಂಗ್ಲ ಭಾಷೆಯ ಪ್ರಭಾವ ಹೆಚ್ಚಾಗುತ್ತಿದ್ದು ಇದರ ಪ್ರಭಾವ ಕನ್ನಡ ಭಾಷೆಯ ಮೇಲು ಇದೆ ಎನ್ನುವುದನ್ನು ತಿರಸ್ಕರಿಸುವುದಕ್ಕೆ ಸಾಧ್ಯವಿಲ್ಲ. ಕನ್ನಡ ಭಾಷೆಯನ್ನು ಪ್ರಧಾನವಾಗಿಟ್ಟುಕೊಂಡು ಔದ್ಯೋಗಿಕ ಕ್ಷೇತ್ರದಲ್ಲಿ ಪ್ರತಿ ದಿನ ಕಾರ್ಮಿಕರ ಜೊತೆ ವ್ಯವಹರಿಸುವಾಗ, ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಮಾತನಾಡುವ ರೂಢಿಯು ಪ್ರತಿದಿನ ಮುಂದುವುರೆದಿದ್ದೇ ಆದಲ್ಲಿ, ಕಾರ್ಮಿಕರು ಅತಿ ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಮಾನವ ಸಂಪನ್ಮೂಲ ಅಧಿಕಾರಿಗಳು ಮನಸ್ಸು ಮಾಡಿದ್ದೇ ಆದರೆ ಸ್ಥಳೀಯ ಭಾಷೆಗಳನ್ನು ತಮ್ಮ ವ್ಯವಹಾರದಲ್ಲಿ ಹೆಚ್ಚು ಬಳಸಿ ನೌಕರರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಉದ್ಯಮದಲ್ಲಿ ತೀವ್ರಗತಿಯ ಪ್ರಗತಿಯನ್ನು ಸಾಧಿಸಬಹುದು.
 
ಆಧಾರ ಗ್ರಂಥಗಳು:         
  1. ಚ.ನ.ಶಂಕರ್‍ರಾವ್, ಸಾಮಾಜಿಕ ಸಂಶೋಧನೆಯ ಕೈಪಿಡಿ, ಜೈ ಭಾರತ್ ಪ್ರಕಾಶನ, ಮಂಗಳೂರು, ಪರಿಷ್ಕೃತ ಆವೃತ್ತಿ 2008-2009, ಮಂಗಳೂರು.
  2. ಕಾರ್ಮಿಕ ಸಮಸ್ಯೆ. ರಾಬರ್ಟ್ಸ್, ಹೆರಾಲ್ಡ್ ಸೆಲಿಗ್. 1994. ರಾಬರ್ಟ್ಸ್ ಡಿಕ್ಷನರಿ ಆಫ್ ಇಂಡಸ್ಟ್ರಿಯಲ್ ರಿಲೇಶನ್ಸ್. ಪು.406
  3. ಆಡಮ್ಸ್, ಥಾಮಸ್ ಸೇವಾಲ್. 1908. ಲೇಬರ್ ಪ್ರಾಬ್ಲಮ್ಸ್ :ಎ ಟೆಕ್ಸ್ಟ್ ಬುಕ್.ಪು.3
  4. ದಿ ಲೇಬರ್ ಮೂಮೆಂಟ್: ಎ ಹಿಂಸಾಂಟ್ ಪೀರಿಯಡ್ ಇನ್ ಅಮೇರಿಕನ್ ಹಿಸ್ಟರಿ. ಐಘಗ ಲೋಕಲ್ 19,ವೆಬ್. 5 ನವೆಂಬರ್  2013.
  5. ಬಾರ್ಬಶ್, ಜ್ಯಾಕ್. ದಿ ಲೀಗಲ್ ಫೌಂಡೇಶನ್ಸ್ ಆಫ್ ಕ್ಯಾಪಿಟಲಿಸಮ್ ಮತ್ತು ಲೇಬರ್ ಪ್ರಾಬ್ಲಮ್ಸ್. ಜರ್ನಲ್ ಆಫ್ ಇಕನಾಮಿಕ್ ಇಷ್ಯೂಸ್ 10.4 (1976), ಪುಟಗಳು 799-810.ಆನ್ಲೈನ್.
  6. ಪುಲ್ಮನ್ ಸ್ಟ್ರೈಕ್. ದಿ ಫ್ರೀ ಎನ್ಸೈಕ್ಲೋಪೀಡಿಯಾ. ವಿಕಿಮೀಡಿಯ ಫೌಂಡೇಶನ್, ಇಂಕ್.27 ಡಿಸೆಂಬರ್.2013.ವೆಬ್.28 ಡಿಸೆಂಬರ್.2013.ಫೀಲ್ಡ್ 1893, ಪುಟಗಳು 61-68.
  7. ಕಾರ್ಮಿಕ ಸಮಸ್ಯೆಗಳು ಮತ್ತು ಘಟನೆಗಳ ಟೈಮ್ಲೈನ್. ದಿ ಫ್ರೀ ಎನ್ಸೈಕ್ಲೋಪೀಡಿಯಾ. ವಿಕಿಮೀಡಿಯ ಫೌಂಡೇಶನ್, ಇಂಕ್.18 ಡಿಸೆಂಬರ್.2013.ವೆಬ್.10 ನವೆಂಬರ್ 2013.
  8. ಡಾ.ಜಿ.ಬಿ ಬಳಿಗಾರ (2011), ಮಾನವ ಸಂಪನ್ಮೂಲ ನಿರ್ವಹಣೆ, ಅಶೋಕ ಪ್ರಕಾಶನ, ಹುಬ್ಬಳ್ಳಿ
  9. ಕೆ.ಡಿ ಬಸವಾ (2015), ಮಾನವ ಸಂಪನ್ಮೂಲ ನಿರ್ವಹಣೆ, ವಿದ್ಯಾವಾಹಿನಿ ಪ್ರಕಾಶನ, ಹುಬ್ಬಳ್ಳಿ
  10. ​ಎಂ.ನಾರಾಯಣ (2013), ಸಾಮಾಜಿಕ ಸಮಸ್ಯೆಗಳು, ಚೇತನ ಬುಕ್ ಹೌಸ್, ಮೈಸೂರು ​
0 Comments



Leave a Reply.

    Picture
    Nirathanka

    Categories

    All
    Awards 2017
    Awards 2018
    Awards 2019
    Awards 2020
    Awards 2021
    Awards 2022
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಸಮ್ಮೇಳನದ ಕುರಿತು ಅಭಿಪ್ರಾಯಗಳು
    ಹನಿಗವನ

    Archives

    December 2022
    November 2022
    November 2021
    March 2021
    November 2020
    July 2020
    November 2019
    October 2019


    Picture
    More Details

    Picture
    WhatsApp Group

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now


    RSS Feed

ಸೈಟ್ ನಕ್ಷೆ


ಸೈಟ್

  • ಸ್ವಾಗತ
  • ಸಮಿತಿಯ ಸದಸ್ಯರು
  • ಮಾಧ್ಯಮ​
  • ಆನ್‍ಲೈನ್‍ ಗ್ರೂಪ್ಸ್
  • ಬ್ಲಾಗ್
  • ಸಮ್ಮೇಳನದ ಕೈಪಿಡಿಗಳು

ನಮ್ಮ ಇತರೆ ಜಾಲತಾಣಗಳು

  • ​WWW.NIRATANKA.ORG
  • WWW.NIRUTAPUBLICATIONS.ORG

ಪ್ರಶಸ್ತಿಗಳು

  • CSR EXCELLENCE AWARD
  • THE BEST WOMEN EMPOWERMENT ORGANISATION AWARD
  • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022

ಕನ್ನಡ ಸಮ್ಮೇಳನ

​ಕನ್ನಡ ಸಮ್ಮೇಳನ-2017
​ಕನ್ನಡ ಸಮ್ಮೇಳನ-2018
​ಕನ್ನಡ ಸಮ್ಮೇಳನ-2019
​ಕನ್ನಡ ಸಮ್ಮೇಳನ-2020
​ಕನ್ನಡ ಸಮ್ಮೇಳನ-2021
​ಕನ್ನಡ ಸಮ್ಮೇಳನ-2022

ಪಬ್ಲಿಕೇಷನ್ಸ್

  • LEADER'S TALK
  • NIRUTA'S READ & WRITE INITIATIVE​​
  • ​COLLABORATE WITH NIRUTA PUBLICATIONS

ನಿರಾತಂಕ

  • POSH
  • CSR
  • COLLABORATE WITH NIRATHANKA
  • NIRATHANKA CLUB HOUSE

ಚಂದಾದಾರರಾಗಿ




JOIN OUR ONLINE GROUPS


JOIN WHATSAPP BROADCAST

Copyright : Nirathanka 2021
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ