HR KANNADA CONFERENCE
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2024
      • ಮಹಿಳಾ ಸಬಲೀಕರಣ ಪ್ರಶಸ್ತಿ-2024
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2024
      • ಲೇಖನಗಳಿಗಾಗಿ ಆಹ್ವಾನ-2024
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
    • 2023
      • ಮಹಿಳಾ ಸಬಲೀಕರಣ ಪ್ರಶಸ್ತಿ-2023
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2024
      • ಮಹಿಳಾ ಸಬಲೀಕರಣ ಪ್ರಶಸ್ತಿ-2024
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2024
      • ಲೇಖನಗಳಿಗಾಗಿ ಆಹ್ವಾನ-2024
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
    • 2023
      • ಮಹಿಳಾ ಸಬಲೀಕರಣ ಪ್ರಶಸ್ತಿ-2023
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
www.niratanka.org

ಔದ್ಯೋಗಿಕ ಕ್ಷೇತ್ರದಲ್ಲಿ ಕಾರ್ಮಿಕರು ಎದುರಿಸುವ ಒತ್ತಡ - ಕಾರಣಗಳು, ಪರಿಣಾಮಗಳು ಮತ್ತು ಪರಿಹಾರೋಪಾಯಗಳು

11/19/2019

0 Comments

 
Picture
ಅಶೋಕ ಎಸ್. ಕೋರಿ
ಮನೋವೈದ್ಯಕೀಯ ಸಮಾಜಕಾರ್ಯಕರ್ತರು,
ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ,
​ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ.

ಪೀಠಿಕೆ:
ಸುಮಾರು 35 ವರ್ಷ ವಯೋಮಾನದ ರಮೇಶ್ (ಹೆಸರು ಬದಲಾಯಿಸಿದೆ) ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಸುಮಾರು 10 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತಾನು ಮಾಡುತ್ತಿರುವ ಕೆಲಸದ ಬಗ್ಗೆ ಅಸಹನೆ ಮತ್ತು ನಿಷ್ಕಾಳಜಿ ಮೂಡತೊಡಗಿತು. ಇದರ ಫಲವಾಗಿ ಕೆಲಸದಲ್ಲಿ ನಿರಾಸಕ್ತಿಯುಂಟಾಗಿ, ಶ್ರದ್ಧೆಯನ್ನು ಕಳೆದುಕೊಂಡನು. ತಾನು ಕೈಗೊಳ್ಳುವ ಬಹುಪಾಲ ಕೆಲಸಗಳಲ್ಲಿ ಎಡವಟ್ಟುಗಳನ್ನು ಮಾಡಿಕೊಂಡು ಹಿರಿಯ ಅಧಿಕಾರಿಗಳಿಂದ ದೂಷಿಸಲ್ಪಟ್ಟರು. ತನ್ನಲ್ಲಾಗುತ್ತಿರುವ  ಏರುಪೇರುಗಳನ್ನು ಗಮನಿಸಿದ ರಮೇಶ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ದೃಷ್ಟಿಯಿಂದ ಮನೋವೈದ್ಯರ ಬಳಿ ಚಿಕಿತ್ಸೆಗೆಂದು ತೆರಳುತ್ತಾರೆ. ಸೂಕ್ಷ್ಮವಾಗಿ ಪರೀಕ್ಷಿಸಿದ ಮನೋವೈದ್ಯರು ತೀವ್ರ ಒತ್ತಡದಿಂದ ಬಳಲುತ್ತಿರುವುದೇ ಪ್ರಸ್ತುತ ಸಮಸ್ಯೆಗೆ ಕಾರಣವೆಂಬುದಾಗಿ ತಿಳಿಸುತ್ತಾರೆ ಹಾಗೂ ಸೂಕ್ತ ಚಿಕಿತ್ಸೆಯನ್ನೂ ನೀಡುತ್ತಾರೆ. ಮನೋವೈದ್ಯರು ಸೂಚಿಸಿದಂತೆ ಪ್ರತಿದಿನ ಮಾತ್ರೆಗಳ ಜೊತೆಗೆ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ತನ್ನಲ್ಲಿ ಮನೆಮಾಡಿದ್ದ ಒತ್ತಡವನ್ನು ನಿಭಾಯಿಸಿಕೊಂಡು ನೆಮ್ಮದಿ ಜೀವನ ಕಟ್ಟಿಕೊಳ್ಳುತ್ತಾರೆ. ಹೀಗೆ ಇಂದು ಹಲವು ಕಾರ್ಮಿಕರು ಒತ್ತಡಗಳ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೇಲಿನ ಪ್ರಕರಣ ಅಧ್ಯಯನ ಒಂದು ನಿದರ್ಶನ ಮಾತ್ರ. ರಮೇಶನಂತೆ ಬಹಳಷ್ಟು ಜನರು ಸಮಾಜದಲ್ಲಿ ಜೀವಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ವೃತ್ತಿಪರರಿಗೆ ಕೆಲಸದಲ್ಲಿ ಒತ್ತಡ ಸಾಮಾನ್ಯವಾಗಿದ್ದು, ಕೆಲವು ಬಗೆಯ ಒತ್ತಡಗಳು ಕೆಲಸದ ಭಾಗವೇ ಆಗಿರುತ್ತವೆ ಎಂದರೆ ತಪ್ಪಾಗಲಾರದು. ಇಂತಹ ಒತ್ತಡಗಳು ಕಾರ್ಮಿಕನ ಉತ್ಪಾದಕತೆಯ ಜೊತೆಗೆ ಅವನ/ಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಒತ್ತಡವನ್ನು ನಿವಾರಿಸಿಕೊಂಡರೆ ಎದುರಾಗಬಹುದಾದ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟುವುದರ ಜೊತೆಗೆ ಉತ್ಪಾದಕತೆಯನ್ನು ಸುಧಾರಿಸಬಹುದು ಹಾಗೂ ಆರೋಗ್ಯಕರ ಜೀವನವನ್ನು ಕಟ್ಟಿಕೊಳ್ಳಬಹುದು. ಇದು ಕೈಗಾರಿಕಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವುದರೊಂದಿಗೆ ಉತ್ತಮ ಕೈಗಾರಿಕಾ ಭಾಂದ್ಯಗಳನ್ನು ವೃದ್ಧಿಸಿಕೊಳ್ಳಲು ನೆರವಾಗುವುದು.

ಒತ್ತಡ ಎಂದರೇನು?:  ಒತ್ತಡವೆಂಬುದು ನಮ್ಮ ಪರಿಸರದಲ್ಲಿ ನಡೆಯುವ ಘಟನೆಗಳಿಗೆ ಮಾನವನಿಂದ ಆಗುವ ಪ್ರತಿಕ್ರಿಯೆಯಾಗಿದೆ. ಇದು ಯಾವುದೇ ಬೇಡಿಕೆ ಅಥವಾ ಭಯದಿಂದಾಗುವ ಮಾನಸಿಕ, ದೈಹಿಕ, ಭಾವನಾತ್ಮಕ ಮತ್ತು ವರ್ತನೆಯ ಪ್ರತಿಕ್ರಿಯೆಯಾಗಿದೆ. (Stress can be defined as our mental, physical, emotional, and behavioral reactions to any perceived demands or threats).
ಒತ್ತಡ ಎಂಬ ಪದ ಮೂಲತಃ ಲ್ಯಾಟೀನ ಭಾಷೆಯ Stringere ಎಂಬ ಪದದಿಂದ ಜನ್ಯವಾಗಿದ್ದು, ಇದರ ಅರ್ಥ ಬಿಗಿಯಾಗಿ ಎಳೆಯುವುದು. ಇದಕ್ಕೆ ಅನ್ವರ್ಥ ಪದವಾಗಿ ಮಾನಸಿಕ ಒತ್ತಡವೆಂದೂ ಕರೆಯುವುದುಂಟು. ಎಲ್ಲಾ ಒತ್ತಡಗಳೂ ಮಾನವರಿಗೆ ನಕರಾತ್ಮಕ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಒತ್ತಡಗಳಲ್ಲಿ ಪ್ರಮುಖವಾಗಿ Distress (Negative) ಮತ್ತು Eustress (positive and beneficial) ಎಂದು ವರ್ಗೀಕರಣ ಮಾಡಲಾಗುತ್ತದೆ.
  • Distress (Negative):- ಹಣಕಾಸಿನ ತೊಂದರೆಗಳು, ಸಂಬಂಧಗಳನ್ನು ನಿರ್ವಹಿಸುವಲ್ಲಿ ಘರ್ಷಣೆಗಳು, ಕೈಗೊಳ್ಳುವ ಕೆಲಸ ಪ್ರತಿ ದಿನ ಹಿತಕರವಾಗದಿರುವುದು, ದೀರ್ಘಕಾಲೀನ ಕಾಯಿಲೆ, ಆಘಾತಗಳು ಮತ್ತು ಇತ್ಯಾದಿಗಳು.
  • Eustress (positive and beneficial):- ಮದುವೆ, ಕೆಲಸದ ಬದಲಾವಣೆ, ಮುಂಭಡ್ತಿ
 
ಒತ್ತಡಕ್ಕೆ ನಮ್ಮ ಪ್ರತಿಕ್ರಿಯೆಗಳು:
  1. ಭಾವನಾತ್ಮಕ ಪ್ರತಿಕ್ರಿಯೆಗಳು (Emotional Reactions)
  2. ಶಾರೀರಕ ಪ್ರತಿಕ್ರಿಯೆಗಳು (Physical Reactions)
  3. ವರ್ತನಾತ್ಮಕ ಪ್ರತಿಕ್ರಿಯೆಗಳು (Behavioural Reactions)
1. ಭಾವನಾತ್ಮಕ ಪ್ರತಿಕ್ರಿಯೆಗಳು (Emotional Reactions):- ರೇಗುವುದು, ಮೂಡಿಯಾಗಿರುವುದು, ನಿರಾಸೆ, ಹತಾಶೆ, ಏಕಾಗ್ರತೆ ಇಲ್ಲದಿರುವುದು, ನಿರ್ಧಾರಕ್ಕೆ ಬರಲಾಗದಿರುವುದು, ಸತತ ತಳಮಳ, ಆತ್ಮಹತ್ಯೆಗೆ ಸಂಬಂಧಿಸಿದ ಆಲೋಚನೆಗಳು ಲೈಂಗಿಕ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದಿರುವುದು, ಪ್ರತಿಯೊಂದು ಚಿಕ್ಕ ಘಟನೆಗೂ ಕುಗ್ಗುವುದು, ಸಿಟ್ಟಿಗೇಳುವುದು, ಉಗುರು ಕಚ್ಚುವುದು ಮತ್ತು ಮದ್ಯಪಾನ ಮಾಡುವುದು. 
2. ಶಾರೀರಕ ಪ್ರತಿಕ್ರಿಯೆಗಳು (Physical Reactions):- ಎದೆ ಬಡಿತ ತೀವ್ರಗೊಳ್ಳುವುದು, ಹುಳಿತೇಗು ಇಲ್ಲವೇ ವಾಂತಿ, ಚಿಕ್ಕ ಪುಟ್ಟ ಸದ್ದಿಗೆ ಬೆಚ್ಚುವುದು, ಪದೇ ಪದೇ ಮೂತ್ರವಿಸರ್ಜನೆ, ಹಸಿವೆ ಇಲ್ಲದಿರುವುದು, ಜಾಸ್ತಿ ಹಸಿವು, ತೂಕ ಕಡಿಮೆಯಾಗುವುದು, ನಿದ್ದೆ ಬರದಿರುವುದು, ಅತಿಯಾದ ನಿದೆ, ಗ್ಯಾಸ್ ಟ್ರಬಲ್, ತಲೆನೋವು, ಅಜೀರ್ಣ, ಗಂಟಲು ಒಣಗುವುದು, ಅಂಗೈ-ಅಂಗಾಲು ಬೆವರುವುದು ಮತ್ತು ಕಣ್ರೆಪ್ಪೆ ಅದುರುವುದು.
3. ವರ್ತನಾತ್ಮಕ ಪ್ರತಿಕ್ರಿಯೆಗಳು (Behavioural Reactions):- ಹಲ್ಲು ಕಡಿಯುವುದು, ಪಾದ / ಕಾಲುಗಳನ್ನು ಅಲ್ಲಾಡಿಸುವುದು, ಕೂದಲು ಕಿತ್ತುಕೊಳ್ಳುವುದು, ಅತಿಯಾದ ಧೂಮಪಾನ, ಕೆಲಸಗಳನ್ನು ಬಾಕಿ ಉಳಿಸಿಕೊಳ್ಳುವುದು, ಅತಿಯಾದ ಮಧ್ಯಪಾನ ಮತ್ತು ಹಣೆ ಗಂಟಿಕ್ಕುವುದು. 
 
ವೃತ್ತಿ ಜೀವನದಲ್ಲಾಗುವ ಒತ್ತಡಗಳು:
  • ಕೆಲಸ ನಿರೀಕ್ಷೆಗೆ ತಕ್ಕಂತೆ ಇಲ್ಲದಿರುವುದು (Job Dissatisfaction).
  • ಮೇಲಾಧಿಕಾರಿ ಅಥವಾ ಸಹೊದ್ಯೋಗಿಗಳಿಂದ ಕಿರಿಕಿರಿ ಅನುಭವಿಸುವುದು.
  • ಮೇಲಾಧಿಕಾರಿ ಮತ್ತು ಸಹೋದ್ಯೋಗಿಗಳೊಂದಿಗೆ ಜಗಳವಾಡುವುದು.
  • ಮಾಡುತ್ತಿರುವ ಉದ್ಯೋಗಕ್ಕೆ ತಾನು ಹೊಂದಿಕೊಳ್ಳದೇ ಇರುವುದು.
  • ಅತಿಯಾದ ಜವಾಬ್ದಾರಿ ವಹಿಸಿಕೊಳ್ಳುವುದು.
  • ಕೆಲಸದ ಬದಲಾವಣೆಗಳಿಗೆ ಹೊಂದಿಕೊಳ್ಳದಿರುವುದು.
  • ಕೆಲಸವನ್ನು ಪ್ರೀತಿಸದಿರುವುದು ಮತ್ತು ಕೆಲಸದಲ್ಲಿ ನಿರಾಸಕ್ತಿ ಹೊಂದುವುದು.
  • ಮೇಲಾಧಿಕಾರಿಗಳಿಂದ ಪ್ರೋತ್ಸಾಹಿಸಲ್ಪಡದಿರುವುದು.
  • ಕೆಲಸದಲ್ಲಿ ಚುರುಕತನ ತೋರಿಸದೇ ಇರುವುದು.
  • ನಿಧಾನಗತಿಯ ಕೆಲಸ ಅಥವಾ ಕೆಲಸದಲ್ಲಿ ವಿಳಂಬ ನೀತಿ ಅನುಸರಿವುದು.
  • ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸದಿರುವುದು ಮತ್ತು ಅರ್ಧಂಬರ್ಧ ಮಾಡಿ ಮುಗಿಸುವುದು. 
  • ಕೆಲಸವನ್ನು ಬಾಕಿ ಉಳಿಸುತ್ತಾ ಹೊರೆಯಾಗುವಂತೆ ಮಾಡಿಕೊಳ್ಳುವುದು.
  • ಕಛೇರಿ ಕೆಲಸ ಮುಗಿದ ನಂತರವೂ ಅದೇ ಕಾರ್ಯದಲ್ಲಿ ನಿರತರಾಗುವುದು.​
Picture
ಮಾನಸಿಕ ಬಳಲಿಕೆ (Burn Out):
  • ಪ್ರತಿಕ್ರಿಯೆಗಳು ದೀರ್ಘಾವಧಿಯವರೆಗೆ ಒತ್ತಡಗಳ ಭಾರದಲ್ಲಿ ಸಿಲಿಕಿಕೊಂಡಿರುವವರಿಗೆ ಉಂಟಾಗುವ ದು:ಸ್ಥಿತಿ/ಮಾನಸಿಕ ಬಳಲಿಕೆ. ಮಾನಸಿಕ ಬಳಲಿಕೆಯನ್ನು ಮಾನಸಿಕವಾಗಿ ಖಾಲಿಯಾಗುವುದು ಎಂದೂ ಸಹ ಕರೆಯಬಹುದು. ವೃತ್ತಿ ಜೀವನದ ವಿಪರೀತ ಒತ್ತಡಕ್ಕೆ ಸಿಲುಕಿ Burn Out ಸ್ಥಿತಿಯನ್ನು ತಲುಪಬಹುದು.
 
ಮಾನಸಿಕ ಬಳಲಿಕೆ (Burn Out) ಯ ಲಕ್ಷಣಗಳು:
  • ಕೆಲಸದ ಹೊರೆ ಸಹಿಸಲಾಗದಿರುವುದು.
  • ಸದಾ ಬಳಲಿದಂತೆ ಭಾಸವಾಗುವುದು.
  • ಯಾವಾಗಲೂ ಸಿಡಿಮಿಡಿಗೊಳ್ಳುವುದು.
  • ಸಿಟ್ಟನ್ನು ನಿಯಂತ್ರಿಸಲಾಗದಿರುವುದು.
  • ನಿದ್ರಿಸಲಾಗದಿರುವುದು.
  • ಯಾರೊಂದಿಗೂ ಮಾತನಾಡಲು ಸಮಯ ಸಿಗುತ್ತಿಲ್ಲ ಎಂದು ದೂರುವುದು.
  • ಕುಟುಂಬದವರೊಂದಿಗೆ ಒತ್ತಡ ಅಥವಾ ಉದ್ವೇಗಕ್ಕೊಳಗಾಗುವುದು.
  • ಸಹಪಾಠಿಗಳೊಂದಿಗೆ ಅಥವಾ ಕುಟುಂಬದವರೊಂದಿಗೆ ಪದೇ ಪದೇ ಕಿರಿಕಿರಿ ಅನುಭವಿಸುವುದು.
  • ಲೈಂಗಿಕ ಚಟವಟಿಕೆಯಲ್ಲಿ ನಿರಾಸಕ್ತಿ.
  • ಮಕ್ಕಳೊಂದಿಗೆ ಸಂತೋಷವಾಗಿ ಕಾಲ ಕಳೆಯಲಾಗದಿರುವುದು.
 
ಕೆಲಸ ಮತ್ತು ಒತ್ತಡ:
ವೃತ್ತಿಯ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಇದು ಕೆಲಸಗಾರನ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೆ ಗಂಭೀರ ಪರಿಣಾಮಬಿರುತ್ತದೆ. ಚಿತ್ತರಾಜ್ ಆರ್.ಆರ್ ಮತ್ತು ಇತರರು ಮೇ 2010 ರಲ್ಲಿ Single Thermal power unit, Tamil Nadu State, South India ಎಂಬ ಸಂಸ್ಥೆಯ ಉದ್ಯೋಗಿಗಳ ಮೇಲೆ ನಡೆಸಿದ ಸಂಶೋಧನೆಯನ ಪ್ರಕಾರ ಕಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವ 126 ಕೆಲಸಗಾರರಲ್ಲಿ 32.5% ರಷ್ಟು ಮಾನಸಿಕ ಒತ್ತಡದಿಂದ (Psychological stress) ಬಳಲುತ್ತಿರುವುದು ಬೆಳಕಿಗೆ ಬಂದಿದೆ. ದೈಹಿಕ ಒತ್ತಡ 13.5% ರಷ್ಟು ಮತ್ತು ಕೌಟಂಬಿಕ ಒತ್ತಡ 12.7% ರಷ್ಟು ಇರುವುದು ಕಂಡುಬಂದಿದೆ. 20 ರಿಂದ 29 ವಯೋಮಾನದ ಯುವಕರಿಗೆ ಹೋಲಿಕೆ ಮಾಡಿದಲ್ಲಿ 30 ರಿಂದ 39 ವಯೋಮಾನದವರಲ್ಲಿ ಅತಿ ಹೆಚ್ಚು ಒತ್ತಡ ಇರುವುದು ದೃಢಪಟ್ಟಿದೆ.

ಕಾರ್ಮಿಕರು ಅನುಭವಿಸುವ ಒತ್ತಡ ಮತ್ತು ಅದರಿಂದ ರೂಪುಗೊಳ್ಳುವ ಇತರ ಮಾನಸಿಕ ಕಾಯಿಲೆಗಳು ಔದ್ಯೋಗಿಕ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸುತ್ತವೆ. ವೃತ್ತಿಯ ಸ್ವರೂಪ ಪ್ರಮುಖವಾಗಿ ಕೆಲಸದ ಭದ್ರತೆ, ಸಮಯದ ಉಳಿತಾಯ, ಸಾಮಾಜಿಕ ಸಂಪರ್ಕ ಮತ್ತು ಸಂಘಟಿತ ಸಾಮರ್ಥ್ಯ ಇವೇ ಮೊದಲಾದವುಗಳು ಕೆಲಸಗಾರರ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡಿದರೆ ಗೈರಾಗುವುದು, ಉತ್ಪಾದಕತೆಯಲ್ಲಿ ಇಳಿತ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಯಶಸ್ಸು ಕಾಣದಿರುವುದು ಇತ್ಯಾದಿ ಅಂಶಗಳು ಕಾರ್ಮಿಕರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮ ಪರಿಣಾಮಗಳನ್ನು ಬೀರುತ್ತವೆ.

ಒತ್ತಡ ಮತ್ತು ಖಿನ್ನತೆ: ಖಿನ್ನತೆಯಿಂದ ಬಳಲುವ ಕೆಲಸಗಾರರಲ್ಲಿ ಕಂಡು ಬರುವ ಲಕ್ಷಣಗಳಲ್ಲಿ ಅತಿಯಾದ ಬೇಸರ, ಏಕಾಂಗಿತನ, ಆತ್ಮವಿಶ್ವಾಸದ ಕೊರತೆ, ಸಾಮಾಜಿಕ ಚಟುವಟಿಕೆಗಳಲ್ಲಿ ನಿರಾಸಕ್ತಿ, ನಿದ್ರಾಹೀನತೆ, ಅತಿಯಾದ ಚಿಂತೆ, ಆತ್ಮಹತ್ಯೆ ಯೋಚನೆಗಳು, ಸ್ನೇಹಿತರೊಂದಿಗೆ ಬೆರೆಯದಿರುವುದು, ನಿರಾಶೆ, ಅಸಹಾಯಕ ಭಾವನೆ ಪ್ರಮುಖವಾದವುಗಳು. ಇವೇ ಮೊದಲಾದ ಲಕ್ಷಣಗಳು ಸಾಮಾನ್ಯವಾಗಿ ಎರಡು ವಾರಗಳಿಗಿಂತ ಅಧಿಕವಾಗಿ ಕಾಣಿಸಿಕೊಂಡರೆ ಖಿನ್ನತೆಯ ಸಂಭಾವ್ಯತೆಯನ್ನು ಸೂಚಿಸುತ್ತದೆ. ಖಿನ್ನತೆ ಒಂದು ಮನೋವ್ಯಾದಿಯಾಗಿದ್ದು ಇದು ಕಾರ್ಮಿಕರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಒತ್ತಡ ಮತ್ತು ಆತಂಕ: ಅತಿಯಾದ ಒತ್ತಡಗಳು ಕೆಲಗಾರರಲ್ಲಿ ಆತಂಕವನ್ನು ಉಂಟು ಮಾಡುತ್ತವೆ. ಇದನ್ನು ಮನೋವೈದ್ಯರು ಒಂದು ಮಾನಸಿಕ ಕಾಯಿಲೆಯೆಂದು ನಿರ್ಧರಿಸುವರು ಉದಾ: ಕೆಲಸಗಾರನು ಕೆಲಸವನ್ನು ನಿರ್ದಿಷ್ಠ ಸಮಯದಲ್ಲಿ ಪೂರ್ಣಗೊಳಿಸದಿದ್ದಾಗ ಮಾಲಿಕ ಅಥವಾ ಮೇಲಾಧಿಕಾರಿಯ ಹೆದರಿಕೆಗೆ ಆತಂಕವನ್ನು ಅನುಭವಿಸುತ್ತಾನೆ. ಇದು ಪ್ರತಿ ನಿತ್ಯ ಮುಂದುವರಿಯುತ್ತಾ ಹೋದರೆ ಕೆಲಸಗಾರನು ಆತಂಕ ಕಾಯಿಲೆಯ ಲಕ್ಷಣಗಳನ್ನು ಅನುಭವಿಸುತ್ತಾನೆ. ಆತಂಕ ಕಾಯಿಲೆಯ ಲಕ್ಷಣಗಳೆಂದರೆ ಹೃದಯದ ಬಡಿತ ಹೆಚ್ಚಾಗುವುದು, ಬೆವರುವಿಕೆ, ಕೈ ಕಾಲುಗಳು ನಡುಗುವ ಅನುಭವ, ಗಂಟಲು ಒಣಗುವುದು, ಕುಟುಂಬದ ಸದಸ್ಯರಿಗೆ ಅಥವಾ ತನಗೆ ಕೆಡಕುಂಟಾಗುವುದು ಎನ್ನುವ ಯೋಚನೆಗಳು, ಎದೆಯಲ್ಲಿ ತಳಮಳ ಆಗುವುದು ಇತ್ಯಾದಿಗಳು.
​
ಸರದಿ ಕೆಲಸ ಮತ್ತು ಒತ್ತಡ: ಇಂದಿನ ಆಧುನಿಕ ಕಾಲದಲ್ಲಿ ಎಲ್ಲಾ ಕಾರ್ಖಾನೆಗಳು ಹಗಲಿನಲ್ಲಿ ಮಾತ್ರ ನಡೆಯುವುದಿಲ್ಲ, ಹೀಗಾಗಿ ಸರದಿ ಕೆಲಸ ಅಥವಾ ಪಾಳಿ ಕೆಲಸ ಪದ್ದತಿಯು ಚಾಲ್ತಿಯಲ್ಲಿದ್ದು, ಇದರಿಂದ ಆರೋಗ್ಯ ಸಮಸ್ಯೆಗಳು ಕೈಗಾರಿಕೆ ವಲಯದಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ಕಂಡುಬರುತ್ತವೆ. ಇದಕ್ಕೆ ಕಾರಣ ನಿದ್ರೆಯ ಸಮಯದಲ್ಲಿ ಏರು ಪೇರು, ಸಮಯಕ್ಕೆ ತಕ್ಕಂತೆ ಹೊಂದಾಣಿಕೆಯಾಗದಿರುವುದು ಮತ್ತು ಪರಿಸರದ ಕಾರಣಗಳು. ಹೀಗಾಗಿ, ಪ್ರತಿ ತಿಂಗಳು ಸರದಿಯನುಸಾರವಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಒತ್ತಡಗಳನ್ನು ಕೆಲಸಗಾರರು ಎದುರಿಸಬೇಕಾಗುತ್ತದೆ.
 
ಕೈಗಾರಿಕೆಗಳಲ್ಲಿ ವೃತ್ತಿಯ ಒತ್ತಡಕ್ಕೆ ಕಾರಣವಾಗುವ ಅಂಶಗಳು:
  1. ಸೂಕ್ತ ತರಬೇತಿಯ ಕೊರತೆ.
  2. ಅತಿಯಾದ ಕೆಲಸದ ಹೊರೆ ಅಥವಾ ಒತ್ತಡ.
  3. ಕೆಲಸದ ಸ್ಥಳದಲ್ಲಿ ಒಳ್ಳೆಯ ಪರಿಸರ ಇಲ್ಲದಿರುವುದು.
  4. ಮಾನಸಿಕ ಕಿರುಕುಳ ಮತ್ತು ಹಿಂಸೆ.
  5. ಕೆಲಸದ ಭದ್ರತೆ ಇಲ್ಲದೇ ಇರುವುದು.
  6. ಕೆಲಸ ಆಸಕ್ತಿದಾಯಕವಲ್ಲದಿರುವುದು.
  7. ಕೆಲಸದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸರಳತೆ ಇಲ್ಲದೇ ಇರುವುದು.
  8. ಅತಿ ಹೆಚ್ಚು ಸಮಯದವರಗೆ ಕೆಲಸ ಮಾಡುವುದು.
  9. ಸರಿದಿಯನುಸಾರವಾಗಿ ಅಥವಾ ಪಾಳೆಯ ಕೆಲಸ (ಶಿಫ್ಟ್ ವರ್ಕ).
  10. ಪ್ರತ್ಯೇಕ ಸ್ಥಳಗಳಲ್ಲಿ ಏಕಾಂಗಿಯಾಗಿ ಕೆಲಸ ನಿರ್ವಹಿಸುವುದು.
 
ಒತ್ತಡಗಳಿಂದ ಕೆಲಸಗಾರರ ಮೇಲೆ ಆಗುವ ತಾತ್ಕಾಲಿಕ ಪರಿಣಾಮಗಳು:
  1. ಆತಂಕ ಕಾಯಿಲೆ.
  2. ಕೆಲಸದಲ್ಲಿ ಕುಂಠಿತ ಪ್ರದರ್ಶನ.
  3. ಮದ್ಯಪಾನ ಅಥವಾ ಮಾದಕ ವಸ್ತುಗಳಿಗೆ ದಾಸರಾಗುವುದು.
  4. ನಿದ್ರೆಯಲ್ಲಿ ಏರುಪೇರು.
  5. ರಕ್ತದ ಒತ್ತಡ ಹೆಚ್ಚಾಗುವಿಕೆ.
  6. ಸ್ನಾಯುಗಳ ಬಳಲುವಿಕೆ ಅಥವಾ ಆಯಾಸ.
  7. ಚರ್ಮ ಸಂಬಂಧಿ ವ್ಯಾಧಿಗಳು.
  8. ಸಿಡುಕತನ ಅಥವಾ ಸಿಟ್ಟಿಗೇಳುವುದು.
  9. ತಲೆನೋವು.
  10. ಅಜೀರ್ಣವಾಗುವಿಕೆ.
 
ಒತ್ತಡಗಳಿಂದ ಕೆಲಸಗಾರರ ಮೇಲೆ ಆಗುವ ದೀರ್ಘಕಾಲದ ಪರಿಣಾಮಗಳು:
  1. ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆ ಸಂಬಂಧಿಸಿದ ಕಾಯಿಲೆಗಳು: ಅಧಿಕ ರಕ್ತದೊತ್ತಡ (Hypertension), ಹೃದಯಾಘಾತ (Heart attacks), ಪಾರ್ಶ್ವವಾಯು (Strokes), ಮತ್ತು ಹೃದಯ ರೋಗ (Heart diseases) ಇಂತಹ ದೈಹಿಕ ಕಾಯಿಲೆಗಳು ಉಂಟಾಗುವ ಸಾಧ್ಯತೆಯಿರುತ್ತದೆ.
  2. ರೋಗ ನಿರೋಧಕ ವ್ಯವಸ್ಥೆ ಸಂಬಂಧಿಸಿದ ಕಾಯಿಲೆಗಳು: ಕ್ರಾನಿಕ್ ಅಸ್ತಮಾ, ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು.
  3. ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳು: ಬಂಜೆತನ, ಕಡಿಮೆ ತೂಕದ ಮಕ್ಕಳು ಹುಟ್ಟುವ ಸಾಧ್ಯತೆಗಳು, ಗರ್ಭಪಾತದಂತಹ ಗಂಡಾಂತರಗಳು.
Picture
Picture
ಒತ್ತಡವನ್ನು ತಡೆಗಟ್ಟಲು ಸಾಧ್ಯವೆ?
ಕೆಲವು ಸಂದರ್ಭಗಳಲ್ಲಿ ಕೆಲಸಗಾರರು ತಮಗೆ ಆಗಿರುವ ಒತ್ತಡಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೇ ಇರಬಹುದು. ಇದಕ್ಕೆ ಕಾರಣಗಳೆಂದರೆ ದೇಹದಲ್ಲಿ ಆಗುವ ಜೈವಿಕ ಬದಲಾವಣೆಗಳು, ಒತ್ತಡದ ಲಕ್ಷಣಗಳು ಮತ್ತು ಒತ್ತಡದ ತೀವ್ರತೆಯ ಪ್ರಮಾಣ. ಒತ್ತಡದ ಪ್ರಮಾಣವನ್ನು ಕಡಿಮೆ ಮಾಡುವ ಮಾತ್ರೆಗಳ ಲಭ್ಯತೆಯ ಬಗ್ಗೆ ಮತ್ತು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಲು ಹಿಂಜರಿಯುವುದನ್ನು ಕೂಡ ನಮ್ಮ ಸಮಾಜದಲ್ಲಿ ನಾವು ಕಾಣುತ್ತೇವೆ. ಇದಕ್ಕೆ ರೋಗದ ಭಯ, ಅಂದರೆ ವೈದ್ಯರು ಯಾವುದಾದರೂ ದೊಡ್ಡ ಕಾಯಿಲೆ ಇದೆ ಎಂದು ಹೆಸರಿಡುತ್ತಾರೆ ಎನ್ನುವ ಭಯ ಅಥವಾ ತಪ್ಪು ಕಲ್ಪನೆಯು ಕೂಡ ಕಾರಣವಾಗುತ್ತದೆ. ಅತಿಯಾದ ಒತ್ತಡ ಕಂಡು ಬಂದಲ್ಲಿ ವೈದ್ಯರು ಅಥವಾ ಮನೋವೈದ್ಯರನ್ನು ಸಂಪರ್ಕಿಸಿದ್ದೇ ಆದಲ್ಲಿ ಒತ್ತಡವನ್ನು ಶಮನಗೊಳಿಸುವ ಮಾತ್ರೆಗಳನ್ನು ನೀಡುತ್ತಾರೆ. ಇದರಿಂದ ಮುಂದೆ ಒತ್ತಡದಿಂದ ಬರುವ ಇತರ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
 
ಒತ್ತಡದ ಕಾಯಿಲೆಯನ್ನು ನಿರ್ಧರಿಸುವುದು ಹೇಗೆ?
ಇಂದು ಒತ್ತಡದ ಪ್ರಮಾಣವನ್ನು ವೈಜ್ಞಾನಿಕ ತಳಹದಿಯ ಮೇಲೆ ಮಾಪನ ಮಾಡುವ ಪದ್ದತಿ ಇದ್ದು, ವಿಶೇಷವಾಗಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಮಾಪನಗಳನ್ನು (Stress Scales) ಉಪಯೋಗಿಸಿ ಒತ್ತಡದ ಪ್ರಮಾಣವನ್ನು ನಿರ್ಧರಿಸುತ್ತಾರೆ.
  1. Perceived Stress Scale by Sheldon Cohen
  2. Periodic stress surveys and assessment in industries
ಇಂಟರ್ ನ್ಯಾಷನಲ್ ಕ್ಲಾಸಿಫಿಕೇಶನ್ ಆಫ್ ಡಿಸಾರ್ಡರ್ಸ್ - (ICD-10) ಅಡಿಯಲ್ಲಿ ಅತಿಯಾದ ಒತ್ತಡಗಳಿಂದ ಆಗುವ ಮಾನಸಿಕ ಕಾಯಿಲೆಗಳ ಬಗ್ಗೆ ವೈಜ್ಞಾನಿಕ ತಳಹದಿಯ ಮೇಲೆ ವರ್ಗೀಕರಣವನ್ನು ಮಾಡಿದ್ದಾರೆ. ಅವುಗಳು ಈ ಕೆಳಗಿನ ರೀತಿ ಇವೆ:

F43 Reaction to severe stress, and adjustment disorders
F43.0 Acute stress reaction
F43.1 Post-traumatic stress disorder.
F43.8 Other reactions to severe stress
F43.9 Reaction to severe stress, unspecified  
 
ಒತ್ತಡಗಳನ್ನು ಕಡಿಮೆಕೊಳ್ಳಲು ಕೆಲವು ಸಲಹೆಗಳು (Suggestions for Reducing Stress):
  1. ನಮ್ಮ ಮನೋಧೋರಣೆಗಳನ್ನು ಬದಲಾವಣೆ ಮಾಡಿಕೊಳ್ಳುವುದು: ನಕರಾತ್ಮಕ ಯೋಚನೆಗಳ ಬದಲಾಗಿ ಸಕರಾತ್ಮಕ ಯೋಚನೆಗಳನ್ನು ಅಳವಡಿಸಿಕೊಳ್ಳುವುದು.
  2. ನೈಜತೆಯ ಸ್ವಭಾವಗಳನ್ನು ಮೈಗೂಡಿಸಿಕೊಳ್ಳುವುದು: ಸಮಸ್ಯೆಗಳನ್ನು ಎದುರಿಸಲು ಪ್ರಾಯೋಗಿಕವಾದಂತಹ ಗುರಿಗಳನ್ನು ಸಿದ್ದಪಡಿಸಿಕೊಳ್ಳುವುದು. ನಮ್ಮ ಮತ್ತು ಇತರರ ಬಗ್ಗೆ ಸಕರಾತ್ಮಕ ಮನೋಧೋರಣೆಗಳನ್ನು ಹೊಂದುವುದು.
  3. ಯೋಜನೆಯಿಲ್ಲದ ಚಟುವಟಿಕೆಗಳನ್ನು ಮಾಡದೇ ಇರುವುದು: ಯೋಜನೆಗಳನ್ನು ಹಾಕಿಕೊಳ್ಳದೇ ಮಾಡುವ ಅನಗತ್ಯ ಕೆಲಸಗಳು ಕೂಡ ಒತ್ತಡಗಳನ್ನು ಸೃಷ್ಟಿ ಮಾಡುತ್ತವೆ. ಇದರಿಂದ ಶಕ್ತಿ ಮತ್ತು ಸಮಯ ಕೂಡ ವ್ಯರ್ಥವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಯೋಜನೆಗಳನ್ನು ಹಾಕಿಕೊಂಡು ಮಾಡುವ ಚಟುವಟಿಕೆಗಳು ಮನಸ್ಸಿಗೆ ಖುಷಿಯನ್ನು ತರುತ್ತವೆ.
  4. ಸಮಯವನ್ನು ಸಮರ್ಪಕವಾಗಿ ನಿರ್ವಹಿಸುವುದು: ಪ್ರತಿ ನಿತ್ಯ ಕೆಲಸದ ಸ್ಥಳಗಳಲ್ಲಿ ಕೆಲಸವನ್ನು ಇಷ್ಟಪಟ್ಟು ಖುಷಿಯಿಂದ ಮಾಡುವುದು. ಇದರಿಂದ ಅಂದಿನ ಕೆಲಸದ ಬಗ್ಗೆ ಮನಸ್ಸಿಗೆ ತೃಪ್ತಿ ತರುತ್ತದೆ ಮತ್ತು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.
  5. ಆದ್ಯತೆಗಳನ್ನು ಪಟ್ಟಿಮಾಡುವುದು: ಕೆಲಸದ ಸ್ಥಳಗಳಲ್ಲಿ ಹೆಚ್ಚು ಕೆಲಸಗಳು ಕಂಡು ಬಂದರೆ, ಆದ್ಯತೆಗಳ ಪಟ್ಟಿಗಳನ್ನು ಮಾಡಿ, ತುರ್ತು ಕೆಲಸಗಳನ್ನು ಮೊದಲು ಮುಗಿಸಿ, ಕಡಿಮೆ ಪ್ರಾಮುಖ್ಯತೆ ಇರುವ ಕೆಲಸಗಳನ್ನು ತದನಂತರದಲ್ಲಿ ಮಾಡಿಕೊಳ್ಳುವುದರಿಂದ ಒತ್ತಡವನ್ನು ಕಡಿಮೆಮಾಡಿಕೊಳ್ಳಬಹುದು.
  6. ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯುವುದು: ಕೆಲಸ ಮುಗಿಸಿ ಮನೆಗೆ ಬಂದ ನಂತರ, ಕುಟುಂಬದ ಸದಸ್ಯರೊಂದಿಗೆ ಖುಷಿಯಿಂದ ಕಾಲ ಕಳೆಯುವುದು, ಕುಟುಂಬದ ಸದಸ್ಯರಿಗೆ ಚಿಕ್ಕ ಪುಟ್ಟ ವಿಷಯಗಳನ್ನು ಸಂತೋಷದಿಂದ ಹಂಚಿಕೊಂಡರೆ ಒತ್ತಡಗಳು ಕಡಿಮೆಯಾಗುತ್ತವೆ.
  7. ಕೆಲಸದ ವೇಳೆಯಲ್ಲಿ ಸ್ವಲ್ಪವಾದರೂ ವಿಶ್ರಾಂತಿ ತೆಗೆದುಕೊಳ್ಳುವುದು: ಕೆಲಸದ ಸ್ಥಳಗಳಲ್ಲಿ ಘಂಟೆಗಟ್ಟಲೆ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಹೋಗುವುದರಿಂದ ದೇಹ ಮತ್ತು ಮನಸ್ಸು ಆಯಾಸಗೊಳ್ಳುತ್ತದೆ. ಆದ್ದರಿಂದ ಕೆಲಸದ ಮಧ್ಯೆ ಸ್ವಲ್ಪ ಹೊತ್ತು ವಿರಾಮವನ್ನು ದೇಹಕ್ಕೆ ಮತ್ತು ಮನಸ್ಸಿಗೆ ನೀಡಿದ್ದೇ ಆದಲ್ಲಿ ಒತ್ತಡವು ಕಡಿಮೆಯಾಗುತ್ತದೆ.
  8. ನಮ್ಮ ಕಾಳಜಿಯನ್ನು ನಾವೇ ವಹಿಸಿಕೊಳ್ಳುವುದು: ಜೀವನದಲ್ಲಿ ಎಲ್ಲರ ಸಹಕಾರ ನಮಗೆ ಬೇಕು ಎನ್ನುವುದಕ್ಕಿಂತ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವತ್ತ ಗಮನವನ್ನು ಹರಿಸಬೇಕು. ಇದು ಸ್ವ-ಸಹಾಯ ಮಾಡಿಕೊಂಡಂತೆ. ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
  9. ಒತ್ತಡ ನಿರ್ವಹಣೆಗಾಗಿ ಪ್ರತಿ ದಿನ ವ್ಯಾಯಾಮ ಮಾಡುವುದು: ಪ್ರತಿ ನಿತ್ಯ 20 ರಿಂದ 30 ನಿಮಿಷಗಳ ಕಾಲ ವ್ಯಾಯಾಮವನ್ನು ಮಾಡುವುದರಿಂದ ನಮ್ಮ ದೇಹದ ಫಿಟ್ನೆಸ್ನ್ನು ಕಾಪಾಡಿಕೊಂಡಂತೆ ಆಗುತ್ತದೆ. ಇದು ಪ್ರತಿ ನಿತ್ಯ ಕೆಲಸ ಮಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
  10. ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುವುದು: ಪ್ರತಿ ನಿತ್ಯ ಕೇವಲ ಕೆಲಸವನ್ನು ಮಾಡದೇ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡಲ್ಲಿ ಮನಸ್ಸಿಗೆ ಸಮಾಧಾನ ನೀಡಿದಂತೆ ಆಗುತ್ತದೆ. ಉದಾ: ಸೃಜನಾತ್ಮಕ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು, ಕಥೆ-ಕಾದಂಬರಿಗಳನ್ನು ಓದುವುದು ಇತ್ಯಾದಿ.
  11. ದೈನಂದಿನ ಜೀವನದಲ್ಲಿ ಸ್ವಲ್ಪವಾದರೂ ಸ್ನೇಹಿತರೊಂದಿಗೆ ಅಥವಾ ಸಹೋದ್ಯೋಗಿಗಳೊಂದಿಗೆ ಮನರಂಜನೆ ಚಟುವಟಕೆಗಳಲ್ಲಿ ಭಾಗಿಯಾಗುವುದು: ಕೆಲಸದ ಸ್ಥಳಗಳಲ್ಲಿ ವಿರಾಮದ ವೇಳೆ ಸ್ನೇಹಿತರೊಂದಿಗೆ ಬೆರೆಯುವುದರಿಂದ ಒತ್ತಡ ಕಡಿಮೆಯಾಗುತ್ತವೆ.
  12. ಯೋಗ ಒತ್ತಡವನ್ನು ಕಡಿಮೆ ಮಾಡುತ್ತದೆ: ಪ್ರತಿ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಂಡರೆ ಮನಸ್ಸು ನಿಗ್ರಹ, ಮನಸ್ಸಿಗೆ ವಿಶ್ರಾಂತಿ, ಆರೋಗ್ಯ ವೃದ್ದಿ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ. ಯೋಗದಿಂದ ಖಿನ್ನತೆಯನ್ನು ನಿಯಂತ್ರಿಸಬಹುದೆಂದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ.
  13. ಮನಸ್ಸಿಗೆ ಹಿತವನ್ನುಂಟು ಮಾಡುವ ಸಂಗೀತವನ್ನು ಕೇಳುವುದು: ಅತಿಯಾದ ಬೇಸರವಾದಾಗ ಕೆಲಸದ ಸ್ಥಳಗಳಲ್ಲಿ ಅಥವಾ ಮನೆಯಲ್ಲಿ ಮನಸ್ಸಿಗೆ ಹಿತವನ್ನುಂಟು ಮಾಡುವ ಸಂಗೀತವನ್ನು ಕೇಳುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ಒತ್ತಡದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
  14. ಪ್ರತಿ ನಿತ್ಯ ಕನಿಷ್ಠ 08 ತಾಸುಗಳಷ್ಟು ನಿದ್ರೆಯನ್ನು ಮಾಡುವುದು: ಪ್ರತಿ ದಿನ ಸಾಧ್ಯವಾದಷ್ಟು ಕನಿಷ್ಠ 08 ತಾಸುಗಳಷ್ಟು ನಿದ್ರೆಯನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಇದು ದಣಿದ  ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. 
  15. ಧ್ಯಾನ ಮಾಡುವುದು: ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳು ಧ್ಯಾನದಿಂದ ಸಿದ್ದಿಯನ್ನು ಮಾಡಿಕೊಳ್ಳುತ್ತಿದ್ದರು ಎನ್ನುವುದನ್ನು ಕೇಳಿದ್ದೇವೆ ಮತ್ತು ಓದಿದ್ದೇವೆ. ಧ್ಯಾನದಿಂದ ಉದ್ವಿಘ್ನಗೊಂಡ ಮನಸ್ಸನ್ನು ಕೋಪದಿಂದ ಶಾಂತಗೊಳಿಸಿ ಪುನ: ಚೈತನ್ಯಗೊಳಿಸುತ್ತದೆ. ಧ್ಯಾನವು ರಕ್ತದೊತ್ತಡವನ್ನು ನಿಯಂತ್ರಿಸಬಲ್ಲದು ಮತ್ತು ಮನಸ್ಸು ಶಾಂತಗೊಳ್ಳುತ್ತದೆ.
 
ಆಧಾರ ಗ್ರಂಥಗಳು:
  1. ಚಿತ್ತರಾಜ್ ಆರ್.ಆರ್, ಗಣೇಶನ್ ಡಿ.ಕೆ, ಪರುಶುರಾಮನ್ ಜಿ & ಗಣೇಶನ್ ವಿ (2016). ಪ್ರಿವೇಲೆನ್ಸ್ ಆಂಡ್ ಫ್ಯಾಕ್ಟರ್ಸ್ ಅಫೇಕ್ಟಿಂಗ ಆಕ್ಯುಪೇಶನಲ್ ಆಂಡ್ ನಾನ್-ಆಕ್ಯುಪೇಶನಲ್ ಸ್ಟ್ರೇಸ್ ಅಮಂಗ್ ಇಂಡಸ್ಟ್ರೀಯಲ್ ವರ್ಕರ್ಸ್, ಅ ಡಿಸ್ಕ್ರಿಪ್ರಿವ್ ಸ್ಟಡಿ ಫ್ರಾಮ್ ಅ ಸಿಂಗಲ್ ಇಂಡಸ್ಟ್ರಿಯಲ್ ಯುನಿಟ್ ಇನ್ ಸೌಥ್ ಇಂಡಿಯಾ. ಇಂಟರನ್ಯಾಷನಲ್ ಜರ್ನಲ್ ಕಮ್ಯುನಿಟಿ ಮೆಡಿಕಲ್ ಪಬ್ಲಿಕ್ ಹೆಲ್ತ್ 2016;3:3008-13.
  2. ವಿಶ್ವ ಆರೋಗ್ಯ ಸಂಸ್ಥೆ (2000 & 2008), ಮಾನಸಿಕ ಮತ್ತು ವರ್ತನಾ ಕಾಯಿಲೆಗಳು, ಮಾನಸಿಕ ಆರೋಗ್ಯ ವಿಭಾಗ, ಜಿನಿವಾ.
  3. ವಿಶ್ವ ಆರೋಗ್ಯ ಸಂಘಟನೆ (2001), ದಿ ವಲ್ರ್ಡ ಹೆಲ್ಥ್ ರಿಪೋರ್ಟ, 2001. ಮೆಂಟಲ್ ಹೆಲ್ಥ. ನ್ಯೂ ಅಂಡರ್ಸ್ಟ್ಯಾಂಡಿಂಗ್, ನ್ಯೂ ಹೋಪ್, ವಲ್ರ್ಡ ಹೆಲ್ಥ್ ಆರ್ಗನೈಜಶೇನ್: ಜಿನೇವಾ.
  4. ಹನೀಫ್, ಜೀನೊಬಿಯಾ (2008), ಕಾಲ್ ಸೆಂಟರ್ಸ್ ಆಂಡ್ ದಿ ಕ್ವಾಲಿಟಿ ಆಫ್ ಲೈಫ್: ಟುವರಡ್ಸ್ ಅ ರಿಸರ್ಚ ಅಜೆಂಡಾ, ಜರ್ನಲ್ ಆಫ್ ಇಂಡಸ್ಟ್ರಿಯಲ್ ರಿಲೇಶನ್ಸ್, 50 (2) 271-284.
0 Comments



Leave a Reply.

    Picture
    Nirathanka

    Categories

    All
    Awards 2017
    Awards 2018
    Awards 2019
    Awards 2020
    Awards 2021
    Awards 2022
    Awards 2023
    Awards 2024
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಸಮ್ಮೇಳನದ ಕುರಿತು ಅಭಿಪ್ರಾಯಗಳು
    ಹನಿಗವನ

    Archives

    January 2025
    May 2024
    January 2024
    November 2023
    September 2023
    December 2022
    November 2022
    November 2021
    March 2021
    November 2020
    July 2020
    November 2019
    October 2019


    Picture

    Human Resource Kannada Conference

    Join WhatsApp Channel

    Picture
    More Details

    Picture
    WhatsApp Group

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now

    Niratanka

    Human Resources Kannada Conference

    Leaders Talk


    RSS Feed

ಸೈಟ್ ನಕ್ಷೆ


ಸೈಟ್

  • ಸ್ವಾಗತ
  • ಸಮಿತಿಯ ಸದಸ್ಯರು​
  • ಮಾಧ್ಯಮ​
  • ಆನ್‍ಲೈನ್‍ ಗ್ರೂಪ್ಸ್
  • ಬ್ಲಾಗ್
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು

ನಮ್ಮ ಇತರೆ ಜಾಲತಾಣಗಳು

  • ​WWW.NIRATANKA.ORG
  • WWW.NIRUTAPUBLICATIONS.ORG

​ಪ್ರಶಸ್ತಿಗಳ ವಿಭಾಗ

  • CSR EXCELLENCE AWARD-2024
  • THE BEST WOMEN EMPOWERMENT ORGANISATION AWARD-2024
  • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
  • ಪ್ರಶಸ್ತಿ ಪುರಸ್ಕೃತರು (2017-2023)​

ಕನ್ನಡ ಸಮ್ಮೇಳನ

​ಕನ್ನಡ ಸಮ್ಮೇಳನ-2017
​ಕನ್ನಡ ಸಮ್ಮೇಳನ-2018
​ಕನ್ನಡ ಸಮ್ಮೇಳನ-2019
​ಕನ್ನಡ ಸಮ್ಮೇಳನ-2020
​ಕನ್ನಡ ಸಮ್ಮೇಳನ-2021
​ಕನ್ನಡ ಸಮ್ಮೇಳನ-2022
​ಕನ್ನಡ ಸಮ್ಮೇಳನ-2023
​ಕನ್ನಡ ಸಮ್ಮೇಳನ-2024

ಪಬ್ಲಿಕೇಷನ್ಸ್

  • LEADER'S TALK
  • NIRUTA'S READ & WRITE INITIATIVE​​
  • ​COLLABORATE WITH NIRUTA PUBLICATIONS

ನಿರಾತಂಕ

  • POSH
  • CSR
  • COLLABORATE WITH NIRATHANKA​

ಚಂದಾದಾರರಾಗಿ




Picture
Join Here

Copyright : Nirathanka 2021
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2024
      • ಮಹಿಳಾ ಸಬಲೀಕರಣ ಪ್ರಶಸ್ತಿ-2024
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2024
      • ಲೇಖನಗಳಿಗಾಗಿ ಆಹ್ವಾನ-2024
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
    • 2023
      • ಮಹಿಳಾ ಸಬಲೀಕರಣ ಪ್ರಶಸ್ತಿ-2023
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ